ಭಾರತವು ಪ್ರಮುಖ ವಾಣಿಜ್ಯ ಬೆಳೆಯಾನ್ನಾಗಿ ಹತ್ತಿಯನ್ನು ಹೆಚ್ಚಾಗಿ ಅವಲಂಬಿಸಿದೆ. ಅದರಲ್ಲೂ ಹತ್ತಿಯ ಆರಂಭಿಕ ಹಂತದಲ್ಲಿ ಅದರ ನಿಧಾನ ಬೆಳವಣಿಗೆ ಮತ್ತು ಸಾಲಿಂದ ಸಾಲಿನ ಅಂತರವು ವಿವಿಧ ಕಳೆಗಳು ಬೆಳೆಯಲು ಮತ್ತು ಅವುಗಳು ನೀರು ಮತ್ತು ಪೋಷಕಾಂಶಗಳಿಗೆ ಹತ್ತಿಯ ಜೊತೆ ಸ್ಪರ್ಧಿಸಲು ಅವಕಾಶ ಮಾಡಿಕೊಡುತ್ತದೆ, ಕಳೆಗಳ ಬೆಳೆವಣಿಗೆ ಹತ್ತಿಯ ಬೆಳವಣಿಗೆಯನ್ನು ತಡೆಯುತ್ತದೆ ಮತ್ತು ಬೆಳೆಯ ಇಳುವರಿಯನ್ನು ಕಡಿಮೆ ಮಾಡುತ್ತದೆ. ಕಳೆಗಳನ್ನು ತಡೆಯದೆ ಹೋದರೆ, ಅವು ಸುಮಾರು 50 – 85% ನಷ್ಟು ಇಳುವರಿ ನಷ್ಟವನ್ನು ಉಂಟುಮಾಡಬಹುದು. ಈ ಸಮಸ್ಯೆಯನ್ನು ಪರಿಹರಿಸಲು, ಭೌತಿಕ, ಯಾಂತ್ರಿಕ, ಸಾಂಸ್ಕೃತಿಕ ಮತ್ತು ರಾಸಾಯನಿಕ ಕ್ರಮಗಳನ್ನು ಒಳಗೊಂಡಂತೆ ಸಮಗ್ರ ಕಳೆ ನಿರ್ವಹಣೆ ತಂತ್ರಗಳ ಮೂಲಕ ಪರಿಣಾಮಕಾರಿ ಕಳೆ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಬಹುದು.
ಹತ್ತಿ ಹೊಲಗಳ ಕಳೆಗಳನ್ನು ಎರಡು ಮುಖ್ಯ ವರ್ಗಗಳಾಗಿ ವಿಂಗಡಿಸಬಹುದು : ಹುಲ್ಲು ಕಳೆಗಳು ಮತ್ತು ಅಗಲ ಎಲೆಗಳ ಕಳೆಗಳು. ಹುಲ್ಲಿನ ಕಳೆಗಳು ಸಾಮಾನ್ಯವಾಗಿ ಉದ್ದವಾದ, ಕಿರಿದಾದ ಎಲೆಗಳನ್ನು ಸಮಾನಾಂತರ-ನರಗಳನ್ನು ಹೊಂದಿರುತ್ತವೆ, ಆದರೆ ವಿಶಾಲ-ಎಲೆಗಳ ಕಳೆಗಳು ಅಗಲವಾದ ಎಲೆಗಳನ್ನು ಹೊಂದಿರುತ್ತವೆ, ಅವುಗಳು ಸಾಮಾನ್ಯವಾಗಿ ಕವಲೊಡೆಯುವ ಅಭಿಧಮನಿಯನ್ನು ಹೊಂದಿರುತ್ತವೆ.
ಕಳೆಗಳ ವಿಧ | ಹತ್ತಿ ಹೊಲದಲ್ಲಿನ ಸಾಮಾನ್ಯ ಕಳೆಗಳು |
ಹುಲ್ಲಿನ ಕಳೆಗಳು | ಸೈನೊಡಾನ್ ಡ್ಯಾಕ್ಟಿಲಾನ್, ಎಕಿನೋಕ್ಲೋವಾ ಕ್ರುಸ್ಗಲ್ಲಿ, ಡಾಕ್ಟಿಲೋಕ್ಟೇನಿಯಮ್ ಈಜಿಪ್ಟಿಕಮ್, ಸೈಪರಸ್ ಡಿಫಾರ್ಮಿಸ್, ಸೈಪರಸ್ ರೋಟಂಡಸ್, ಡೈನೆಬ್ರಾ ರೆಟ್ರೋಫ್ಲೆಕ್ಸಾ |
ಅಗಲವಾದ ಎಲೆಗಳಿರುವ ಕಳೆಗಳು | ಅಮರಂಥಸ್ ವಿರಿಡಿಸ್, ಚೆನೊಪೊಡಿಯಮ್ ಆಲ್ಬಮ್, ಕಮೆಲಿನಾ ಬೆಂಗಾಲೆನ್ಸಿಸ್, ಯುಫೋರ್ಬಿಯಾ ಹಿರ್ಟಾ, ಪಾರ್ಥೇನಿಯಮ್ ಹಿಸ್ಟರೋಫರಸ್, ಟ್ರಿಯಾಂಥೆಮಾ ಪೋರ್ಟುಲಾಕಾಸ್ಟ್ರಮ್, ಡಿಗೇರಾ ಎಸ್ಪಿಪಿ |
ಹೊಲದಲ್ಲಿನ ಕಳೆಗಳ ಸಂಖ್ಯೆಯನ್ನು ಕಡಿಮೆ ಮಾಡಲು ಗುದ್ದಲಿ ಅಥವಾ ಕುಡಗೋಲು ಬಳಸಿ ಕೈಯಿಂದ ಕಳೆ ಕೀಳುವುದು ಮುಖ್ಯ. ಕಳೆ ಉತ್ಭವಿಸುವುದಕ್ಕೂ ಮುನ್ನ ಸಿಂಪಡಿಸಬಹುದಾದ ಕಳೆನಾಶಕವನ್ನು ಬಿತ್ತನೆ ಮಾಡಿದ 45 ದಿನಗಳ ನಂತರದಲ್ಲಿ ಕೈ ಕಳೆ ಮಾಡಬೇಕು. ಬಿತ್ತನೆಯ ಸಮಯದಲ್ಲಿ ಯಾವುದೇ (ಪ್ರೀಎಮೆರ್ಜೆಂಟ್) ಕಳೆ ಹುಟ್ಟುವ ಮುನ್ನ ಕಳೆನಾಶಕವನ್ನು ಸಿಂಪಡಿಸದಿದ್ದರೆ ಬಿತ್ತನೆ ಮಾಡಿದ 18 – 20 ದಿನಗಳ ಅಂತರದಲ್ಲಿ ಎರಡು ಕೈ ಕಳೆ ಮಾಡಬೇಕು ಮತ್ತು ಇನ್ನೊಂದು ಬಾರಿ 45 ದಿನಗಳ ಅಂತರದಲ್ಲಿ ಸಿಂಪಡಿಸಬೇಕು ಅಥವಾ ಕಳೆಗಳನ್ನು ತೆಗೆದುಹಾಕಲು ಬೆಳೆ ಸಾಲುಗಳ ನಡುವೆ ಬಿತ್ತನೆ ಮಾಡಿದ 20-25 ದಿನಗಳ ನಂತರದಲ್ಲಿ ಮತ್ತು 45-50 ದಿನಗಳ ಅಂತರದಲ್ಲಿ ಬ್ಲೇಡ್ ಹ್ಯಾರೋಗಳನ್ನು ಹೊಲದಲ್ಲಿ ಚಲಾಯಿಸಬಹುದು.
ಕಳೆಗಳ ವಿಧಗಳನ್ನು ತಿಳಿದುಕೊಳ್ಳುವುದು, ಅಂದರೆ, ಹತ್ತಿ ಹೊಲಗಳಲ್ಲಿ ಇರುವ ಹುಲ್ಲಿನ ಕಳೆ ಅಥವಾ ವಿಶಾಲ-ಎಲೆಗಳ ಕಳೆಗಳ ಬಗ್ಗೆ ಅರಿಯುವುದರಿಂದ ರೈತರಿಗೆ ಪ್ರಸ್ತುತ ತಮ್ಮ ಹೊಲದಲ್ಲಿರುವ ನಿರ್ದಿಷ್ಟ ಕಳೆಗಳ ಅನುಗುಣವಾಗಿ ಹೆಚ್ಚು ಪರಿಣಾಮಕಾರಿ ಕಳೆ ನಿರ್ವಹಣಾ ತಂತ್ರಗಳನ್ನು ಅಳವಡಿಸಲು ಸಹಾಯ ಮಾಡುತ್ತದೆ.
ಹತ್ತಿ ಹೊಲಗಳಲ್ಲಿ ಕಳೆಗಳನ್ನು ನಿಯಂತ್ರಿಸಲು ಕಳೆನಾಶಕವನ್ನು ಕಳೆಗಳು ಹೊರಹೊಮ್ಮುವ ಮೊದಲು ಅಥವಾ ನಂತರ ಸಿಂಪಡಿಸಬಹುದು. ಕಳೆ ಜಾತಿ ಮತ್ತು ಬೆಳೆ ಹಂತವನ್ನು ಆಧರಿಸಿ ಸೂಕ್ತವಾದ ಕಳೆನಾಶಕವನ್ನು ಆಯ್ಕೆ ಮಾಡಲು ಕಾಳಜಿ ವಹಿಸಬೇಕು. ಹತ್ತಿ ಹೊಲಗಳಲ್ಲಿ ಕಳೆ ನಿಯಂತ್ರಣಕ್ಕೆ ನಿರ್ಣಾಯಕ ಅವಧಿಯು ಮೊದಲ 45 ದಿನಗಳು. ನಿರ್ದಿಷ್ಟ ಕಳೆಗಳನ್ನು ಗುರಿಯಾಗಿಸಲು ಆಯ್ದ ಸಸ್ಯನಾಶಕಗಳನ್ನು ಬಳಸಿ ಗುರಿಯಿಲ್ಲದ ಜಾತಿಗಳಿಗೆ ಮತ್ತು ಸುತ್ತಮುತ್ತಲಿನ ಪರಿಸರಕ್ಕೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡಿ.
ಬಿತ್ತಿದ ಮೂರು ದಿನಗಳ ನಂತರ ಪ್ರತಿ ಎಕರೆಗೆ 1.2 ಲೀಟರ್ ಅಥವಾ 6 ಎಂಎಲ್ ಪ್ರತೀ ಲೀಟರ್ ನೀರಿನಲ್ಲಿ ಪೆಂಡಿಮೆಥಾಲಿನ್ 30% ಇಸಿ ಕಳೆನಾಶಕವನ್ನು ಬೆರೆಸಿ ಸಿಂಪಡಿಸಬೇಕು. ಇದು ಹುಲ್ಲು ಮತ್ತು ಅಗಲವಾದ ಎಲೆಗಳಿರುವ ಕಳೆಗಳೆರಡನ್ನೂ ಕೊಲ್ಲುತ್ತದೆ, ಹೀಗಾಗಿ ಬೆಳೆಗಳನ್ನು ಆರಂಭಿಕ ಮತ್ತು ನಿರ್ಣಾಯಕ ದಿನಗಳಲ್ಲಿ ರಕ್ಷಿಸುತ್ತದೆ.
ಸಿಂಪಡಿಸುವ ಸಮಯ – ಬಿತ್ತನೆ ಮಾಡಿದ 15 – 30 ದಿನಗಳ ನಂತರ ಅಥವಾ 2 – 4 ಎಲೆಗಳ ಕಳೆ ಹಂತದಲ್ಲಿ ಅಂತರ-ಸಾಲು ಕಳೆನಾಶಕ ಸಿಂಪಡಣೆ ಮಾಡಬೇಕು.
ಉತ್ಪನ್ನದ ಹೆಸರು | ತಾಂತ್ರಿಕ ವಿಷಯ | ಬಳಸುವ ಪ್ರಮಾಣ | ಇದು ನಿಯಂತ್ರಿಸಬಲ್ಲ ಕಳೆಗಳ ವಿಧ |
ಅಜಿಲ್ ಸಸ್ಯನಾಶಕ | ಪ್ರೊಪಾಕ್ವಿಜಾಫಾಪ್ 10% ಇಸಿ | 2 ಮಿಲಿ/ಲೀಟರ್ ನೀರು | ಹುಲ್ಲು ಕಳೆಗಳು |
ಡೊಝೋ ಮ್ಯಾಕ್ಸ್ | ಪೈರಿಥಿಯೋಬಾಕ್ ಸೋಡಿಯಂ 6% + ಕ್ವಿಜಾಲೋಫಾಪ್ ಈಥೈಲ್ 4% ಎಂಈಸಿ | 2 ಮಿಲಿ/ಲೀಟರ್ ನೀರು | ಅಗಲ ಮತ್ತು ಕಿರಿದಾದ ಎಲೆಗಳಿರುವ ಕಳೆಗಳು |
ಟಾರ್ಗಾ ಸೂಪರ್ | ಕ್ವಿಜಾಲೋಫಾಪ್ ಇಥೈಲ್ 5% ಇಸಿ | 2 ಮಿಲಿ/ಲೀಟರ್ ನೀರು | ಹುಲ್ಲು ಕಳೆಗಳು |
ರ್ಯುಸಿಎ ಕಳೆನಾಶಕ | |||
ಹಿಟ್ವೀಡ್ ಸಸ್ಯನಾಶಕ | ಪೈರಿಥಿಯೊಬಾಕ್ ಸೋಡಿಯಂ 10% ಇ ಸಿ | 1 ಮಿಲಿ/ಲೀಟರ್ ನೀರು | ಅಗಲವಾದ ಎಲೆಗಳ ಕಳೆಗಳು |
ವಿಪ್ ಸೂಪರ್ ಸಸ್ಯನಾಶಕ | ಫೆನೊಕ್ಸಾಪ್ರೋಪ್ – ಪಿ ಈಥೈಲ್ 9.3 % ಇ ಸಿ | 1.5 ಮಿಲಿ/ಲೀಟರ್ ನೀರು | ಹುಲ್ಲು ಕಳೆಗಳು |
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…