ಭತ್ತವು ಭಾರತದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ, ಭತ್ತದ ಬೆಳೆಯ ಒಟ್ಟು ಬೆಳೆ ಪ್ರದೇಶದ 1/4 ನೇ ಭಾಗವನ್ನು ಒಳಗೊಂಡಿದೆ. ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಬಹು ಮುಖ್ಯ ಆಹಾರ ಅಕ್ಕಿಯಾಗಿದೆ. ಜಾಗತಿಕವಾಗಿ ಅಕ್ಕಿ ಉತ್ಪಾದನೆಯಲ್ಲಿ ಚೀನಾದ ನಂತರ ಭಾರತ ಎರಡನೇ ಸ್ಥಾನದಲ್ಲಿದೆ. 2022-23 ರಲ್ಲಿ ಒಟ್ಟು ಅಕ್ಕಿ ಉತ್ಪಾದನೆ 125 ಮಿಲಿಯನ್ ಟನ್ಗಳು. 2022-23ರಲ್ಲಿ ಭತ್ತದ ಕೃಷಿಯ ಒಟ್ಟು ಪ್ರದೇಶವು 45.5 ಮಿಲಿಯನ್ ಹೆಕ್ಟೇರ್ಗಳಾಗಿದ್ದು, ಸರಾಸರಿ ಉತ್ಪಾದಕತೆ ಸುಮಾರು 4.1 ಟನ್/ಹೆ. ಭಾರತದಲ್ಲಿ, ಮುಂಗಾರಿನಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆ ಯ ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಇದು ಭತ್ತದ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ಈ ರೋಗವು ಭತ್ತದ ಸಸ್ಯಗಳ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ, ಮುಖ್ಯವಾಗಿ ಎಲೆಗಳು,ಹೂಗೊಂಚಲು , ಬೀಜಗಳು ಮತ್ತು ಕಾಂಡ, ಈ ರೋಗಾವು 70 – 80%ನಷ್ಟು ಧಾನ್ಯ ನಷ್ಟವನ್ನು ಉಂಟುಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.
ದೀರ್ಘಕಾಲದ ಅಥವಾ ಆಗಾಗ್ಗೆ ಮಳೆ ಬೀಳುವ ಪ್ರದೇಶಗಳು, ಕಡಿಮೆ ಮಣ್ಣಿನ ತೇವಾಂಶ, ತಂಪಾದ ತಾಪಮಾನ ಮತ್ತು ಸುಮಾರು 93-99% ನಷ್ಟು ಹೆಚ್ಚಿನ ಸಾಪೇಕ್ಷ ಆರ್ದ್ರತೆ ಹೊಂದಿರುವ ವಾತಾವರಣದಲ್ಲಿ ಬೆಳೆಯುವ ಭತ್ತದ ಬೆಳೆಯು ಈ ರೋಗಕ್ಕೆ ಹೆಚ್ಚು ಒಳಗಾಗುತ್ತದೆ.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
---|---|
ಕಾಂಟಾಫ್ ಶಿಲೀಂಧ್ರನಾಶಕ | ಹೆಕ್ಸಾಕೊನಜೋಲ್ 5 % EC |
ನೇಟಿವೋ ಶಿಲೀಂಧ್ರನಾಶಕ | ಟೆಬುಕೋನಜೋಲ್ 50% +ಟ್ರೈಫ್ಲೋಕ್ಸಿಸ್ಟ್ರೋಬಿನ್ 25% WG |
ಧನುಕಾ ಕಾಸು-ಬಿ ಶಿಲೀಂಧ್ರನಾಶಕ | ಕಸುಗಮಸಿನ್ 3% SL |
