HomeCropಏಲಕ್ಕಿ ಬೆಳೆಗೆ ಭೂಮಿ ಸಿದ್ಧತೆ

ಏಲಕ್ಕಿ ಬೆಳೆಗೆ ಭೂಮಿ ಸಿದ್ಧತೆ

ಏಲಕ್ಕಿಯನ್ನು ಮಸಾಲೆಗಳ ರಾಣಿ/ ಸಾಂಬಾರು ಪದಾರ್ಥಗಳ ರಾಣಿ  ಎಂದು ಕರೆಯಲಾಗುತ್ತದೆ. ಏಲಕ್ಕಿ ಬೆಳೆಯು ಭಾರತ ದೇಶದ  ಪಶ್ಚಿಮ ಘಟ್ಟಗಳ ದಕ್ಷಿಣ ಭಾಗದ ನಿತ್ಯ ಹರಿದ್ವರ್ಣ ಕಾಡು ಪ್ರದೇಶದ ಮುಖ್ಯ ಬೆಳೆಯಾಗಿದೆ. ಏಲಕ್ಕಿಯು  ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಮಸಾಲೆಗಳಲ್ಲಿ ಒಂದಾಗಿದೆ. 

ಗ್ವಾಟೆಮಾಲಾ ದೇಶದ  ನಂತರ ಭಾರತವು ಏಲಕ್ಕಿ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಎರಡನೇ ಸ್ಥಾನದಲ್ಲಿದೆ. ಭಾರತವು ಪ್ರತಿ ವರ್ಷ 15,000 ಟನ್ ಏಲಕ್ಕಿಯನ್ನು ರಫ್ತು ಮಾಡುತ್ತದೆ. ಭಾರತದಲ್ಲಿ ಏಲಕ್ಕಿಯನ್ನು ಕೇರಳ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಏಲಕ್ಕಿಯು ದೀರ್ಘಾವಧಿಯ ಬೆಳೆ. ಏಲಕ್ಕಿಯನ್ನು ಆಹಾರ ಸಂರಕ್ಷಣೆಯಲ್ಲಿಯೂ ಸಹ ಏಲಕ್ಕಿಯನ್ನು  ಬಳಸಲಾಗುತ್ತದೆ ,

ಕಷ್ಟದ ಮಟ್ಟ : ಮಧ್ಯಮ 

ಬೀಜಗಳ ಆಯ್ಕೆ 

ಏಲಕ್ಕಿ ಬೆಳೆಯಲ್ಲಿ ಹಲವಾರು ತಳಿಗಳಿವೆ. ಆದರೆ  ಎರಡು ಅತ್ಯಂತ ಮುಖ್ಯ ವಿಧಗಳಿವೆ . ಅವು ಯಾವುವೆಂದರೆ ಶ್ರೀಲಂಕಾ ಮತ್ತು ಎಲೆಟೇರಿಯಾ ಏಲಕ್ಕಿ ಮ್ಯಾಟನ್( ಚಿಕ್ಕ ಹಸಿರು ಏಲಕ್ಕಿ). ಇತರೆ ಪ್ರಮುಖ ತಳಿಗಳೆಂದರೆ  ಮೈಸೂರು, ಮಲಬಾರ್ ಮತ್ತು “ವಝುಕ್ಕ”. 

ಏಲಕ್ಕಿಯ ಜನಪ್ರಿಯ ಹೈಬ್ರಿಡ್ ತಳಿಗಳೆಂದರೆ ICRI 1, 2, 3; TDK 4 & 11; PV 1, CCS 1 ಮಧುಗಿರಿ 1 & 2; NCC 200; MCC 12, 16 &40; RR1.

