Crop

ಸೌತೆಕಾಯಿ ಬೆಳೆಯಲ್ಲಿ ಉತ್ತಮ ಇಳುವರಿಯನ್ನು ಪಡೆಯಲು ಕೃಷಿ ಪದ್ದತಿಗಳು

ಸೌತೆಕಾಯಿಯ ವೈಜ್ಞಾನಿಕ ಹೆಸರು ಕುಕ್ಯುಮಿಸ್ ಸ್ಯಾಟಿವಸ್. ಇದು ಬಳ್ಳಿ ಜಾತಿಯ ತರಕಾರಿ ಬೆಳೆಯಾಗಿದ್ದು, ಇದನ್ನು ಭಾರತದಲ್ಲಿ ಬೇಸಿಗೆಯ ತರಕಾರಿಯಾಗಿ ಬಳಸಲಾಗುತ್ತದೆ. ಸೌತೆಕಾಯಿಯನ್ನು  ಹಸಿಯಾಗಿ ತಿನ್ನಲಾಗುತ್ತದೆ ಅಥವಾ ಸಲಾಡ್ ಆಗಿ ಬಡಿಸಲಾಗುತ್ತದೆ ಅಥವಾ ತರಕಾರಿಯಾಗಿ ಬಳಸಲಾಗುತ್ತದೆ. 

ಸೌತೆಕಾಯಿಗಳು 96% ನೀರನ್ನು ಹೊಂದಿರುತ್ತವೆ, ಇದು ಬೇಸಿಗೆಯಲ್ಲಿ ಒಳ್ಳೆಯದು. ಸಸ್ಯಗಳು ದೊಡ್ಡದಾಗಿರುತ್ತವೆ, ಎಲೆಗಳು ರೋಮದಿಂದ ಕೂಡಿರುತ್ತವೆ ಮತ್ತು ತ್ರಿಕೋನ ಆಕಾರದಲ್ಲಿರುತ್ತವೆ ಮತ್ತು ಹೂವುಗಳು ಹಳದಿ ಬಣ್ಣದಲ್ಲಿರುತ್ತವೆ. 

ಸೌತೆಕಾಯಿ Mb (ಮಾಲಿಬ್ಡಿನಮ್) ಮತ್ತು ವಿಟಮಿನ್ ಕೆ ಯ ಅತ್ಯುತ್ತಮ ಮೂಲವಾಗಿದೆ. ಸೌತೆಕಾಯಿಯನ್ನು ಚರ್ಮದ ಸಮಸ್ಯೆಗಳು, ಮೂತ್ರಪಿಂಡ ಮತ್ತು ಹೃದಯದ ಸಮಸ್ಯೆಗಳನ್ನು ಗುಣಪಡಿಸಲು ಬಳಸಲಾಗುತ್ತದೆ. 

ಸೂಕ್ತವಾದ ಮಣ್ಣು :

  1. ಸೌತೆಕಾಯಿ ಬೆಳೆ ಎಲ್ಲ ರೀತಿಯ ಮಣ್ಣುಗಳಲ್ಲಿ ಬೆಳೆಯುತ್ತದೆ. ಲಘು ಮರಳು ಮಿಶ್ರಿತ ಗೋಡುಮಣ್ಣಿನಿಂದ ಹಿಡಿದು ಘನವಾದ ಜೇಡಿಮಣ್ಣಿನವರೆಗೆ ಬೆಳೆಯುತ್ತದೆ.
  2. ಚೆನ್ನಾಗಿ ನೀರು ಬಸಿದು ಹೋಗುವ ಮಣ್ಣು ಸೌತೆಕಾಯಿ ಬೆಳೆಗೆ ಸೂಕ್ತ.
  3. ಮಣ್ಣಿನ ರಸಸಾರತೆ 5.8 ರಿಂದ 7.5 ಇದ್ದಲ್ಲಿ ಸೌತೆಕಾಯಿ ಹುಲುಸಾಗಿ ಬೆಳೆಯುತ್ತದೆ.

