ಬಾರ್ಲಿ (ಜವೆ ಗೋಧಿ) ಹಿಂಗಾರು ಹಂಗಾಮಿನಲ್ಲಿ ಬೆಳೆಯಬಹುದಾದ ಒಂದು ಮುಖ್ಯವಾದ ಏಕದಳ ಧಾನ್ಯ ಬೆಳೆಯಾಗಿದೆ. ಇದೊಂದು ತಂಪು ವಾತಾವರಣದ ಬೆಳೆ, ಇದರ ಬಿತ್ತನೆಯನ್ನು ಅಕ್ಟೋಬರ್ ತಿಂಗಳಿಂದ ಆರಂಭಿಸಿ ನವೆಂಬರ್ ಮೊದಲವಾರದವರೆಗೆ ವಿಶೇಷವಾಗಿ ಮಳೆ ಆಶ್ರಿತ ಪ್ರದೇಶಗಳಲ್ಲಿ ಅಥವಾ ನೀರಾವರಿ ಪ್ರದೇಶಗಳಲ್ಲಿಯೂ ಬೆಳೆಯಬಹುದು.
ಬಾರ್ಲಿ ಬೆಳೆಯನ್ನು ಎಲ್ಲಾ ವಿಧದ ಮಣ್ಣುಗಳಲ್ಲಿ ಬೆಳೆಯಬಹುದಾಗಿದೆ. ಬರಡು ಭೂಮಿಯಿಂದ ಹಿಡಿದು, ಹೆಚ್ಚು ಫಲವತ್ತಲ್ಲದ ಮತ್ತು ಫಲವತ್ತಾದ ಭೂಮಿಯಲ್ಲಿಯೂ ಸಹ ಬೆಳೆಯಬಹುದು. ಮರಳು ಮಿಶ್ರಿತ ಮಣ್ಣು, ಗೋಡುಮಣ್ಣು ಇತ್ಯಾದಿ. ಹುಳಿ ಮಣ್ಣು ಹೊರತುಪಡಿಸಿ ಎಂಥದ್ದೇ ಮಣ್ಣುಗಳಲ್ಲಿ ಬೆಳೆಯಬಹುದು.
ಬಾರ್ಲಿ ಬೆಳೆಯಲು 15-20°C ಉತ್ತಮವಾಗಿರುತ್ತದೆ. ಹೂ ಕಚ್ಚಲು ಕಡಿಮೆ ಉಷ್ಣಾಂಶವಿದ್ದಲ್ಲಿ ಕಾಳು ಕಟ್ಟುವಾಗ ಏಕರೂಪವಾದ ಆರ್ದ್ರತೆ, ಉತ್ತಮ ಬೆಳಕು, ಉತ್ತಮ ಇಳುವರಿಯನ್ನು ಪಡೆಯಬಹುದು.
ಗುಣಮಟ್ಟದ ಬೆಳೆಗಾಗಿ ಹಾಗೂ ಉತ್ತಮ ಇಳುವರಿಗೆ ಎರಡರಿಂದ ಮೂರು ಬಾರಿ ಆಳವಾದ ಉಳುಮೆ ಮಾಡಬೇಕು. ಹೆಂಟೆ, ಕಲ್ಲುಗಳನ್ನು ಆಯ್ದು ತೆಗೆದು ಬಿತ್ತನೆಗೆ ಭೂಮಿಯನ್ನು ತಯಾರಿಸಿಕೊಳ್ಳಬೇಕು. ಹಿಂದಿನ ಬೆಳೆಯ ಉಳಿಕೆಗಳನ್ನು ರೋಟೋವೇಟರ್ ಅಥವಾ ಡಿಸ್ಕ್ ಹಾರೋ ಬಳಸಿ ಸಂಪೂರ್ಣವಾಗಿ ತೆಗೆದುಹಾಕಿ, ಮಣ್ಣನ್ನು ಹದ ಮಾಡಿಕೊಳ್ಳಬೇಕು. ಅಂತಿಮ ಹಂತದ ಉಳುಮೆ ಮಾಡಿದ ಮೇಲೆ ಶಿಫಾರಸ್ಸು ಮಾಡಿದ ಕೊಟ್ಟಿಗೆ ಗೊಬ್ಬರವನ್ನು ಜೈವಿಕ ಗೊಬ್ಬರಗಳೊಂದಿಗೆ ಬೆರೆಸಿ ಮಣ್ಣಿಗೆ ಕೊಡಬೇಕು.
