ಕೃಷಿ ಯಂತ್ರೋಪಕರಣಗಳು ಈಗಿನ ಸಮಯದಲ್ಲಿ ಸಣ್ಣ ಮತ್ತು ಮಾಧ್ಯಮ ವರ್ಗದ ರೈತರಿಗೆ, ಖರೀದಿಸಲು ಸಾಧ್ಯವಾಗದ ಕಾರಣ, ರೈತರಿಗೆ ಕೈಗೆಟುಕುವ ಬಾಡಿಗೆ ದರದಲ್ಲಿ ಕೃಷಿ ಯಂತ್ರ ಉಪಕರಣಗಳನ್ನು ಕೃಷಿ ಯಂತ್ರಧಾರೆ ಯೋಜನೆಯಡಿಯಲ್ಲಿ ಒದಗಿಸಲು ನಿರ್ದರಿಸಿದೆ. ಈ ಯೋಜನೆಯಿಂದ ಸಮಯಕ್ಕೆ ಸರಿಯಾಗಿ ಬೇಸಾಯ ಪದ್ದತಿಗಳನ್ನು ಮಾಡಿ ಹೆಚ್ಚಿನ ಅಥವಾ ಒಳ್ಳೆಯ ಇಳುವರಿಯನ್ನು / ಹೆಚ್ಚು ಉತ್ಪಾದನೆ ಪಡೆಯಬಹುದು.
ಇತ್ತೀಚೀನಾ ದಿನಗಳಲ್ಲಿ ರೈತರು ಮತ್ತು ಕೂಲಿಕಾರ್ಮಿಕರ ಎದುರಿಸುತ್ತಿರುವ ಸಮಸ್ಯೆಯನ್ನು ಸರ್ಕಾರ ಮನಗಂಡು ರಾಜ್ಯದ ಜಿಲ್ಲೆಗಳಲ್ಲಿರುವ ಹೋಬಳಿಗಳಲ್ಲಿ ಕೃಷಿ ಯಂತ್ರಧಾರೆ ಯೋಜನೆಯಡಿ ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆಗೆ ಕೊಡುತ್ತಿದ್ದಾರೆ. ಕೇಂದ್ರ ಸರ್ಕಾರವು 2014-15 ರ ಸಾಲಿನಲ್ಲಿ ಹೋಬಳಿ ಮಟ್ಟದಲ್ಲಿ ರೈತರಿಗೆ ಬೇಕಿರುವ ಸಮಯಕ್ಕೆ ಕಡಿಮೆ ಬಾಡಿಗೆ-ದರದಲ್ಲಿ ಕೃಷಿ ಯಂತ್ರೋಪಕರಣಗಳ (ಬಾಡಿಗೆ ಆಧಾರಿತ) ಸೇವಾ ಕೇಂದ್ರಗಳನ್ನು ಸ್ಥಾಪಿಸಿದೆ.
ಹಾಗಾದರೆ ಈ ಕೃಷಿ ಯಂತ್ರಧಾರೆ ಸೇವಾ ಕೇಂದ್ರಗಳು ಎಲ್ಲೆಲ್ಲಿವೆ, ನೋಂದಣಿ ಮಾಡಿಸುವುದು ಹೇಗೆ, ಯಾವ ಯಾವ ಕೃಷಿ ಯಂತ್ರೋಪಕರಣಗಳು ಲಭ್ಯವಿದೆ ಹಾಗೂ ಬಾಡಿಗೆ ದರ ಹೀಗೆ ಹತ್ತುಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಮೂಡಿದೆ ಅದಕ್ಕೆಲ್ಲ ಉತ್ತರ ಇಲ್ಲಿದೆ.
ಕೃಷಿ ಉಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರ ‘ಕೃಷಿ ಯಂತ್ರಧಾರೆ’ ಕೇಂದ್ರಗಳು ಕಾರ್ಯಾರಂಭವಾದದ್ದು 2014-15 ರಿಂದ. ರಾಜ್ಯ ಕೃಷಿ ಇಲಾಖೆ ಅಥವಾ ಕೃಷಿ ಸ್ವಯಂ ಸೇವಾ ಸಂಸ್ಥೆಗಳು ಇಂತಹ ಯೋಜನೆಗಳನ್ನು ನಡೆಸುತ್ತಿವೆ. ಈಗ ಒಟ್ಟು ರಾಜ್ಯದ 490 ಹೋಬಳಿಗಳಲ್ಲಿ ಈ ಯೋಜನೆ ಕಾರ್ಯರೂಪದಲ್ಲಿದೆ. ಜಿಲ್ಲೆ ಮತ್ತು ತಾಲೂಕಿನಲ್ಲಿರುವ ರೈತರಿಗೆ ಬೇಕಾಗುವ ಯಂತ್ರೋಪಕರಣಗಳನ್ನು ದೊರೆಯುವಂತೆ ಮಾಡುವುದು ಈ ಯೋಜನೆಯ ವಿಶೇಷ.