ಬೆಳೆಗೆ ತಕ್ಕ ಹವಾಮಾನ

  1. 25 ರಿಂದ 35 °C ಉಷ್ಣಾಂಶವಿರುವ ವಾತಾವರಣದಲ್ಲಿ ಸೌತೆಕಾಯಿ ಸೊಗಸಾಗಿ ಬೆಳೆಯುತ್ತದೆ.
  2. 25 °C ಉಷ್ಣಾಂಷದಲ್ಲಿ ಸೌತೆಕಾಯಿ ಬೀಜಗಳು ಉತ್ತಮವಾಗಿ ಮೊಳಕೆಯೊಡುತ್ತವೆ.
  3. ಹೆಚ್ಚಿನ ಉಷ್ಣಾಂಶ, ಸೂರ್ಯನ ಕಿರಣಗಳ ಪ್ರಖರತೆ ಹೂವು ಮತ್ತು ಕಾಯಿ ಕಚ್ಚುವುದರ ಹಾಗೂ ಸೌತೆಕಾಯಿಯ ಪೌಷ್ಠಿಕಾಂಶದ ಮೇಲೆ ಪರಿಣಾಮ ಬೀರುತ್ತದೆ.
  4. ಹೆಚ್ಚಿನ ಕಾಲ ಒಣ ವಾತಾವರಣವಿದ್ದಲ್ಲಿ ಅಥವಾ ಹೆಚ್ಚಿನ ಮಳೆ ಆದಲ್ಲಿ ಕಾಯಿ ಬೆಳವಣಿಗೆಗೆ ಹಾನಿಯಾಗುತ್ತದೆ/ಕುಗ್ಗುತ್ತದೆ .

ಭೂಮಿ ತಯಾರಿಯನ್ನು ಹೇಗೆ ಮಾಡುವುದು ????

ಪ್ರತಿ ಎಕರೆಗೆ 10-12 ಟನ್ ಕೊಟ್ಟಿಗೆ ಗೊಬ್ಬರ + ಜೈವಿಕ ಗೊಬ್ಬರ 5 ಕೆ.ಜಿ + ಟ್ರೈಕೋಡರ್ಮಾ 2 ಕೆ.ಜಿ + ಸುಡೋಮೊನಾಸ್ 2 ಕೆ.ಜಿ ಮಿಶ್ರಣ ಮಾಡಿ ಐದು ದಿನಗಳ ಕಾಲ ನೆರಳಿನಲ್ಲಿಟ್ಟು ಭೂಮಿಗೆ ಕೊಡಬೇಕು. ಹೀಗೆ ಪುಷ್ಟೀಕರಿಸಿದ ಗೊಬ್ಬರ ಕೊಟ್ಟ ನಂತರ ಗೊಬ್ಬರವು ಪೂರ್ಣವಾಗಿ ಮಣ್ಣಿನಲ್ಲಿ ಬೆರೆಯುವಂತೆ ಉಳುಮೆ ಮಾಡಬೇಕು ಅಥವಾ ರೋಟೋವೇಟರ್ ಹೊಡೆಯಬೇಕು. 

ಕೊಟ್ಟಿಗೆ ಗೊಬ್ಬರ ಕೊಡುವುದರಿಂದ ಮಣ್ಣಿನ ರಚನೆ, ವಿನ್ಯಾಸ ವೃದ್ಧಿಯಾಗುತ್ತದೆ. ಭೂಮಿಯಲ್ಲಿ ಸಾವಯವ ಇಂಗಾಲ ಹೆಚ್ಚಾಗುತ್ತದೆ, ಮಣ್ಣಿನಲ್ಲಿ ರಂಧ್ರಗಳು ಹೆಚ್ಚಾಗಿ ಗಾಳಿಯಾಡಲು ಅನುಕೂಲವಾಗುತ್ತದೆ ಅಲ್ಲದೆ ಮಣ್ಣಿನಲ್ಲಿ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹೆಚ್ಚಾಗಿ ಮಣ್ಣಿನ ರಸಸಾರತೆ ಹಾಗೂ ವಿದ್ಯುತ್ ವಾಹಕತೆಯನ್ನು ವಿದ್ಯುತ್ ವಾಹಕತೆ (ಎಲೆಕ್ಟ್ರಿಕಲ್ ಕಂಡಕ್ಟಿವಿಟಿ (E C ) )  ಸಮತೋಲನದಲ್ಲಿರುತ್ತದೆ. ಗೊಬ್ಬರದೊಂದಿಗೆ ಬೆರೆಸಿರುವ  ಟ್ರೈಕೋಡರ್ಮಾ ಹಾಗೂ ಸುಡೋಮೊನಾಸ್ ಮಣ್ಣಿನಲ್ಲಿರುವ ರೋಗಕಾರಕಗಳನ್ನು ಕೊಲ್ಲುತ್ತವೆ. 

ಪ್ರತಿ ಎಕರೆಗೆ ಅಗತ್ಯವಾಗಿ ಬೇಕಾಗಿರುವ ರಸಗೊಬ್ಬರಗಳು

ಸೌತೆಕಾಯಿ ಬೆಳೆಗೆ 25: 50:50: N: P: K ಕೆಜಿ/ ಎಕರೆಗೆ ರಸ ಗೊಬ್ಬರಗಳನ್ನು ನೀಡಬೇಕು. 

ಬೀಜ ಬಿತ್ತನೆ ಮಾಡುವುದು  ಹಾಗು ಬೀಜೋಪಚಾರ :

   ಗುಣಿಗಳನ್ನು ತೆಗೆಯುವುದು ಅಥವಾ ದಿಂಡುಗಳು ಹಾಗೂ ಉಕ್ಕೆ ಸಾಲುಗಳು ಮಾಡಿಕೊಳ್ಳುವುದು   ಅಥವಾ ಸೂಕ್ತ ಅಂತರ ಕೊಟ್ಟು ಗುಣಿಗಳನ್ನು ಮಾಡಿಕೊಂಡು, ಅಗತ್ಯವಿದ್ದಲ್ಲಿ ಹನಿ ನೀರಾವರಿ    ಪೈಪುಗಳನ್ನು ಅಳವಡಿಸುವುದು ಮತ್ತು ಮುಚ್ಚುಗೆ ಹಾಳೆಯನ್ನು ಹಾಸಿಕೊಳ್ಳುವುದು. 

ಬೀಜಗಳನ್ನು ಬಿತ್ತನೆಗೆ ಮುನ್ನ 1-2 ಗಂಟೆ ನೆನೆಸಿಡಬೇಕು. ಬಿತ್ತನೆಗೆ ಮುನ್ನ ಬೀಜಗಳನ್ನು ಮೆಟಾಲ್ಯಾಕ್ಸಿಲ್ 35% 1 ಗ್ರಾಂ ನಿಂದ ಪ್ರತಿ ನೂರು ಗ್ರಾಂ ಬೀಜಗಳನ್ನು ಉಪಚರಿಸಬೇಕು. ೦.5 ಇಂಚು ಆಳದಲ್ಲಿ ಬೀಜ ಬಿತ್ತನೆ ಮಾಡಿ ಮೇಲ್ಮಣ್ಣಿನಿಂದ ಬೀಜಗಳನ್ನು ಮುಚ್ಚಿ. 

ಸಸಿಗಳ ನಡುವೆ ನೀಡಬೇಕಾದ ಅಂತರ

ಸಾಮಾನ್ಯವಾಗಿ ಸೌತೆಕಾಯಿ ಬೆಳೆಯಲು ರೈತರು ನೀಡುವ ಅಂತರ ಹೀಗಿದೆ.

  1. ಸಸಿಯಿಂದ ಸಸಿಗೆ 2.5 ಅಡಿ ಸಾಲಿನಿಂದ ಸಾಲಿಗೆ 3.5 ಅಡಿ – ಇದಕ್ಕೆ 5000 ಸಸ್ಯಗಳು ಅಥವಾ ಬೀಜಗಳ ಅಗತ್ಯ ಬರುತ್ತದೆ.
  2. ಬೀಜದಿಂದ ಬೀಜಕ್ಕೆ 3.0 ಅಡಿ. ಸಾಲಿನಿಂದ ಸಾಲಿಗೆ 4.0 ಅಡಿ- ಇದಕ್ಕೆ 3700 ಸಸಿಗಳು ಅಥವಾ ಬೀಜಗಳು ಅಗತ್ಯ.
  3. ಸಸಿಯಿಂದ ಸಸಿಗೆ 3.5 ಅಡಿ ಸಾಲಿನಿಂದ ಸಾಲಿಗೆ x 4.5 ಅಡಿ- ಈ ಅಂತರಕ್ಕೆ  2765 ಸಸಿಗಳು/ಬೀಜಗಳು ಅಗತ್ಯ.

ಕಳೆಗಳ  ನಿಯಂತ್ರಣವನ್ನು ಹೇಗೆ ಮಾಡಬೇಕು:

150 ಲೀಟರ್ ನೀರಿಗೆ 1.6 ಲೀಟರ್ ಗ್ಲೈಫೋಸೇಟ್ ಬಳಸಿ ,ರಾಸಾಯನಿಕವಾಗಿಯೂ ಸಹ ನಿಯಂತ್ರಿಸಬಹುದು.  ಗ್ಲೈಫೋಸೇಟ್ ಅನ್ನು ಕಳೆಗಳ ಮೇಲೆ ಎರಡು ಮೂರು ಎಲೆಗಳ ಹಂತದಲ್ಲಿ ಮಾತ್ರ ಬಳಸಬೇಕು. ಕೈಯಿಂದ ಗುದ್ದಲಿಯಿಂದ ಕಳೆ ಕೀಳುವ ಮೂಲಕ ನಿಯಂತ್ರಿಸಬಹುದು. 