ಸಹಜವಾದ ಪರಿಸ್ಥಿತಿಯಲ್ಲಿ ಸಾಲಿನಿಂದ ಸಾಲಿಗೆ 20-40 ಸೆಂ.ಮೀ ಅಂತರ ಕೊಟ್ಟಲ್ಲಿ, ಪ್ರತಿ ಎಕರೆಗೆ 30-35 ಕೆಜಿ ಶುದ್ಧ ಬೀಜಗಳು ಅಗತ್ಯ.
ಪ್ರತಿ ಎಕರೆಗೆ 40 ಕೆ.ಜಿ ಸಾರಜನಕ, 20 ಕೆ.ಜಿ ರಂಜಕ ಮತ್ತು 20 ಕೆ.ಜಿ ಪೊಟ್ಯಾಷ್ ರಸಗೊಬ್ಬರಗಳನ್ನು ಶಿಫಾರಸ್ಸು ಮಾಡಲಾಗಿದೆ.
ಹೆಚ್ಚು ಪ್ರಮಾಣದ ಸಾರಜನಕವನ್ನು ಕೊಡುವುದರಿಂದ ಸಸ್ಯಗಳು ಬಾಗುತ್ತವೆ.
ಪ್ರತಿ ಎಕರೆಗೆ 8-10 ಟನ್ ಕೊಟ್ಟಿಗೆ ಗೊಬ್ಬರದೊಂದಿಗೆ 5 ಕೆ.ಜಿ ಜೈವಿಕ ಗೊಬ್ಬರ ಮತ್ತು ಟ್ರೈಕೋಡರ್ಮಾ ಹಾಗೂ ಸುಡೋಮೊನಾಸ್ ತಲಾ 2 ಕೆ.ಜಿ ಯಂತೆ ಮಿಶ್ರಣ ಮಾಡಿ ಕೊಡಬೇಕು.
ಕೊಟ್ಟಿಗೆ ಗೊಬ್ಬರದೊಂದಿಗೆ ಜೈವಿಕ ಗೊಬ್ಬರಗಳನ್ನು ಚನ್ನಾಗಿ ಮಿಶ್ರಣ ಮಾಡಿ ಐದು ದಿನಗಳ ಕಾಲ (ಅದನ್ನು ವರ್ಧನೆಗೆ ) ಹಾಗೆಯೇ ಇಟ್ಟು ನಂತರ ಭೂಮಿಗೆ ಹಾಕಬೇಕು.
ಕೊಟ್ಟಿಗೆ ಗೊಬ್ಬರ ಕೊಡುವುದರಿಂದ ಮಣ್ಣಿನ ರಚನೆ, ಮಣ್ಣಿನ ವಿನ್ಯಾಸ ವೃದ್ಧಿಯಾಗುವುದಲ್ಲದೆ ಇದರಿಂದ ಮಣ್ಣಿನ ಸಾವಯವ ಅಂಶ ಹೆಚ್ಚುತ್ತದೆ, ಮಣ್ಣಿನಲ್ಲಿ ರಂಧ್ರಗಳು ಹೆಚ್ಚಾಗುತ್ತವೆ, ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳು ವೃದ್ಧಿಯಾಗುತ್ತವೆ. ಇದರಿಂದ ಮಣ್ಣಿನ ರಸಸಾರತೆ ಹಾಗೂ ವಿದ್ಯುತ್ ವಾಹಕತೆ (ಎಲೆಕ್ಟ್ರಿಕಲ್ ಕಂಡಕ್ಟಿವಿಟಿ (E C ) ) ಸಮತೋಲನದಲ್ಲಿರುತ್ತದೆ.
