Crop

ಬ್ರೊಕೋಲಿ ಬೆಳೆಯಲು ಸಂಪೂರ್ಣ ಕೃಷಿ ಮಾರ್ಗದರ್ಶಿ

ಭಾರತದಲ್ಲಿ, ಬ್ರೊಕೋಲಿ ಕೃಷಿಯು ಗ್ರಾಮೀಣ ಆರ್ಥಿಕತೆಗೆ ಉತ್ಕರ್ಷವಾಗಿದೆ. ಇದು ಹಿಂಗಾರು ಮತ್ತು ಮುಂಗಾರಿನಲ್ಲಿ  ಬೆಳೆಯಬಹುದು. ಇದು ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್‌ಗಳಂತಹ ಪೌಷ್ಟಿಕಾಂಶದ ಸಮೃದ್ಧ ಮೂಲವಾಗಿದೆ. ಬೆಳೆಯಲ್ಲಿ 3.3% ಪ್ರೋಟೀನ್ ಅಂಶವಿದೆ.ವಿಟಮಿನ್ ಎ ಮತ್ತು ಸಿ ಅಂಶವನ್ನು ಹೊಂದಿದೆ. ಇದು ಗಣನೀಯ ಪ್ರಮಾಣದ ರೈಬೋಫ್ಲಾವಿನ್, ನಿಯಾಸಿನ್ ಮತ್ತು ಥಯಾಮಿನ್ ಮತ್ತು ಕ್ಯಾರೊಟಿನಾಯ್ಡ್‌ಗಳನ್ನು ಹೊಂದಿರುತ್ತದೆ. ಇದನ್ನು ಮುಖ್ಯವಾಗಿ ಸಲಾಡ್ ಆಗಿ ಬಳಸಲಾಗುತ್ತದೆ ಮತ್ತು ಲಘು ಹಬೆಯಲ್ಲಿ ಬೇಯಿಸಿ ತಿನ್ನಬಹುದು. 

ಸೂಕ್ತವಾದ ಮಣ್ಣು

ಮಣ್ಣಿನ ಪಿಎಚ್ 5.5 ರಿಂದ 6.5 ರವರೆಗೆ ಬ್ರೊಕೋಲಿ  ಉತ್ತಮವಾಗಿ ಬೆಳೆಯುತ್ತದೆ.  ಮಣ್ಣು ಹೆಚ್ಚು  ಆಮ್ಲೀಯವಾಗಿದ್ದರೆ, ಸುಣ್ಣವನ್ನು ಬೆರೆಸಬೇಕು. 

ಸೂಕ್ತ ವಾತಾವರಣ:

ಬ್ರೊಕೋಲಿ ಬೇಸಾಯಕ್ಕೆ ತಂಪಾದ ಮತ್ತು ಆರ್ದ್ರ ವಾತಾವರಣ ಬೇಕಾಗುತ್ತದೆ. 17 ರಿಂದ  23 ಡಿಗ್ರಿ ಸೆಂಟಿಗ್ರೇಡ್  ನಡುವಿನ ದೈನಂದಿನ ತಾಪಮಾನದಲ್ಲಿ  ಬ್ರೊಕೋಲಿ  ಉತ್ತಮವಾಗಿ ಬೆಳೆಯುತ್ತದೆ.

ಒಂದು ಎಕರೆಗೆ ಬೇಕಾಗುವ ಬೀಜಗಳು :

ಗಿಡದಿಂದ ಗಿಡಕ್ಕೆ ಮತ್ತು ಸಾಲಿನಿಂದ ಸಾಲಿಗೆ ನೀಡುವ ಅಂತರನ್ನು ಆಧರಿಸಿ ಒಂದು ಎಕರೆಗೆ ಎಷ್ಟು ಸಸಿಗಳು ಅಥವಾ ಬಿತ್ತನೆ ಬೀಜ ಬೇಕು ಎಂಬುದನ್ನು ನಿರ್ಧರಿಸಬಹುದು.

