ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು ಕ್ರಾಂತಿಗೊಳಿಸಿದೆ, ಇದು ತ್ಯಾಜ್ಯವನ್ನು ಕಡಿಮೆ ಮಾಡುತ್ತದೆ ಮತ್ತು ಸಸ್ಯ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಆದರೂ ಸಹ, ಅತ್ಯಾಧುನಿಕ ಹನಿ ನೀರಾವರಿ ವ್ಯವಸ್ಥೆಗಳು ಸಹ ಪೈಪ್ ಗಳಲ್ಲಿ ಸ್ಕೇಲ್ ಗಳು ಉಂಟಾಗುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ, ಇದು ಪೈಪ್ಗಳನ್ನು ಮುಚ್ಚಿಹಾಕುತ್ತದೆ ಮತ್ತು ಒಟ್ಟಾರೆ ದಕ್ಷತೆಯನ್ನು ಕಡಿಮೆ ಮಾಡುತ್ತದೆ. ಇಂತಹ ಕಠಿಣ ಸಮಯದಲ್ಲಿ ನಮಗೆ ಬೇಕಾಗಿರುವುದು ಎಕ್ಸೆಲ್ ಇಂಡಸ್ಟ್ರೀಸ್ನ ಎಕ್ಸ್ಸ್ಕೇಲೆಂಟ್ . ಇದು ನಿರ್ದಿಷ್ಟವಾಗಿ ಸ್ಕೇಲ್ ಗಳು ಉಂಟಾಗುವುದನ್ನು ತಡೆಗಟ್ಟಲು ವಿನ್ಯಾಸಗೊಳಿಸಲಾದ ಒಂದು ಅದ್ಭುತ ಪರಿಹಾರವಾಗಿದೆ. ನಿಮ್ಮ ಹನಿ ನೀರಾವರಿ ವ್ಯವಸ್ಥೆಯ ಪೈಪ್ ಗಳನ್ನು ಮುಚ್ಚಿಹಾಕದೆ, ಗರಿಷ್ಠ ದಕ್ಷತೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಅಂತಿಮವಾಗಿ ಆರೋಗ್ಯಕರ ಸಸ್ಯ ಬೆಳವಣಿಗೆ ಮತ್ತು ಹೆಚ್ಚು ಉತ್ಪಾದಕ ಕೃಷಿ ಪದ್ಧತಿಗಳನ್ನು ಬೆಂಬಲಿಸುತ್ತದೆ.
ಎಕ್ಸ್ಸ್ಕೇಲೆಂಟ್ ಉತ್ಪನ್ನವು ಚೀಲೇಟಿಂಗ್ ಏಜೆಂಟ್ಗಳ ಸಂಯೋಜನೆಯಾಗಿದೆ
ಎಕ್ಸ್ಸ್ಕೇಲೆಂಟ್ ಉತ್ಪನ್ನವು, ಸಕ್ಕರೆಯು ಹೇಗೆ ನೀರಿನಲ್ಲಿ ಕರಗುತ್ತದೆಯೋ, ಅಷ್ಟು ಸುಲಭವಾಗಿ ಹನಿ ನೀರಾವರಿ ವ್ಯವಸ್ಥೆಯಲ್ಲಿ ಗಡುಸು ನೀರು-ಪ್ರೇರಿತ ಸ್ಕೇಲ್ ಗಳನ್ನು ನಿಧಾನವಾಗಿ ಕರಗಿಸುತ್ತದೆ,ಇದು ಪರಿಣಾಮಕಾರಿ ನೀರಿನ ಹರಿವಿಗೆ ಕಾರಣವಾಗುತ್ತದೆ. ಪಂಪ್ ಅನ್ನು ಪುನರಾರಂಭಿಸಿದಾಗ, ಕರಗಿದ ಸ್ಕೇಲ್ ಗಳು ಬೆಳೆಗೆ ಹಾನಿಯಾಗದಂತೆ ಹೊರಬರುತ್ತವೆ.
ನೀರಾವರಿಯ ಪೈಪ್ ಗಳ ನಿಯಮಿತ ನಿರ್ವಹಣಾ ದಿನಚರಿಯಲ್ಲಿ ಎಕ್ಸ್ಸ್ಕೇಲೆಂಟ್ ಅನ್ನು ಸೇರಿಸುವ ಮೂಲಕ, ಆರೋಗ್ಯಕರ ಬೆಳೆಗಳು ಮತ್ತು ಹೆಚ್ಚು ಉತ್ಪಾದಕ ಕೃಷಿ ಪದ್ಧತಿಗಳಿಗೆ ಕಾರಣವಾಗುತ್ತದೆ.ಇದರಿಂದ ನೀರಾವರಿ ವ್ಯವಸ್ಥೆಯ ಪೈಪ್ ಗಳು ಸ್ವಚ್ಛವಾಗಿ ಮತ್ತು ಪರಿಣಾಮಕಾರಿಯಾಗಿ ಇರುವಂತೆ ರೈತರು ಖಚಿತಪಡಿಸಿಕೊಳ್ಳಬಹುದು.