ಮಣ್ಣಿನಿಂದ ಬರುವ ರೋಗಗಳನ್ನು ನಿಯಂತ್ರಿಸಲು ಪರಿಣಾಮಕಾರಿ ಶಿಲೀಂದ್ರನಾಶಕಗಳಾದ ಕಾರ್ಬೆಂಡಿಜ಼ೆಮ್ 2 ಗ್ರಾಂ, ಅಥವಾ 1 ಗ್ರಾಂ ಟೆಬುಕುನಾಜ಼ೋಲ್ ನಿಂದ ಪ್ರತಿ ಕೆ.ಜಿ ಬೀಜಗಳನ್ನು ಉಪಚರಿಸಬೇಕು.
ಗೆದ್ದಲಿನಿಂದ ಬೀಜಗಳನ್ನು ರಕ್ಷಿಸಲು ಕ್ಲೋರೋಫೈರಿಫಾಸ್ ಅಥವಾ ಫಾರ್ಮೆಥಿಯಾನ್ 25 EC 6 ಮಿ.ಲೀ ಯಿಂದ ಪ್ರತಿ ಕೆ.ಜಿ ಬೀಜಗಳನ್ನು ಉಪಚರಿಸಿ ಒಂದು ರಾತ್ರಿ ನೆರಳಿನಲ್ಲಿ ಒಣಗಿಸಿದ ನಂತರ ಬಿತ್ತನೆಗೆ ಬಳಸಿ.
ಪ್ರತಿ ಕೆ.ಜಿ ಬೀಜಕ್ಕೆ 20-25 ಗ್ರಾಂ ಟ್ರೈಕೋಡರ್ಮಾ ವಿರಿಡೆಯಿಂದ (ಜೈವಿಕ ಉಪಚಾರ) ಬೀಜೋಪಚಾರ ಮಾಡಬಹುದು. ಇದರಿಂದ ಬೀಜ ಮತ್ತು ಮಣ್ಣಿನಿಂದ ಬರುವ ರೋಗಗಳನ್ನು ನಿಯಂತ್ರಿಸಬಹುದು.
ಬಿಜೋಪಚಾರದ ನಂತರ ಸೀಡ್ ಡ್ರಿಲ್ ಬಳಸಿ ಇಲ್ಲವೇ ಹುಕ್ಕೆ ಸಾಲುಗಳ ನೇಗಿಲಿನಿಂದ ಬಿತ್ತನೆ ಮಾಡಿ. 4-6 ಸೆಂ.ಮೀ ಆಳದಲ್ಲಿ ಬಿತ್ತಬೇಕು. ಸಮಸ್ಯಾತ್ಮಕ ಮಣ್ಣುಗಳಲ್ಲಿ ಬಿತ್ತನೆ ಬೀಜಗಳನ್ನು ಎರಚುವುದರ ಮುಖೇನ ಬಿತ್ತನೆ ಮಾಡಬಹುದು. ಎರಚುವುದಕ್ಕೂ ಮುನ್ನ 6-8 ಗಂಟೆಗಳ ಕಾಲ ಬಿತ್ತನೆ ಬೀಜಗಳನ್ನು ನೆನೆಸಿಡಬೇಕು. ಬಿತ್ತನೆಗೂ ಮುನ್ನ ಭೂಮಿಯನ್ನು ಉತ್ತಿರಬೇಕು. ಮೂಲಗೊಬ್ಬರವಾಗಿ ರಸಾಯನಿಕಗಳನ್ನು ಕೊಡಬೇಕು.