ಎಲ್ಲ ಬಗೆಯ 44 ಯಂತ್ರಗಳಿಗೆ / ಉಪಕರಣಗಳು ಈ ಯೋಜನೆಯ ಉಪಕರಣಗಳು ಲಭ್ಯವಿದೆ. ಆಯಾ ಭಾಗದ ಕೃಷಿ ಅವಶ್ಯಕತೆಗೆ ಅನುಗುಣವಾಗಿ ಉಪಕರಣಗಳು ಆಯಾ ಜಿಲ್ಲೆಯ ಕೇಂದ್ರದಲ್ಲಿರುತ್ತವೆ.
ಕೃಷಿ ಯಂತ್ರೋಪಕರಣ ಬಾಡಿಗೆಗೆ ಬೇಕಿದ್ದಲ್ಲಿ ಹತ್ತಿರದ ಕೃಷಿ ಕೇಂದ್ರದಲ್ಲಿ ಬೇಕಾದ ಯಂತ್ರಕ್ಕೆ ಮುಂಚಾಗಿ ಹಣ ಕಟ್ಟಿ ಯಂತ್ರವನ್ನು ಕಾಯ್ದಿರಿಸಬಹುದು, ಏಕಕಾಲದಲ್ಲಿ ಒಂದು ಜಿಲ್ಲೆಯ ಎಲ್ಲಾ ರೈತರಿಗೆ ಒಂದೇ ಯಂತ್ರಗಳು ಬೇಕಾಗುವ ಸಮಯದಲ್ಲಿ ಯಂತ್ರದ ಲಭ್ಯವನ್ನು ನೋಡಿಕೊಂಡು ಬಾಡಿಗೆಗೆ ನೀಡಲಾಗುವುದು. ಒಂದು ವಾರ ಮುಂಚಿತವಾಗಿ ಕಾಯ್ದಿರಿಸುವ ಸೌಲಭ್ಯವಿದೆ. ಯಂತ್ರೋಪಕರಣ ಬಾಡಿಗೆ ದರ ಮತ್ತು ಲಭ್ಯವಿರುವ ಯಂತ್ರಗಳ ಪಟ್ಟಿಯನ್ನು ಎಲ್ಲ ಕೃಷಿ ಕೇಂದ್ರದಲ್ಲಿ ಆಯಾ ಕಾಲಕ್ಕೆ ಪ್ರಕಟಿಸಲಾಗುತ್ತದೆ. ಇದು ಸರ್ಕಾರದ ಯೋಜನೆಯಾದ್ದರಿಂದ ಯಂತ್ರಗಳ ಬಾಡಿಗೆ ಕಡಿಮೆವಿರುತ್ತದೆ.
ಕಾಯ್ದಿರಿಸಿದ ದಿನದಿಂದ ಯಂತ್ರವು ಬೇಕಿರುವ ದಿನದವರೆಗಿನ ಸಮಯದಲ್ಲಿ ಯಂತ್ರ ಪಡೆಯುವ ದಿನವನ್ನು ಹಿಂದೂಡಬಹುದು ಅಥವಾ ಉಪಯೋಗಿಸುವ ದಿನದಿಂದ 15 ದಿನಗಳವರೆಗೆ ಮುಂದೂಡಬಹುದು. ಆದರೆ, 15 ದಿನಗಳಿಗಿಂತ ಹೆಚ್ಚಾದಲ್ಲಿ ಕಾದಿರಿಸುವಿಕೆಯನ್ನು ರದ್ದು ಗೊಳಿಸಿ ಹೊಸ ಪ್ರಕ್ರಿಯೆ ಮಾಡಬೇಕು.
ಮುಂಚಿತವಾಗಿ ಕಾಯ್ದಿರಿಸಿದ ಯಂತ್ರಗಳು ಬೇಡವಾದರೆ ಉಕಾಯ್ದಿರಿಸಿದ ದಿನಕ್ಕೆ 72 ಗಂಟೆಗಳವರೆಗೆ ಯಂತ್ರದ ಕಾಯ್ದಿರಿಸಿವಿಕೆಯನ್ನು ರದ್ದುಗೊಳಿಸಿದರೆ ಒಟ್ಟು ಕಾಯ್ದಿರಿಸಿದ ಮೊತ್ತವನ್ನು ಪ್ರತಿಶತ ೧೦೦ ರಷ್ಟು ಹಣವನ್ನು ಹಿಂದಿರುಗಿಸಲಾಗುವುದು. ಅದೇ ಯಂತ್ರ ಸೇವೆಯ 48 ಗಂಟೆಗಳವರೆಗೆ ಹೇಳಿದ್ದಲ್ಲಿ ಕಾಯ್ದಿರಿಸಿದ ಮೊತ್ತದಲ್ಲಿ ಶೇ.75ರಷ್ಟು, ಮತ್ತು 24 ಗಂಟೆಗಳವರೆಗೆ ರದ್ದುಗೊಳಿಸಿದರೆ ಶೇ.50ರಷ್ಟು ಕಾಯ್ದಿರಿಸಿದ ಮೊತ್ತವನ್ನು ಹಿಂದಿರುಗಿಸಲಾಗುವುದು. ಕಾಯ್ದಿರಿಸಿದ ಸೇವೆಯ ದಿನ ಬಾಡಿಗೆಯನ್ನು ರದ್ದುಗೊಳಿಸಿದ್ದಲ್ಲಿ ಕಾಯ್ದಿರಿಸಿದ ಹಣ ಮತ್ತೆ ಮರುಪಾವತಿಸಲಾಗುವುದಿಲ್ಲ.