ಎಕ್ಸ್ಸ್ಕೇಲೆಂಟ್ನ ಅದ್ಬುತ ವೈಶಿಷ್ಟ್ಯವೆಂದರೆ ಬೆಳೆಗಳು ಇನ್ನೂ ಹೊಲದಲ್ಲಿದ್ದಾಗಲೂ ಸಹ ಇದನ್ನು ಬಳಸಬಹುದು. ಇದರರ್ಥ ನಿಮ್ಮ ಬೆಳೆಯುತ್ತಿರುವ ಸಸ್ಯಗಳಿಗೆ ಅಡ್ಡಿಯಾಗದಂತೆ ನಿಮ್ಮ ಹನಿ ನೀರಾವರಿ ಪೈಪ್ ಗಳನ್ನು ಶುದ್ಧಮಾಡಬಹುದು.
ಎಕ್ಸ್ಸ್ಕೇಲೆಂಟ್ ಪೈಪ್ ಗಳನ್ನು ಸ್ವಚ್ಛಗೊಳಿಸುವ ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ, ಲ್ಯಾಟರಲ್ ಗಳನ್ನು ತೆಗೆಯುವಂತಹ ಕಾರ್ಮಿಕ- ಆಧಾರಿತ ಕಾರ್ಯಗಳ ಅಗತ್ಯವನ್ನು ತಡೆಯುತ್ತದೆ. ಇದು ನಿಮ್ಮ ಸಮಯವನ್ನು ಉಳಿಸುತ್ತದೆ ಮತ್ತು ನಿಮ್ಮ ನೀರಾವರಿ ವ್ಯವಸ್ಥೆಯನ್ನು ನಿರ್ವಹಿಸಲು ಬೇಕಾಗಿರುವ ಶ್ರಮವನ್ನು ಕಡಿಮೆ ಮಾಡುತ್ತದೆ.
ಎಕ್ಸ್ಸ್ಕೇಲೆಂಟ್ನ ನಿಯಮಿತ ಬಳಕೆಯಿಂದಾಗಿ ಡ್ರಿಪ್ಪರ್ ಬ್ಲಾಕ್ಗಳನ್ನು ಕಡಿಮೆ ಮಾಡಬಹುದು ಅಥವಾ ಸಂಪೂರ್ಣವಾಗಿ ತಪ್ಪಿಸಬಹುದು ಎಂದು ಖಚಿತಪಡಿಸಿಕೊಳ್ಳಬಹುದು. ಇದು ನಿಮ್ಮ ಹನಿ ನೀರಾವರಿ ವ್ಯವಸ್ಥೆಯ ದಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ, ನಿಮ್ಮ ಬೆಳೆಗಳಿಗೆ ಸ್ಥಿರವಾದ ನೀರಿನ ವಿತರಣೆಯನ್ನು ಖಚಿತಪಡಿಸುತ್ತದೆ.
ಎಕ್ಸ್ಸ್ಕೇಲೆಂಟ್ ಎನ್ನುವುದು ಸ್ಕೇಲ್ ಗಳನ್ನು ಒಳಗೊಂಡ ಹನಿ ನೀರಾವರಿ ಪೈಪ್ ಗಳನ್ನು ಸ್ವಚ್ಛಗೊಳಿಸಲು ವಿನ್ಯಾಸಗೊಳಿಸಲಾದ ಅತ್ಯಂತ ಸುರಕ್ಷಿತ ಪರಿಹಾರವಾಗಿದೆ. ಇದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿ ಶುಚಿಗೊಳಿಸುವ ಪ್ರಕ್ರಿಯೆಯನ್ನು ಖಾತ್ರಿಪಡಿಸುವ ಮೂಲಕ ಮಾನವರು, ಮಣ್ಣು, ಬೆಳೆಗಳು ಅಥವಾ ಹನಿ ನೀರಾವರಿ ವ್ಯವಸ್ಥೆಗಳಿಗೆ ಯಾವುದೇ ಹಾನಿಯನ್ನುಂಟು ಮಾಡುವುದಿಲ್ಲ.