ಒಂದು ಬೆಳೆಯ ಅವಧಿಯಲ್ಲಿ 3-4 ಬಾರಿ ನೀರು ಹಾಯಿಸಿದರೆ ಸಾಕು, ಉತ್ತಮ ಫಸಲು ಪಡೆಯಬಹುದು. ಭೂಮಿಯಲ್ಲಿ ಉತ್ತಮ ತೇವಾಂಶವಿದ್ಧಾಗ ( ಭೂಮಿಗೆ ಅಗತ್ಯ ಪ್ರಮಾಣದ ನೀರು ಕೊಟ್ಟು) ಬೀಜಗಳನ್ನು ಬಿತ್ತಬೇಕು.
ಮರಳು ಮಣ್ಣಿನಲ್ಲಿ ಬೆಳೆದರೆ ಒಂದು ನೀರಾವರಿ ಹೆಚ್ಚು ಕೊಡಬೇಕು. ಏಕೆಂದರೆ ಇಂಥ ಮಣ್ಣಿನಲ್ಲಿ ನೀರು ಹಿಡಿದಿಡುವ ಸಾಮರ್ಥ್ಯ ಕಡಿಮೆ.
ಈ ಹುಳುಗಳು ಬೇರುಗಳನ್ನು ತಿನ್ನುವ ಮೂಲಕ ಸಸ್ಯಗಳನ್ನು ಹಾನಿಗೊಳಿಸಬಹುದು, ಪರಿಣಾಮವಾಗಿ ಮಸುಕಾದ ಸಸ್ಯಗಳು ತೇಪೆಗಳಲ್ಲಿ ಸಾಯುತ್ತವೆ.
ನಿಯಂತ್ರಣ ಕ್ರಮಗಳು:
ಕ್ಲೋರ್‌ಪೈರಿಫಾಸ್ 20% ಇಸಿ 450 ಮಿಲೀ/ಎಕರೆ ಅಥವಾ 6.5ಮಿಲೀ/ಕೆಜಿ ಬೀಜಗಳಿಗೆ ಕ್ಲೋರೋಪೈರಿಫಾಸ್‌ನೊಂದಿಗೆ ಬೀಜೋಪಚಾರ ಮಾಡುವುದರಿಂದ ಈ ಕೀಟದ ದಾಳಿಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು.
ಎಳೆಯ ಮರಿಹುಳುಗಳು ತಿಳಿ ಹಸಿರು ಬಣ್ಣದಲ್ಲಿದ್ದು ನಂತರದ ಹಂತದಲ್ಲಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳನ್ನು ಅಂಚುಗಳಿಂದ ಅಥವಾ ಕೆಲವೊಮ್ಮೆ ಸಂಪೂರ್ಣವಾಗಿ ತಿನ್ನುತ್ತವೆ. ಹುಳುವಿನ ಮೊಟ್ಟೆಯ ಗೊಂಚಲುಗಳು ಎಲೆಗಳ ಮೇಲೆ ಅಸ್ಪಷ್ಟವಾಗಿ ಕಂಡುಬರುತ್ತವೆ.
ನಿಯಂತ್ರಣ: ಸೈನಿಕ ಹುಳುವನ್ನು ನಿಯಂತ್ರಿಸಲು ಬ್ಯಾಸಿಲಸ್ ತುರಿಂಜಿಯೆನ್ಸಿಸ್ (ಬಿ ಟಿ) ಯನ್ನು ೨ ಗ್ರಾಂ ಪ್ರತೀ ಲೀಟರ್ ನೀರಿಗೆ ಬೆರೆಸಿ ಹಾಕಿದರೆ ಇದನ್ನು ನಿಯಂತ್ರಿಸಬಹುದು. .
ಥ್ರಿಪ್ಸ್ : ಹೆಚ್ಚಾಗಿ ಶುಷ್ಕ ವಾತಾವರಣದಲ್ಲಿ ಕಂಡುಬರುತ್ತದೆ.
ಥ್ರಿಪ್ಸ್ ಸಂಭವದ ತೀವ್ರತೆಯನ್ನು ತಡೆಯಲು, ಪ್ರತಿ ಎಕರೆಗೆ ನೀಲಿ ಜಿಗುಟಾದ ಬಲೆಗಳನ್ನು @6-8 ರಂತೆ ಅಳವಡಿಸಬೇಕು. ಅಲ್ಲದೆ ಸಂಭವವನ್ನು ಕಡಿಮೆ ಮಾಡಲು ವರ್ಟಿಸಿಲಿಯಮ್ ಲೆಕಾನಿ @ 5 ಗ್ರಾಂ/ಲೀಟರ್ ನೀರಿಗೆ ಸಿಂಪಡಿಸಬಹುದು.
ಥ್ರಿಪ್ಸ್ ನ ತೀವ್ರತೆಯು ಹೆಚ್ಚಾಗಿದ್ದರೆ, ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ ಅಥವಾ ಫಿಪ್ರೊನಿಲ್ @ 2.5 ಮಿಲೀ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಅಥವಾ ಅಸಿಫೇಟ್ 75% ಡಬ್ಲ್ಯೂಪಿ @ 2 ಗ್ರಾಂ / ಲೀಟರ್ ಅಥವಾ ಥಯಾಮೆಥಾಕ್ಸಮ್ 25% ಡಬ್ಲ್ಯೂಜಿ @ 1 ಗ್ರಾಂ / ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಎಲೆ, ಕವಚ, ಕಾಂಡ ಮತ್ತು ಹೂವಿನ ಭಾಗಗಳಲ್ಲಿ ಬೂದು ಬಣ್ಣದ ಬಿಳಿ ಪುಡಿಯ ಬೆಳವಣಿಗೆ ಕಂಡುಬರುತ್ತದೆ. ಪುಡಿ ಬೆಳವಣಿಗೆಯು ನಂತರ ಕಪ್ಪು ಚುಕ್ಕೆಯ ಗುಂಪುಗಳಾಗುತ್ತವೆ ಮತ್ತು ಎಲೆಗಳು ಹಾಗೂ ಇತರ ಭಾಗಗಳನ್ನು ಒಣಗಿಸುತ್ತವೆ. ಈ ರೋಗವು ಹೆಚ್ಚಿನ ಆರ್ದ್ರತೆ ಮತ್ತು ತಂಪಾದ ಹವಾಮಾನದಲ್ಲಿ ಸಸ್ಯಗಳಿಗೆ ಸೋಂಕುಂಟುಮಾಡುತ್ತದೆ. ಶುಷ್ಕ ಹವಾಮಾನ ಮತ್ತು ಕಡಿಮೆ ಅಂತರ ಬೆಳೆಯಿಂದ ಇದರ ತೀವ್ರತೆಯು ಹೆಚ್ಚಾಗುತ್ತದೆ.
ನಿರ್ವಹಣೆ:
ರೋಗದ ಸಂಭವವನ್ನು ತಡೆಯಲು, ವೆಟ್ಟಬಲ್ ಸಲ್ಫರ್ @ 2 ಗ್ರಾಂ / ಲೀಟರ್ ನೀರಿನಲ್ಲಿ ಅಥವಾ ಕಾರ್ಬೆಂಡಾಜಿಮ್ @ 200 ಗ್ರಾಂ / ಎಕರೆಗೆ ಸಿಂಪಡಿಸಬೇಕು. ಹೆಚ್ಚಿನ ಸಂಭವವಿದ್ದಲ್ಲಿ ಪ್ರೊಪಿಕೊನಜೋಲ್ @1 ಮಿಲಿ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಕೊಳೆ ರೋಗ: ಇದು ಬೀಜದಿಂದ ಹರಡುವ ರೋಗವಾಗಿದೆ. ಗಾಳಿಯ ಮೂಲಕ ಸೋಂಕು ಹರಡುತ್ತದೆ. ಆತಿಥೇಯ ಸಸ್ಯದ ಹೂಬಿಡುವ ಅವಧಿಯಲ್ಲಿ ತಂಪಾದ, ಆರ್ದ್ರ ಈ ರೋಗದ ಹಾವಳಿ ಹೆಚ್ಚಾಗುತ್ತದೆ.