ರೈತರು ಸಾಮಾನ್ಯವಾಗಿ ಅನುಸರಿಸುವ ಅಂತರ ಮತ್ತು ಸಸ್ಯಗಳ ಸಂಖ್ಯೆ/ಬೀಜಗಳು ಅಥವಾ ಪ್ರಮಾಣಗಳು

  1. ಸಸಿಯಿಂದ ಸಸಿಗೆ 1.0 ಅಡಿ, ಸಾಲಿನಿಂದ ಸಾಲಿಗೆ 1.0 ಅಡಿ. ಈ ಅಂತರದಲ್ಲಿ  ನಾಟಿ ಮಾಡಿದಲ್ಲಿ, ಒಂದು ಎಕರೆಗೆ – 44,500 ಸಸಿಗಳು ಬೇಕಾಗುತ್ತವೆ. ಬೀಜಗಳಾದಲ್ಲಿ – 200 ಗ್ರಾಂ ಬೀಜಗಳು  ಬೇಕಾಗುತ್ತದೆ.
  2. ಸಸಿಯಿಂದ ಸಸಿಗೆ 1.0 ಅಡಿ, ಸಾಲಿನಿಂದ ಸಾಲಿಗೆ 1.5 ಅಡಿ ಈ ಅಂತರದಲ್ಲಿ  ನಾಟಿ ಮಾಡಿದಲ್ಲಿ, ಒಂದು ಎಕರೆಗೆ -30,000 ಸಸಿಗಳು ಬೇಕಾಗುತ್ತವೆ. 130ಗ್ರಾಂ ಬೀಜಗಳು  ಬೇಕಾಗುತ್ತದೆ.
  3. ಸಸಿಯಿಂದ ಸಸಿಗೆ 1.5ಅಡಿ, ಸಾಲಿನಿಂದ ಸಾಲಿಗೆ 1.5 ಅಡಿ. ಈ ಅಂತರದಲ್ಲಿ ನಾಟಿ ಮಾಡಿದಲ್ಲಿ ಒಂದು ಎಕರೆಗೆ – 20,000 ಸಸಿಗಳು ಬೇಕಾಗುತ್ತವೆ. ಬೀಜಗಳಾದಲ್ಲಿ 90 ಗ್ರಾಂ ಬೀಜಗಳು ಬೇಕಾಗುತ್ತದೆ.

ಬಿತ್ತನೆ ಸಮಯ:

ಬೀಜ ಬಿತ್ತನೆಗೆ ಸೂಕ್ತ ಸಮಯವೆಂದರೆ-  ಆಗಸ್ಟ್ ಮಧ್ಯದಿಂದ ಸೆಪ್ಟೆಂಬರ್ ಮಧ್ಯದವರೆಗೆ.

ನೀಡಬೇಕಿರುವ ಅಂತರ:

45 X 45cm ಅಂತರವನ್ನು ಸಾಲಿನಿಂದ ಸಾಲಿಗೆ ನೀಡಬೇಕು. 

ಬಿತ್ತನೆ ವಿಧಾನ:

ಲೈನ್ ಬಿತ್ತನೆ ಮತ್ತು ಪ್ರಸಾರ ವಿಧಾನದಿಂದ ಬಿತ್ತನೆ ಮಾಡಬಹುದು.

ಬೀಜಗಳ ಪ್ರಮಾಣ :

ಒಂದು ಎಕರೆ ಭೂಮಿಯಲ್ಲಿ ಬಿತ್ತನೆ ಮಾಡಲು 250 ಗ್ರಾಂ ಬೀಜಗಳನ್ನು ಬಳಸಿ.

ಬೀಜೋಪಚಾರ :

ಮಣ್ಣಿನಿಂದ ಹರಡುವ ರೋಗಗಳಿಂದ ರಕ್ಷಿಸಲು ಬಿತ್ತನೆ ಮಾಡುವ ಮೊದಲು ಬೀಜಗಳನ್ನು 30 ನಿಮಿಷಗಳ ಕಾಲ ಬಿಸಿನೀರಿನೊಂದಿಗೆ (58 ಡಿಗ್ರಿ ಸೆಂಟಿಗ್ರೇಡ್ನಲ್ಲಿ ) ಸಂಸ್ಕರಿಸಲಾಗುತ್ತದೆ.

ಗೊಬ್ಬರ

ರಸಗೊಬ್ಬರದ ಅವಶ್ಯಕತೆ (ಕೆಜಿ/ಎಕರೆ)

ಯೂರಿಯಾ                      SSP                    MOP

110                                       155                 40

ಪೌಷ್ಟಿಕಾಂಶದ ಅವಶ್ಯಕತೆ (ಕೆಜಿ/ಎಕರೆ)

ಸಾರಜನಕ                            ಫಾಸ್ಫರಸ್                      ಪೊಟ್ಯಾಶ್

   50                                             25                                 25

 ಕೊಟ್ಟಿಗೆ ಗೊಬ್ಬರ @ 40 ಟನ್‌ ಮತ್ತು  ಅದರ  ಜೊತೆಗೆ ಸಾರಜನಕದ ಪ್ರಮಾಣ  @ 50kg/ಎಕರೆಗೆ,

 ರಂಜಕ @25kg/ಎಕರೆ  ಮತ್ತು ಪೊಟ್ಯಾಸಿಯಮ್ @25kg/ಎಕರೆ, ನಾಟಿ ಮಾಡುವ ಮೊದಲು ಪೂರ್ಣ ಪ್ರಮಾಣದ ಕೊಟ್ಟಿಗೆ ಗೊಬ್ಬರ,  ರಂಜಕ ಮತ್ತು ಪೊಟ್ಯಾಸಿಯಮ್ ಮತ್ತು ಅರ್ಧದಷ್ಟು ಸಾರಜನಕವನ್ನು ಹಾಕಬೇಕು,  ನಾಟಿ ಮಾಡಿದ ಒಂದು ತಿಂಗಳ ನಂತರ ಉಳಿದ ಸಾರಜನಕ ಪ್ರಮಾಣವನ್ನು ಹಾಕಲಾಗುತ್ತದೆ. 

ಕಳೆ ನಿಯಂತ್ರಣಕ್ಕೆ ಮಾಡಬೇಕಿರುವ ಸಿಂಪಡಣೆ :

ನಾಟಿ ಮಾಡುವ ಮೊದಲು 1-2 ಲೀಟರ್ / 600-700 ಲೀಟರ್ ನೀರಿಗೆ ಫ್ಲುಕ್ಲೋರಾಲಿನ್ (ಬಸಲಿನ್) ಅನ್ನು ಸಿಂಪಡಿಸಿ.  ನಾಟಿ ಮಾಡಿದ 30 ರಿಂದ 40 ದಿನಗಳ ನಂತರ ಕೈಯಿಂದ ಕಳೆ ಕೀಳಬೇಕು . 

ನೀರಾವರಿ

ನಾಟಿ ಮಾಡಿದ ತಕ್ಷಣ, ನೀರನ್ನು ನೀಡಬೇಕು.ಮಣ್ಣು, ಹವಾಮಾನದ ಸ್ಥಿತಿಯನ್ನು ಅವಲಂಬಿಸಿ, ಬೇಸಿಗೆಯಲ್ಲಿ 7-8 ದಿನಗಳ ಅಂತರದಲ್ಲಿ  ಮತ್ತು ಚಳಿಗಾಲದಲ್ಲಿ 10-15 ದಿನಗಳ ಮಧ್ಯಂತರದಲ್ಲಿ ನೀರನ್ನು ಕೊಡಬೇಕು. 

ಕೀಟ ಮತ್ತು ಅವುಗಳ ನಿಯಂತ್ರಣ:

ಥ್ರಿಪ್ಸ್ : ಇವುಗಳು ಸಣ್ಣ ಕೀಟಗಳಾಗಿದ್ದು, ತಿಳಿ ಹಳದಿ ಬಣ್ಣದಿಂದ ತಿಳಿ ಕಂದು ಬಣ್ಣದಲ್ಲಿರುತ್ತವೆ ಮತ್ತು ಲಕ್ಷಣಗಳು ವಿರೂಪಗೊಂಡ ಎಲೆಗಳು ಮತ್ತು ಬಿಳಿಯ  ಎಲೆಗಳು ಕಂಡುಬರುತ್ತವೆ.