ಏಲಕ್ಕಿ ಬೀಜಗಳ ಬೀಜೋಪಚಾರ

ಏಲಕ್ಕಿಯನ್ನು ಮುಖ್ಯವಾಗಿ ಸಕ್ಕರ್‌/ಕ್ಲಿಪ್ಪಿಂಗ್ಸ್(ಇದು  ಕಾಂಡಗಳು, ರೆಂಬೆಗಳು  ಅಥವಾ ತಾಯಿ ಗಿಡದ  ಒಂದು ಕಾಂಡದ ತುಂಡು ಅಥವಾ ಕಂದುಗಳು ) ಮೂಲಕ ಏಲಕ್ಕಿ ಗಿಡದ   ಪ್ರಸರಣವನ್ನು ಮಾಡಲಾಗುತ್ತದೆ .  ಏಲಕ್ಕಿಯನ್ನು ಬೀಜಗಳಿಂದ ಸಹ ಪ್ರಸರಣ  ಮಾಡಬಹುದು. ಬೀಜಗಳನ್ನು ಸಲ್ಫ್ಯೂರಿಕ್ ಅಥವಾ ಹೈಡ್ರೋಕ್ಲೋರಿಕ್ ಆಮ್ಲದ ದ್ರಾವಣದೊಂದಿಂಗೆ 20 ನಿಮಿಷಗಳ ಕಾಲ ಸಂಸ್ಕರಿಸಿ , ನಂತರ ಬೀಜಗಳನ್ನು ಖನಿಜೀಕರಿಸಿದ ನೀರಿನಲ್ಲಿ ತೊಳೆಯಬೇಕು . ಆನಂತರ ನೇರಳಿನಲ್ಲಿ  ಒಣಗಿಸಿ  ಬಿತ್ತನೆ ಮಾಡಬೇಕು. 

ಏಲಕ್ಕಿ ಬೆಳೆಗೆ ನರ್ಸರಿ ಸಿದ್ಧತೆ 

ಏಲಕ್ಕಿ  ಕಂದುಗಳನ್ನು 1.8 ಮೀ x 0.6 ಮೀ (6800 ಸಸ್ಯಗಳು/ಹೆಕ್ಟೇರ್ ನರ್ಸರಿ) ಅಂತರದಲ್ಲಿ ಪ್ರಸರಣವನ್ನು ಮಾಡಲಾಗುತ್ತದೆ . ಏಲಕ್ಕಿ ಸಸಿಗಳನ್ನು  ಸಾಮಾನ್ಯವಾಗಿ ಪಾಲಿಥಿನ್ ಚೀಲಗಳಲ್ಲಿ ಪ್ರಸರಣ ಮಾಡಲಾಗುತ್ತದೆ. ನರ್ಸರಿಯನ್ನು ಓವರ್‌ಹೆಡ್ ಪೆಂಡಾಲ್ ಗಳನ್ನು ನಿರ್ಮಿಸುವ ಮೂಲಕ ನೆರಳಿನಲ್ಲಿ ಬೆಳೆಸಲಾಗುತ್ತದೆ. 

ಸಸಿಗಳನ್ನು  20 x 20 ಸೆಂ.ಮೀ ಪಾಲಿಬ್ಯಾಗ್‌ಗಳಲ್ಲಿ ನೆಡಲಾಗುತ್ತದೆ. ಸಸಿಗಳನ್ನು 18-22 ತಿಂಗಳ ಅಂತರದಲ್ಲಿ  ಮುಖ್ಯ ಭೂಮಿಗೆ ಸ್ಥಳಾಂತರಿಸಲಾಗುತ್ತದೆ.

ಏಲಕ್ಕಿ ಬೆಳೆಗೆ ಭೂಮಿ ಸಿದ್ಧತೆ 

ಭೂಮಿಯನ್ನು ಮೂರ್ನಾಲ್ಕು  ಬಾರಿ ಉಳುಮೆ ಮಾಡಬೇಕು.  ಕೊನೆಯ ಉಳುಮೆಯಲ್ಲಿ 12 ಟ/ಹೆಕ್ಟೇರ್ ಕೊಟ್ಟಿಗೆ (ಕಾಂಪೋಸ್ಟ್) ಗೊಬ್ಬರ  ; 35:35:75 ಕೆಜಿ/ಹೆಕ್ಟೇರ್ ನಷ್ಟು ಸಾರಜನಕ , ರಂಜಕ ಹಾಗು ಪೊಟ್ಯಾಷ್ ನ್ನು (NPK ) ಒಳಗೊಂಡಿರುವ  ರಸಗೊಬ್ಬರವನ್ನು ಹಾಕಬೇಕು . 

60 cm x 60 cm x 60 cm ಅಳತೆಯ ಗುಣಿಗಳನ್ನು ಸಮಪಾತಳಿ ರೇಖೆಗನುಗುಣವಾಗಿ ಅಗೆದು, ಆ ಗುಣಿಗಳಲ್ಲಿ ಕೊಟ್ಟಿಗೆ ಗೊಬ್ಬರ ಮತ್ತು ಮೇಲುಮಣ್ಣಿನ ಮಿಶ್ರಣವನ್ನೂ  ತುಂಬಿಸಬೇಕು.

