Crop

ಮೆಣಸಿನ  ಬೆಳೆಯಲ್ಲಿ  ಥ್ರಿಪ್ಸ್ ನುಶಿ  ಕೀಟಗಳ   ನಿರ್ವಹಣೆ

ಥ್ರಿಪ್ಸ್ ನುಶಿಗಳು  ಮೆಣಸಿನ ಗಿಡಗಳಿಗೆ  ಅತಿ ಹೆಚ್ಚು  ಹಾನಿಯನ್ನುಂಟು ಮಾಡುವ ಕೀಟಗಳಾಗಿದ್ದು . ಇವುಗಳ ದಾಳಿಯಿಂದ  ಇಳುವರಿಯಲ್ಲಿ ಕುಂಠಿತವಾಗಬಹುದು.  ಮೆಣಸಿನಕಾಯಿ ಗಿಡಗಳ ಇಳುವರಿ ಮತ್ತು ಗುಣಮಟ್ಟವನ್ನು ರಕ್ಷಿಸಲು ಈ ಕೀಟಗಳನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಈ ಕೀಟಗಳು ಮೆಣಸಿನಕಾಯಿ ಬೆಳೆಗೆ ಮೊಳಕೆ ಹಂತದಿಂದ ಪ್ರೌಡಾವಸ್ಥೆ ಹಂತದವರೆಗೆ ಪರಿಣಾಮ ಬೀರುತ್ತದೆ . ವಿವಿಧ ಜಾತಿಯ  ಕೀಟಗಳಲ್ಲಿ  ಹಳದಿ ಥ್ರಿಪ್ಸ್ ನುಶಿಯು   ಮೆಣಸಿನಕಾಯಿ  ಗಿಡಗಳಿಗೆ ಅತಿ ಹೆಚ್ಚು ಹಾನಿಯನ್ನು ಉಂಟುಮಾಡುವ ಕೀಟವಾಗಿದೆ 

ಥ್ರಿಪ್ಸ್ ನುಶಿಗಳು  ಮರಿ ಕೀಟಗಳು ಹಾಗು ಪ್ರಾಯದ/ಪ್ರೌಢ  ಕೀಟಗಳು ಮೆಣಸಿನಕಾಯಿ ಗಿಡಗಳ  ಎಲೆಗಳು, ಚಿಗುರುಗಳು, ಮೊಗ್ಗುಗಳು ಮತ್ತು ಕಾಯಿಗಳಿಂದ ರಸವನ್ನು ಹೀರುವ ಮೂಲಕ ಮೆಣಸಿನಕಾಯಿ  ಬೆಳೆಗೆ ಗಿಡಗಳಿಗೆ ಹಾನಿಯನ್ನುಂಟುಮಾಡುತ್ತವೆ ಮತ್ತು ಈ ಕೀಟಗಳು  ಬಾಧಿತ ಸಸ್ಯಗಳಲ್ಲಿ ‘ಲೀಫ್ ಕರ್ಲ್ (ಎಲೆ ಮುಟುರು  ) ರೋಗದ ’ ಲಕ್ಷಣವನ್ನು ಉಂಟುಮಾಡುತ್ತವೆ. ಈ ಕೀಟಗಳು ಸಾಮಾನ್ಯವಾಗಿ  ಬೇಸಿಗೆ ಕಾಲದಲ್ಲಿ ಹಾಗು  ಶುಷ್ಕ ವಾತಾವರಣದಲ್ಲಿ ಬೆಳೆಯುತ್ತವೆ ಮತ್ತು ಮೆಣಸಿನಕಾಯಿ ಗಿಡಗಳ ಹೂಬಿಡುವ ಮತ್ತು ಹಣ್ಣಾಗುವ ಹಂತಗಳಲ್ಲಿ ತೀವ್ರ ಹಾನಿಯನ್ನುಂಟುಮಾಡುತ್ತವೆ. ಅಂದರೆ ಮುಖ್ಯವಾಗಿ  ಗಿಡಗಳ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಥ್ರಿಪ್ಸ್ ನುಶಿಯ   ದಾಳಿಯು  ಅತ್ಯಂತ ತೀವ್ರವಾಗಿರುತ್ತದೆ ಮತ್ತು ಬಾದೆಗೊಳಗಾದ ಪ್ರತಿ ಗಿಡದಲ್ಲಿ  ಕಾಯಿಗಳ  ಸಂಖ್ಯೆಯಲ್ಲಿ ಮತ್ತು ಕಾಯಿಯ  ಗಾತ್ರದಲ್ಲಿ ಹೆಚ್ಚಿನ  ಇಳಿಕೆಗೆ ಕಾರಣವಾಗಬಹುದು. ಥ್ರಿಪ್ಸ್ ನುಶಿ ಬಾಧೆಯು ಮೆಣಸನ್ನು  ಸುಮಾರು 20% ರಿಂದ 50% ವರೆಗೆ ಇಳುವರಿ ನಷ್ಟವನ್ನು ಉಂಟುಮಾಡುತ್ತದೆ  ಮತ್ತು ತೀರ್ವ ಹಾವಳಿಯ   ಸಂದರ್ಭದಲ್ಲಿಈ ಕೀಟಗಳಿಂದ ಆಗುವ ನಷ್ಟವು  60 – 90% ವರೆಗೆ ತಲುಪಬಹುದು. ಥ್ರಿಪ್ಸ್ ನುಶಿ   ಮೆಣಸಿನಲ್ಲಿ  ‘ಲೀಫ್ ಕರ್ಲ್ ವೈರಸ್(ಎಲೆ ಮುಟುರು  ವೈರಸ್ )’ ಹರಡಲು ವಾಹಕವಾಗಿ ಕಾರ್ಯನಿರ್ವಹಿಸುತ್ತವೆ. ಈ ಕೀಟಗಳನ್ನು ಆರಂಭಿಕ ಹಂತದಲ್ಲಿ ನಿಯಂತ್ರಿಸದಿದ್ದರೆ, ಅವುಗಳ ಹಾವಳಿಯಿಂದ ಇಡೀ ಬೆಳೆ ವಿನಾಶದ  ಸಾದ್ಯತೆಯಿದೆ 

ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಶಿ  :

ಥ್ರಿಪ್ಸ್ ವೈಜ್ಞಾನಿಕ ಹೆಸರು:

ಸ್ಕಿರ್ಟೋಥ್ರಿಪ್ಸ್ ಡಾರ್ಸಾಲಿಸ್ 

ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಶಿ   ದಾಳಿಯ  ಲಕ್ಷಣಗಳು:

  • ಈ ಥ್ರಿಪ್ಸ್ ನುಶಿಗಳು  ಎಲೆಗಳಿಂದ  ರಸವನ್ನು ಹೀರುತ್ತವೆ ಹಾಗು  ಎಲೆಗಳು ಮುದುಡುತ್ತವೆ ಮತ್ತು ಎಲೆ  ಸುರುಳಿಯನ್ನು ಉಂಟುಮಾಡುತ್ತವೆ.
  • ಥ್ರಿಪ್ಸ್ ನುಶಿಗಳು ಮುಖ್ಯವಾಗಿ ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ
  • ಸೋಂಕಿತ ಎಲೆಗಳು ಉದ್ದವಾದ ತೊಟ್ಟುಗಳನ್ನು  ಹೊಂದಿರುತ್ತವೆ
  • ಎಲೆಗಳು  “ಬೆಳ್ಳಿ ಅಥವಾ ಕಂಚಿನ “ ಬಣ್ಣಕೆ ತಿರುಗುತ್ತವೆ
  • ಬಾಧಿತ ಹೂವಿನ ಮೊಗ್ಗುಗಳು ದುರ್ಬಲವಾಗುತ್ತವೆ ಮತ್ತು ನಂತರದಲ್ಲಿ ಉದುರುತ್ತವೆ
  • ಕೀಟಗಳ ದಾಳಿಯು ಆರಂಭಿಕ ಹಂತವು ಬೆಳೆಗಳ ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತದೆ
  • ತೀವ್ರವಾದ ದಾಳಿಯು ಸಂದರ್ಭದಲ್ಲಿ, ಹೂವಿನ ಬೆಳವಣಿಗೆ  ಮತ್ತು ಹಣ್ಣುಗಳ ಬೆಳೆವಣಿಗೆಯಲ್ಲಿ ಕುಂಠಿತ  ಕಂಡು ಬರುತ್ತದೆ
  • ಥ್ರಿಪ್ಸ್ ನುಶಿಗಳು  ಬೆಳೆಯುತ್ತಿರುವ ಕಾಯಿಗಳನ್ನು  ತಿನ್ನುತ್ತದೆ ಮತ್ತು  ಕಾಯಿಯ ಮೇಲ್ಮೈಯಲ್ಲಿ ಸಣ್ಣ ತಿಳಿ ಕಂದು ಬಣ್ಣದ ಮಚ್ಚೆಗಳು ಕಂಡುಬರುತ್ತವೆ

ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಶಿಯನ್ನು  ನಿಯಂತ್ರಿಸಲು  ಅನುಸರಿಸಬೇಕಾದ ಕ್ರಮಗಳು:

  • ಮೆಕ್ಕೆಜೋಳ/ಜೋಳದ  ಬೆಳೆಯನ್ನು ಮೆಣಸಿನಕಾಯಿ ಬೆಳೆಯ ಜೊತೆ  ಅಂತರ ಬೆಳೆಯಾಗಿ  ಬೆಳೆಸುವುದರಿಂದ ಮೆಣಸಿನಕಾಯಿ ಗಿಡಕ್ಕೆ  ನೆರಳು ಸಿಗುತ್ತದೆ ಇದರಿಂದ ಥ್ರಿಪ್ಸ್ ನುಸಿಯ   ಹಾವಳಿ ಕಡಿಮೆಯಾಗುತ್ತದೆ
  • ಜೋಳದ  ಬೆಳೆಯ  ನಂತರ ಮೆಣಸಿನಕಾಯಿ ಬೆಳೆಯುವುದನ್ನು ತಪ್ಪಿಸಿ, ಈ  ಬೇಸಾಯವು  ಥ್ರಿಪ್ಸ್ ನುಶಿ  ಹಾವಳಿಗೆ ಒಳಗಾಗುವ ದುರ್ಬಲ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ
  • ಥ್ರಿಪ್ಸ್ ನುಶಿ   ಹಾವಳಿಯನ್ನು ಕಡಿಮೆ ಮಾಡಲು ಮೆಣಸಿನಕಾಯಿ ಮತ್ತು ಈರುಳ್ಳಿಯ ಮಿಶ್ರ ಬೆಳೆಯನ್ನು ತಪ್ಪಿಸಬೇಕು
  • ಥ್ರಿಪ್ಸ್  ನುಶಿಯಿಂದ  ಆಗುವ ಹಾನಿಯನ್ನು   ಪರೀಕ್ಷಿಸಲು, ಸಸಿಗಳ ಮೇಲೆ ನೀರನ್ನು ಚಿಮುಕಿಸಿ
  • ಈ ಕೀಟಗಳು/ ನುಸಿಗಳಿಂದ ಹೆಚ್ಚು  ಬಾಧಿತ  ಮೆಣಸಿನಕಾಯಿ ಗಿಡಗಳನ್ನು  ಹೊಲದಿಂದ  ತೆಗೆದುಹಾಕಿ
  • ನೀಲಿ ಮತ್ತು ಹಳದಿ ಅಂಟು ಬಲೆಗಳನ್ನು ಅಳವಡಿಸುವದರಿಂದ ಥ್ರಿಪ್ಸ್ ನುಶಿಗಳನ್ನು ಹತೋಟಿ ಮಾಡಬಹುದು
  • ಬೆಳೆ ಹಾನಿಯನ್ನು ಮಿತಿಗೊಳಿಸಲು ಬೇವಿನ ಎಣ್ಣೆಯನ್ನು ಸಿಂಪಡಿಸಿ
  • ಚೆಂಡು ಹೂ ಮತ್ತು ಸೂರ್ಯಕಾಂತಿ ಮುಂತಾದ ಬಲೆ ಬೆಳೆಗಳನ್ನು ನೆಡುವುದು  ಮತ್ತು ಅವು ಸಂಪೂರ್ಣವಾಗಿ ಸೋಂಕಿಗೆ ಒಳಗಾದ ನಂತರ ಅವುಗಳನ್ನು ತೆಗೆದುಹಾಕುವುದರಿಂದ ಸ್ವಲ್ಪ ಮಟ್ಟಿಗೆ ಹಾನಿಯನ್ನು ಕಡಿಮೆ ಮಾಡಬಹುದು.

ETL: 6 ಥ್ರಿಪ್ಸ್ ನುಶಿ  /ಎಲೆ ಅಥವಾ 10% ಹಾನಿಗೊಳಗಾದ ಬೆಳೆ

ಮೆಣಸಿನಕಾಯಿ ಗಿಡದಲ್ಲಿ  ಥ್ರಿಪ್ಸ್ ನುಶಿ  ಕೀಟಗಳ  ನಿರ್ವಹಣೆ

ಉತ್ಪನ್ನದ ಹೆಸರು ತಾಂತ್ರಿಕ ಅಂಶ ಪ್ರಮಾಣ  (ಪ್ರತಿ ಲೀಟರ್ ನೀರಿಗೆ)
ಯಾಂತ್ರಿಕ ನಿರ್ವಹಣೆ
ಬ್ಯಾರಿಕ್ಸ್ ಮ್ಯಾಜಿಕ್ ಸ್ಟಿಕ್ಕರ್

