Crop

ದ್ರಾಕ್ಷಿ ಬೆಳೆಗೆ ಭೂಮಿ ಸಿದ್ಧತೆ

ಭಾರತ ದೇಶವು 2021 ವರ್ಷ ಒಂದರಲ್ಲೇ   2,302.16 ಕೋಟಿ ಮೌಲ್ಯದ 263,075.67 ಮೆಟ್ರಿಕ್ ಟನ್ ದ್ರಾಕ್ಷಿಯನ್ನು ಜಗತ್ತಿನ ವಿವಿಧ ದೇಶಗಳಿಗೆ  ರಫ್ತು ಮಾಡಿದೆ.ಭಾರತವು  ಪ್ರಮುಖವಾಗಿ ನೆದರ್ಲ್ಯಾಂಡ್ಸ್, ಬಾಂಗ್ಲಾದೇಶ, ರಷ್ಯಾ, ಯುಕೆ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಜರ್ಮನಿ ರಾಷ್ಟ್ರಗಳಿಗೆ ದ್ರಾಕ್ಷಿಯನ್ನು ರಫ್ತುಮಾಡುತ್ತಿದೆ. ಭಾರತವು ವಿಶ್ವದಲ್ಲಿ ಏಳನೇ ಅತಿ ದೊಡ್ಡ ದ್ರಾಕ್ಷಿ ಬೆಳೆಯುವ ರಾಷ್ಟ್ರವಾಗಿದೆ. ಭಾರತವು  ದ್ರಾಕ್ಷಿಯನ್ನು ಮುಖ್ಯವಾಗಿ ನಿತ್ಯದ  ಬಳಕೆಗಾಗಿ ಬೆಳೆಯಲಾಗುತ್ತದೆ ಹಾಗು ಈ  ದ್ರಾಕ್ಷಿಗಳನ್ನು ವೈನ್ ಉತ್ಪಾದನೆಗೆ ಬಳಸಲಾಗುವುದಿಲ್ಲ. ಭಾರತದಲ್ಲಿ ದ್ರಾಕ್ಷಿಯನ್ನು ಬೆಳೆಯುವ ಪ್ರಮುಖ ರಾಜ್ಯಗಳು ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು ಮತ್ತು ಮಿಜೋರಾಂ. ದ್ರಾಕ್ಷಿಯನ್ನು  ಸಾಮಾನ್ಯವಾಗಿ ಉಷ್ಣಾಂಶ  ಮತ್ತು ಶುಷ್ಕ ವಾತಾವರಣದಲ್ಲಿ  ಬೆಳೆಯಲಾಗುತ್ತದೆ. 

ಕಷ್ಟದ  ಮಟ್ಟ: ಕಠಿಣ

ಬೀಜಗಳ ಆಯ್ಕೆ:

ದ್ರಾಕ್ಷಿಯಲ್ಲಿ ನಾಲ್ಕು ವಿಧಗಳಿವೆ. ಬಿಳಿದ್ರಾಕ್ಷಿ, ಕೆಂಪುದ್ರಾಕ್ಷಿ, ಬೀಜಸಹಿತ ಮತ್ತು ಬೀಜರಹಿತ ವಿಧಗಳು . ಕೆಲವು ಜನಪ್ರಿಯ ತಳಿಗಳು ಯಾವುವೆಂದರೆ ಬೆಂಗಳೂರು ಬ್ಲೂ , ಗುಲಾಬಿ, ಬ್ಯೂಟಿ ಸೀಡ್‌ಲೆಸ್ ಮತ್ತು ಶರದ್ ಸೀಡ್‌ಲೆಸ್, ಅನಾಬ್-ಎ-ಶಾಹಿ, ದಿಲ್ಖುಷ್, ಪರ್ಲೆಟ್, ಪುಸಾ ಸೀಡ್‌ಲೆಸ್, ಥಾಂಪ್ಸನ್ ಸೀಡ್‌ಲೆಸ್, ಟಾಸ್-ಎ-ಗಣೇಶ್, ಸೋನಕಾ, ಮಸ್ಕತ್, ಪಚ್ಚದ್ರಕ್ಷ, ಅರ್ಕಾ ಶ್ಯಾಮ್, ಅರ್ಕಾ ಕಾಂಚನ್. , ಅರ್ಕಾ ಹನ್ಸ್, ಮಾಣಿಕ್ ಚಮನ್, ಸೋನಕಾ, ಫ್ಲೇಮ್ ಸೀಡ್‌ಲೆಸ್ ಮತ್ತು ಮಾಣಿಕ್ ಚಮನ್.