ನೀರಾವರಿ:

ಬೇಸಿಗೆಯಲ್ಲಿ ಇದಕ್ಕೆ  ನೀರಾವರಿ ಅಗತ್ಯವಿರುತ್ತದೆ ಮತ್ತು ಮಳೆಗಾಲದಲ್ಲಿ ಯಾವುದೇ ನೀರಾವರಿ ಅಗತ್ಯವಿರುವುದಿಲ್ಲ. ಒಟ್ಟಾರೆಯಾಗಿ 10-12 ಬಾರಿ ನೀರಾವರಿಯ  ಅಗತ್ಯವಿದೆ. ಬಿತ್ತನೆ ಮಾಡುವ ಮೊದಲು ನೀರಾವರಿ ಅಗತ್ಯವಿರುತ್ತದೆ .ಬಿತ್ತನೆಯ 2-3 ದಿನಗಳ ನಂತರ ನಂತರದ ನೀರಾವರಿ ಅಗತ್ಯವಿರುತ್ತದೆ. ಎರಡನೇ ಬಿತ್ತನೆಯ ನಂತರ, ಬೆಳೆಗಳಿಗೆ 4-5 ದಿನಗಳ ಮಧ್ಯಂತರದಲ್ಲಿ ನೀರಾವರಿ ಮಾಡಲಾಗುತ್ತದೆ. ಈ ಬೆಳೆಗೆ ಹನಿ ನೀರಾವರಿ ಬಹಳ ಉಪಯುಕ್ತ.

ಕೀಟ ಮತ್ತು ಅವುಗಳ ನಿಯಂತ್ರಣ:

ಹಣ್ಣಿನ ನೊಣ: ಇದು ಸೌತೆಕಾಯಿಯಲ್ಲಿ ಕಂಡುಬರುವ ಗಂಭೀರ ಕೀಟವಾಗಿದೆ. ಹಣ್ಣು ನೊಣಗಳು ಎಳೆಯ ಹಣ್ಣುಗಳ ಕೆಳಗೆ ಮೊಟ್ಟೆಗಳನ್ನು ಇಡುತ್ತವೆ. ನಂತರ ಹುಳುಗಳು ತಿರುಳನ್ನು ತಿನ್ನುತ್ತವೆ ನಂತರ ಹಣ್ಣುಗಳು ಕೊಳೆಯಲು ಪ್ರಾರಂಭಿಸುತ್ತವೆ ಮತ್ತು ಬೀಳುತ್ತವೆ.

ನಿಯಂತ್ರಣ : ಹಣ್ಣು ನೊಣದಿಂದ ಬೆಳೆಯನ್ನು ಗುಣಪಡಿಸಲು ಬೇವಿನ ಎಣ್ಣೆ @3.0% ಅನ್ನು ಎಲೆಗಳ ಮೇಲೆ ಹಾಕಲಾಗುತ್ತದೆ.  

ಕೊಯ್ಲು:

ಸೌತೆಕಾಯಿ ಬಿತ್ತನೆ ಮಾಡಿದ 40-50 ದಿನಗಳಲ್ಲಿ ಕೊಯ್ಲು  ಬರುತ್ತದೆ. ಕಾಯಿ ಹಸಿರಿದ್ದಾಗ ,ಎಳೆಯ ಕಾಯಿಗಳನ್ನು ಕಟಾವು ಮಾಡಲಾಗುವುದು.  ಸಂಜೆಯ ವೇಳೆ ಕೊಯ್ಲು  ಮಾಡುವುದು ಉತ್ತಮ, ಇಲದಿದ್ದಲ್ಲಿ  ಕಾಯಿಗಳಲ್ಲಿ ನೀರಿನ ಅಂಶ (ನಿರ್ಜಲೀಕರಣ) ಕಡಿಮೆಯಾಗುತ್ತದೆ. ಮುಖ್ಯವಾಗಿ 10-12 ಕಟಾವು ಮಾಡಬಹುದು. ಹರಿತವಾದ ಚಾಕು ಅಥವಾ ಯಾವುದೇ ಚೂಪಾದ ವಸ್ತುವಿನ ಸಹಾಯದಿಂದ ಕೊಯ್ಲು ಮಾಡಲಾಗುತ್ತದೆ. ಇದು ಸರಾಸರಿ 33-42 ಕ್ವಿಂಟಲ್ /  ಎಕರೆಗೆ ಇಳುವರಿಯನ್ನು  ನೀಡುತ್ತದೆ.

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024