ಕ್ರೊಮ್ಯಾಟಿಕ್ ಟ್ರ್ಯಾಪ್ ಬ್ಲೂ ಶೀಟ್ 

ಕ್ರೋಮ್ಯಾಟಿಕ್ ಟ್ರ್ಯಾಪ್ 8-10 ಶೀಟ್ಸ್ /ಎಕರೆಗೆ
ತಪಸ್ ಏಲ್ಲೋ ಸ್ಟಿಕಿ ಟ್ರ್ಯಾಪ್ 22 ಸೆಂ x 28 ಸೆಂ 6-8 ಎಕರೆಗೆ
ಜೈವಿಕ ನಿರ್ವಹಣೆ

ಕಾಯ್ಬೀ ಥ್ರಿಪ್ಸ್ ರೇಜ್ ಕೀಟನಾಶಕ

ಸಸ್ಯವಿಜ್ಞಾನದ ಸಾರಗಳು 1-2 ಮಿಲಿ / ಲೀಟರ್ ನೀರಿಗೆ
ಏಕೋ ನೀಮ್ ಪ್ಲಸ್ ಅಜಾಡಿರಾಕ್ಟಿನ್ 10000 PPM 3 ಮಿಲಿ / ಲೀಟರ್ ನೀರಿಗೆ
ಕಂಟ್ರೋಲ್ TRM ಜೈವಿಕ ಕೀಟನಾಶಕ ಸಸ್ಯವಿಜ್ಞಾನದ  ಸಾರಗಳು ಮತ್ತು ಆಲ್ಕಲಾಯ್ಡ್‌ಗಳ ಸಾವಯವ ಮಿಶ್ರಣ 1.5 – 2 ಮಿಲಿ / ಲೀಟರ್ ನೀರಿಗೆ
ರಾಸಾಯನಿಕ ನಿರ್ವಹಣೆ
ಅಕ್ಟರ ಕೀಟನಾಶಕ ಥಯಾಮೆಥಾಕ್ಸಮ್ 25 % WG 0.5 ಗ್ರಾಂ / ಲೀಟರ್ ನೀರಿಗೆ
ಡೆಲಿಗೇಟ್ ಕೀಟನಾಶಕ ಸ್ಪೈನೇಟೋರಾಮ್ 11.7% SC 0.9 ಮಿಲಿ / ಲೀಟರ್ ನೀರಿಗೆ
ಅಲಾಂಟೊ ಕೀಟನಾಶಕ ಥಯಾಕ್ಲೋಪ್ರಿಡ್ 21.7 % SC 1 – 2 ಮಿಲಿ / ಲೀಟರ್ ನೀರಿಗೆ
ಬೆನಿವಿಯ  ಕೀಟನಾಶಕ ಸೈಂಟ್ರಾನಿಲಿಪ್ರೋಲ್ 10.26% OD 1.7 ರಿಂದ 2.0 ಮಿಲಿ / ಲೀಟರ್ ನೀರಿಗೆ
ಎಕ್ಸ್ಪೋನಸ್ ಕೀಟನಾಶಕ ಬ್ರೋಫ್ಲಾನಿಲೈಡ್ 300 G/L SC 0.2 ಮಿಲಿ / ಲೀಟರ್ ನೀರಿಗೆ
ಟ್ರೇಸರ್ ಕೀಟನಾಶಕ ಸ್ಪೈನೊಸಾಡ್ 44.03% SC 0.3 – 0.4 ಮಿಲಿ / ಲೀಟರ್ ನೀರಿಗೆ
EM 1 ಕೀಟನಾಶಕ ಎಮಾಮೆಕ್ಟಿನ್ ಬೆಂಜೊಯೇಟ್ 5 % SG 0.4 ಗ್ರಾಂ / ಲೀಟರ್ ನೀರಿಗೆ
ಟಕಾಫ್ ಕೀಟನಾಶಕ ಡಯಾಫೆನ್ಥಿಯುರಾನ್ 47% ಬೈಫೆಂತ್ರಿನ್ 9.4% SC 1.25 – 1.5 ಮಿಲಿ / ಲೀಟರ್ ನೀರಿಗೆ
ಕಾತ್ಯಾಯಿನಿ Imd-178 ಕೀಟನಾಶಕ ಈಮಿಡಾಕ್ಲೋಪ್ರಿಡ್ 17.8% SL 0.5 ಮಿಲಿ / ಲೀಟರ್ ನೀರಿಗೆ
ಮೊವೆಂಟೊ ಕೀಟನಾಶಕ ಸ್ಪೈರೋಟೆಟ್ರಾಮ್ಯಾಟ್ 15.31% OD 2 ಮಿಲಿ / ಲೀಟರ್ ನೀರಿಗೆ
ಪ್ರೈಮ್ ಗೋಲ್ಡ್ ಕೀಟನಾಶಕ ಅಸೆಟಾಮಿಪ್ರಿಡ್ 20% ಎಸ್ಪಿ 0.1 – 0.2 ಗ್ರಾಂ / ಲೀಟರ್ ನೀರಿಗೆ
ಶಿಂಝೇನ್ ಪ್ಲಸ್ ಕೀಟನಾಶಕ ಫಿಪ್ರೊನಿಲ್ 5% SC 1.6 – 2 ಮಿಲಿ / ಲೀಟರ್ ನೀರಿಗೆ
ಗೋದ್ರೇಜ್ ಗ್ರೇಸಿಯಾ ಕೀಟನಾಶಕ ಫ್ಲಕ್ಸಮೆಟಮೈಡ್ 10% ಇಸಿ 1 ಮಿಲಿ / ಲೀಟರ್ ನೀರಿಗೆ ಅಥವಾ 160 ಮಿಲಿ / ಎಕರೆಗೆ
ಧನುಕ ಡಿಸೈಡ್ ಕೀಟನಾಶಕ ಎಟೋಫೆನ್‌ಪ್ರಾಕ್ಸ್ 6% + ಡಯಾಫೆನ್ಥಿಯುರಾನ್ 25% WG 2.5 ಮಿಲಿ / ಲೀಟರ್ ನೀರಿಗೆ

