Govt for Farmers

ಕೃಷಿಯಲ್ಲಿ ಅತೀ ಎತ್ತರದ ಸ್ಥಾನಕ್ಕೆ ಏರುವುದು: ಕೃಷಿಯಲ್ಲಿ ಡ್ರೋನ್‌ಗಳನ್ನು ಬಳಸಿ ರೈತರ ಸಬಲೀಕರಣಕ್ಕೆ ಅನುದಾನ  ಬಿಡುಗಡೆ

ಪರಿಚಯ

         ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವರು, ಶ್ರೀ ನರೇಂದ್ರ ಸಿಂಗ್ ತೋಮರ್ ರವರು ತಿಳಿಸಿರುವ ಪ್ರಕಾರ, ಭಾರತ ಸರ್ಕಾರವು ರೈತರಿಗೆ ಕೃಷಿ ಡ್ರೋನ್ಗಳ ಬಳಕೆಯನ್ನು ಉತ್ತೇಜಿಸಲು ರೂ. 126.99 ಕೋಟಿಯನ್ನು  ಬಿಡುಗಡೆ ಮಾಡಿದೆ. ಸದರಿ ಅನುದಾನವನ್ನು ಸುಮಾರು 300 ಕಿಸಾನ್ ಡ್ರೋನ್ಗಳನ್ನು ಖರೀದಿಸಲು, ರೈತರ ಹೊಲದಲ್ಲಿ  ಪ್ರಾತ್ಯಕ್ಷಿಕೆಗಳನ್ನು  ಕೈಗೊಳ್ಲಲು ಹಾಗೂ ರೈತರಿಗೆ ಡ್ರೋನ್ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೃಷಿ ಡ್ರೋನ್ ಕಸ್ಟಮ್ ಹೈರಿಂಗ್ ಕೇಂದ್ರಗಳನ್ನು (CHC) ಸ್ಥಾಪಿಸಲು ಬಳಸಲಾಗುತ್ತದೆ. ಸಂಸ್ಥೆಗಳಿಗೆ, FPO ಗಳಿಗೆ, CHC ಗಳಿಗೆ ಹಾಗೂ ವೈಯಕ್ತಿಕವಾಗಿ ರೈತರು ಡ್ರೋನ್ಗಳನ್ನು ಖರೀದಿಸಲು ಕೃಷಿ ಯಾಂತ್ರೀಕರಣದ (SMAM) ಉಪಮಿಷನ್ ಅಡಿಯಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ಸದರಿ ಕೃಷಿ ಡ್ರೋನ್ಗಳ ಬಳಕೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ಹೊಂದಿದೆ.

ಅವಲೋಕನ

         ಕೇಂದ್ರ ಸರ್ಕಾರವು ರೈತರನ್ನು ಕೃಷಿ ಡ್ರೋನ್ಗಳ ಅಳವಡಿಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ರೂ.126.99 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಸದರಿಯಲ್ಲಿ ರೈತರಿಗೆ ಸಬ್ಸಿಡಿ ಮುಖಾಂತರ ಸುಮಾರು 300 ಕೃಷಿ ಡ್ರೋನ್‌ಗಳು ಹಾಗೂ 1500 ಕೃಷಿ ಡ್ರೋನ್ CHCಗಳು ಸೇರಿವೆ. 300 ಕೃಷಿ  ಡ್ರೋನ್‌ಗಳ ಖರೀದಿಯನ್ನು, 100 ಕೆವಿಕೆ,  75 ಐ.ಸಿ.ಎ.ಆರ್. ಸಂಸ್ಥೆಗಳು  ಹಾಗೂ 25 ರಾಜ್ಯ ಕೃಷಿ ವಿಶ್ವವಿದ್ಯಾಲಯಗಳ ಮುಖಾಂತರ ಸುಮಾರು 75000 ಹೆಕ್ಟೇರ್‌ಗಳಲ್ಲಿ ಪ್ರಾತ್ಯಕ್ಷಿಕೆಗಳನ್ನು ನಡೆಸಲು ಐ.ಸಿ.ಎ.ಆರ್. ಗೆ ರೂ.52.50 ಕೋಟಿಗಳ ಮೊತ್ತ ದೊರಕಿದೆ. ಕೃಷಿ ಡ್ರೋನ್‌ಗಳ ಬಳಕೆಯು ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಬಹುದು ಎನ್ನಲಾಗಿದೆ. ಡ್ರೋನ್‌ಗಳ ಸುರಕ್ಷಿತ ಮತ್ತು ಪರಿಣಾಮಕಾರಿ ಬಳಕೆಗಾಗಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಬಿಡುಗಡೆ ಮಾಡಲಾಗಿದೆ. ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ವಿವಿಧ ಸಂಸ್ಥೆಗಳಿಂದ ಡ್ರೋನ್ ಖರೀದಿಗೆ SMAM ಅಡಿಯಲ್ಲಿ ಹಣಕಾಸಿನ ನೆರವು ನೀಡಲಾಗುತ್ತದೆ. ಡ್ರೋನ್ ಖರೀದಿಗಾಗಿ CHC ಗಳನ್ನು ಸ್ಥಾಪಿಸುವಲ್ಲಿ FPO ಗಳು, ಗ್ರಾಮೀಣ ಉದ್ಯಮಿಗಳು ಮತ್ತು ಕೃಷಿ ಪದವೀಧರರನ್ನು ಸರ್ಕಾರ ಹುರಿದುಂಬಿಸಿದೆ. ಸಣ್ಣ ಮತ್ತು ಅತೀ ಸಣ್ಣ ರೈತರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ರೈತ ಮಹಿಳೆಯರು ಮತ್ತು ಈಶಾನ್ಯ ರಾಜ್ಯದ ರೈತರಿಗೆ ಪ್ರತ್ಯೇಕವಾಗಿ ಡ್ರೋನ್ ಖರೀದಿಗೆ ಹಣಕಾಸಿನ ನೆರವು ನೀಡಲಾಗಿದೆ.