ರೋಗದ ತೀವ್ರತೆ ಹೆಚ್ಚಾಗಿದ್ದರೆ ಬೀಜಕ್ಕೆ ಕಾರ್ಬಾಕ್ಸಿನ್ 75WP@2.5 ಗ್ರಾಂ/ಕೆಜಿ, ಕಾರ್ಬೆಂಡಾಜಿಮ್ @2.5 ಗ್ರಾಂ/ಕೆಜಿ, ಟೆಬುಕೋನಜೋಲ್ @1.25 ಗ್ರಾಂ/ಕೆಜಿ ಶಿಲೀಂಧ್ರನಾಶಕಗಳೊಂದಿಗೆ ಬೀಜವನ್ನು ಸಂಸ್ಕರಿಸಬೇಕು. ರೋಗದ ತೀವ್ರತೆ ಕಡಿಮೆಯಿದ್ದರೆ ಬೀಜವನ್ನು ಟ್ರೈಕೋಡರ್ಮಾ ವೈರಿಡೆ @ 4 ಗ್ರಾಂ / ಕೆಜಿ ಬೀಜ) ಮತ್ತು ಶಿಫಾರಸ್ಸು ಮಾಡಲಾದ ಅರ್ಧದಷ್ಟು ಕಾರ್ಬಾಕ್ಸಿನ್ (ವಿಟಾವಾಕ್ಸ್ 75 ಡಬ್ಲ್ಯೂಪಿ) @ 1.25 ಗ್ರಾಂ / ಕೆಜಿ ಬೀಜದೊಂದಿಗೆ ಬೀಜೋಪಚಾರ ಮಾಡಬೇಕು.
ವಿವಿಧ ಬಳಕೆಯ ಆಧಾರದ ಮೇಲೆ ಮಾರ್ಚ್ ಅಥವಾ ಏಪ್ರಿಲ್ ಅಂತ್ಯದಲ್ಲಿ ಬೆಳೆ ಪಕ್ವವಾಗುತ್ತದೆ. ಹೆಚ್ಚು ಕಾಳಾಗುವುದನ್ನು ತಪ್ಪಿಸಲು ಕೊಯ್ಲಿನ ವಿಳಂಬವನ್ನು ತಪ್ಪಿಸಬೇಕು. ಕಾಳಿನ ತೇವಾಂಶವು 25-30% ಕ್ಕೆ ತಲುಪಿದಾಗ ಕೊಯ್ಲು ಮಾಡಲು ಸರಿಯಾದ ಹಂತವಾಗಿದೆ. ಕೈಯಿಂದ ಮಾಡುವ ಕೊಯ್ಲಿಗಾಗಿ ಚೂಪಾದ ಕುಡಗೋಲುಗಳನ್ನು ಬಳಸಬೇಕು, ಕೊಯ್ಲು ಮಾಡಿದ ನಂತರ ಒಣ ಸ್ಥಳದಲ್ಲಿ ಸಂಗ್ರಹಿಸಬೇಕು, ಕೆಲವು ಸಂದರ್ಭಗಳಲ್ಲಿ ನಿಂತಿರುವ ಬೆಳೆಯಿಂದ ತೆನೆಗಳನ್ನು ಕೊಯ್ಯಲಾಗುತ್ತದೆ ಮತ್ತು ಒಕ್ಕಣೆಯ ನೆಲದಲ್ಲಿ ಸಂಗ್ರಹಿಸಲಾಗುತ್ತದೆ. ನಂತರ 3-4 ದಿನಗಳವರೆಗೆ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…