Crop

ಟೊಮ್ಯಾಟೋ ಬೆಳೆಯಲ್ಲಿ ಗಿಡಹೇನುಗಳ ನಿರ್ವಹಣೆ

ಟೊಮ್ಯಾಟೊವನ್ನು ವ್ಯಾಪಕವಾಗಿ ತರಕಾರಿ ಬೆಳೆಯಾಗಿ ಬೆಳೆಸಲಾಗುತ್ತದೆ.  ಟೊಮ್ಯಾಟೊವು ವಿಟಮಿನ್ ಸಿ ಮತ್ತು ಲೈಕೊಪೀನ್ ನ ಉತ್ತಮ ಮೂಲವಾಗಿದೆ, ಹಾಗೂ ಟೊಮ್ಯಾಟೋ ಬೆಳೆಯಲ್ಲಿ ಹೆಚ್ಚಾಗಿ ರಸ ಹೀರುವ ಕೀಟಗಳ ಬಾಧೆಯನ್ನು ಕಾಣಬಹುದು, ರಸಹೀರುವ ಕೀಟಗಳಲ್ಲೊಂದಾದ ಹುಳು, ಗಿಡ ಹೇನು ಅವುಗಳು ರಸ ಹೀರುವ ಕೀಟವಾಗಿದ್ದು,  ಇವುಗಳ ದಾಳಿಯಿಂದ  ಇಳುವರಿಯಲ್ಲಿ ಕುಂಠಿತವಾಗಬಹುದು,  ತೀವ್ರತೆ ಹೆಚ್ಚಾದಾಗ  ಎಲೆಗಳು ಸುರುಳಿಯಾಗುತ್ತವೆ   ಮತ್ತು ಸಸ್ಯದ ಬೆಳೆವಣಿಗೆ ಕಡಿಮೆಯಾಗುತ್ತದೆ. ಗಿಡಹೇನುಗಳ ಸಂಖ್ಯೆಯನ್ನು ನಿಯಂತ್ರಿಸುವಲ್ಲಿ ಪರಭಕ್ಷಕಗಳು ಮತ್ತು ಪರಾವಲಂಬಿ ಹುಳುಗಳಾದ  ಸಣ್ಣ ಕಣಜಗಳನ್ನು ಹೊಲಗಳಲ್ಲಿ ಬಿಡಬಹುದು. 

ಟೊಮ್ಯಾಟೊ ಬೆಳೆಯಲ್ಲಿ ಗಿಡಹೇನುಗಳ ಲಕ್ಷಣಗಳು :

  • ಗಿಡಹೇನುಗಳು ಸಾಮಾನ್ಯವಾಗಿ ಎಳೆಯ ಮತ್ತು ರಸವತ್ತಾದ ಸಸ್ಯ ಭಾಗಗಳಿಂದ ರಸವನ್ನು ಹೀರುತ್ತವೆ.
  • ಗಿಡಹೇನುಗಳಿಂದ ದಾಳಿಗೊಳಗಾದ ಸಸಿಗಳ ಎಲೆಗಳು ಮತ್ತು ಕೊಂಬೆಗಳು ತಿರುಚಿಕೊಂಡಂತೆ ಅಥವಾ ಉಬ್ಬಿದಂತೆ ಕಾಣುತ್ತವೆ
  • ಅವುಗಳ ದಾಳಿಯನ್ನು ನಿಯಂತ್ರಿಸದಿದ್ದಲ್ಲಿ ಸಸಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಮತ್ತು ಎಲೆಗಳ ಮೇಲೆ ಹಳದಿ ಬಣ್ಣದ ಮಚ್ಚೆಗಳು , ಸೋಂಕಿತ ಸಸಿ ಭಾಗಗಳು ಕಂದು ಬಣ್ಣಕ್ಕೆ ಬದಲಾಗುವುದನ್ನೂ ಕಾಣಬಹುದು
  • ಗಿಡಹೇನುಗಳು ಅಂಟಂಟಾದ ರಸಸ್ರಾವವನ್ನು ಹೊರಹಾಕುತ್ತವೆ.ಈ ರಸಸ್ರಾವವು ಇರುವೆಗಳನ್ನು ಆಕರ್ಷಿಸುತ್ತದೆ. ಇರುವೆಗಳು ಗಿಡಹೇನುಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುತ್ತವೆ.
  • ಕ್ರಮೇಣ ಅಂಟಂಟಾದ ರಸಸ್ರಾವವು ಶಿಲೀಂದ್ರಗಳನ್ನು ಆಕರ್ಷಿಸಿ, ಕಪ್ಪು ಮಸಿಯ ರೀತಿ ರಚನೆಯಾಗುತ್ತದೆ. ಈ  ಕಪ್ಪು ಮಸಿಯ ರಚನೆಯಿಂದಾಗಿ ಎಲೆಗಳಲ್ಲಿ ದ್ಯುತಿಸಂಶ್ಲೇಷಣೆ ಕ್ರಿಯೆ ಕಡಿಮೆಯಾಗುತ್ತದೆ.

