ಹೆಸರುಕಾಳು, ಭಾರತದ ಪ್ರಮುಖ ಬೇಳೆಕಾಳು ಬೆಳೆಗಳಲ್ಲಿ ಒಂದಾಗಿದೆ. ಇದು ಫೈಬರ್ ಮತ್ತು ಕಬ್ಬಿಣದ ಜೊತೆಗೆ ಪ್ರೋಟೀನ್‌ನ ಸಮೃದ್ಧ ಮೂಲವಾಗಿದೆ. ಇದನ್ನು ಹಿಂಗಾರು ಮತ್ತು ಮುಂಗಾರು ಬೆಳೆಯಾಗಿ ಬೆಳೆಯಬಹುದು.ಇದನ್ನು ಇಂಗ್ಲಿಷ್ನಲ್ಲಿ ಮೂಂಗ್ ದಾಲ್ ಎಂದು ಕರೆಯುತ್ತಾರೆ. ನಂತರ ಇದು ಚೀನಾ ಮತ್ತು ಆಗ್ನೇಯ ಏಷ್ಯಾದ ವಿವಿಧ ಭಾಗಗಳಿಗೆ ಹರಡಿತು.
ಹೆಸರು ಕಾಳುಗಳು ಭಾರತದ ಹಲವಾರು ಪ್ರಾದೇಶಿಕ ಪಾಕಪದ್ಧತಿಗಳಲ್ಲಿ ಬಳಸುವ ಪ್ರಧಾನ ಪದಾರ್ಥವಾಗಿದೆ. ಇದು ನಿಮಗೆ ಸಾಕಷ್ಟು ಪ್ರಮಾಣದ ಪೋಷಕಾಂಶಗಳನ್ನು ಒದಗಿಸುತ್ತದೆ. ಇದನ್ನು ಹಲವಾರು ವಿಧಾನಗಳಲ್ಲಿ ಭಾರತೀಯರು ತಮ್ಮ ದೈನಂದಿನ ಜೀವನದಲ್ಲಿ ಬಳಸುತ್ತಾರೆ. ಇದು ಅದ್ಭುತ ಆರೋಗ್ಯ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ.
ಇದನ್ನು ಎಲ್ಲಾ ರೀತಿಯ ಮಣ್ಣಿನಲ್ಲಿ ಬೆಳೆಸಬಹುದು. ಚೆನ್ನಾಗಿ ಬಸಿದ ಜೇಡಿ ಮರಳು ಮಿಶ್ರಿತ ಮಣ್ಣಿನಲ್ಲಿ ಬೆಳೆದಾಗ ಉತ್ತಮ ಫಲಿತಾಂಶವನ್ನು ನೀಡುತ್ತದೆ.
ಮಣ್ಣನ್ನು ಉತ್ತಮ ಹದಕ್ಕೆ ತರಲು ಎರಡು ಮೂರು ಬಾರಿ ಉಳುಮೆ ಮಾಡಬೇಕು. ಪ್ರತಿ ಉಳುಮೆಯ ನಂತರ ಮಣ್ಣಿನ ಹೆಂಟೆಗಳನ್ನು ಹೊಡೆದುಹಾಕಬೇಕು.
ಮುಂಗಾರು ಬಿತ್ತನೆಗೆ ಸೂಕ್ತ ಸಮಯ – ಜುಲೈ ಮೊದಲ ಹದಿನೈದು ದಿನಗಳು. ಬೇಸಿಗೆಯ ಕೃಷಿಗೆ ಸೂಕ್ತ ಸಮಯ ಮಾರ್ಚ್ ನಿಂದ ಏಪ್ರಿಲ್ ವರೆಗೆ.
ಮುಂಗಾರು ಬಿತ್ತನೆಗೆ 30 ಸೆಂ.ಮೀ ಸಾಲಿನ ಅಂತರವನ್ನು ಮತ್ತು ಗಿಡದಿಂದ ಗಿಡಕ್ಕೆ 10 ಸೆಂ.ಮೀ ಅಂತರವನ್ನು ಬಳಸಿ.
ಹಿಂಗಾರು ಬಿತ್ತನೆಗೆ 22.5 ಸೆಂ.ಮೀ ಸಾಲಿನ ಅಂತರವನ್ನು ಮತ್ತು ಗಿಡದಿಂದ ಗಿಡಕ್ಕೆ 7 ಸೆಂ.ಮೀ ಅಂತರವನ್ನು ಬಳಸಿ.