ಎಕ್ಸ್ಸ್ಕೇಲೆಂಟ್ ಹಣ್ಣುಗಳು, ತರಕಾರಿಗಳು ಮತ್ತು ತೋಟದ ಬೆಳೆಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಬೆಳೆಗಳಿಗೆ ಸೂಕ್ತವಾದ ಬಹುಮುಖ ಹನಿ ನೀರಾವರಿ ಪರಿಹಾರವಾಗಿದೆ. ಆಲೂಗಡ್ಡೆ, ದಾಳಿಂಬೆ, ಟೊಮ್ಯಾಟೊ, ಮೆಣಸಿನಕಾಯಿ, ಬಾಳೆಹಣ್ಣು, ಪೇರಲ ಮತ್ತು ಶುಂಠಿಯಂತಹ ವಿವಿಧ ಬೆಳೆಗಳ ಬೆಳವಣಿಗೆ ಮತ್ತು ಆರೋಗ್ಯವನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಇದನ್ನು ಬಳಸಬಹುದು. ನೀವು ಹಣ್ಣು ಬೆಳೆಗಾರರಾಗಿರಬಹುದು, ಸೊಪ್ಪು ಬೆಳೆಗಳನ್ನು ಬೆಳೆಯುತ್ತಿರಬಹುದು ಅಥವಾ ಬೇರು ಆಧಾರಿತ ತರಕಾರಿಗಳನ್ನು ಬೆಳೆಯುತ್ತಿರಬಹುದು, ಎಕ್ಸ್ಸ್ಕೇಲೆಂಟ್ ಹನಿ ನೀರಾವರಿ ವ್ಯವಸ್ಥೆಯನ್ನು ಬೆಂಬಲಿಸಲು ಮತ್ತು ಒಟ್ಟಾರೆ ಇಳುವರಿ ಗುಣಮಟ್ಟವನ್ನು ಸುಧಾರಿಸಲು ಬೇಕಾದಷ್ಟು ಸ್ಥಳಾವಕಾಶವನ್ನು ಒದಗಿಸುತ್ತದೆ.
ನಿಮ್ಮ ಹನಿ ನೀರಾವರಿ ವ್ಯವಸ್ಥೆಯ ಅತ್ಯುತ್ತಮ ಕಾರ್ಯಕ್ಷಮತೆಯನ್ನು ಖಚಿತಪಡಿಸಿಕೊಳ್ಳಲು, ಎಕ್ಸ್ಸ್ಕೇಲೆಂಟ್ ಅನ್ನು ಸರಿಯಾದ ಪ್ರಮಾಣದಲ್ಲಿ ಬಳಸುವುದು ಮುಖ್ಯವಾಗಿದೆ. ಇದನ್ನು ಪರಿಣಾಮಕಾರಿಯಾಗಿ ಬಳಸುವುದು ಹೇಗೆ ಎಂಬುದು ಇಲ್ಲಿದೆ. ತ್ವರಿತ ಮತ್ತು ಉತ್ತಮ ಫಲಿತಾಂಶಕ್ಕಾಗಿ ಪ್ರತಿ ಎಕರೆ ಭೂಮಿಗೆ 2 ಕೆಜಿ ಎಕ್ಸ್ಸ್ಕೇಲೆಂಟ್ ಅನ್ನು ಬಳಸಿ.
ರಸಗೊಬ್ಬರಗಳು, ಕೀಟನಾಶಕಗಳು, ಕಳೆನಾಶಕಗಳು ಮತ್ತು ಇತರ ಬೆಳೆ ಸಂರಕ್ಷಣಾ ಉತ್ಪನ್ನಗಳು ಸೇರಿದಂತೆ ಎಲ್ಲಾ ಕೃಷಿ ಉತ್ಪನ್ನಗಳೊಂದಿಗೆ ಎಕ್ಸ್ಸ್ಕೇಲೆಂಟ್ ಹೊಂದಿಕೊಳ್ಳುತ್ತದೆ. ಇದರರ್ಥ ನೀವು ಪ್ರತಿಕೂಲ ಪ್ರತಿಕ್ರಿಯೆಗಳ ಬಗ್ಗೆ ಚಿಂತಿಸದೆ ಅಥವಾ ಇತರ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಕಡಿಮೆ ಮಾಡದೆಯೇ ನೀವು ಈಗಾಗಲೇ ಅನುಸರಿಸುತ್ತಿರುವ ಕೃಷಿ ಪದ್ಧತಿಗಳಲ್ಲಿ ಎಕ್ಸ್ಸ್ಕೇಲೆಂಟ್ ಅನ್ನು ಸಂಯೋಜಿಸಬಹುದು. ಎಕ್ಸ್ಸ್ಕೇಲೆಂಟ್ ನ ಹೊಂದಾಣಿಕೆಯು ನಿಮ್ಮ ಹನಿ ನೀರಾವರಿ ವ್ಯವಸ್ಥೆಗೆ ಇದು ಒದಗಿಸುವ ವರ್ಧಿತ ದಕ್ಷತೆ ಮತ್ತು ರಕ್ಷಣೆಯಿಂದಾಗುವ ಪ್ರಯೋಜನಗಳ ಜೊತೆಗೆ ನಿಯಮಿತ ಕೃಷಿ ದಿನಚರಿಯನ್ನು ನೀವು ನಿರ್ವಹಿಸಬಹುದು ಎಂದು ಖಚಿತಪಡಿಸುತ್ತದೆ.