         ಕೃಷಿಯಲ್ಲಿ ಡ್ರೋನ್ ಬಳಕೆಯ ಪ್ರಚಾರಕ್ಕಾಗಿ ಬಿಡುಗಡೆಯಾದ ಅನುದಾನದಿಂದ, ಗ್ರಾಮೀಣ ಪ್ರದೇಶದ ಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಸದರಿಯನ್ನು ಉತ್ತೇಜಿಸುತ್ತಿದೆ. ಡ್ರೋನ್‌ಗಳ ಖರೀದಿಗಸಲು ಹಣಕಾಸಿನ ನೆರವು ನೀಡುವುದರ ಜೊತೆಗೆ ರೈತರಿಗೆ, FPO ಗಳಿಗೆ ಮತ್ತು ಕೃಷಿ ಪದವೀಧರರಿಗೆ ಡ್ರೋನ್ ಸಂಬಂದಿತ ಪ್ರಾತ್ಯಕ್ಷಿಕೆಗಳು ಮತ್ತು ಬಾಡಿಗೆ ಸೇವೆಗಳಿಗೆ ಸಬ್ಸಿಡಿಗಳನ್ನು ನೀಡಲಾಗುತ್ತದೆ. ಡ್ರೋನ್ ಗಳ ಬಳಕೆ ಕೀಟನಾಶಕಗಳ ಸಿಂಪಡಣೆಗೆ ಮತ್ತು ಪೋಷಕಾಂಶಗಳನ್ನು ಒದಗಿಸುವ ನಿಟ್ಟಿನಲ್ಲಿ ಮತ್ತು ರೈತರು ಇಳುವರಿಯನ್ನು ಸುಧಾರಣೆ ಮಾಡಲು ಮತ್ತು ಸಾಂಪ್ರದಾಯಿಕ ಕೃಷಿ ವಿಧಾನಗಳಲ್ಲಿ ತೊಡಗಿರುವ ಸಮಯ ಮತ್ತು ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೃಷಿ ಡ್ರೋನ್ CHC ಗಳ ಸ್ಥಾಪನೆಯು ರೈತರಿಗೆ ಬಾಡಿಗೆ ಆಧಾರದ ಮೇಲೆ ಡ್ರೋನ್ ಸೇವೆಗಳನ್ನು ಒದಗಿಸಬಹುದು. ಕೃಷಿ ಡ್ರೋನ್‌ಗಳ ಬಳಕೆಯು ಬೆಳೆಗಳ ಮೇಲೆ ಅಕಾಲಿಕ ಹವಾಮಾನ ಬದಲಾವಣೆಯ ಪ್ರಭಾವವನ್ನು ಕಡಿಮೆ ಮಾಡಲು ಅನುವು ಮಾಡುತ್ತದೆ ಮತ್ತು ನಿಖರವಾದ ಕೃಷಿಗಾಗಿ ಅಮೂಲ್ಯ ಮಾಹಿತಿಯನ್ನು ಒದಗಿಸುತ್ತದೆ. ಒಟ್ಟಿನಲ್ಲಿ, ಕಿಸಾನ್ ಡ್ರೋನ್‌ಗಳ ಬಳಕೆಯಿಂದ ಉತ್ತಮ ಕೃಷಿ ಪದ್ಧತಿಯನ್ನು ಸಾಗಿಸುವುದರ ಜೊತೆಗೆ, ಸುಧಾರಿತ ಇಳುವರಿ ಮತ್ತು ರೈತರಿಗೆ ಹೆಚ್ಚಿನ ಆದಾಯವನ್ನು ಪಡೆಯಲು ಉಪಕಾರಿಯಾಗಿದೆ.