ಥ್ರಿಪ್ಸ್ ನುಶಿ   ಕುರಿತು ಇನ್ನಷ್ಟು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ – ಅಧಿಕ ಲಾಭಕ್ಕಾಗಿ ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಶಿಯ ನಿರ್ವಹಣೆ 

ಗಮನಿಸಿ:ಏಕಕಾಲದಲ್ಲಿ ಮೆಣಸಿನ ಬೆಳೆಯಲ್ಲಿ ಮೈಟ್ಸ್ ನುಶಿ  ಮತ್ತು ಥ್ರಿಪ್ಸ್ ನುಶಿ  ಎರಡರಿಂದಲೂ ಸೋಂಕು ತಗುಲಿದರೆ  ಬೆಳೆಗೆ ಟ್ರೇಸರ್ ಕೀಟನಾಶಕ (ಸ್ಪಿನೋಸಾಡ್) ವನ್ನು  ಸಿಂಪಡಿಸಬೇಡಿ 

ಮೆಣಸಿನ ಬೆಳೆಯಲ್ಲಿ ಮೈಟ್ಸ್ ನುಶಿ

ಹಳದಿ ಮೈಟ್ಸ್ ನುಶಿಯ  ವೈಜ್ಞಾನಿಕ ಹೆಸರು:

ಪಾಲಿಫಾಗೋಟಾರ್ಸೋನೆಮಸ್ ಲ್ಯಾಟಸ್ 

ಮೆಣಸಿನಲ್ಲಿ ಮೈಟ್ಸ್  ನುಶಿ  ಹಾವಳಿಯ  ಲಕ್ಷಣಗಳು:

  • ಮೆಣಸಿನಕಾಯಿ ಎಲೆಗಳು ಕೆಳಮುಖವಾಗಿ ಮುಟುರಾಗುತ್ತದೆ  ಮತ್ತು ಎಲೆಗಳು ಮುದುಡುತ್ತದೆ
  • ಎಲೆಗಳು ತುಂಬಾ ದುರ್ಬಲವಾಗಿರುತ್ತವೆ ಮತ್ತು ಎಲೆಗಳ ಕೆಳಭಾಗದ ಮೇಲ್ಮೈಯಲ್ಲಿ ದಪ್ಪ ಕಂದು ಬಣ್ಣದ ಕಲೆಗಳು ಕಾಣುತ್ತವೆ
  • ಬಾಧಿತ ಎಲೆಗಳು ತಲೆಕೆಳಗಾದ   ದೋಣಿಯ ಆಕಾರವನ್ನು ಪಡೆಯುತ್ತವೆ .
  • ಕೆಲವು ಸಂದರ್ಭಗಳಲ್ಲಿ, ಸೋಂಕಿತ ಎಲೆಗಳ ತೊಟ್ಟುಗಳು ಉದ್ದವಾಗುತ್ತವೆ ಮತ್ತು ಇದನ್ನು ಸಾಮಾನ್ಯವಾಗಿ “ಇಲಿ ಬಾಲ” ಲಕ್ಷಣ ಎಂದು ಕರೆಯಲಾಗುತ್ತದೆ
  • ಕೆಲವು ಸಂದರ್ಭಗಳಲ್ಲಿ, ಪೀಡಿತ  ಎಲೆಗಳು ಕಡು ಹಸಿರು ಬಣ್ಣಕ್ಕೆ ತಿರುಗುತ್ತದೆ .
  • ಬೆಳೆಯುವ ಎಳೆ ಚಿಗುರಿನ ತುದಿಗಳು  ಒಣಗುವುದು , ಮೊಗ್ಗುಗಳು ಉದುರುವುದು/ಕುಸಿಯುವುದು  ಮತ್ತು ತೀವ್ರವಾದ ಹಾನಿಯ  ಸಂದರ್ಭದಲ್ಲಿ ಎಲೆಗಳ ಆಕಾರವನ್ನು ಬದಲಿಸುತ್ತವೆ .
  • ಸಸ್ಯದ ಕುಂಠಿತ ಬೆಳವಣಿಗೆ ಮತ್ತು ಸಾವಿಗೂ  ಕಾರಣವಾಗಬಹುದು

