ಗೋಧಿಯು ಭಾರತದಲ್ಲಿ ಎರಡನೇ ಪ್ರಮುಖ ಆಹಾರ ಬೆಳೆಯಾಗಿದ್ದು , ಇದನ್ನು ದೇಶದಾದ್ಯಂತ ವ್ಯಾಪಕವಾಗಿ ಬೆಳೆಯಲಾಗುತ್ತದೆ. ಕಳೆಗಳು ಒಂದು ನಿರ್ದಿಷ್ಟ ಪ್ರದೇಶದಲ್ಲಿ ಅನಗತ್ಯ ಸಸ್ಯಗಳಾಗಿ ಬೆಳೆಯುತ್ತವೆ. ಪೋಷಕಾಂಶ, ಬೆಳಕು ಮತ್ತು ನೀರಿನ ಅವಶ್ಯಕತೆಗಾಗಿ ಬೆಳೆಯುತ್ತಿರುವ ಬೆಳೆಗೆ ಅಡ್ಡಿಪಡಿಸುವುದರಿಂದ ಕಳೆಗಳಿಂದ ಬೆಳೆ ಉತ್ಪಾದಕತೆಯನ್ನು ಹಾನಿಗೊಳಿಸಬಹುದು. ಗೋಧಿ ಹುಲ್ಲು ಮತ್ತು ಅಗಲ ಎಲೆಗಳ ಕಳೆಗಳಿಂದ ಕೂಡಿರುತ್ತವೆ. ಬೆಳೆಗಳ ಬೆಳವಣಿಗೆಯ ಆರಂಭಿಕ ಹಂತಗಳಿಂದ ಕಳೆಗಳನ್ನು ನಿಯಂತ್ರಿಸದಿದ್ದರೆ, ಕಳೆಗಳ ತೀವ್ರತೆ ಮತ್ತು ಕಳೆಗಳ ವಿಧಗಳ ಆಧಾರದ ಮೇಲೆ ಇವುಗಳು ಗೋಧಿ ಬೆಳೆಗಳ ಇಳುವರಿಯನ್ನು 40% ವರೆಗೆ ಕಡಿಮೆಗೊಳಿಸಬಹುದು ಎಂದು ಕೃಷಿ ವಿಜ್ನ್ಯಾನಿಗಳು ಹೇಳಿದ್ದಾರೆ. ಯಾವುದೇ ಬೆಳೆಯಲ್ಲಿ ಕಳೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಮಗ್ರ ಕಳೆ ನಿರ್ವಹಣಾ ಪದ್ಧತಿಗಳನ್ನು ಕೇಂದ್ರೀಕರಿಸಬೇಕು.
ಏಕದಳ ಮತ್ತು ದ್ವಿದಳ ಕಳೆಗಳೆರಡೂ ಗೋಧಿ ಗದ್ದೆಗಳಲ್ಲಿ ಪ್ರಚಲಿತವಾಗಿದೆ. ಏಕದಳ ಕಳೆಗಳು ಅಥವಾ ಹುಲ್ಲುಗಳು ಉದ್ದವಾದ, ಕಿರಿದಾದ ಎಲೆಗಳಿರುವ ಗುಣಲಕ್ಷಣಗಳನ್ನು ಹೊಂದಿವೆ, ಅವುಗಳು ಸಾಮಾನ್ಯವಾಗಿ ಸಮಾನಾಂತರ ನಾಳಗಳನ್ನು ಹೊಂದಿರುತ್ತವೆ. ದ್ವಿದಳ ಅಥವಾ ಅಗಲವಾದ ಎಲೆಗಳನ್ನು ಹೊಂದಿರುವ ಎಲೆಗಳು ಕವಲೊಡೆಯುವ ಸಿರೆಗಳನ್ನು ಹೊಂದಿರುತ್ತವೆ.
ಕಳೆಗಳ ವಿಧ | ಕಳೆಗಳ ಜಾತಿ |
ಏಕದಳ ಕಳೆಗಳು | ಫಲಾರಿಸ್ ಮೈನರ್, ಅವೆನಾ ಫಟುವಾ, ಪಾಲಿಪೊಗನ್ ಮಾನ್ಸ್‌ಪ್ಲೆನ್ಸಿಸ್, ಸೈಪರಸ್ ರೋಟಂಡಸ್, ಸೈನೊಡಾನ್ ಡ್ಯಾಕ್ಟಿಲಾನ್ |
ದ್ವಿದಳ ಕಳೆಗಳು | ಚೆನೊಪೊಡಿಯಮ್ ಆಲ್ಬಮ್, ಫ್ಯೂಮಾರಿಯಾ ಪುರ್ವಿಫ್ಲೋರಾ, ಸಿರ್ಸಿಯಮ್ ಅರ್ವೆನ್ಸ್, ಅನಾಗಾಲಿಸ್ ಅರ್ವೆನ್ಸಿಸ್, ಮೆಲಿಲೋಟಸ್ ಆಲ್ಬಾ, ಮೆಲಿಲೋಟಸ್ ಇಂಡಿಕಾ, ವಿಸಿಯಾ ಸಟಿವಾ, ಲ್ಯಾಥಿರಸ್ ಎಸ್ಪಿಪಿ |
ಕಳೆ ಏಕದಳ ಅಥವಾ ದ್ವಿದಳ ಎಂಬುದನ್ನು ತಿಳಿದುಕೊಳ್ಳುವುದು ಹಾಗೂ ಕಳೆಗಳನ್ನು ಗುರುತಿಸಲು ಮತ್ತು ನಿಯಂತ್ರಿಸಲು ಅತ್ಯಂತ ಪರಿಣಾಮಕಾರಿ ವಿಧಾನವನ್ನು ಆಯ್ಕೆ ಮಾಡಲು ಸಹಾಯ ಮಾಡುತ್ತದೆ. ಆಯ್ದ ಸಸ್ಯನಾಶಕಗಳನ್ನು ನಿರ್ದಿಷ್ಟ ಕಳೆಗಳನ್ನು ಗುರಿಯಾಗಿಸಲು ಬಳಸಬಹುದು ಹಾಗೂ ಸುತ್ತಮುತ್ತಲಿನ ಪರಿಸರ ಮತ್ತು ಗುರಿಯಲ್ಲದ ಕಳೆ ಜಾತಿಗಳ ಹಾನಿಯನ್ನು ಕಡಿಮೆ ಮಾಡುತ್ತದೆ.