ನಿರ್ವಹಣೆ: ಗಿಡಹೇನುಗಳು ಮತ್ತು ಜ್ಯಾಸಿಡ್ಗಳು ಹೆಚ್ಚು ಹಾನಿಯನ್ನುಂಟುಮಾಡಿದರೆ, ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ 60 ಮಿಲಿ ಪ್ರತಿ ಎಕರೆಗೆ 150 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ರೋಗ ಮತ್ತು ಅವುಗಳ ನಿಯಂತ್ರಣ:

ಸಸಿ  ಸಾಯುವುದು : ಇದು ರೈಜೋಕ್ಟೋನಿಯಾ ಸೋಲಾನಿಯಿಂದ ಉಂಟಾಗುತ್ತದೆ. ಮೊಳಕೆಯೊಡೆದ ನಂತರ ಮೊಳಕೆ ತಕ್ಷಣ ಸಾಯುವುದು ಮತ್ತು ಕಾಂಡದ ಮೇಲೆ ಕಂದು-ಕೆಂಪು ಅಥವಾ ಕಪ್ಪು ಬಣ್ಣದ ಕೊಳೆತ ಕಂಡುಬರುತ್ತದೆ.

ನಿರ್ವಹಣೆ : ಬೇರಿಗೆ  ರಿಡೋಮಿಲ್ ಗೋಲ್ಡ್  @ 2.5 ಗ್ರಾಂ/ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು ಮತ್ತು ನಂತರ ಅಗತ್ಯವಿದ್ದಾಗ ನೀರು  ನೀಡಬೇಕು,  ಹೊಲದಲ್ಲಿ ನೀರು ನಿಲ್ಲಲು ಬಿಡಬಾರದು.

ಬೂಜು ತುಪ್ಪಟ ರೋಗ : ಸಣ್ಣ ಕೋನೀಯ ಗಾಯಗಳಾಗಿವೆ, ಅವು ಕಿತ್ತಳೆ ಅಥವಾ ಹಳದಿ ಬಣ್ಣದಲ್ಲಿ ಗಾಯಗಳಾದಂತೆ ಎಲೆಗಳ ಕೆಳಗಡೆ  ಕಂಡುಬರುತ್ತವೆ.

ನಿರ್ವಹಣೆ: ಹೆಚ್ಚಿನ ತೀವ್ರತೆ ಕಂಡುಬಂದಲ್ಲಿ ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ 64% WP @ 250gm/150 ಲೀ.  ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.

ಕೊಯ್ಲು

ಬ್ರೊಕೊಲಿ ಬೆಳೆಯುವುದನ್ನು ನಿಲ್ಲಿಸಿದಾಗ ಅದನ್ನು ಕೊಯ್ಲು ಮಾಡಬೇಕು. ಸಣ್ಣದಾದ ಬಿಗಿಯಾಗಿ ಹೊತ್ತಿಕೊಂಡ ರೀತಿಯಲ್ಲಿ ಮೊಗ್ಗುಗಳೊಂದಿಗೆ ದಟ್ಟ ಹಸಿರು ಬಣ್ಣಕ್ಕೆ  ಬ್ರೊಕೊಲಿ ತಲೆಗಳು ಬಂದಾಗ ಅವು ಕೊಯ್ಯಲು ಸಸಿದ್ಧವಾಗಿವೆ ಎಂದುಅರ್ಥ.

ಬ್ರೊಕೊಲಿ ಹೂವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸಿದರೆ ತಕ್ಷಣವೇ ಕೊಯ್ಲು ಮಾಡಬಹುದು. ಮುಖ್ಯ ತಲೆಯನ್ನು ಕೊಯ್ಲು ಮಾಡಿದ ನಂತರ ಸೈಡ್ ಚಿಗುರುಗಳು ಬೆಳೆಯುತ್ತಲೇ ಇರುತ್ತವೆ. ಬದಿಯ ಚಿಗುರುಗಳು ತಮ್ಮ ಬಣ್ಣ ಮತ್ತು ದೃಢತೆಯನ್ನು ತಲುಪಿದಾಗ ಕೊಯ್ಲು ಮಾಡಬೇಕು.

 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025