ಫಾಲಿಕರ್ ಶಿಲೀಂಧ್ರನಾಶಕ | ಟೆಬುಕೊನಜೋಲ್ 250 EC |
ಕಾರಣವಾದ ಜೀವಿ: ಕ್ಸಾಂಥೋಮೊನಾಸ್ ಒರಿಝೆ
ದುಂಡಾಣು ಮಚ್ಚೆ ರೋಗದ ಹಂತಗಳು: ತೆಂಡೆ ಹೊಡೆಯುವ ಹಂತದಿಂದ ಕಾಳು ಕಟ್ಟುವ ಹಂತದವರೆಗೆ
ನೀರಾವರಿ ಮತ್ತು ಮಳೆಯಾಶ್ರಿತ ತಗ್ಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 25 – 34 ° C ತಾಪಮಾನ, 70% ಕ್ಕಿಂತ ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಬಲವಾದ ಗಾಳಿ ಮತ್ತು ನಿರಂತರ ಮಳೆಯು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಬ್ಲೂ ಕಾಪರ್ | ಕಾಪರ್ ಆಕ್ಸಿಕ್ಲೋರೈಡ್ 50% WP |
ಕ್ರಿಸ್ಟೋಸೈಕ್ಲಿನ್ | ಸ್ಟ್ರೆಪ್ಟೊಮೈಸಿನ್ ಸಲ್ಫೇಟ್ 90% + ಟೆಟ್ರಾಸಿಲಿನ್ ಹೈಡ್ರೋಕ್ಲೋರೈಡ್ 10% SP |
ಜಿಯೋಲೈಫ್ ಜಿಯೋಮೈಸಿನ್ | ಕನ್ಸೋರ್ಟಿಯಂ ಆಫ್ ಪ್ಲಾಂಟ್ ಎಕ್ಸ್ಟ್ರಾಕ್ಟ್ಸ್ |
ಕೊನಿಕಾ | ಕಾಸುಗಮೈಸಿನ್ 5% + ಕಾಪರ್ ಆಕ್ಸಿ ಕ್ಲೋರೈಡ್ 45% WP |
ಕಾರಣವಾದ ಜೀವಿ: ಸರೋಕ್ಲಾಡಿಯಮ್ ಒರಿಝೆ
ರೋಗ ಬಾಧಿಸುವ ಹಂತಗಳು: ತೆಂಡೆ ಬರುವ ಹಂತ
ಇದು ಶುಷ್ಕ ಋತುಗಳಿಗೆ ಹೋಲಿಸಿದರೆ ಆರ್ದ್ರ ಋತುಗಳಲ್ಲಿ ಹೆಚ್ಚು ಕಂಡುಬರುತ್ತದೆ . ಹೆಚ್ಚಿನ ಸಾರಜನಕ ಫಲೀಕರಣ, ರೋಗ ಮತ್ತು ಗಾಯಗೊಂಡ ಗಿಡಗಳು, ಹೆಚ್ಚಿನ ಸಾಪೇಕ್ಷ ಆರ್ದ್ರತೆ ಮತ್ತು 20 – 28 ° C ತಾಪಮಾನ ಹೊಂದಿರುವ ವಾತಾವರಣ ಹಾಗು ಕಡಿಮೆ ಅಂತರದಲ್ಲಿ ನಾಟಿ ಮಾಡಿದ ಭತ್ತದ ಬೆಳೆಗಳಲ್ಲಿ ಈ ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಧನುಸ್ಟಿನ್ ಶಿಲೀಂಧ್ರನಾಶಕ | ಕಾರ್ಬೆಂಡಜಿಮ್ 50% WP |
ಕವಚ್ ಶಿಲೀಂಧ್ರನಾಶಕ | ಕ್ಲೋರೋಥಲೋನಿಲ್ 75% WP |
ಟಾಟಾ ಮಾಸ್ಟರ್ ಶಿಲೀಂಧ್ರನಾಶಕ | ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ 64% WP |
ಕೊನಿಕಾ | ಕಾಸುಗಮೈಸಿನ್ 5% + ಕಾಪರ್ ಆಕ್ಸಿಕ್ಲೋರೈಡ್ 45% |