ಮುಂಗಾರಿನಲ್ಲಿ, 8-9 ಕೆಜಿ / ಎಕರೆಗೆ ಬೀಜಗಳನ್ನು ಮತ್ತು ಬೇಸಿಗೆಯಲ್ಲಿ 12-15 ಕೆಜಿ / ಎಕರೆಗೆ ಬೀಜಗಳನ್ನು ಬಳಸಲಾಗುತ್ತದೆ.
ಬಿತ್ತನೆ ಮಾಡುವ ಮೊದಲು ಬೀಜವನ್ನು ಕ್ಯಾಪ್ಟನ್ ಅಥವಾ ಥೈರಮ್ @ 3 ಗ್ರಾಂ/ಕೆಜಿ ಬೀಜಗಳೊಂದಿಗೆ ಸಂಸ್ಕರಿಸಬೇಕು.
ಶಿಲೀಂಧ್ರನಾಶಕ/ಕೀಟನಾಶಕ ಹೆಸರು ಪ್ರಮಾಣ (ಪ್ರತಿ ಕೆಜಿ ಬೀಜಕ್ಕೆ ಡೋಸೇಜ್)
ಕ್ಯಾಪ್ಟನ್ 3ಗ್ರಾಂ
ಥೈರಮ್ 3 ಗ್ರಾಂ
ಯೂರಿಯಾ ಎಸ್ಎಸ್ಪಿ ಮ್ಯುರೇಟ್ ಆಫ್ ಪೊಟಾಷ್
12 100 –
ಪೌಷ್ಟಿಕಾಂಶದ ಅವಶ್ಯಕತೆ (ಕೆಜಿ/ಎಕರೆ)
ಸಾರಜನಕ ಫಾಸ್ಫರಸ್ ಪೊಟ್ಯಾಶ್
5 16 –
ಬಿತ್ತನೆ ಸಮಯದಲ್ಲಿ ಎಕರೆಗೆ 5 ಕೆಜಿ ಸಾರಜನಕ (12 ಕೆಜಿ ಯೂರಿಯಾ), 16 ಕೆಜಿ ಫಾಸ್ಫರಸ್ (100 ಕೆಜಿ ಸೂಪರ್ ಫಾಸ್ಫೇಟ್) ಅನ್ನು ಹಾಕಬೇಕು.
ಹೊಲವನ್ನು ಕಳೆ ಮುಕ್ತವಾಗಿರಿಸಲು, ಒಂದು ಅಥವಾ ಎರಡು ಬಾರಿ ಕೈ ಕಳೆಯನ್ನು ಮಾಡಿ, ಬಿತ್ತನೆ ಮಾಡಿದ ನಾಲ್ಕು ವಾರದ ನಂತರ ಮೊದಲ ಕೈ ಕಳೆ ಮತ್ತು ಎರಡು ವಾರದ ನಂತರ ಎರಡನೇ ಕೈ ಕಳೆಯನ್ನು ಮಾಡಬೇಕಾಗುತ್ತದೆ.
ಕಳೆಗಳನ್ನು ರಾಸಾಯನಿಕವಾಗಿ ನಿಯಂತ್ರಿಸಲು, ಬಿತ್ತನೆ ಮಾಡುವ ಮೊದಲು ಎಕರೆಗೆ 600 ಮಿಲಿ ಫ್ಲುಕ್ಲೋರಾಲಿನ್ ಅಥವಾ ಟ್ರೈಫ್ಲುರಾಲಿನ್ @ 800 ಮಿ.ಲೀ. ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕಾಗುತ್ತದೆ. ಹಾಗೆಯೇ ಬಿತ್ತನೆ ಮಾಡಿದ ಎರಡು ದಿನಗಳಲ್ಲಿ ಪೆಂಡಿಮೆಥಾಲಿನ್ ಅನ್ನು 100-200 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು.
ಹೆಸರು ಕಾಳನ್ನು ಮುಖ್ಯವಾಗಿ ಮುಂಗಾರು ಬೆಳೆಯಾಗಿ ಬೆಳೆಯಲಾಗುತ್ತದೆ. ಅಗತ್ಯವಿದ್ದರೆ ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ ನೀರನ್ನು ಕೊಡಬೇಕು. ಬೇಸಿಗೆಯ ಬೆಳೆಗೆ, ಮಣ್ಣಿನ ಪ್ರಕಾರ ಮತ್ತು ಹವಾಮಾನದ ಸ್ಥಿತಿಯನ್ನು ಅವಲಂಬಿಸಿ ಮೂರರಿಂದ ಐದು ಬಾರಿ ನೀರು ಅಗತ್ಯವಿರುತ್ತದೆ.
ಉತ್ತಮ ಇಳುವರಿಗಾಗಿ ಬಿತ್ತನೆ ಮಾಡಿದ 55 ದಿನಗಳ ನಂತರ ನೀರು ಹಾಯಿಸುವುದನ್ನು ನಿಲ್ಲಿಸಿ.
ರಸ ಹೀರುವ ಕೀಟಗಳು (ಜಾಸಿಡ್, ಗಿಡಹೇನು, ಬಿಳಿ ನೊಣ): ಇವು ರಸ ಹೀರುವ ಕೀಟಗಳಾಗಿದ್ದು, ಇವುಗಳು ಎಲೆಯ ರಸವನ್ನು ಹೀರುತ್ತವೆ ಹಾಗೂ ದ್ಯುತಿಸಂಶ್ಲೇಷಣೆ ಕ್ರಿಯೆಯನ್ನು ಕುಂಠಿತಗೊಳಿಸುತ್ತವೆ.
ಇವುಗಳ ದಾಳಿ ಕಂಡುಬಂದಲ್ಲಿ, ಮಲಾಥಿಯಾನ್ @ 375 ಮಿಲಿ ಅಥವಾ ಡೈಮಿಥೋಯೇಟ್ @ 250 ಮಿಲಿ ಅಥವಾ ಆಕ್ಸಿಡೆಮೆಟಾನ್ ಮೀಥೈಲ್ @ 250 ಮಿಲಿ / ಎಕರೆಗೆ ಸಿಂಪಡಿಸಿ.
ಬಿಳಿ ನೊಣ ನಿಯಂತ್ರಣಕ್ಕಾಗಿ, ಥಯಾಮೆಥಾಕ್ಸಮ್ @40gm ಟ್ರಯಾಜೋಫೋಸ್ @600ml/ ಎಕರೆಗೆ ಸಿಂಪಡಿಸಿ. ಅಗತ್ಯವಿದ್ದರೆ ಮೊದಲ ಸಿಂಪರಣೆ ಮಾಡಿದ 10 ದಿನಗಳ ನಂತರ ಎರಡನೇ ಸಿಂಪಡ ಣೆ ತೆಗೆದುಕೊಳ್ಳಿ.
ಕಾಯಿ ಕೊರಕ : ಈ ಗಂಭೀರ ಕೀಟವು – ಇಳುವರಿಯಲ್ಲಿ ಭಾರೀ ನಷ್ಟವನ್ನು ಉಂಟುಮಾಡುತ್ತದೆ. ಹಾವಳಿ ಕಂಡುಬಂದಲ್ಲಿ, ಇಂಡೋಕ್ಸಾಕಾರ್ಬ್ 14.5 ಎಸ್‌ಸಿ @ 200 ಮಿಲಿ ಅಥವಾ ಅಸಿಫೇಟ್ 75 ಎಸ್‌ಪಿ @ 800 ಗ್ರಾಂ ಅಥವಾ ಸ್ಪಿನೋಸ್ಯಾಡ್ 45 ಎಸ್‌ಸಿ @ 60 ಮಿಲಿ/ಎಕರೆಗೆ ಸಿಂಪಡಿಸಿ. ಎರಡು ವಾರಗಳ ನಂತರ ಮತ್ತೆ ಇದೆ ಸ್ಪ್ರೇ ಪುನರಾವರ್ತಿಸಿ.
ತಂಬಾಕು ಮರಿಹುಳು: ಕೀಟಬಾಧೆ ಕಂಡುಬಂದಲ್ಲಿ, ಎಕರೆಗೆ 800 ಗ್ರಾಂ ಅಸಿಫೇಟ್ 57 ಎಸ್‌ಪಿ ಅಥವಾ ಕ್ಲೋರ್‌ಪೈರಿಫಾಸ್ 20 ಇಸಿ @ 1.5 ಮೀ ಲಿ ಪ್ರತೀ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಿ. ಅಗತ್ಯವಿದ್ದರೆ ಮೊದಲ ಸಿಂಪರಣೆ ಮಾಡಿದ 10 ದಿನಗಳ ನಂತರ ಇದನ್ನೇ ಎರಡನೇ ಬಾರಿ ಸಿಂಪಡಣೆಯನ್ನು ಪುನರಾವರ್ತಿಸಿ.
ಹಳದಿ ಮೊಸಾಯಿಕ್ ನಂಜು ರೋಗ : ಇದು ಬಿಳಿ ನೊಣದಿಂದ ಹರಡುತ್ತದೆ. ಎಲೆಗಳ ಮೇಲೆ ಅನಿಯಮಿತ ಹಳದಿ, ಹಸಿರು ತೇಪೆಗಳನ್ನು ಗಮನಿಸಬಹುದು. ಸೋಂಕಿತ ಸಸ್ಯಗಳ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ .
ಹಳದಿ ಮೊಸಾಯಿಕ್ ನಂಜು ರೋಗದ ನಿರೋಧಕ ತಳಿಗಳನ್ನು ಬೆಳೆಯಿರಿ.
ಬಿಳಿ ನೊಣ ನಿಯಂತ್ರಣಕ್ಕಾಗಿ, ಥಯಾಮೆಥಾಕ್ಸಮ್ @ 40 ಗ್ರಾಂ, ಟ್ರಯಾಜೋಫೋಸ್ @ 600 ಮಿಲಿ / ಎಕರೆಗೆ ಸಿಂಪಡಿಸಿ. ಅಗತ್ಯವಿದ್ದರೆ ಮೊದಲ ಸಿಂಪರಣೆ ಮಾಡಿದ 10 ದಿನಗಳ ನಂತರ ಎರಡನೇ ಸಿಂಪರಣೆ ತೆಗೆದುಕೊಳ್ಳಿ.
ಸರ್ಕೊಸ್ಪೊರಾ ಎಲೆ ಚುಕ್ಕೆ ರೋಗ : ಇದನ್ನು ತಡೆಗಟ್ಟುವ ಕ್ರಮವಾಗಿ ಕ್ಯಾಪ್ಟನ್ ಮತ್ತು ಥೈರಾಮ್‌ನೊಂದಿಗೆ ಬೀಜೋಪಚಾರ ಮಾಡಬೇಕು.
ಸರ್ಕೊಸ್ಪೊರಾ ಎಲೆ ಚುಕ್ಕೆ ರೋಗ ನಿಯಂತ್ರಣಕ್ಕೆ ಝಿನೆಬ್ 75WP @400gm/ ಎಕರೆಗೆ ಸಿಂಪಡಿಸಿ. 10 ದಿನಗಳ ಮಧ್ಯಂತರದಲ್ಲಿ ಎರಡರಿಂದ ಮೂರು ಬಾರಿ ಸ್ಪ್ರೇಗಳನ್ನು ತೆಗೆದುಕೊಳ್ಳಿ.
85% ಕಾಯಿಗಳು ಬಲಿತಾಗ ಕೊಯ್ಲು ಮಾಡಲು ಉತ್ತಮ ಸಮಯ. ಕಾಯಿಗಳು ಹೆಚ್ಚು ಹಣ್ಣಾಗುವುದನ್ನು ತಪ್ಪಿಸಬೇಕು ಏಕೆಂದರೆ ಕಾಯಿ ಒಡೆದು ಹೋಗುವುದರಿಂದ ಕಾಳುಗಳು ನಷ್ಟವಾಗಬಹುದು.
ಕುಡುಗೋಲಿನಿಂದ ಕೊಯ್ಲು ಮಾಡಬೇಕು, ನಂತರ ಒಕ್ಕಣೆ ಮಾಡಲಾಗುತ್ತದೆ. ಒಕ್ಕಣೆ ಮಾಡಿ ಒಣಗಿದ ನಂತರ, ಬೀಜಗಳನ್ನು ಬಿಸಿಲಿನಲ್ಲಿ ಒಣಗಿಸಲಾಗುತ್ತದೆ.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…