ಮೆಣಸಿನಲ್ಲಿ ಮೈಟ್ಸ್ ನುಶಿ ಕೀಟಗಳನ್ನು  ತಡೆಗಟ್ಟುವ ಕ್ರಮಗಳು

  • ಮೆಣಸಿನಕಾಯಿ ಬೆಳೆಯಲ್ಲಿ    3 ರಿಂದ  4 ಸಾಲು ಜೋಳವನ್ನು  ಗಡಿ ಬೆಳೆಯಾಗಿ ಬೆಳೆಸಬಹುದು
  • ಬೆಳೆಗಳ ಅವಶೇಷಗಳು ಮತ್ತು ಕಳೆಗಳನ್ನು ತೆಗೆದುಹಾಕುವ ಮತ್ತು ನಾಶಪಡಿಸುವ ಮೂಲಕ ಹೊಲ ನೈರ್ಮಲ್ಯವನ್ನು ನಿರ್ವಹಿಸಿ
  • ನೀರಿನ ಒತ್ತಡವನ್ನು ತಪ್ಪಿಸಿ ಮತ್ತು ನೀರು ನಿಲ್ಲುವುದನ್ನು ತಡೆಗಟ್ಟಬೇಕು .
  • ಸೋಂಕಿತ ಎಲೆಗಳನ್ನು ಸಮಯೋಚಿತವಾಗಿ ಚಾಟನಿ ಮಾಡುವುದು  ಅಥವಾ ಪೀಡಿತ ಸಸ್ಯಗಳನ್ನು ತೆಗೆಯುವುದು
  • ತುಂತುರು ನೀರಾವರಿಯೊಂದಿಗೆ ಓವರ್ಹೆಡ್ ನೀರಾವರಿ ಅಳವಡಿಸಿಕೊಳ್ಳಿ
  • ಅತಿಯಾದ ರಾಸಾಯನಿಕಗಳ ಬಳಕೆಯನ್ನು ಕಡಿಮೆ ಮಾಡಿ
  • ದ್ವಿದಳ ಧಾನ್ಯಗಳು ಮತ್ತು ಸೌತೆಕಾಯಿಗಳಂತಹ ಆತಿಥೇಯವಲ್ಲದ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಅಳವಡಿಸಿಕೊಳ್ಳಿ
  • ಕೀಟದ ಹಾನಿಯನ್ನು   ಪತ್ತೆಹಚ್ಚಲು ನಿಯಮಿತ ಮೇಲ್ವಿಚಾರಣೆ ಮಾಡಬೇಕು
  • ಬೇವಿನ ಬೀಜಗಳ  ಸಾರ ಅಥವಾ ಬೇವಿನ ಎಣ್ಣೆಯನ್ನು 10 ದಿನಗಳ ಮಧ್ಯಂತರದಲ್ಲಿ ಸಿಂಪಡಿಸಿ
  • ನೈಸರ್ಗಿಕ ಪರಭಕ್ಷಕವಾದ ಆಂಬ್ಲೈಸಿಯಸ್ ಓವಾಲಿಸ್ ನಂತಹ ಪರಭಕ್ಷಕ ನುಸಿಗಳನ್ನು  ಬಳಸಿ