ಕಾರಣವಾದ ಜೀವಿ : ಹೆಲ್ಮಿಂಥೋಸ್ಪೋರಿಯಮ್ ಒರಿಜೆ
ರೋಗ ಬಾಧಿಸುವ ಹಂತಗಳು: ಮೊಳಕೆಯೊಡೆಯುವ ಹಂತದಿಂದ ಕಾಳು ತುಂಬುವ ಹಂತದವರೆಗೆ
ಸಾಪೇಕ್ಷ ಆರ್ದ್ರತೆ 86 – 100% ಕ್ಕಿಂತ ಹೆಚ್ಚು, 16 – 36 ° ತಾಪಮಾನ, ಸೋಂಕಿತ ಬೀಜಗಳು, ಹೆಚ್ಚು ಕಳೆಗಳು ಇರುವ ಜಾಮೀನು, ಸೋಂಕಿತ ಬತ್ತದ ಗಿಡಗಳು ಈ ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಟಿಲ್ಟ್ ಶಿಲೀಂಧ್ರನಾಶಕ | ಟಿಲ್ಟ್ ಶಿಲೀಂಧ್ರನಾಶಕ ಪ್ರೊಪಿಕೊನಜೋಲ್ 25% EC |
ಕಾಂಟಾಫ್ ಪ್ಲಸ್ ಶಿಲೀಂಧ್ರನಾಶಕ | ಹೆಕ್ಸಾಕೊನಜೋಲ್ 5 % SC |
ಮರ್ಜೆರ್ ಶಿಲೀಂಧ್ರನಾಶಕ | ಟ್ರೈಸೈಕ್ಲಾಜೋಲ್ 18 % + ಮ್ಯಾಂಕೋಜೆಬ್ 62 % WP |
ಗೋಡಿವಾ ಸೂಪರ್ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4%SC |
ಕಾರಣವಾದ ಜೀವಿ: ಉಸ್ಟಿಲಜಿನೊಯಿಡಿಯಾ ವೈರೆನ್ಸ್
ರೋಗ ಬಾಧಿಸುವ ಹಂತಗಳು: ತೆನೆಯಲ್ಲಿ ಹೂಬಿಡುವ ಹಂತದಿಂದ ತೆನೆ ಕಟ್ಟುವ ಹಂತದವರೆಗೆ
25 – 35 ° C ಹೊಂದಿರುವ ತಾಪಮಾನ, 90% ಕ್ಕಿಂತ ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಭಾರೀ ಮಳೆ ಮತ್ತು ಗಾಳಿಗಳು ಕಾಡಿಗೆ ರೋಗದ ಸೋಂಕಿಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಅಮಿಸ್ಟಾರ್ ಟಾಪ್ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4% SC |
ರೋಕೊ ಶಿಲೀಂಧ್ರನಾಶಕ | ಥಿಯೋಫನೇಟ್ ಮೀಥೈಲ್ 70% WP |
ಕಸ್ಟೋಡಿಯಾ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% SC |
ಬಿ ಕಂಟ್ರೋಲ್ ಶಿಲೀಂಧ್ರನಾಶಕ | ವಾಲಿಡಾಮೈಸಿನ್ 3% L |
ಕಾರಣವಾದ ಜೀವಿ : ರೈಜೋಕ್ಟೋನಿಯಾ ಸೋಲಾನಿ
ರೋಗ ಬಾಧಿಸುವ ಹಂತಗಳು: : ತೆಂಡೆಬರುವ ಹಂತದಿಂದ ಗರ್ಭಅಂಕುರದ ಹಂತದವರೆಗೆ