ಏಲಕ್ಕಿ ಬೆಳೆಯು ಸಾಮಾನ್ಯವಾಗಿ ಮಳೆಯಾಶ್ರಿತ ಬೆಳೆಯಾಗಿದ್ದು, ಸ್ಪ್ರಿಂಕ್ಲರ್‌ ನೀರಾವರಿ ಪದ್ದತಿಯನ್ನು ಬಳಸಿ ನೀರನ್ನು ಒದಗಿಸಬೇಕು.  ಸ್ಪ್ರಿಂಕ್ಲರ್‌ ನೀರಾವರಿಯನ್ನು ವಿಶೇಷವಾಗಿ ಬೇಸಿಗೆಯ ತಿಂಗಳುಗಳಲ್ಲಿ ಒದಗಿಸಬೇಕು.  ದೊಡ್ಡಗಾತ್ರದ   ತಳಿಗಳಿಗೆ ಸಸ್ಯಗಳ  ಅಂತರ 2.5 x 2.0 ಮೀ ಮತ್ತು ಸಣ್ಣಗಾತ್ರದ ತಳಿಗಳಿಗೆ ಸಸ್ಯಗಳ  ಅಂತರ 2.0 x 1.5 ಮೀ ನೀಡಬೇಕು . ಏಲಕ್ಕಿ ಬೆಳೆಗಳನ್ನೂ   ಸಾಮಾನ್ಯವಾಗಿ ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ. ಆದ್ದರಿಂದ ಇಳಿಜಾರಿನ ಭೂಮಿಯಲ್ಲಿ ಬಾಹ್ಯರೇಖೆಯ ತಾರಸಿಗಳನ್ನು   ಸಿದ್ಧಪಡಿಸಬೇಕು .

ಏಲಕ್ಕಿ ಬೆಳೆಗೆ ಮಣ್ಣಿನ ಅವಶ್ಯಕತೆಗಳು  

ಏಲಕ್ಕಿ ಒಂದು ಕಾಡು ಬೆಳೆ.  ಆದ್ದರಿಂದ ಉತ್ತಮ ಒಳಚರಂಡಿ ಇರುವ ಅರಣ್ಯದ ಜಿಗಟು ಮಣ್ಣಿನಲ್ಲಿ  ಚೆನ್ನಾಗಿ  ಬೆಳೆಯುತ್ತದೆ . ಇದು ಸಾಮಾನ್ಯವಾಗಿ ಆಮ್ಲೀಯ ಸ್ವಭಾವ 5.0 – 6.5  pH ಶ್ರೇಣಿಯೊಂದಿಗೆ ಚೆನ್ನಾಗಿ ಬೆಳೆಯುತ್ತದೆ. 

ಹಿನ್ನುಡಿ

ಏಲಕ್ಕಿಯು  ಅತ್ಯಂತ ದುಬಾರಿ ಮಸಾಲಾ/ ಸಾಂಬಾರು ಪದಾರ್ಥಗಳಲ್ಲಿ ಒಂದು.   ಏಲಕ್ಕಿ ಬೆಳೆಯನ್ನು  ಸುಲಭವಾಗಿ ಕೃಷಿ ಮಾಡಲಾಗದಿದ್ದರೂ, ಬೆಳೆಗೆ ಹೂಡಿಕೆ ಮಾಡಿದ  ಕೂಲಿ ಹಾಗು ಇತರ ವೆಚ್ಚಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಅಧಿಕವಾಗಿರುತ್ತದೆ.  ಏಲಕ್ಕಿ ಬೆಳೆಗೆ ಹೆಚ್ಚಿನ ನಿರ್ವಹಣೆ  ಅಥವಾ ನೀರಾವರಿಯ  ಅಗತ್ಯವಿಲ್ಲ. ಸ್ಥಿರವಾದ ಬೆಳವಣಿಗೆ ಇದ್ದಲ್ಲಿ , ಏಲಕ್ಕಿ ಬೆಳೆಯಿಂದ ನಿರಂತರ ಆದಾಯವನ್ನು ನಿರೀಕ್ಷಿಸಬಹುದು 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು