Crop

ದಾಳಿಂಬೆಯನ್ನು ಕಡಿಮೆ ವೆಚ್ಚದಲ್ಲಿ ಬೆಳೆದು ಅಧಿಕ ಇಳುವರಿಯನ್ನು ಪಡೆಯಿರಿ

ದಾಳಿಂಬೆ (ಪುನಿಕಾ ಗ್ರಾನಟಮ್ ಎಲ್.)   ಪ್ಯೂನಿಕೇಸಿ ಕುಟುಂಬಕ್ಕೆ ಸೇರಿರುವ ಹಣ್ಣಿನ ಬೆಳೆಯಾಗಿದೆ.  ಹಿಂದಿಯಲ್ಲಿ ಅನಾರ್ ಎಂದು ಕರೆಯಲ್ಪಡುವ ದಾಳಿಂಬೆ ಭಾರತದ ವಾಣಿಜ್ಯ ಬೆಳೆಯಾಗಿದ್ದು,  ಇದರ ಮೂಲ ಪರ್ಷಿಯಾ. ಇದು ಕಾರ್ಬೋಹೈಡ್ರೇಟ್‌, ಪ್ರೋಟೀನ್‌, ಕ್ಯಾಲ್ಸಿಯಂ, ಕಬ್ಬಿಣ ಮತ್ತು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದೆ. 

ಇದರ ಬೇರು ಮತ್ತು ಸಿಪ್ಪೆಯನ್ನು ಅತಿಸಾರ, ಭೇದಿ ಮತ್ತು ಕರುಳಿನಲ್ಲಿನ ಹುಳುಗಳನ್ನು ಕೊಲ್ಲಲು ಬಳಸಲಾಗುತ್ತದೆ. ಇದರ ದಳಗಳನ್ನು ಬಣ್ಣ ತಯಾರಿಸಲು ಬಳಸಲಾಗುತ್ತದೆ. ದಾಳಿಂಬೆಯ ಪ್ರಮುಖ ಉತ್ಪಾದಕ ರಾಜ್ಯ ಮಹಾರಾಷ್ಟ್ರ. ರಾಜಸ್ಥಾನ, ಕರ್ನಾಟಕ, ಗುಜರಾತ್, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ಸೇರಿದಂತೆ ಹಲವು ರಾಜ್ಯಗಳಲ್ಲಿ  ದಾಳಿಂಬೆಯನ್ನು ಉತ್ತಮ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ದಾಳಿಂಬೆ  ಬೆಳೆಯಲು ಅನುಸರಿಸಬೇಕಾದ ಕ್ರಮಗಳು:

ಸೂಕ್ತವಾದ ಮಣ್ಣು:

ಇದನ್ನು ವಿವಿಧ ಮಣ್ಣಿನಲ್ಲಿ ಬೆಳೆಯಬಹುದು. ಅತ್ಯುತ್ತಮ ಬೆಳವಣಿಗೆ ಮತ್ತು ಇಳುವರಿಗಾಗಿ, ಆಳವಾದ ಗೋಡು ಮತ್ತು ಮೆಕ್ಕಲು ಮಣ್ಣಿನ ಅಗತ್ಯವಿದೆ. ಇದು ಗೋಡು ಮತ್ತು ಸ್ವಲ್ಪ ಕ್ಷಾರೀಯ ಮಣ್ಣುಗಳಿಗೆ ಸಹಿಷ್ಣುವಾಗಿದೆ. ಅಲ್ಲದೆ ಮಧ್ಯಮ ಮತ್ತು ಕಪ್ಪು ಮಣ್ಣು ದಾಳಿಂಬೆ ಕೃಷಿಗೆ ಸೂಕ್ತವಾಗಿದೆ.

ಅಧಿಕ ಇಳುವರಿಗಾಗಿ ಅಳವಡಿಸಬಹುದಾದ ಜನಪ್ರಿಯ ತಳಿಗಳು :

ಭಾರತದಲ್ಲಿ ಬೆಳೆಯುವ ಪ್ರಮುಖ ದಾಳಿಂಬೆ ತಳಿಗಳೆಂದರೆ ಅಲಂದಿ ಅಥವಾ ವಡ್ಕಿ, ಧೋಲ್ಕಾ, ಕಂಧಾರಿ, ಕಾಬೂಲ್, ಮಸ್ಕತಿ ರೆಡ್, ಪೇಪರ್ ಶೆಲ್ಡ್, ಸ್ಪ್ಯಾನಿಷ್ ರೂಬಿ, ಗಣೇಶ್ (GB I), G 137, P 23, P 26, ಮೃದುಲಾ, ಆರಕ್ತ, ಜ್ಯೋತಿ, ರೂಬಿ, ಯೆರ್ಕಾಡ್ 1 ಮತ್ತು ಕೋ 1.

ಭೂಮಿ ತಯಾರಿ

ಭೂಮಿಯನ್ನು ಎರಡು ಮೂರು ಬಾರಿ ಉಳುಮೆ ಮಾಡಿ ನಂತರ ಭೂಮಿಯನ್ನು ಸಮತಟ್ಟಾಗಿಸಲು ಹೆಂಟೆ ಹೊಡೆದು ಮಣ್ಣನ್ನು ಹದಕ್ಕೆ ತರಬೇಕು. 

ಬಿತ್ತನೆಯ  ಸಮಯ

ಮುಖ್ಯವಾಗಿ ಡಿಸೆಂಬರ್‌ನಿಂದ ಜನವರಿ ತಿಂಗಳಲ್ಲಿ ಬಿತ್ತನೆ ಮಾಡಲಾಗುತ್ತದೆ.

ನೀಡಬೇಕಾದ ಅಂತರ

ಸೂಕ್ತವಾದ ಅಂತರವು ಮಣ್ಣಿನ ಪ್ರಕಾರ ಮತ್ತು ಹವಾಮಾನವನ್ನು ಅವಲಂಬಿಸಿರುತ್ತದೆ. ದಾಳಿಂಬೆ ನಾಟಿಗೆ ಚೌಕಾಕಾರ ಪದ್ಧತಿಯನ್ನು ಅಳವಡಿಸಿಕೊಂಡರೆ 4ಮೀ x 4ಮೀ ಅಂತರವನ್ನು ಬಳಸಿ.

ಬಿತ್ತನೆ ವಿಧಾನ :

ಬಿತ್ತನೆಗಾಗಿ, ನಾಟಿ ಮಾಡುವ ಒಂದು ತಿಂಗಳ ಮೊದಲು 60 x 60 x 60 ಸೆಂ.ಮೀ ಗಾತ್ರದ ಹೊಂಡಗಳನ್ನು ಅಗೆದು,  ಹದಿನೈದು ದಿನಗಳ ಕಾಲ ಸೂರ್ಯನ ಬೆಳಕಿಗೆ ಹೊಂಡಗಳನ್ನು ತೆರೆದಿಡಿ. ನಂತರ 20 ಕೆಜಿ ಕೊಟ್ಟಿಗೆ/ ಹೊಲದ ಗೊಬ್ಬರ ಮತ್ತು 1 ಕೆಜಿ ಸೂಪರ್ ಫಾಸ್ಫೇಟ್ ಅನ್ನು ಬೆರೆಸಿದ ಮೇಲ್ಮಣ್ಣಿನಿಂದ ಹೊಂಡ ಅಥವಾ ಪಿಟ್ಗೆ ಹಾಕಿ, ನಂತರ ನೀರು  ಹಾಕಿ. 

ಬೀಜ/ ಸಸಿಗಳ  ಪ್ರಮಾಣ

ಎಕರೆಗೆ 240 ಗಿಡಗಳನ್ನು ಹಾಕಬಹುದು. .

ಸಸಿಗಳ ಉಪಚಾರ

ಬಿತ್ತನೆ ಮಾಡುವ ಮೊದಲು, ಮೊಳಕೆಗಳನ್ನ  IBA ದ್ರಾವಣ  1000PPM@1gm/ಲೀಟರ್ ನೀರಿನಲ್ಲಿ ಅದ್ದಿ ಉಪಚರಿಸಬೇಕು. 

ಅಂತರ ಬೆಳೆಗಳು

ಆರಂಭಿಕ ಎರಡು-ಮೂರು ವರ್ಷಗಳವರೆಗೆ, ಅಂತರ ಬೆಳೆ ಪದ್ದತಿಯನ್ನು ಮಾಡಬಹುದು. ತರಕಾರಿಗಳು, ದ್ವಿದಳ ಧಾನ್ಯಗಳು ಅಥವಾ ಹಸಿರು ಗೊಬ್ಬರದ ಬೆಳೆಗಳನ್ನು ಅಂತರ ಬೆಳೆಯಾಗಿ ಬೆಳೆಯಬಹುದು. 

ಗೊಬ್ಬರಗಳ ಬಳಕೆ :

ಡಿಸೆಂಬರ್‌ನಲ್ಲಿ ಒಂದು ವರ್ಷದ ಗಿಡಕ್ಕೆ 5-6 ಕೆಜಿ ಕೊಟ್ಟಿಗೆ / ಹೊಲದ ಗೊಬ್ಬರವನ್ನು ಹಾಕಿ. ಪ್ರತಿ ವರ್ಷ ಎರಡು ಸಮಾನ ಭಾಗಗಳಲ್ಲಿ ಯೂರಿಯಾ @50gm ಪ್ರತೀ ಗಿಡಕ್ಕೆ ಹಾಕಬೇಕು,  ಮೊದಲ ಡೋಸ್ ಅನ್ನು ಮಾರ್ಚ್ ತಿಂಗಳಲ್ಲಿ ಮತ್ತು ಎರಡನೇ ಡೋಸ್ ಅನ್ನು ಏಪ್ರಿಲ್ ತಿಂಗಳಲ್ಲಿ ನೀಡಲಾಗುತ್ತದೆ. 5 ವರ್ಷಗಳ ನಂತರ ಪ್ರತಿ ಗಿಡಕ್ಕೆ ಯೂರಿಯಾ @ 250 ಗ್ರಾಂ ಹಾಕಬೇಕಾಗುತ್ತದೆ.  

ನೀರು ಪೂರೈಕೆ

ಬೇಸಿಗೆಯಲ್ಲಿ 10-15 ದಿನಗಳ ಮಧ್ಯಂತರದಲ್ಲಿ ಮತ್ತು ಚಳಿಗಾಲದಲ್ಲಿ20-25 ದಿನಗಳ ಮಧ್ಯಂತರದಲ್ಲಿ ನೀರನ್ನು ಕೊಡಬೇಕಾಗುತ್ತದೆ. 

ಸಸ್ಯ ರಕ್ಷಣೆ

ಕೀಟಗಳು  ಮತ್ತು ಅವುಗಳ ನಿಯಂತ್ರಣ:

ಥ್ರಿಪ್ಸ್ : ಇದು ರಸ ಹೀರುವ ಕೀಟವಾಗಿದ್ದು, ಇದರ  ದಾಳಿ ಕಂಡುಬಂದಲ್ಲಿ, ಫಿಪ್ರೊನಿಲ್ 80% WP@20ml/15Ltr ನೀರಿಗೆ ಬೆರೆಸಿ ಸಿಂಪಡಿಸಿ.

ಹಣ್ಣಿನ ನೊಣ: ಇದು ಹಣ್ಣಿನ ಸಿಪ್ಪೆ/ಚರ್ಮದ ಮೇಲೆ ಮೊಟ್ಟೆ ಇಡುತ್ತದೆ. ಮೊಟ್ಟೆಯೊಡೆದ ನಂತರ ತಿರುಳನ್ನು ತಿನ್ನುತ್ತದೆ. ಬಾಧಿತ ಹಣ್ಣುಗಳು ಕೊಳೆಯುತ್ತವೆ ನಂತರ ಉದುರುತ್ತವೆ.

ತೋಟದಲ್ಲಿ  ಸ್ವಚ್ಛತೆ ಕಾಪಾಡಿ. ಹೂಬಿಡುವ ಮತ್ತು ಹಣ್ಣುಗಳ ಬೆಳವಣಿಗೆಯ ಸಮಯದಲ್ಲಿ, ಕಾರ್ಬರಿಲ್ 50WP@2-4gm ಅಥವಾ ಕ್ವಿನಾಲ್ಫಾಸ್ 25EC@2ml/Ltr ಪ್ರತೀ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.

ಗಿಡಹೇನು: ಇದು ರಸ ಹೀರುವ ಕೀಟವಾಗಿದ್ದು, ಇದರ ಬಾಧೆ ಕಂಡುಬಂದಲ್ಲಿ ಥಯಾಮೆಥಾಕ್ಸಮ್ 25WG@0.20gm/Ltr ಅಥವಾ ಇಮಿಡಾಕ್ಲೋಪ್ರಿಡ್  @0.35ml/Ltr ನೀರಿನಲ್ಲಿ ಬೆರೆಸಿ ಸಿಂಪಡಿಸಿ.

ರೋಗಗಳು  ಮತ್ತು ಅವುಗಳ ನಿಯಂತ್ರಣ:

ಹಣ್ಣಿನ ಮಚ್ಚೆಗಳು :  ಹಣ್ಣಿನ ಮೇಲೆ ಕಂದು  ಅಥವಾ ಕಪ್ಪು ಬಣ್ಣದ ಮಚ್ಚೆಗಳು ಕಂಡುಬರುತ್ತವೆ ಹಾಗೂ ಹಣ್ಣಿನ ಬೆಳವಣಿಗೆಯು ಕುಂಠಿತವಾಗುತ್ತದೆ. 

ಇದರ ನಿಯಂತ್ರಣಕ್ಕಾಗಿ ಮ್ಯಾಂಕೋಜೆಬ್ ಅಥವಾ ಕಾಪರ್ ಆಕ್ಸಿಕ್ಲೋರೈಡ್ 2.5 ಗ್ರಾಂ/ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ.

ಹಣ್ಣು ಕೊಳೆತ: ಈ ರೋಗವು ಹಣ್ಣನ್ನು ಮೃದುವಾಗಿಸುತ್ತದೆ ಹಾಗೂ ಇದರಿಂದ ಹಣ್ಣು ಕೊಳೆಯಲು ಪ್ರಾರಂಭಿಸುತ್ತದೆ. ಈ ರೋಗ ಕಂಡಿದ್ದಲ್ಲಿ,  ಗಿಡಕ್ಕೆ ನೀರಿನ ಪೂರೈಕೆಯನ್ನು ಕಡಿತಗೊಳಿಸಬೇಕು. 

ಹಣ್ಣು ಕೊಳೆತವನ್ನು ನಿಯಂತ್ರಿಸಲು, ಸ್ಟ್ರೆಪ್ಟೊಸೈಕ್ಲಿನ್ @ 50 ಗ್ರಾಂ + ಕಾಪರ್ ಆಕ್ಸಿಕ್ಲೋರೈಡ್ @ 400 ಗ್ರಾಂ / 150 ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಮೊದಲ ಸಿಂಪಡಣೆ ಮಾಡಿದ, 15 ದಿನಗಳ ನಂತರ ಎರಡನೇ ಸಿಂಪಡಣೆಯನ್ನು ತೆಗೆದುಕೊಳ್ಳಿ.