ಮಳೆಗಾಲದಲ್ಲಿ ರೋಗ ಹರಡುವಿಕೆ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ತಾಪಮಾನ, ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಕಡಿಮೆ ಅಂತರದಲ್ಲಿ ನೆಟ್ಟ ಬತ್ತದ ಬೆಳೆಗಳು, ಎಲೆ ಕವಚದ ಮಚ್ಚೆ ರೋಗದ ಸೋಂಕಿಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಫೋಲಿಕರ್ ಶಿಲೀಂಧ್ರನಾಶಕ | ಟೆಬುಕೊನಜೋಲ್ 250 EC |
ಕಸ್ಟೋಡಿಯಾ ಶಿಲೀಂಧ್ರನಾಶಕ | ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% SC |
ಬಾವಿಸ್ಟಿನ್ ಶಿಲೀಂಧ್ರನಾಶಕ | ಕಾರ್ಬೆಂಡಜಿಮ್ 50% WP |
ಟಾಟಾ ಅಯಾನ್ ಶಿಲೀಂಧ್ರನಾಶಕ | ಕ್ರೆಸೋಕ್ಸಿಮ್-ಮೆಥೈಲ್ 40%WG |
ರೈಸ್ ಟಂಗ್ರೋ ರೋಗಕ್ಕೆ ಕಾರಣವಾದ ಜೀವಿ: ರೈಸ್ ಟಂಗ್ರೋ ವೈರಸ್ (ಆರ್ಟಿಎಸ್ವಿ ಮತ್ತು ಆರ್ಟಿಬಿವಿ )
ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ವಿಶೇಷವಾಗಿ ಸಸ್ಯಕ ಹಂತ
ವೆಕ್ಟರ್/ ರೋಗವಾಹಕ : ಲೀಫ್ಹಾಪರ್ಸ್/ ಜಿಗಿ ಹುಳಗಳು
ವೆಕ್ಟರ್ /ರೋಗವಾಹಕ ಇರುವುದರಿಂದ , ಸೋಂಕಿತ ಸ್ಟಬಲ್ಸ್ಗಳು ಮತ್ತು ಹೊಲದಲ್ಲಿರುವ ಕಳೆಗಳ ಮೂಲಕ ವೈರಸ್ ಮೂಲಗಳು RTV ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.
(ಗಮನಿಸಿ: ರೈಸ್ ಟಂಗ್ರೋ ವೈರಸ್ನಿಂದ ಬೆಳೆ ಸೋಂಕಿತವಾಗಿದ್ದರೆ, ಅದನ್ನು ನಿರ್ವಹಿಸಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಕೆಳಗಿನ ಉತ್ಪನ್ನಗಳು ರೋಗವಾಹಕವನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು)
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಚೆಸ್ ಕೀಟನಾಶಕ | ಪೈಮೆಟ್ರೋಜಿನ್ 50% ವಾಟರ್ ಡಿಸ್ಪರ್ಸಿಬಲ್ ಗ್ರ್ಯಾನ್ಯೂಲ್ಗಳಲಲಿ([WDG] |
ಲಾರಾ 909 ಕೀಟನಾಶಕ | ಕ್ಲೋರೊಪಿರಿಫಾಸ್ 50%+ ಸೈಪರ್ಮೆಥ್ರಿನ್5% EC |
ಅಂಶುಲ್ ಲಕ್ಷ ಕೀಟನಾಶಕ | ಲ್ಯಾಂಬ್ಡಾ ಸೈಲೋಥ್ರಿನ್ 5% EC |
ಅನಂತ್ ಕೀಟನಾಶಕ | ಥಿಯಾಮೆಥಾಕ್ಸಮ್ 25 % WG |
: ಗಿಬ್ಬರೆಲ್ಲಾ ಫ್ಯೂಜಿಕುರೊಯಿ