ETL: 5-10 ಮೈಟ್ಸ್ ನುಶಿಗಳು /ಒಂದು ಎಲೆಗೆ 

ಮೆಣಸಿನ ಗಿಡದಲ್ಲಿ ಮೈಟ್ಸ್ ನುಶಿಗಳ  ನಿರ್ವಹಣೆ

ಉತ್ಪನ್ನದ ಹೆಸರು ತಾಂತ್ರಿಕ ಅಂಶ ಡೋಸೇಜ್    (ಪ್ರತಿ ಲೀಟರ್ ನೀರಿಗೆ)
ಜೈವಿಕ ನಿರ್ವಹಣೆ
ಎಕೋನೀಮ್ ಜೈವಿಕ ಕೀಟನಾಶಕ ಅಜಾಡಿರಾಕ್ಟಿನ್ 3000 PPM 2.5-3 ಮಿಲಿ / ಲೀಟರ್ ನೀರಿಗೆ
ಆರ್ ಮೈಟ್ ಜೈವಿಕ ಅಖ್ಯಾರಿಸೈಡ್ ಸಸ್ಯದ ಸಾರಗಳು 1-2 ಮಿಲಿ / ಲೀಟರ್ ನೀರಿಗೆ
ಟೆರ್ರ ಮೈಟ್ ಹರ್ಬಲ್ ಫಾರ್ಮುಲೇಶನ್ 3-7 ಮಿಲಿ / ಲೀಟರ್ ನೀರಿಗೆ
ಗ್ರೀನ್ ಪೀಸ್ ನೀಮೊಲ್ (10000 PPM) ಬಯೋ ನೀಮ್ ಆಯಿಲ್ ಕೀಟನಾಶಕ ಬೇವಿನ ಎಣ್ಣೆಯ ಸಾರಗಳು (ಅಜಾಡಿರಾಕ್ಟಿನ್) 1-2 ಮಿಲಿ / ಲೀಟರ್ ನೀರಿಗೆ
ನೀಮ್ – ಅಜಾಡಿರಾಕ್ಟಿನ್ 1500 PPM (0.15%)EC-ಕೀಟನಾಶಕ ಅಜಾಡಿರಾಕ್ಟಿನ್ 1500 PPM (0.15%) EC 2-2.5 ಮಿಲಿ / ಲೀಟರ್ ನೀರಿಗೆ
ರಾಸಾಯನಿಕ ನಿರ್ವಹಣೆ
ಒಬೆರಾನ್ ಕೀಟನಾಶಕ ಸ್ಪೈರೋಮೆಸಿಫೆನ್ 240 SC (22.9% w/w) 0.3 ಮಿಲಿ / ಲೀಟರ್ ನೀರಿಗೆ
ಮೈಡೆನ್ ಕೀಟನಾಶಕ ಹೆಕ್ಸಿಥಯಾಝಾಕ್ಸ್ 5.45% EC 0.8-1 ಮಿಲಿ / ಲೀಟರ್ ನೀರಿಗೆ
ಈ ಎಂ ಏ  ಗೋಲ್ಡ್ ಕೀಟನಾಶಕ ಎಮಾಮೆಕ್ಟಿನ್ ಬೆಂಜೊಯೇಟ್ 5% SG 0.5 ಗ್ರಾಂ / ಲೀಟರ್ ನೀರಿಗೆ
ಶೋಕು ಕೀಟನಾಶಕ ಡಯಾಫೆನ್ಥಿಯುರಾನ್ 50% WP 0.8-1.2 ಮಿಲಿ / ಲೀಟರ್ ನೀರಿಗೆ
ಗೋದ್ರೇಜ್ ಹನಬಿ ಪಿರಿಡಾಬೆನ್ 20% w/w WP 1 ಗ್ರಾಂ  / ಲೀಟರ್ ನೀರಿಗೆ
ಸೇಡ್ನ ಕೀಟನಾಶಕ ಫೆನ್ಪೈರಾಕ್ಸಿಮೇಟ್ 5% SC 1-1.5 ಮಿಲಿ / ಲೀಟರ್ ನೀರಿಗೆ
ಫ್ಲೋಟಿಸ್ ಕೀಟನಾಶಕ ಬುಪ್ರೊಫೆಜಿನ್ 25% SC 0.5-1.2 ಮಿಲಿ / ಲೀಟರ್ ನೀರಿಗೆ
ಇಂಟ್ರೆಪಿಡ್   ಕೀಟನಾಶಕ ಇಂಟ್ರೆಪಿಡ್ ಕ್ಲೋರ್ಫೆನಾಪಿರ್ 10% SC 1.5-2 ಮಿಲಿ / ಲೀಟರ್ ನೀರಿಗೆ
ಕುನೋಯಿಚಿ ಮೀಟಿಸೈಡ್ ಸೈನೊಪಿರಾಫೆನ್ 30% SC 0.5-0.6 ಮಿಲಿ / ಲೀಟರ್ ನೀರಿಗೆ
ಕೀಫುನ್ ಕೀಟನಾಶಕ ಟೋಲ್ಫೆನ್‌ಪಿರಾಡ್ 15% EC 2 ಮಿಲಿ / ಲೀಟರ್ ನೀರಿಗೆ
ಓಮೈಟ್  ಕೀಟನಾಶಕ ಪ್ರೊಪಾರ್ಗೈಟ್ 57% EC 3 ಮಿಲಿ / ಲೀಟರ್ ನೀರಿಗೆ
ಮೆಯೋಥ್ರಿನ್ ಕೀಟನಾಶಕ ಫೆನ್‌ಪ್ರೊಪಾಥ್ರಿನ್ 30% EC 0.5 ಮಿಲಿ / ಲೀಟರ್ ನೀರಿಗೆ
ಮ್ಯಾಜಿಸ್ಟರ್  ಕೀಟನಾಶಕ ಮ್ಯಾಜಿಸ್ಟರ್ ಫೆನಾಜಾಕ್ವಿನ್ 10% EC 2 ಮಿಲಿ / ಲೀಟರ್ ನೀರಿಗೆ

