ಭಾರತದಲ್ಲಿ ಆಲೂಗಡ್ಡೆ ಕೃಷಿ ಸುಮಾರು 300 ವರ್ಷಗಳಿಂದಲೂ ಇದೆ. 2021 ರ ಆರ್ಥಿಕ ವರ್ಷದಲ್ಲಿ ಭಾರತದ ಉತ್ತರ ಪ್ರದೇಶ ರಾಜ್ಯವೊಂದರಲ್ಲೇ ಸುಮಾರು 16 ಮಿಲಿಯನ್ ಟನ್ ಆಲೂಗಡ್ಡೆಯ ಉತ್ಪಾದನೆಯಾಗಿದೆ . 2019 – 2020 ಸಾಲಿನಲ್ಲಿ INR 5 ಬಿಲಿಯನ್ ಮೌಲ್ಯದ ಆಲೂಗಡ್ಡೆಯನ್ನು ರಫ್ತು ಮಾಡಲಾಗಿದೆ. ಆಲೂಗಡ್ಡೆ ಯಾವುದೇ ಪ್ರದೇಶದಲ್ಲಿ ಬೆಳೆಯಬಹುದಾದ ಒಂದು ಬಹುಮುಖ ಬೆಳೆ. ಭಾರತದಲ್ಲಿ ಆಲೂಗಡ್ಡೆ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಹಿಮಾಚಲ ಪ್ರದೇಶ, ಪಂಜಾಬ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಮತ್ತು ಅಸ್ಸಾಂ. ಆಲೂಗಡ್ಡೆ ಬೆಳೆಯ ಬಹುಪ್ರಯೋಜನಗಳಿಂದಾಗಿ ಮೌಲ್ಯವರ್ಧಿತ ಆಲೂಗಡ್ಡೆ ಯಾವಾಗಲೂ ಬೇಡಿಕೆಯಲ್ಲಿರುತ್ತದೆ.
(ಸುಲಭ/ಮಧ್ಯಮ/ಕಠಿಣ)
ಆಲೂಗಡ್ಡೆಗಳನ್ನು ಸಾಮಾನ್ಯವಾಗಿ ಗೆಡ್ಡೆಗಳನ್ನು ಬಳಸಿ ಬೆಳೆಯಲಾಗುತ್ತದೆ.ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದ ತಳಿಗಳೆಂದರೆ ಕುಫ್ರಿ ಸಿಂಧೂರಿ, ಕುಫ್ರಿ ಚಂದ್ರಮುಖಿ, ಕುಫ್ರಿ ಜ್ಯೋತಿ, ಕುಫ್ರಿ ಲೌವ್ಕರ್, ಕುಫ್ರಿ ಬಾದಶಾ, ಕುಫ್ರಿ ಬಹಾರ್, ಕುಫ್ರಿ ಲಾಲಿಮಾ, ಕುಫ್ರಿ ಜವಾಹರ್, ಕುಫ್ರಿ ಸಟ್ಲೆಜ್, ಕುಫ್ರಿ ಅಶೋಕ, ಕುಫ್ರಿ ಪುಖ್ರಾಜ್, ಕುಫ್ರಿ ಚಿಪ್ಸೋನಾ ಮತ್ತು ಕುಫ್ರಿ ಆನಂದ್.
ಆಲೂಗಡ್ಡೆಯ ವಿಲಕ್ಷಣ/ವಿದೇಶಿ ತಳಿಗಳೆಂದರೆ ರಸ್ಸೆಟ್, ರೌಂಡ್ ವೈಟ್, ಲಾಂಗ್ ವೈಟ್, ರೌಂಡ್ ರೆಡ್, ಹಳದಿ ಮಾಂಸ, ನೀಲಿ ಮತ್ತು ನೇರಳೆ.