ಬಾಡಿಗೆ ದರ ನಿಗದಿಪಡಿಸಲು ಜಿಲ್ಲಾ ಚಾಲನಾ ಸಮಿತಿ ರಚನೆ ಮಾಡಲಾಗಿರುತ್ತದೆ. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಮಿತಿಯ ಅಧ್ಯಕ್ಷರಾಗಿರುತ್ತಾರೆ. ಯಂತ್ರಗಳ ಬಾಡಿಗೆ ದರವನ್ನು ಮಾರುಕಟ್ಟೆ ದರಕ್ಕಿಂತ ಶೇ.20ರಿಂದ 50 ರಷ್ಟು ಕಡಿಮೆ ನಿಗದಿ ಮಾಡಲಾಗುತ್ತದೆ.
ಬಾಡಿಗೆ ಕೇಂದ್ರದಿಂದ ಯಂತ್ರ ಕಳಿಸಿಕೊಡುವಾಗ ಜತೆಗೆ ನುರಿತ ಸಿಬ್ಬಂದಿಯೂ ಬಂದಿರುತ್ತಾರೆ. ಗದ್ದೆ ಅಥವಾ ತೋಟಕ್ಕೆ ಯಂತ್ರವನ್ನು ಕೆಲಸಕ್ಕೆ ಕಳಿಸಿದ ನಂತರ ಬಾಡಿಗೆ ನೀಡಬೇಕಾದ ಸಮಯ ಆರಂಭವಾಗುತ್ತದೆ. ಆ ಯಂತ್ರವನ್ನು ಚಾಲನೆ ಅಥವಾ ಬಳಸುವವರೇ ಯಂತ್ರದ ಚಾಲನೆಯ ಅವಧಿಯನ್ನು ನೋಡಿಕೊಳ್ಳುತ್ತಾರೆ. ಪ್ರತ್ಯೇಕವಾಗಿ ಚಾಲಕನಿಗೆ ಸಂಬಳ ನೀಡಬೇಕಾದ ಅಗತ್ಯಲ್ಲ. ಕೆಲವು ಯಂತ್ರಗಳು ಚಾಲಕ ರಹಿತ ಯಂತ್ರೋಪಕರಣಗಳನ್ನು ರೈತರಿಗೆ ನೇರವಾಗಿ ನೆಡಲಾಗುವುದು.
ಕೃಷಿಕೇಂದ್ರದಲ್ಲಿ ಭೇಟಿ ನೀಡಿ ಎಲ್ಲ ಉಪಕರಣ ಹಾಗೂ ಅವುಗಳ ಬಾಡಿಗೆ ವಿಚಾರಿಸಿ ನಿಮಗೆ ಬೇಕಾದ ಯಂತ್ರೋಪಕರಣಗಳನ್ನು ಬಾಡಿಗೆ ಪಡೆಯಬಹುದು. ಇಲ್ಲಿ ಇತರ ಕೃಷಿ ಯಂತ್ರೋಪಕರಣಗಳಿಗಿಂತ ಶೇ. ೧೫ – ೨೦ ಪ್ರತಿಶತದಷ್ಟು ಕಡಿಮೆಗೆ ದೊರೆಯುತ್ತದೆ.
ಈ ಕೃಷಿಯಂತ್ರದಾರೆ ಯೋಜನೆಯಿಂದ ರೈತರು ತಮ್ಮ ಕೃಷಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿಕೊಂಡು ಉತ್ತಮ ಇಳುವರಿ ಪಡೆಯಬಹುದು. ಈ ಯೋಜನೆಯಿಂದ ಸಣ್ಣ ರೈತರು ಮತ್ತು ಅತೀ ಸಣ್ಣ ರೈತರು ಹೆಚ್ಚಾಗಿ ಫಲಾನುಭವಿಗಳಾಗಬಹುದು. ಇದು ಒಂದು ಉತ್ತಮ ರೈತರ ಯೋಜನೆಯಾಗಿದ್ದು ಇದರಿಂದ ಉತ್ತಮ ಇಳುವರಿ ಮತ್ತು ಲಾಭ ಪಡೆಯಬಹುದು.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…