Crop

ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು(IARI) ಪೂಸಾ JG 16 ಎಂಬ ಹೊಸ ಬರ-ಸಹಿಷ್ಣು ಕಡಲೆ ತಳಿಯನ್ನು ಕಂಡುಹಿಡಿದಿದೆ

ಜವಾಹರಲಾಲ್ ನೆಹರು ಕೃಷಿ ವಿಶ್ವ ವಿದ್ಯಾಲಯ (ಜೆಎನ್‌ಕೆವಿವಿ) ಜಬಲ್‌ಪುರ, ರಾಜಮಾತಾ ವಿಜಯರಾಜೆ ಸಿಂಧಿಯಾ ಕೃಷಿ ವಿಶ್ವ ವಿದ್ಯಾಲಯ, ಗ್ವಾಲಿಯರ್ ಮತ್ತು ಇಕ್ರಿಸ್ಯಾಟ್, ಪತಂಚೆರು ಹೈದರಾಬಾದ್‌ನ ಜಂಟಿ  ಸಹಯೋಗದೊಂದಿಗೆ ಪೂಸಾ ಸಂಸ್ಥೆ ಎಂದೂ ಕರೆಯಲ್ಪಡುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು  (ಐಎಆರ್‌ಐ) ‘ಪೂಸಾ ಜೆಜಿ 16 ಎಂಬ ಹೊಸ ಬರ-ಸಹಿಷ್ಣು ಕಡಲೆ ತಳಿಯನ್ನು ಅಭಿವೃದ್ಧಿಪಡಿಸಿದೆ. ಜೆಜಿ 16 ಯು ಬರ-ಸಹಿಷ್ಣು ಮತ್ತು ಅಧಿಕ  ಇಳುವರಿ ನೀಡುವ ಕಡಲೆ ತಳಿಯಾಗಿದೆ

ICC 4958 ರಿಂದ ಬರ ಸಹಿಷ್ಣುತೆಯ ಜೀನ್ ಅನ್ನು ಬಳಸಿಕೊಂಡು ಜೀನೋಮಿಕ್ ಅಸಿಸ್ಟೆಡ್ ಬ್ರೀಡಿಂಗ್ ತಂತ್ರಗಳ ಮೂಲಕ ಈ ಪೂಸಾ ಜೆಜಿ 16  ಎಂಬ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ‌. ಈ ಕಡಲೆ ತಳಿಯ ಬರ ನಿರೋಧಕತೆಯನ್ನು ಪರಿಶೀಲಿಸಲು ಅಖಿಲ ಭಾರತ ಸಹಯೋಗ ಸಂಶೋಧನಾ ಕಾರ್ಯಕ್ರಮವು ದೇಶಾದ್ಯಂತ ಪ್ರಯೋಗವನ್ನು ಮಾಡಿದೆ. ಈ ಹೊಸ ತಳಿಯು,ಬರ ಪೀಡಿತ ಪ್ರದೇಶದಲ್ಲಿ  ಹೆಕ್ಟೇರ್‌ಗೆ ಎರಡು  ಟನ್‌ಗಳಷ್ಟು ಉತ್ಪಾದನೆಯನ್ನು ನೀಡುವ ಸಾಮರ್ಥ್ಯವನ್ನು  ಹೊಂದಿದೆ. ಬರ ಪೀಡಿತ ಪ್ರದೇಶದಲ್ಲಿಈ ತಳಿಯು ಫ್ಯುಸೇರಿಯಮ್ ಸೊರಗು ರೋಗ ಮತ್ತು ಸಸಿಯ ಕುಂಠಿತ ಬೆಳವಣಿಗೆಗೆ ನಿರೋಧಕತೆಯನ್ನು ತೋರುತ್ತದೆ  ಹಾಗು ಈ ತಳಿಯು ವೇಗದ ಬೆಳೆವಣಿಗೆಯ ಅವಧಿಯನ್ನು  /ತ್ವರಿತ ಪಕ್ವತೆಯ ಅವಧಿಯನ್ನು ಹೊಂದಿದೆ (110 ದಿನಗಳು).

ಫ್ಯುಸೇರಿಯಮ್ ಸೊರಗು ರೋಗ:

ಫ್ಯುಸೇರಿಯಮ್ ಸೊರಗು ರೋಗ ಎಂಬ ವ್ಯಾಪಕವಾದ ಸಸ್ಯರೋಗವು ಮಣ್ಣಿನಲ್ಲಿ ವಾಸಿಸುವ ಫ್ಯುಸೇರಿಯಮ್ ಆಕ್ಸಿಸ್ಪೊರಮ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಪ್ರಮುಖ ವಾಣಿಜ್ಯ  ಆಹಾರ ಬೆಳೆಗಳು ಸೇರಿದಂತೆ ಸಿಹಿ ಆಲೂಗಡ್ಡೆ, ಟೊಮ್ಯಾಟೊ, ಬೀನ್ಸ್, ಬಳ್ಳಿ ಜಾತಿ ಬೆಳೆಗಳು, ಬಾಳೆ (ಪನಾಮ ವಿಲ್ಟ್ ಎಂದು ಕರೆಯಲಾಗುತ್ತದೆ) ಮತ್ತು ವಿವಿಧ ಇತರೆ ಬೆಳೆಗಳು ಈ ಸೊರಗು ರೋಗಕ್ಕೆ ತುತ್ತಾಗುತ್ತವೆ . F. ಆಕ್ಸಿಸ್ಪೊರಮ್ ಶಿಲೀಂಧ್ರವು ಜೀವಂತ ಮುಖ್ಯ ಸಸಿಯೊಂದಿಗೆ ಸಂಪರ್ಕವಿಲ್ಲದೆ ಮಣ್ಣಿನಲ್ಲಿ ಅನಿರ್ದಿಷ್ಟವಾಗಿ ಉಳಿಯತ್ತದೆ ಮತ್ತು 24 °C (75 °F) ಗಿಂತ ಹೆಚ್ಚಿನ ಮಣ್ಣಿನ ತಾಪಮಾನದಲ್ಲಿಯು ಸಹ ಬೆಳೆಯುತ್ತದೆ.

ರೋಗ ಲಕ್ಷಣಗಳು:

  • ಸಸಿ ಸೋಂಕಿಗೆ ಒಳಗಾದಾಗ, ಒಣಗಿ ಸಾಯುತ್ತದೆ.
  • ಎಲೆಗಳು ಸಹ ಒಣಗುತ್ತವೆ,ಸಸಿಯ ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತವೆ.ಕ್ರಮೇಣವಾಗಿ ಕಾಂಡ ಬುಡದಿಂದ ಮೇಲಕ್ಕೆ ತೆಳು ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾಗುತ್ತದೆ.
  • ಬೇರುಗಳು ಮತ್ತು ಕೆಳ ಕಾಂಡದಲ್ಲಿ ಕ್ಸೈಲಮ್ ನಾಳೀಯ ಅಂಗಾಂಶದ ಮೇಲೆ ಕಪ್ಪು ಬಣ್ಣದ ಪಟ್ಟಿಗಳನ್ನು ಕಾಣಬಹುದು. ಇದು ಬೇರು ಕೊಳೆತಕ್ಕೆ  ಕಾರಣವಾಗುತ್ತದೆ.

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024