ದ್ರಾಕ್ಷಿ ಗಿಡಗಳ ಸಸ್ಯಾಭಿವೃದ್ಧಿ :

ದ್ರಾಕ್ಷಿಯನ್ನು ಸಾಮಾನ್ಯವಾಗಿ ಕ್ಲಿಪಿಂಗ್/ಕಡ್ಡಿಗಳಿಂದ  (ಇದು  ಕಾಂಡಗಳು, ರೆಂಬೆಗಳು  ಅಥವಾ ತಾಯಿ ಗಿಡದ  ಒಂದು ಕಾಂಡದ ತುಂಡು) ಮತ್ತು ಬೇರು ಬಿಟ್ಟ ಕಾಂಡದ ತುಂಡುಗಳ  ಮೂಲಕ ಬೆಳೆಸಲಾಗುತ್ತದೆ. ಬಲಿತ ಕಾಂಡದ ತುಂಡುಗಳನ್ನು ಥೈರಾಮ್ @3 ಗ್ರಾಂ/ಲೀಟರ್ ನೀರಿನಿಂದ ಸಂಸ್ಕರಿಸಿ  ನಂತರ ಅದನ್ನು ಪಾಲಿಥಿನ್ ಚೀಲದಲ್ಲಿ ಹಾಕಬೇಕು .   ನಂತರ ಸಂಸ್ಕರಿಸಿದ ಕಾಂಡದ  ತುಂಡುಗಳನ್ನು  ನೆರಳು ಇರುವ  ನರ್ಸರಿಯಲ್ಲಿ ಸಂಗ್ರಹಿಸಿಡಬೇಕು .

ದ್ರಾಕ್ಷಿ ಬೆಳೆಗೆ  ಭೂಮಿ ಸಿದ್ಧತೆ

ದ್ರಾಕ್ಷಿ ಬೆಳೆಯನ್ನು ಬೆಳೆಯುವಾಗ, ಸಾಮಾನ್ಯವಾಗಿ  ಉತ್ತಮವಾಗಿ ಬೇರು ಬಿಟ್ಟ ಕಡ್ಡಿಗಳನ್ನು ಉಪಯೋಗಿಸಿ  ನಾಟಿಮಾಡಬೇಕು. ನಾಟಿ ಮಾಡುವ ಮೊದಲು ಭೂಮಿಯನ್ನು ಮೂರರಿಂದ ನಾಲ್ಕು ಬಾರಿ ಉಳುಮೆ ಮಾಡಬೇಕು .  ನಂತರ  ಟ್ರ್ಯಾಕ್ಟರ್ ಮೂಲಕ, ನಾಟಿ ಮಾಡುವ  ಭೂಮಿಯನ್ನು ಸಮತಟ್ಟು ಮಾಡಬೇಕು. ಅದರ ನಂತರ ವ್ಯಾಪಕ ತಳಿಗಳಾದ  ಅನಾಬ್-ಎ-ಶಾಹಿ ಮತ್ತು ಬೆಂಗಳೂರು ಬ್ಲೂ ನಂತಹ ತಳಿಗಳಿಗೆ 1.2 ಮೀ . X 1.2ಮೀ  ಅಂತರದಲ್ಲಿ ದೊಡ್ಡ ಗುಣಿಗಳನ್ನು ಮಾಡಬೇಕು. ಹಾಗೆಯೇ ಸ್ವಲ್ಪ ಜಾಗ ಬೇಕಿರುವ ಸಣ್ಣ ತಳಿಗಳಿಗಳಾದ ಥಾಂಪ್ಸನ್ ಸೀಡ್‌ಲೆಸ್, ಪರ್ಲೆಟ್ ಮತ್ತು ಬ್ಯೂಟಿ ಸೀಡ್‌ಲೆಸ್‌ ತಳಿಗಳಿಗೆ   90 X 90 ಸೆಂ.ಮೀ.ಅಳತೆಯ ಗುಣಿಗಳನ್ನು ತಯಾರಿಸಬೇಕು. ಗುಣಿಗಳ ತಳದಲಿ 5 ರಿಂದ 10 ಟನ್‌ಗಳಷ್ಟು ಕೊಟ್ಟಿಗೆ ಗೊಬ್ಬರವನ್ನು ಅಥವಾ ಪ್ರತಿ ಬಳ್ಳಿ/ಗಿಡಕ್ಕೆ  5 ರಿಂದ 10 ಕೆಜಿಯಷ್ಟು  ಕೊಟ್ಟಿಗೆ ಗೊಬ್ಬರ, 100 ಗ್ರಾಂ ಯೂರಿಯಾ, 80 ಗ್ರಾಂ ರಂಜಕ ಮತ್ತು 300 ಗ್ರಾಂ ಪೊಟ್ಯಾಸಿಯಮ್ ಯನ್ನು ಬಳಸಬೇಕು.