ಗೆಡ್ಡೆಗಳಿಂದ ಹರಡುವ ರೋಗಗಳಾದ ದುಂಡಾಣು ಕೊಳೆ ರೋಗ ,ಕಪ್ಪು ಕಾಂಡ ,ಫ್ಯೂಸರಿಯಂ ರೋಗ, ಕೊನೆಯ ಹಂತದ ಅಂಗಮಾರಿ ರೋಗವನ್ನು ತಡೆಗಟ್ಟಲು ಬಿಜೋಪಚಾರವನ್ನು ಮಾಡಬೇಕು . ಗೆಡ್ಡೆಗಳನ್ನು ಸಂಪೂರ್ಣವಾಗಿ ಅಥವಾ ಭಾಗಗಳಾಗಿ ಕತ್ತರಿಸಿ ನಂತರ ಕ್ಯಾಪ್ಟನ್ 2 ಗ್ರಾಂ/ಲೀಟರ್ ದ್ರಾವಣದೊಂದಿಗೆ ಸಂಸ್ಕರಿಸಬೇಕು. ಆಲೂಗಡ್ಡೆಯ ಬೀಜೋಪಚಾರವನ್ನು ಸಾಮಾನ್ಯವಾಗಿ ಗೆಡ್ಡೆಗಳನ್ನು ಕತ್ತರಿಸಿದ 6 ಗಂಟೆಗಳ ಒಳಗೆ ಮಾಡಬೇಕು. ಗೆಡ್ಡೆಗಳನ್ನು ಹ್ಯೂಮಿಕ್ ಆಮ್ಲ ಅಥವಾ ಸಾವಯವ ಬೆಳೆವರ್ಧಕದಿಂದ ಬೀಜೋಪಚಾರ ಮಾಡುವುದರಿಂದ ಗೆಡ್ಡೆಗಳ ಬೆಳವಣಿಗೆಗೆ ಹಾಗು ಮೊಳಕೆಯೊಡೆಯಲು ಅಗತ್ಯವಿರುವ ಪೋಷಕಾಂಶಗಳು ಸಿಗುತ್ತವೆ.
ಲವಣಯುಕ್ತ ಮತ್ತು ಕ್ಷಾರೀಯ ಮಣ್ಣುಗಳನ್ನು ಹೊರತುಪಡಿಸಿ ಬೇರೆ ಎಲ್ಲ ಬಗೆಯ ಮಣ್ಣಿನಲ್ಲಿ ಆಲೂಗಡ್ಡೆ ಬೆಳೆಯುತ್ತದೆ. ನೀರು ಚೆನ್ನಾಗಿ ಹರಿದು ಹೋಗುವಂಥ, ಗಾಳಿ ಚೆನ್ನಾಗಿ ಆಡುವಂಥ ಹಾಗು ಸಾವಯವ ಪದಾರ್ಥ ಹೇರಳವಾಗಿರುವ ಕಳಿಮಣ್ಣು(ಲೋಮಿ) ಹಾಗು ಮರಳು ಮಿಶ್ರಿತ ಕಳಿಮಣ್ಣು ಆಲೂಗಡ್ಡೆ ಬೆಳೆಯಲು ಹೆಚ್ಚು ಸೂಕ್ತ.
ಸ್ವಲ್ಪ ಆಮ್ಲೀಯ ಮಣ್ಣಿನಲ್ಲಿ ಆಲೂಗಡ್ಡೆ ಉತ್ತಮವಾಗಿ ಬೆಳೆಯುತ್ತದೆ. 5.2 – 6.4 ರ pH ಶ್ರೇಣಿಯ ಮಣ್ಣನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.
ಭೂಮಿಯನ್ನು 20 – 25 ಸೆಂ.ಮೀ.ನಷ್ಟು ಆಳದಲ್ಲಿ ಉಳುಮೆ ಮಾಡಿ, ಉಳುಮೆ ಮಾಡಿದ ಮಣ್ಣನ್ನು ಬಿಸಿಲಿಗೆ ಒಡ್ಡಬೇಕು. ಭೂಮಿಯನ್ನು ಸಂಪೂರ್ಣ ತಂಪಾಗಿಸಬೇಕು. ಈ ರೀತಿ ಮಾಡುವುದರಿಂದ ಉತ್ತಮ ಗೆಡ್ಡೆಯ ಬೆಳೆವಣಿಗೆಗೆ ಸಹಕಾರಿಯಾಗುತ್ತದೆ .ಕೊನೆಯ ಉಳುಮೆಯ ಸಮಯದಲ್ಲಿ ಚೆನ್ನಾಗಿ ಕೊಳೆತ FYM 25 – 30 ಟನ್ /ಹೆಕ್ಟೇರ್ ಗೆ ಹಾಕಿ ಮಣ್ಣಿನ ಜೊತೆ ಮಿಶ್ರಣ ಮಾಡಬೇಕು.