ಪ್ರಮುಖ ಅಂಶಗಳು

  •     ಭಾರತ ಸರ್ಕಾರವು  ರೈತರಿಗೆ ಕೃಷಿ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲು ರೂ. 126.99 ಕೋಟಿಯನ್ನು  ಬಿಡುಗಡೆ ಮಾಡಿದೆ.
  •     ರಾಜ್ಯ ಸರ್ಕಾರ 300 ಕ್ಕೂ ಹೆಚ್ಚು ಕೃಷಿ ಡ್ರೋನ್‌ಗಳನ್ನು ಸಬ್ಸಿಡಿ ಮುಖಾಂತರ ದೊರಕಿಸಿಕೊಡಲು ಹಾಗೂ ರೈತರಿಗೆ ಡ್ರೋನ್ ಸೇವೆಗಳನ್ನು ಒದಗಿಸಲು ಸುಮಾರು 1500ಕ್ಕೂ ಹೆಚ್ಚಿನ ಕೃಷಿ ಡ್ರೋನ್‌ಗಳ CHC ಗಳನ್ನು ಸ್ಥಾಪಿಸಲು ಅನುದಾನ ದೊರಕಿದೆ.
  •     ಕೃಷಿ ಡ್ರೋನ್‌ಗಳು ಗ್ರಾಮೀಣ ಪ್ರದೇಶದ ಯುವಕರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿದೆ.
  •     ರೈತರಿಗೆ ಡ್ರೋನ್‌ಗಳ ಪರಿಣಾಮಕಾರಿ ಮತ್ತು ಸುರಕ್ಷಿತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್‌ಗಳನ್ನು (ಎಸ್‌ಒಪಿ) ಬಿಡುಗಡೆ ಮಾಡಲಾಗಿದೆ.
  •     ಸಂಸ್ಥೆಗಳಿಗೆ, ಎಫ್‌ಪಿಒಗಳಿಗೆ ಮತ್ತು ರೈತರಿಗೆ ಡ್ರೋನ್ ಖರೀದಿ ಮಾಡಿಕೊಳ್ಳಲು ಹಣಕಾಸಿನ ನೆರವು ನೀಡಲಾಗುತ್ತದೆ. ಸಂಸ್ಥೆಗಳಿಗೆ ಶೇಕಡ 100 ರಷ್ಟು ಅಂದರೆ ಪ್ರತಿ ಡ್ರೋನ್ ಗೆ ರೂ.10 ಲಕ್ಷ ದಂತೆ ದೊರಕಿದೆ.
  •     FPOಗಳಿಗೆ ಡ್ರೋನ್ಗಳ ಮುಖಾಂತರ ಪ್ರಾತ್ಯಕ್ಷತೆ ನಡೆಸಲು  ಶೇಕಡ 75ರಷ್ಟು ಅನುದಾನ ಪ್ರಾಪ್ತಿಯಾಗಿದೆ.
  •     ಸಣ್ಣ ಮತ್ತು ಅತೀ ಸಣ್ಣ ರೈತರು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ರೈತ ಮಹಿಳೆಯರು ಮತ್ತು ಈಶಾನ್ಯ ರಾಜ್ಯದ ರೈತರಿಗೆ ಶೇಕಡ 50 ರಷ್ಟು  ಗರಿಷ್ಟ 5.00 ಲಕ್ಷ ಮೊತ್ತ ಪಡೆದಿದ್ದು, ಇತರೆ ರೈತರು ಶೇಕಡ 40 ರಷ್ಟು ಮೊತ್ತ ಗರಿಷ್ಟ 4.00 ಲಕ್ಷ ಪಡೆಯಬಹುದು

ತೀರ್ಮಾನ

         ಕೃಷಿ ಡ್ರೋನ್‌ಗಳ ಪ್ರಚಾರ ಹಾಗೂ ಖರೀದಿಗಾಗಿ, ಭಾರತ ಸರ್ಕಾರದ ಗಣನೀಯ ಅನುದಾನವು ರೈತರಿಗೆ, ಪ್ರತ್ಯೇಕವಾಗಿ ಅಂಚಿನ ವರ್ಗದಲ್ಲಿರುವ ಕೃಷಿಕರ  ಸಬಲೀಕರಣ ಮಾಡುವ ಪ್ರಮುಖ ಗುರಿಯನ್ನು ಹೊಂದಿದೆ. ಡ್ರೋನ್‌ಗಳಿಂದ ಸುರಕ್ಷಿತ ಕೀಟನಾಶಕ ಮತ್ತು ಪೋಷಕಾಂಶಗಳ ಸಿಂಪಡಣೆ ಮಾಡಬಹುದು. ಇದು ದೈಹಿಕ ಶ್ರಮವನ್ನು ಕಡಿಮೆ ಮಾಡುವುದರ ಜೊತೆಗೆ ಇಳುವರಿಯನ್ನು ಸುಧಾರಿಸುತ್ತದೆ. ಕೃಷಿ ಡ್ರೋನ್ CHC ಗಳ ಸ್ಥಾಪನೆ ಮತ್ತು ಸಬ್ಸಿಡಿ ಮುಖಾಂತರ ಡ್ರೋನ್‌ಗಳ ಪೂರೈಕೆಯು, ಗ್ರಾಮೀಣ ಪ್ರದೇಶಗಳಲ್ಲಿ ಡ್ರೋನ್ ಸೇವೆಗಳ ಪ್ರವೇಶವನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುತ್ತದೆ. ಈ ಉಪಕ್ರಮಗಳು ರೈತ ಸಮುದಾಯದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಲಾಭದಾಯಕವಾಗಿ ಹೊರಹೊಮ್ಮಲಿದೆ.

 

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025