ದ್ರಾಕ್ಷಿ ಬೆಳೆಗೆ  ಮಣ್ಣಿನ ಅವಶ್ಯಕತೆ:

ದ್ರಾಕ್ಷಿ ಉಷ್ಣವಲಯದ ಬೆಳೆ, ಸಮಶೀತೋಷ್ಣ ವಲಯದ ಪ್ರದೇಶಗಳಲ್ಲಿ ದ್ರಾಕ್ಷಿ ಬೆಳೆಯನ್ನು ಚೆನ್ನಾಗಿ ಬೆಳೆಯಬಹುದು. ಚೆನ್ನಾಗಿ ನೀರು ಬಸಿದು ಹೋಗುವಂತಹ  ಗೋಡು ಮಣ್ಣು , ಆಳವಾದ ಮರಳು ಮಿಶ್ರಿತ ಗೋಡು ಮಣ್ಣು ಹಾಗು  pH  6.5  ರಿಂದ 7.0 ಮೌಲ್ಯ  ಹೊಂದಿರುವ ಮಣ್ಣು ದ್ರಾಕ್ಷಿ ಬೆಳೆಗೆ ಸೂಕ್ತ. 

ಹಿನ್ನುಡಿ

ಪ್ರಸರಣದ ನಂತರ ದ್ರಾಕ್ಷಿ ಬೆಳೆಯನ್ನು ಸರಿಯಾಗಿ ಚಾಟನಿ(ಬಳ್ಳಿ ಕತ್ತರಿಸುವುದು)  ಮಾಡಬೇಕು. ದ್ರಾಕ್ಷಿ ಬೆಳೆಯು, ನಿರ್ವಹಣಾ ದೃಷ್ಟಿಯಿಂದ ಒಂದು ಕಠಿಣ ಬೆಳೆಯಾಗಿದೆ.ಆದ್ಯಾಗೂ  ವಿವಿಧ ದೇಶಗಳಲ್ಲಿ,ನಮ್ಮ ದೇಶದ ದ್ರಾಕ್ಷಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಭಾರತವು ದ್ರಾಕ್ಷಿಉತ್ಪಾದನೆಯನ್ನು ಹೆಚ್ಚಿಸುತ್ತಲಿದೆ . ಆದ್ದರಿಂದ ದ್ರಾಕ್ಷಿ ಬೆಳೆಯು/ಕೃಷಿಯು ಭವಿಷ್ಯದ ಹೆಚ್ಚಿನ ಆದಾಯದ ಭರವಸೆಯಾಗಿದೆ.

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024