Crop

ಅರಿಶಿನ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2020 – 21 ಸಾಲಿನಲ್ಲಿ 11.02 ಲಕ್ಷ ಟನ್ ಅರಿಶಿನವನ್ನು ರಫ್ತು ಮಾಡಿದೆ. ಭಾರತದ ಅರಿಶಿನ ಬೆಳೆಯು ಅತಿ  ಹೆಚ್ಚಿನ ಕುರ್ಕ್ಯುಮಿನ್(ನೋವು ನಿವಾರಕ ಗುಣ) ಮಟ್ಟವನ್ನು ಹೊಂದಿದೆ. ಹಾಗಾಗಿ, ಭಾರತದ ಅರಿಶಿನ ಬೆಳೆಗೆ ಹೆಚ್ಚಿನ ಬೇಡಿಕೆಯಿದೆ. ಆಯುರ್ವೇದದ  ಪ್ರಕಾರ, ಅರಿಶಿನ ದಲ್ಲಿ ಇರುವಂತಹ  ಕುರ್ಕ್ಯುಮಿನ್ ಅಂಶವು  ನೈಸರ್ಗಿಕವಾಗಿ  ಕ್ಯಾನ್ಸರ್ ತಡೆಯುವ ಗುಣವನ್ನು ಹೊಂದಿದೆ. ವೆಬ್ಮೆಡ್ ಪ್ರಕಾರ “ಅರಿಶಿನವನ್ನು ಸಂಧಿವಾತ, ಎದೆಯುರಿ (ಡಿಸ್ಪೆಪ್ಸಿಯಾ), ಹೊಟ್ಟೆ ನೋವು, ಅತಿಸಾರ, ಕರುಳಿನ ಅನಿಲ, ಹೊಟ್ಟೆ ಉಬ್ಬುವುದು, ಕಾಮಾಲೆ, ಯಕೃತ್ತಿನ ಸಮಸ್ಯೆಗಳು ಮತ್ತು ಪಿತ್ತಕೋಶದ ಕಾಯಿಲೆಗೆ  ಬಳಸಲಾಗುತ್ತದೆ.”

ಕಷ್ಟದ ಮಟ್ಟ :  ಮಧ್ಯಮ 

ತಳಿಗಳ ಆಯ್ಕೆ

ಮಾರುಕಟ್ಟೆಯಲ್ಲಿ ಹಲವಾರು ಬಗೆಯ ಅರಿಶಿನ ತಳಿಗಳು ಲಭ್ಯವಿದೆ. ಅವುಗಳಲ್ಲಿ ಅತಿ ಜನಪ್ರಿಯ ತಳಿಗಳು ಯಾವುವೆಂದರೆ  ಅಮೃತಪಾಣಿ, ಆರ್ಮೂರ್, ದುಗ್ಗಿರಾಳ, ಟೇಕೂರ್‌ಪೇಟ, ಪಟ್ಟಾಂತ್, ದೇಶಿ, ಮೂವಾಟ್ಟುಪುಳ, ವೈನಾಡ್, ರಾಜಪೋರ್, ಕರ್ಹಾಡಿ, ವೈಗಾನ್, ಚಿನ್ನನಾದನ್, ಪೆರಿಯಾನಾಡ, ಕೋ 1, ಬಿಎಸ್‌ಆರ್ 1, ರೋಮಾ, ಸ್ವರ್ಣ, ಸುದರ್ಶನ, ಸುಗುಣ, ಸುಗಂಧಂ, ಬಿಎಸ್‌ಆರ್‌2 ,ರಂಗ, ರಶ್ಮಿ, ರಾಜೇಂದ್ರ ಸೋನಿಯಾ, ಕೃಷ್ಣ, ಸುರೋಮಾ, ಅಲ್ಲೆಪಿ ಫಿಂಗರ್ ಅರಿಶಿನ (AFT), IISR ಪ್ರಭಾ, IISR ಪ್ರತಿಭಾ, IISR ಅಲೆಪ್ಪಿ ಸುಪ್ರೀಂ ಮತ್ತು IISR ಕೇದಾರಂ.