ಎಕ್ಸೆಲ್ ಇಂಡಸ್ಟ್ರೀಸ್ನ ಎಕ್ಸ್ಸ್ಕೇಲೆಂಟ್ ಹನಿ ನೀರಾವರಿ ವ್ಯವಸ್ಥೆಗಳ ದಕ್ಷತೆಯನ್ನು ಕಾಪಾಡಿಕೊಳ್ಳಲು ವಿನ್ಯಾಸಗೊಳಿಸಲಾದ ನವೀನ ಮತ್ತು ಸುರಕ್ಷಿತ ಪರಿಹಾರವಾಗಿದೆ. ನೀರಾವರಿ ಪೈಪ್ ಗಳಲ್ಲಿ ಸ್ಕೇಲ್ ಗಳು ಉಂಟಾಗುವುದನ್ನು ತಡೆಗಟ್ಟುವ ಮೂಲಕ, ಇದು ಸಸ್ಯದ ಬೇರುಗಳಿಗೆ ನೇರವಾಗಿ ಸೂಕ್ತವಾದ ನೀರಿನ ವಿತರಣೆಯನ್ನು ಖಾತ್ರಿಗೊಳಿಸುತ್ತದೆ, ಆರೋಗ್ಯಕರ ಮತ್ತು ಹೆಚ್ಚು ಉತ್ಪಾದಕ ಬೆಳೆಗಳನ್ನು ಉತ್ತೇಜಿಸುತ್ತದೆ. ಎಲ್ಲಾ ಕೃಷಿ ಉತ್ಪನ್ನಗಳೊಂದಿಗೆ ಇದರ ಹೊಂದಾಣಿಕೆ ಮತ್ತು ಬಳಕೆಯ ಸುಲಭತೆ, ಈಗಾಗಲೇ ಹೊಲದಲ್ಲಿ ಬೆಳೆಯುತ್ತಿರುವ ಬೆಳೆಗಳಿಗೆ ಯಾವುದೇ ಹಾನಿಮಾಡದೆ, ಪ್ರಸ್ತುತ ಅನುಸರಿಸುತ್ತಿರುವ ಕೃಷಿ ಅಭ್ಯಾಸಕ್ಕೆ ಅಮೂಲ್ಯವಾದ ಸೇರ್ಪಡೆಯಾಗಿದೆ. ಎಕ್ಸ್ಸ್ಕೇಲೆಂಟ್ ಕಾರ್ಮಿಕ ವೆಚ್ಚವನ್ನು ಉಳಿಸುವುದು ಮಾತ್ರವಲ್ಲದೆ ಪರಿಸರ ಮತ್ತು ಬೆಳೆಗಳ ಆರೋಗ್ಯವನ್ನು ರಕ್ಷಿಸುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…
ಸುಸ್ಥಿರ ಕೃಷಿಯ ಅನ್ವೇಷಣೆಯಲ್ಲಿ, ಸಾವಯವ ತ್ಯಾಜ್ಯದ ನಿರ್ವಹಣೆ ಮತ್ತು ಮಣ್ಣಿನಲ್ಲಿ ಸಾವಯವ ಪದಾರ್ಥಗಳ ವರ್ಧನೆಯು ಪ್ರಮುಖವಾಗಿದೆ. ಆದಾಗ್ಯೂ, ಸಂಶ್ಲೇಷಿತ ರಸಗೊಬ್ಬರಗಳು ಮತ್ತು ಕೀಟನಾಶಕಗಳ ಮಿತಿಮೀರಿದ ಬಳಕೆಯು ಮಣ್ಣಿನ…