ಹಿನ್ನುಡಿ

ಥ್ರಿಪ್ಸ್ ನುಶಿ  ಮತ್ತು ಮೈಟ್ಸ್ ನುಶಿಗಳು ಮೆಣಸಿನಕಾಯಿ ಬೆಳೆಗಳಲ್ಲಿ ಗಮನಾರ್ಹವಾಗಿ ಹಾನಿಯನ್ನು   ಉಂಟುಮಾಡುವ  ಕೀಟಗಳಾಗಿವೆ. ಮೆಣಸಿನ ಗಿಡದ   ಇಳುವರಿ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು, ರೋಗ ಹರಡುವ ಅಪಾಯವನ್ನು ಕಡಿಮೆ ಮಾಡಲು ಮತ್ತು ಕೀಟ ಹಾನಿಯಿಂದ  ಆರ್ಥಿಕ ಪರಿಣಾಮವನ್ನು ಕಡಿಮೆ ಮಾಡಲು ಈ ಕೀಟಗಳ ಪರಿಣಾಮಕಾರಿ ನಿರ್ವಹಣೆ ಮುಖ್ಯವಾಗಿದೆ. ಸಮಗ್ರ ಕೀಟ ನಿರ್ವಹಣೆ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದರಿಂದ ಈ ಕೀಟಗಳಿಂದ ಆಗುವ ಹಾನಿಯನ್ನು   ನಿರ್ವಹಿಸಲು ಮತ್ತು ಮೆಣಸಿನ ಬೆಳೆಗಳಲ್ಲಿ ಈ ಕೀಟಗಳಿಂದ ಉಂಟಾಗುವ ಇಳುವರಿ ನಷ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 

ಗಮನಿಸಿ:

  • ಆರ್ಥಿಕ ಮಿತಿ ಮಟ್ಟ (ETL) – ಇದು ಹೆಚ್ಚುತ್ತಿರುವ ಕೀಟಗಳ ಸಂಖ್ಯೆಯನ್ನು ತಡೆಗಟ್ಟಲು ಹಾಗು  ನಿಯಂತ್ರಣ ಕ್ರಮಗಳನ್ನು ನಿರ್ಧರಿಸುವ ಸಾಂದ್ರತೆಯಾಗಿದೆ.
  • ಕ್ಷೇತ್ರದಲ್ಲಿ ETL ಮಟ್ಟವನ್ನು ಪರಿಶೀಲಿಸುವ ಮೂಲಕ, ಮೇಲೆ ತಿಳಿಸಿದ ಕೀಟ ನಿರ್ವಹಣೆ ವಿಧಾನಗಳನ್ನು ತೆಗೆದುಕೊಳ್ಳಬಹುದು. ಕೀಟಗಳನ್ನೂ  ನಿಯಂತ್ರಿಸಲು, ದಾಳಿಯ  ಅಪಾಯವನ್ನು ಕಡಿಮೆ ಮಾಡಲು ಮತ್ತು ಭವಿಷ್ಯದಲ್ಲಿ ಬೆಳೆ ನಷ್ಟವನ್ನು ಕಡಿಮೆ ಮಾಡಲು ಈ ಪದ್ದತಿಯನ್ನು ಅನುಸರಿಸಿ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025