ಬಾಧಿಸುವ ಹಂತಕ್ಕೆ ಕಾರಣವಾದ ಜೀವಿಗಳು: ಮೊಳಕೆಯೊಡೆಯುವ ಹಂತದಿಂದ ಕಾಳು ತುಂಬುವವರೆಗೆ
ಸೋಂಕಿತ ಬೀಜಗಳು, ಬಲವಾದ ಗಾಳಿ ಮತ್ತು ನೀರು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ರಾಸಾಯನಿಕ ನಿರ್ವಹಣೆ:
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ರೋಕೋ ಶಿಲೀಂಧ್ರನಾಶಕ (ಬೀಜೋಪಚಾರಕ್ಕೆ) | ಥಿಯೋಫನೇಟ್ ಮೀಥೈಲ್ 70% WP |
ಕಂಪ್ಯಾನಿಯನ್ ಶಿಲೀಂಧ್ರನಾಶಕ | ಮ್ಯಾಂಕೋಜೆಬ್ 63%+ಕಾರ್ಬೆಂಡಜಿಮ್ 12% WP |
ನೇಟಿವೋ ಶಿಲೀಂಧ್ರನಾಶಕ | ಟೆಬುಕೊನಜೋಲ್50% + ಟ್ರೈಫ್ಲೋಕ್ಸಿಸ್ಟ್ರೋಬಿ ನ್ 25%WG |
ಟಾಟಾ ಅಯಾನ್ ಶಿಲೀಂಧ್ರನಾಶಕ | ಕ್ರೆಸೊಕ್ಸಿಮ್-ಮೀಥೈಲ್40% +ಹೆಕ್ಸಾಕೊನಜೋಲ್ 8% WG |
ಕಾರಣವಾದ ಜೀವಿ: ಸ್ಕ್ಲೆರೋಟಿಯಮ್ ಒರಿಝೆ
ಬಾಧಿಸುವ ಹಂತಗಳು: ಕಾಳು ತುಂಬುವ / ಕಟ್ಟುವ ಆರಂಭಿಕ ಹಂತ
ಹೆಚ್ಚಿನ ಸಾರಜನಕ ರಸಗೊಬ್ಬರಗಳ ಬಳಕೆ. ಕೋರೆಗಳು, ಕೀಟಗಳ ದಾಳಿಯಿಂದ ಉಂಟಾದ ಗಾಯಗಳನ್ನು ಹೊಂದಿರುವ ಸಸ್ಯಗಳು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು.
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಬಾವಿಸ್ತೀನ್ ಶಿಲೀಂಧ್ರನಾಶಕ | ಕಾರ್ಬೆಂಡಜಿಮ್ 50% WP |
ಅವನ್ಸರ್ ಗ್ಲೋ ಶಿಲೀಂಧ್ರನಾಶಕ | 8.3% ಅಜೋಕ್ಸಿಸ್ಟ್ರೋಬಿನ್+66.7% WG ಮ್ಯಾಂಕೋಜೆಬ್ |
ಅವ್ತಾರ್ ಶಿಲೀಂಧ್ರನಾಶಕ | ಜಿನೆಬ್ 68%+ಹೆಕ್ಸಾಕೊನಜೋಲ್4% |
ಬಿ ಕಂಟ್ರೋಲ್ ಶಿಲೀಂಧ್ರನಾಶಕ | ವ್ಯಾಲಿಡಾಮೈಸಿನ್3% L |
ಕಾರಣವಾದ ಜೀವಿ : ರೈಸ್ ಗ್ರಾಸಿ ಸ್ಟಂಟ್ ಟೆನ್ಯುವೈರಸ್
ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ಆದರೆ ಕಾಳು ತುಂಬುವ ಹಂತದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH)
ಭತ್ತವನ್ನು ನಿರಂತರವಾಗಿ ಮತ್ತು ವರ್ಷವಿಡೀ ಬೆಳೆಯುವ ಸ್ಥಳಗಳು ರೋಗವನ್ನು ಹರಡಲು ರೋಗವಾಹಕ/ವೆಕ್ಟರ್ಗೆ ಅನುಕೂಲಕರ ಪರಿಸ್ಥಿತಿ ಆಗಿರುತ್ತದೆ .
