ವ್ಯಾಪಕವಾಗಿ ಬೆಳೆಯುವ ಒಂದು ಬೆಳೆಯಾಗಿದೆ. ಸಜ್ಜೆ (ಬಾಜ್ರ) ಬರವನ್ನು ಸಹಿಸಿಕೊಳ್ಳಬಲ್ಲದು, ಅದಕ್ಕಾಗಿಯೇ ಕಡಿಮೆ ಮಳೆ ಪ್ರದೇಶದಲ್ಲಿ ಚೆನ್ನಾಗಿ ಬೆಳೆಯಲಾಗುತ್ತದೆ. ಭಾರತವು ಸಜ್ಜೆಯ ಅತಿದೊಡ್ಡ ಉತ್ಪಾದಕ. ಇದನ್ನು ಮೇವಿನ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಹಾಗೂ ಇದನ್ನು ಆಹಾರವಾಗಿಯೂ ಉಪಯೋಗಿಸಲಾಗುತ್ತದೆ. ಇದರ ಕಾಂಡವನ್ನು ಪ್ರಾಣಿಗಳಿಗೆ ಆಹಾರಕ್ಕಾಗಿ ಹಿಂಡಿಯ ರೀತಿ ಬಳಸಲಾಗುತ್ತದೆ.
ಇದನ್ನು ಎಲ್ಲ ರೀತಿಯ ಮಣ್ಣಿನಲ್ಲಿ ಬೆಳೆಯಲಾಗುತ್ತದೆ, ನೀರು ಮತ್ತು ಮರಳು ಮಿಶ್ರಿತ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.
ಜುಲೈ ಆರಂಭದಲ್ಲಿ ಬಿತ್ತನೆ ಮಾಡಬೇಕು ಮತ್ತು ಮಳೆ ಹೆಚ್ಚಿರುವ ಪ್ರದೇಶಗಳಲ್ಲಿ ಜುಲೈ ಕೊನೆಯ ವಾರದಲ್ಲಿ ಬಿತ್ತನೆ ಮಾಡಬೇಕು.
ಸಾಲಿನಿಂದ ಸಾಲಿಗೆ 50 ಸೆಂ.ಮೀ ಅಂತರವನ್ನು ಮತ್ತು ಗಿಡದಿಂದ ಗಿಡಕ್ಕೆ 15 ಸೆಂ.ಮೀ ಅಂತರದಲ್ಲಿ ಬಿತ್ತಬೇಕು.
ಸುಧಾರಿತ ತಳಿಗಳ, ಬಿತ್ತನೆಗಾಗಿ 1.5 ಕೆಜಿ/ಎಕರೆಗೆ ಬಳಸಬೇಕು.
ಬೀಜದಿಂದ ಮತ್ತು ಮಣ್ಣಿನಿಂದ ಬರುವಂಥ ಕಾಯಿಲೆಗಳಿಂದ ರಕ್ಷಿಸಲು, ಬೀಜಗಳನ್ನು 20% ಉಪ್ಪಿನ ದ್ರಾವಣದಲ್ಲಿ ಐದು ನಿಮಿಷಗಳ ಕಾಲ ಅದ್ದಿ. ನೀರಿನ ಮೇಲೆ ತೇಲುತ್ತಿರುವ ಬೀಜಗಳನ್ನು ತೆಗೆದುಹಾಕಿ, ನಾಶಮಾಡಿ ಮತ್ತು ಉಳಿದ ಬೀಜಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಸಜ್ಜೆ ಬೀಜಗಳನ್ನು ಥೈರಾಮ್ @ 3 ಗ್ರಾಂ / ಕೆಜಿ ಬೀಜಗಳೊಂದಿಗೆ ಅಥವಾ ಕ್ಲೋರ್‌ಪೈರಿಫಾಸ್ 20 ಇಸಿ @ 4 ಮಿಲಿ / ಕೆಜಿ ಬೀಜಗಳೊಂದಿಗೆ ಬೀಜೋಪಚಾರ ಮಾಡಬೇಕು.
ಯೂರಿಯಾ ಡಿಎಪಿ ಅಥವಾ ಎಸ್ಎಸ್ಪಿ ಎಂಒಪಿ
90 55 ಅಥವಾ 150 –
55 27 ಅಥವಾ 75 –
ಪೌಷ್ಟಿಕಾಂಶದ ಅವಶ್ಯಕತೆ (ಕೆಜಿ/ಎಕರೆ)
ಸಾರಜನಕ ರಂಜಕ ಪೊಟ್ಯಾಸಿಯಮ್
ಗೋಡು ಮಣ್ಣಿಗೆ 40 24 –
ಮರಳು ಮಣ್ಣಿಗೆ 25 12 –
ಬೇರು ಗಂಟು ಹುಳು: ತೀವ್ರತೆ ಕಂಡುಬಂದಲ್ಲಿ, ಮಿಥೈಲ್ ಪ್ಯಾರಾಥಿಯಾನ್ 2% @10kg/ಎಕರೆಗೆ ಧೂಳೀಕರಣವನ್ನು ಮಾಡಿ ನಿಯಂತ್ರಿಸಬಹುದು.