ಅರಿಶಿನ ಗೆಡ್ಡೆಗಳ ಸಂಸ್ಕರಣೆ:

ಅರಿಶಿನವನ್ನು ರೈಜೋಮ್/ ಗೆಡ್ಡೆಗಳ  ಮೂಲಕ ಪ್ರಸರಣ ಮಾಡಲಾಗುತ್ತದೆ  . ಗೆಡ್ಡೆಗಳನ್ನು  ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ನಂತರ ಡೈಮಿಥೋಯೇಟ್ 30% EC –  2 ಮಿಲೀ /ಲೀಟರ್  ಅಥವಾ ಮೊನೊಕ್ರೊಟೊಫಾಸ್ 36 WSC – 1.5 ಮಿಲೀ /ಲೀಟರ್ ಮತ್ತು 0.3% ಕಾಪರ್ ಆಕ್ಸಿಕ್ಲೋರೈಡ್ (3 ಗ್ರಾಂ/ಲೀಟರ್) ದ್ರಾವಣದಲ್ಲಿ,  30 ನಿಮಿಷಗಳ ಕಾಲ ನೆನೆಸಿಡಬೇಕು. ಇನ್ನೊಂದು ಪರ್ಯಾಯ ವಿಧಾನವೆಂದರೆ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್ 10 ಗ್ರಾಂ/ಕೆಜಿ ಮತ್ತು ಟ್ರೈಕೋಡರ್ಮಾ ವಿರಿಡೆ  4 ಗ್ರಾಂ/ಕೆಜಿ ಮೂಲಕ ಗೆಡ್ಡೆಗಳ ಸಂಸ್ಕರಣೆ ಮಾಡುವುದು. 

 ಅರಿಶಿನ ಬೆಳೆಗೆ  ಭೂಮಿ ಸಿದ್ಧತೆ

ಬಿತ್ತನೆ ಮಾಡುವ ಮೊದಲು ಭೂಮಿಯನ್ನು ನಾಲ್ಕು ಬಾರಿ ಉಳುಮೆ ಮಾಡಬೇಕು . ಪ್ರತಿ ಬಾರಿ ಉಳಿ ಮತ್ತು ಡಿಸ್ಕ್ ನೇಗಿಲಿನಿಂದ  ಹಾಗು ಎರಡು ಬಾರಿ ಏರುಮಡಿ ಮಾಡುವ ಉಪಕರಣದಿಂದ ಉಳುಮೆ ಮಾಡಬೇಕು  . ಏರುಮಡಿ ರೂಪಿಸುವ ಮೂಲಕ ಸಾಲುಗಳ ನಡುವೆ 45 ಸೆಂ.ಮೀ (ಅಥವಾ) ಎತ್ತರದ ಸಾಲುಗಳನ್ನು 120 ಸೆಂ.ಮೀ ಅಗಲ ಹಾಗು ಸಸ್ಯಗಳ ನಡುವೆ 30 ಸೆಂ.ಮೀ ಜಾಗದಲ್ಲಿ ರಚನೆ ಮಾಡಲಾಗುತ್ತದೆ ಮತ್ತು ಲ್ಯಾಟರಲ್ಸ್ ಅನ್ನು ಪ್ರತಿ ಸಾಲಿನ  ಮಧ್ಯದಲ್ಲಿ ಇರಿಸಲಾಗುತ್ತದೆ. 

 ಮಣ್ಣಿನ ತೇವಾಂಶದ ಮಟ್ಟವನ್ನು ಅವಲಂಬಿಸಿ, ಸಾಲುಗಳನ್ನು  ಹನಿ ನೀರಾವರಿ ಮೂಲಕ 8-12 ಗಂಟೆಗಳ ಕಾಲ ತೇವಗೊಳಿಸಲಾಗುತ್ತದೆ.

ಕೊನೆಯ ಉಳುಮೆಯ ಸಮಯದಲ್ಲಿ 25 ಟನ್/ಹೆ ಕೊಟ್ಟಿಗೆ ಗೊಬ್ಬರ  ,ಬೇವಿನ ಅಥವಾ ಶೇಂಗಾ ಹಿಂಡಿಯನ್ನು -200ಕೆಜಿ/ ಹೆ ,25:60:108 ಕೆಜಿ ಸಾರಜನಕ :ರಂಜಕ:ಪೊಟ್ಯಾಷ್ /ಹೆ; 30 ಕೆಜಿ  ಅಷ್ಟು ಫೆರಸ್ ಸಲ್ಫೆಟ್  ಮತ್ತು 15 ಕೆಜಿ ಜಿಂಕ್ ಸಲ್ಫೇಟ್ . 