ಬಿತ್ತಿದ 0 – 3 ದಿನಗಳಲ್ಲಿ ಗೋಧಿ ಗದ್ದೆಯಲ್ಲಿ ಪ್ರತಿ ಲೀಟರ್ ನೀರಿಗೆ 6.5 ಮಿಲಿ ಯಂತೆ ಪೆಂಡಿಮೆಥಾಲಿನ್ 30% ಇಸಿ ಸಸ್ಯನಾಶಕವನ್ನು ಸಿಂಪಡಿಸಿ. ಪೆಂಡಿಮೆಥಾಲಿನ್ ಗೋಧಿ ಪರಿಸರ ವ್ಯವಸ್ಥೆಯಲ್ಲಿ ಹುಲ್ಲು ಮತ್ತು ಅಗಲವಾದ ಕಳೆ ಎರಡನ್ನೂ ನಿಯಂತ್ರಿಸುತ್ತದೆ. ಬೂಟಾಕ್ಲೋರ್ 50% ಇಸಿಯನ್ನು 5 ಮಿಲಿ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬಹುದು.
ಸಿಂಪಡಿಸುವ ಸಮಯ – ಮೊದಲ ನೀರಾವರಿ ನಂತರ 30 -35 ದಿನಗಳ ನಂತರ ಅಥವಾ 2 – 4 ಕಳೆ ಎಲೆಗಳ ಹಂತದಲ್ಲಿ.
ಕಳೆನಾಶಕ | ತಾಂತ್ರಿಕ ಅಂಶ | ಬಳಕೆಯ ಪ್ರಮಾಣ | ನಿರ್ವಹಿಸುವ ಕಳೆ ವಿಧ |
ವೀಡ್ಮಾರ್ ಸೂಪರ್ | 2,4-ಡಿ ಅಮೈನ್ ಸಾಲ್ಟ್ 58% ಎಸ್ಎಲ್ | 1.5 – 2.5 ಗ್ರಾಂ/ನೀರಿಗೆ | ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು |
ಟಾಟಾಮೆಟ್ರಿ ಕಳೆನಾಶಕ | ಮೆಟ್ರಿಬುಜಿನ್-70% ಡಬ್ಲ್ಯೂ ಪಿ | 1.5 ಗ್ರಾಂ/ನೀರಿಗೆ | ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು |
ಸೆಂಪ್ರಾ ಕಳೆನಾಶಕ | ಹ್ಯಾಲೊಸಲ್ಫುರಾನ್ ಮೀಥೈಲ್-75% ಡಬ್ಲ್ಯೂ ಜಿ | 0.2 ಗ್ರಾಂ/ನೀರಿಗೆ | ಹುಲ್ಲಿನ ಕಳೆಗಳು |
ಕಾತ್ಯಾಯನಿ ವಿಕ್ರಮ್ | ಕ್ಲೋಡಿನಾಫೊಪ್ ಪ್ರೊಪರ್ಗಿಲ್-15% ಡಬ್ಲ್ಯೂ ಪಿ | 0.8 – 1 ಗ್ರಾಂ/ನೀರಿಗೆ | ಹುಲ್ಲಿನ ಕಳೆಗಳು |
ಕಾತ್ಯಾಯನಿಎಂ ಯಸ್ ಎಂ | ಮೆಟ್ಸಲ್ಫುರಾನ್ ಮೀಥೈಲ್-20% ಡಬ್ಲ್ಯೂ ಪಿ | 0.04ಗ್ರಾಂ/ನೀರಿಗೆ | ಅಗಲವಾದ ಎಲೆಗಳು ಮತ್ತು ಹುಲ್ಲಿನ ಕಳೆಗಳು |
ಲೂಸಿಫರ್ ಸಸ್ಯನಾಶಕ | ಪಿರೋಕ್ಸೋಫೋಪ್ ಪ್ರೋಪ್ಯಾನಿಲ್-15% ಡಬ್ಲ್ಯೂ ಪಿ | 1 – 2 ಗ್ರಾಂ/ನೀರಿಗೆ | ಹುಲ್ಲಿನ ಕಳೆಗಳು |
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…