(ಗಮನಿಸಿ: ಭತ್ತದ ಹುಲ್ಲಿನ ಸ್ಟಂಟ್ ರೋಗದಿಂದ ಬೆಳೆ ಸೋಂಕಿಗೆ ಒಳಗಾಗಿದ್ದರೆ, ಅದನ್ನು ನಿರ್ವಹಿಸಲಾಗುವುದಿಲ್ಲ ಅಥವಾ ಗುಣಪಡಿಸಲಾಗುವುದಿಲ್ಲ. ರೋಗವಾಹಕವಾದ ಕಂದು ಜಿಗಿ ಹುಳ/ ಬ್ರೌನ್ ಪ್ಲಾಂಟ್ ಹಾಪರ್ (BPH) ಅನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಕೆಳಗಿನ ಉತ್ಪನ್ನಗಳನ್ನು ಬಳಸಬಹುದು)
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಲ್ಯಾನ್ಸರ್ ಗೋಲ್ಡ್ ಕೀಟನಾಶಕ | ಅಸಿಫೇಟ್ 50%+ ಇಮಿಡಾಕ್ಲೋಪ್ರಿಡ್ 1.8% SP |
ಪ್ರಿಡೇಟರ್ ಕೀಟನಾಶಕ | ಕ್ಲೋರೋಪಿರಿಫಾಸ್ 50% EC |
ಕಾತ್ಯಾಯಿನಿ ಬಿ ಪಿ ಹೆಚ್ ಸೂಪರ್ ಕೀಟನಾಶಕ | ಪೈಮೆಟ್ರೋಜಿನ್ 50% WG |
ಓಡಿಸ್ ಕೀಟನಾಶಕ | ಬುಪ್ರೊಫೆಜಿನ್ 20%+ ಅಸಿಫೇಟ್ 50% |
ಕಾರಣವಾದ ಜೀವಿ: ರೈಸ್ ರೆಗ್ಗೇಡ್ ಸ್ಟಂಟ್ ವೈರಸ್
ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ಆದರೆ ಕಾಳು ತುಂಬುವ ಹಂತದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ
ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH)
ಭತ್ತವನ್ನು ನಿರಂತರವಾಗಿ ಮತ್ತು ವರ್ಷಪೂರ್ತಿ ಬೆಳೆಯುವ ಪ್ರದೇಶಗಳು ರೋಗಕಾರಕಕ್ಕೆ ನಿರಂತರ ಆತಿಥ್ಯವನ್ನು ಒದಗಿಸುವ ರೋಗ ಹರಡುವಿಕೆಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು.
(ಗಮನಿಸಿ: ಟಂಗ್ರೋ ರೋಗ/ರೈಸ್ ರೆಗ್ಗೇಡ್ ಸ್ಟಂಟ್ ರೋಗದಿಂದ ಬೆಳೆ ಸೋಂಕಿತವಾಗಿದ್ದರೆ, ಅದನ್ನು ನಿರ್ವಹಿಸಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಕೆಳಗಿನ ಉತ್ಪನ್ನಗಳನ್ನು ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH) ಅನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು).
ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) | ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು |
ಲ್ಯಾನ್ಸರ್ ಗೋಲ್ಡ್ ಕೀಟನಾಶಕ | ಅಸಿಫೇಟ್ 50%+ ಇಮಿಡಾಕ್ಲೋಪ್ರಿಡ್ 1.8% SP |
ಪ್ರಿಡೇಟರ್ ಕೀಟನಾಶಕ | ಕ್ಲೋರೋಪಿರಿಫಾಸ್ 50% EC |
ಕಾತ್ಯಾಯಿನಿ ಬಿ ಪಿ ಹೆಚ್ ಸೂಪರ್ ಕೀಟನಾಶಕ | ಪೈಮೆಟ್ರೋಜಿನ್ 50% WG |
ಓಡಿಸ್ ಕೀಟನಾಶಕ | ಬುಪ್ರೊಫೆಜಿನ್ 20%+ ಅಸಿಫೇಟ್ 50% |
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…