ನಾಟಿ ಮಾಡುವ ಮೊದಲು 50 – 60 ಸೆಂ.ಮೀ ನ ಹಾಗೆ ಕುಣಿಗಳನ್ನು ಮಾಡಬೇಕು. ನಂತರ ಸಂಪೂರ್ಣ ಅಥವಾ ಕತ್ತರಿಸಿದ ಗೆಡ್ಡೆಯನ್ನು 15 – 20 ಸೆಂ.ಮೀ ಅಂತರದಲ್ಲಿ 5 – 7 ಸೆಂ.ಮೀ ಆಳದಲ್ಲಿ ನೆಟ್ಟು ಮಣ್ಣಿನಿಂದ ಮುಚ್ಚಬೇಕು.ದುಂಡಾಕಾರದ ಗೆಡ್ಡೆಗಳನ್ನು ಹೊಂದಿರುವ ತಳಿಗಳ ಪ್ರಮಾಣ 1.5 – 1.8 ಟನ್ /ಹೆಕ್ಟೇರ್ ಮತ್ತು ಅಂಡಾಕಾರದ ಗೆಡ್ಡೆಗಳನ್ನು ಹೊಂದಿರುವ ತಳಿಗಳ ಪ್ರಮಾಣ 2 – 2.5 ಟನ್ /ಹೆಕ್ಟೇರ್ ಬೇಕಾಗುತ್ತವೆ.
ಐಸಿಎಆರ್, ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ನಾಲ್ಕು ಸಾಲಿನ ಆಲೂಗಡ್ಡೆ ಪ್ಲಾಂಟರ್ ,ಇತ್ತೀಚಿನ ದಿನಗಳಲ್ಲಿ ಆಲೂಗೆಡ್ಡೆ ಬೆಳೆಯುವ ರೈತರಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಯಂತ್ರದ ಕಾರ್ಯನಿರ್ವಹಿಸಲು 2- 3 ಜನರು ಬೇಕಾಗುತ್ತಾರೆ ಮತ್ತು ದಿನಕ್ಕೆ 4- 5 ಹೆಕ್ಟೇರ್‌ವರೆಗೆ ಉಳುಮೆ ಮಾಡಬಹುದು. ಇದು ಕಾರ್ಮಿಕರ ವೆಚ್ಚವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಆಲೂಗಡ್ಡೆ ಬೆಳೆಯನ್ನು ಯಾವುದೇ ವಾತಾವರಣದಲ್ಲೂ ಬೆಳೆಯ ಬಹುದಾದರಿಂದ ಇದನ್ನು ಬಹುತೇಕ ಎಲ್ಲೆಡೆ ಬೆಳೆಯಲಾಗುತ್ತದೆ. ಆಲೂಗಡ್ಡೆ ಬೆಳೆಯು ಒಂದು ಸೂಕ್ತ ಬೆಳೆಯಾಗಿದ್ದು, ಕಡಿಮೆ ಮಾರುಕಟ್ಟೆ ದರದ ಸಮಯದಲ್ಲಿ ಸಹ ಮೌಲ್ಯವರ್ಧನೆ ಮೂಲಕ ಹೂಡಿಕೆಯ ಮೇಲೆ ಉತ್ತಮ ಲಾಭವನ್ನು ನಿರೀಕ್ಷಿಸಬಹುದು . ಇತರ ಬೆಳೆಗಳಿಗೆ ಹೋಲಿಸಿದರೆ, ಆಲೂಗಡ್ಡೆ ಬೆಳೆಯನ್ನು ಯಾವುದೇ ಸಮಯದಲ್ಲಿಯಾದರೂ ಬೆಳೆಸಬಹುದು.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…