ಟೊಮ್ಯಾಟೊ ಬೆಳೆಯಲ್ಲಿ ಗಿಡಹೇನುಗಳ ನಿಯಂತ್ರಣ :

  • ಸಹಚರ ಬೆಳೆಗಳು ಅಥವಾ ಗಿಡಹೇನುಗಳನ್ನು ಆಕರ್ಷಿಸುವ ಬೆಳೆಗಳನ್ನು ಬಲೆ  ಬೆಳೆಗಳಾಗಿ ಬೆಳೆಯುವದರಿಂದ ಗಿಡಹೇನುಗಳನ್ನು ನಿರ್ವಹಿಸಬಹುದು
  • ಹೆಚ್ಚು ಪರಾವಲಂಬಿಗಳಾದ ಜೀರುಂಡೆ , ಲೇಸ್ ವಿಂಗ್ ಗಳು ಮತ್ತು ಪರಾವಲಂಬಿ ಕಣಜ ಅಥವಾ ಕಡಿಜೀರಿಗೆ ಹುಳುಗಳಿಗೆ ಗಿಡಹೇನು ಪೀಡಿತ ಸಸ್ಯಗಳಲ್ಲಿ ಆಶ್ರಯ ನೀಡಿದ್ದಲ್ಲಿ  ಗಿಡಹೇನುಗಳನ್ನು ಕೊಲ್ಲಬಹುದು
  • ಜಮೀನನ್ನು ಕಳೆ ಮುಕ್ತವಾಗಿ ಇರಿಸಿ ಇಲ್ಲದ್ದಿದ್ದರೆ ಅವು ಗಿಡಹೇನುಗಳಿಗೆ ಆಶ್ರಯ ನೀಡಬಹುದು.
  • ಇರುವೆಗಳು ಗಿಡಹೇನುಗಳು ಮತ್ತು ಅವುಗಳ ಮರಿಗಳ ಸಾಗಣೆಯ ವಾಹನಗಳಾಗಿರುವುದರಿಂದ, ಇರುವೆಗಳನ್ನು ಮೊದಲು ನಿಯಂತ್ರಣ ಮಾಡಬೇಕು
  • ಹೊಲಗಳಲ್ಲಿ ಅಂಟು ಬಲೆಗಳನ್ನು ಬಳಸುವುದರಿಂದ, ಬಲೆಗಳು ಗಿಡಹೇನುಗಳನ್ನು ಆಕರ್ಷಿಸಿ ಕೊಳ್ಳುತ್ತವೆ.