ಪ್ರತಿ ಹೆಕ್ಟೇರ್‌ಗೆ ಅಜೋಸ್ಪಿರಿಲಮ್- 10 ಕೆಜಿ  ಮತ್ತು ಫಾಸ್ಫೋಬ್ಯಾಕ್ಟೀರಿಯ- 10 ಕೆಜಿಯನ್ನು ನಾಟಿ ಮಾಡುವ ಸಮಯದಲ್ಲಿ  ಭೂಮಿಗೆ ನೀಡಬೇಕು. 

ಅರಿಶಿನ ಬೆಳೆಗೆ ಮಣ್ಣಿನ ಅವಶ್ಯಕತೆಗಳು 

ಉಷ್ಣಭರಿತ ವಾತಾವರಣ, ನೀರು ಬಸಿದು ಹೋಗುವಂಥಹ ಮರಳು ಮಿಶ್ರಿತ ಕೆಂಪು ಗೋಡು, ಮಧ್ಯಮ ಕಪ್ಪು ಭೂಮಿ ಮತ್ತು ಜಂಬಿಟ್ಟಿಗೆ ಮಣ್ಣುಗಳು ಅರಿಶಿನ ಬೆಳೆಗೆ ಸೂಕ್ತ.  ವಾರ್ಷಿಕ 1500 ಮಿಮೀ ಮಳೆ ಬೀಳುವ ಪ್ರದೇಶಗಳಲ್ಲಿ ಅರಶಿನ ಕೃಷಿಯನ್ನು ಉತ್ತಮವಾಗಿ ಮಾಡಬಹುದು 

ಹಿನ್ನುಡಿ

ಅರಿಶಿನ ಬೆಳೆಯು ಒಂದು ಕಠಿಣ ಬೆಳೆಯಾಗಿದೆ. ಈ ಬೆಳೆಯನ್ನು ಬೆಳೆಯಲು  ಸಾಕಷ್ಟು ಶ್ರಮ  ಬೇಕಾಗುತ್ತದೆ. ಅರಿಶಿನ ಬೆಳೆಯು ಹೆಚ್ಚಿನ ಬೇಡಿಕೆಯ ಬೆಳೆಯಾಗಿದ್ದು, ಇದು ಹೆಚ್ಚು ರಫ್ತು ಮಾಡುವ ಬೆಳೆಯಾಗಿದೆ.ಅರಿಶಿನವು  ದೀರ್ಘಾವಧಿ ಶೇಖರಣಾ ಸಾಮರ್ಥ್ಯವನ್ನು ಸಹ ಹೊಂದಿದೆ. 

Recent Posts

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024

ಬೇಸಿಗೆ ಅಥವಾ ಝೈದ್ ಬೆಳೆಗಳನ್ನು ಮಾರ್ಚ್ ನಿಂದ ಜೂನ್ ನಡುವೆ ಬೆಳೆಯಲಾಗುತ್ತದೆ

ಭಾರತವು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ದೇಶವಾಗಿದ್ದು, ಕೃಷಿಯ ಹಲವಾರು ಋತುಗಳನ್ನು ಹೊಂದಿದೆ. ಬೆಳೆಗಳ ನಾಟಿ ಸಮಯವು ಬೆಳೆ ಪ್ರಕಾರ, ಋತುಗಳು, ಪ್ರದೇಶ ಮತ್ತು ಹವಾಮಾನವನ್ನು ಅವಲಂಬಿಸಿ…

March 26, 2024

ನರ್ಸರಿ ಬೆಳೆಸುವುದು: ಬಲವಾದ ಮತ್ತು ಆರೋಗ್ಯಕರ ಸಸಿಗಳಿಗಾಗಿ ಈ ಲೇಖನವನ್ನು ಓದಿರಿ

ಆರೋಗ್ಯಕರ ಬೀಜಗಳನ್ನು ಬಿತ್ತುವುದು ಅಥವಾ ಆರೋಗ್ಯಕರ ಸಸಿಗಳನ್ನು ನೆಡುವುದು ಆರೋಗ್ಯಕರ ಮತ್ತು ಉತ್ಪಾದಕ ಬೆಳೆಯನ್ನು ಸಾಧಿಸುವಲ್ಲಿ ಪ್ರಮುಖ ಅಂಶವಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಅಲಂಕಾರಿಕ ಸಸ್ಯಗಳು ಸೇರಿದಂತೆ…

March 23, 2024