ನೀಲಿ ಜೀರುಂಡೆಗಳು: ನೀಲಿ ಜೀರುಂಡೆಗಳನ್ನು ನಿಯಂತ್ರಿಸಲು ಪ್ರತಿ ಎಕರೆಗೆ 1.5% ಕ್ವಿನಾಲ್ಫಾಸ್ @ 250 ಮಿಲಿ ಪ್ರತೀ ಎಕರೆಗೆ ಸಿಂಪಡಿಸಿ.
ತೀವ್ರತೆ ಕಂಡುಬಂದಲ್ಲಿ, ಎಲೆಗಳ ಮೇಲಿನ ಮತ್ತು ಕೆಳಗಿನ ಎರಡೂ ಭಾಗಗಳಲ್ಲಿ ಬಿಳಿ ಬೆಳವಣಿಗೆ ಕಾಣಿಸಿಕೊಳ್ಳುತ್ತದೆ. ತೆನೆ ಎಲೆಗಳಾಗಿ ರೂಪಾಂತರಗೊಳ್ಳುತ್ತದೆ. ಮೋಡ ಕವಿದ ವಾತಾವರಣದಲ್ಲಿ ಇದು ವೇಗವಾಗಿ ಹರಡುತ್ತದೆ.
ತೀವ್ರತೆ ಕಂಡುಬಂದಲ್ಲಿ, ನಿಯಂತ್ರಿಸಲು ಮೆಟಾಲಾಕ್ಸಿಲ್ MZ@30gm/15Ltr ನೀರಿಗೆ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದರೆ, 15 ದಿನಗಳ ಮಧ್ಯಂತರದೊಂದಿಗೆ ಸಿಂಪಡಿಸುವಿಕೆಯನ್ನು ಪುನರಾವರ್ತಿಸಿ.
ತಡೆಗಟ್ಟುವ ಕ್ರಮವಾಗಿ ಸ್ಮಟ್ ನಿರೋಧಕ ತಳಿಗಳನ್ನು ಬೆಳೆಯಿರಿ. ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಹೊಲದಿಂದ ದೂರದಲ್ಲಿ ಸುಟ್ಟುಹಾಕಿ ಹಾಗೂ ಮ್ಯಾಂಕೋಜೆಬ್ @2gm/Ltr ನೀರಿಗೆ ಬೆರೆಸಿ ಸಿಂಪಡಿಸಬೇಕು.
ಎಲೆಗಳ ಮೇಲೆ ಕೆಂಪು ಕಂದು ಬಣ್ಣದಿಂದ ಕೆಂಪು ಕಿತ್ತಳೆ ಬಣ್ಣದ ಕಲೆಗಳು ಕಾಣುತ್ತವೆ, ಸೋಂಕು ಕಂಡುಬಂದಲ್ಲಿ, ನಿಯಂತ್ರಿಸಲು ಮ್ಯಾಂಕೋಜೆಬ್ 75WP@2gm/Ltr ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದರೆ, 8 ದಿನಗಳ ಅಂತರದಲ್ಲಿ ಸಿಂಪಡಿಸುವಿಕೆಯನ್ನು ಪುನರಾವರ್ತಿಸಬಹುದು.
ಸಜ್ಜೆ (ಬಾಜ್ರ)ಯಲ್ಲಿ ಸಾಕಷ್ಟು ತೇವಾಂಶವನ್ನು ಹೊಂದಿರುವ, ಬೆಳೆ ಕೊಯ್ಲಿಗೆ ಸಿದ್ಧವಾಗಿರುತ್ತದೆ. ಕುಡಗೋಲಿನ ಸಹಾಯದಿಂದ ತೆನೆಗಳನ್ನು ಕೊಯ್ಯಬೇಕು. ಕೆಲವು ರೈತರು ಕುಡುಗೋಲಿನಿಂದ ಸಂಪೂರ್ಣ ಗಿಡವನ್ನು ಕತ್ತರಿಸುತ್ತಾರೆ. ಕೊಯ್ಲು ಮಾಡಿದ ನಂತರ ಒಕ್ಕಣೆ ಮಾಡುವ ಜಾಗದಲ್ಲಿ ತೆನೆಗಳನ್ನು ಅಥವಾ ಕಾಂಡಗಳನ್ನು ಸಂಗ್ರಹಿಸಿ ನಾಲ್ಕರಿಂದ ಐದು ದಿನಗಳವರೆಗೆ ಒಣಗಿಸಬೇಕು.
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…