ಟೊಮ್ಯಾಟೊ ಬೆಳೆಯಲ್ಲಿ ಗಿಡಹೇನುಗಳ ರಾಸಾಯನಿಕ ನಿಯಂತ್ರಣ :

ಪ್ರೈಮ್ ಗೋಲ್ಡ್

  • ಅಸಿಟಾಮಿಪ್ರಿಡ್ 20%   ಅಂಶವನ್ನು ಹೊಂದಿದೆ
  • ಹೆಚ್ಚು ಪರಿಣಾಮಕಾರಿ  ವ್ಯವಸ್ಥಿತ ಕೀಟನಾಶಕವಾಗಿದೆ
  • ಬಳಕೆಯ ಪ್ರಮಾಣ : 20-40 ಗ್ರಾಂ/ಎಕರೆ

ಮಾರ್ಷಲ್

  • ಬ್ರಾಡ್ -ಸ್ಪೆಕ್ಟ್ರಮ್ ಕೀಟನಾಶಕವಾಗಿದೆ
  • ಹಲವು ರಸ ಹೀರುವ ಮತ್ತು ಜಗಿಯುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುತ್ತದೆ.  ಕಾರ್ಬೋಸಲ್ಫಾನ್ 25% ಇಸಿ ಅನ್ನು ಹೊಂದಿದೆ
  • ಬಳಕೆಯ ಪ್ರಮಾಣ : 320 -400 ಮಿಲಿ/ಎಕರೆ

ಟಾಟಾಫೆನ್

  • 10% ಫೆನ್ವಾಲೆರೇಟ್ ಇಸಿ ಅನ್ನು ಹೊಂದಿದೆ
  • ಸ್ಪರ್ಶ ಕ್ರಿಯೆಯನ್ನು ಹೊಂದಿರುವ ಸಿಂಥೆಟಿಕ್ ಪೈರೆಥ್ರಾಯ್ಡ್ ಕೀಟನಾಶಕ
  • ಇದು ಫೋಟೋಸ್ಟೇಬಲ್ ಮತ್ತು ಹಲವಾರು ರಸ ಹೀರುವ ,ಜಗಿಯುವ ಮತ್ತು ಚಿಟ್ಟೆ ಜಾತಿ ಕೀಟಗಳ ವಿರುದ್ಧ ಪರಿಣಾಮಕಾರಿ
  • ಬಳಕೆಯ ಪ್ರಮಾಣ : 2.5 ಮಿಲಿ/ಲೀಟರ್ ಮತ್ತು 500 ಮಿಲಿ/ಎಕರೆ

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

Recent Posts

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024

ಬೇಸಿಗೆ ಅಥವಾ ಝೈದ್ ಬೆಳೆಗಳನ್ನು ಮಾರ್ಚ್ ನಿಂದ ಜೂನ್ ನಡುವೆ ಬೆಳೆಯಲಾಗುತ್ತದೆ

ಭಾರತವು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ದೇಶವಾಗಿದ್ದು, ಕೃಷಿಯ ಹಲವಾರು ಋತುಗಳನ್ನು ಹೊಂದಿದೆ. ಬೆಳೆಗಳ ನಾಟಿ ಸಮಯವು ಬೆಳೆ ಪ್ರಕಾರ, ಋತುಗಳು, ಪ್ರದೇಶ ಮತ್ತು ಹವಾಮಾನವನ್ನು ಅವಲಂಬಿಸಿ…

March 26, 2024

ನರ್ಸರಿ ಬೆಳೆಸುವುದು: ಬಲವಾದ ಮತ್ತು ಆರೋಗ್ಯಕರ ಸಸಿಗಳಿಗಾಗಿ ಈ ಲೇಖನವನ್ನು ಓದಿರಿ

ಆರೋಗ್ಯಕರ ಬೀಜಗಳನ್ನು ಬಿತ್ತುವುದು ಅಥವಾ ಆರೋಗ್ಯಕರ ಸಸಿಗಳನ್ನು ನೆಡುವುದು ಆರೋಗ್ಯಕರ ಮತ್ತು ಉತ್ಪಾದಕ ಬೆಳೆಯನ್ನು ಸಾಧಿಸುವಲ್ಲಿ ಪ್ರಮುಖ ಅಂಶವಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಅಲಂಕಾರಿಕ ಸಸ್ಯಗಳು ಸೇರಿದಂತೆ…

March 23, 2024