ದಾಳಿಂಬೆಯನ್ನು ಕೊಯ್ಲು ಮಾಡುವ ವಿಧಾನ

ಕೊಯ್ಲು

ಹೂಬಿಡುವ ನಂತರ, ಹಣ್ಣುಗಳು 5-6 ತಿಂಗಳೊಳಗೆ ಹಣ್ಣಾಗುತ್ತವೆ. ಹಣ್ಣುಗಳು ಹಸಿರು ಬಣ್ಣದಿಂದ ತಿಳಿ ಹಳದಿ ಅಥವಾ ಕೆಂಪು ಬಣ್ಣಕ್ಕೆ ಬದಲಾದಾಗ, (ಅಂದರೆ ಹಣ್ಣುಗಳು ಮಾಗಲು ಪ್ರಾರಂಭಿಸಿದಾಗ), ಕೊಯ್ಲು ಮಾಡಲು ಇದು ಅತ್ಯುತ್ತಮ ಸಮಯ. ಕೊಯ್ಲು ಮಾಡುವಲ್ಲಿ ತಡವಾಗುವುದನ್ನು ತಪ್ಪಿಸಿ ಏಕೆಂದರೆ ಇದು ಹಣ್ಣುಗಳ ಬಿರುಕುಗಳಿಗೆ ಕಾರಣವಾಗುತ್ತದೆ ಮತ್ತು ಇದರಿಂದಾಗಿ ಇಳುವರಿ ನಷ್ಟವಾಗಬಹುದು. 

ಕೊಯ್ಲು ನಂತರದ ಕ್ರಮಗಳು :

ಕೊಯ್ಲು ಮಾಡಿದ ನಂತರ, ಒಂದು ವಾರದವರೆಗೆ ಹಣ್ಣುಗಳನ್ನು ಸಂಗ್ರಹಿಸಲಾಗುತ್ತದೆ. ಇದು ಹಣ್ಣಿನ ಸಿಪ್ಪೆಯನ್ನು  ಗಟ್ಟಿಯಾಗಿಸಲು ಸಹಾಯ ಮಾಡುತ್ತದೆ. ಆದ್ದರಿಂದ ದೂರದ ಸಾಗಣೆ ಮಾಡುವಾಗ ಉಂಟಾಗುವ ಹಾನಿಯನ್ನು ಕಡಿಮೆ ಮಾಡಬಹುದು. ಹಣ್ಣುಗಳನ್ನು ತೂಕ ಮತ್ತು ಬಣ್ಣದ ಅನುಗುಣವಾಗಿ  ವರ್ಗೀಕರಿಸಲಾಗುತ್ತದೆ.

ಶ್ರೇಣೀಕರಣ

ಹಣ್ಣುಗಳನ್ನು ಅವುಗಳ ತೂಕ, ಗಾತ್ರ ಮತ್ತು ಬಣ್ಣಗಳ ಆಧಾರದ ಮೇಲೆ ವರ್ಗೀಕರಿಸಲಾಗುತ್ತದೆ. ವಿವಿಧ ಶ್ರೇಣಿಗಳನ್ನು ಸೂಪರ್, ರಾಜ, ರಾಣಿ ಮತ್ತು ರಾಜಕುಮಾರ ಗಾತ್ರ ವೆಂದೂ ಕೂಡ ಮಾಡಲಾಗುತ್ತದೆ. 

 ಅದಲ್ಲದೆ, ದಾಳಿಂಬೆಯನ್ನು ಎರಡು ದರ್ಜೆಗಳಾಗಿ ವಿಂಗಡಿಸಲಾಗಿದೆ- 12A ಮತ್ತು 12 B. 12-A. 

ಸಂಗ್ರಹಣೆ

ಹಣ್ಣುಗಳನ್ನು 5 ಡಿಗ್ರಿ ಸೆಂಟಿಗ್ರೇಡು ತಾಪಮಾನದಲ್ಲಿ 2 ತಿಂಗಳು ಅಥವಾ 10 ವಾರಗಳವರೆಗೆ ಕೋಲ್ಡ್ ಸ್ಟೋರೇಜ್‌ನಲ್ಲಿ ಶೇಖರಿಸಿಡಬಹುದು. ದೀರ್ಘಕಾಲ  ಶೇಖರಣೆ ಮಾಡುವಲ್ಲಿ  10 ಡಿಗ್ರಿ ಸೆಂಟಿಗ್ರೇಡು ಮತ್ತು 95% RH ನಲ್ಲಿ ಇರಿಸಬೇಕು. 

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024