Govt for Farmers

ಖಾಸಗಿ ಕೊಳವೆ ಬಾವಿ ಸಂಪರ್ಕ ಯೋಜನೆ

ಖಾಸಗಿ ಕೊಳವೆಬಾವಿ ಸಂಪರ್ಕ ಯೋಜನೆಯು, ರೈತರ ಹೊಲಗಳಲ್ಲಿ ಕೊಳವೆ ಬಾವಿಗಳನ್ನು ಅಳವಡಿಸಲು ಸರ್ಕಾರದ ಯೋಜನೆಯಾಗಿದೆ. ಹವಾಮಾನ ಬದಲಾವಣೆಯು ಕೃಷಿ  ಹಾಗೂ  ರೈತರ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತಿದೆ. ರೈತರು ನೀರಾವರಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಸಹ ಎದುರಿಸಬೇಕಾಗುತ್ತದೆ. ಸುಧಾರಿತ ಮತ್ತು ಡೀಸೆಲ್‌ ಪಂಪ್‌ಗಳಿಂದ ರೈತರು ನೀರನ್ನು ಕೊಡಬೇಕಾಗುತ್ತದೆ.  ಈ ಯೋಜನೆಯಿಂದ ನೀರಿನ  ಅಗತ್ಯವನ್ನು ಪೂರೈಸಲು ಸಹಾಯ ಮಾಡುತ್ತದೆ ಮತ್ತು ನೀರಾವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹಾಗೂ ಉತ್ತಮ ಗುಣಮಟ್ಟದ ಕೃಷಿ ಉತ್ಪನ್ನಗಳನ್ನು ಪಡೆಯಲು ರೈತರಿಗೆ ಸಾಧ್ಯವಾಗಿಸುತ್ತದೆ.

ಖಾಸಗಿ ಕೊಳವೆ ಭಾವಿ ಸಂಪರ್ಕ ಯೋಜನೆಯ ಅವಲೋಕನ

  • ಯೋಜನೆಯ ಹೆಸರು – ಖಾಸಗಿ ಕೊಳವೆ ಭಾವಿ ಸಂಪರ್ಕ ಯೋಜನೆ
  • ಯೋಜನೆಯ ತಿದ್ದುಪಡಿ  ದಿನಾಂಕ – 2022
  • ಪ್ರಾಯೋಜಿತ ಸರ್ಕಾರ – ರಾಜ್ಯ ಸರ್ಕಾರ
  • ಆನ್ ಲೈನ್ ವೆಬ್‌ಸೈಟ್ – https://www.upenergy.in/
  • ಸಹಾಯವಾಣಿ ಸಂಖ್ಯೆ – 1912.

ಖಾಸಗಿ ಕೊಳವೆ ಭಾವಿ  ಸಂಪರ್ಕ ಯೋಜನೆಯ ಪ್ರಯೋಜನಗಳೇನು?

ಯೋಜನೆಯ ಉತ್ತಮ ಪ್ರಯೋಜನಗಳು ಈ ಕೆಳಗಿನಂತಿವೆ:

  • ಇದು ರೈತರಿಗೆ ದೊಡ್ಡ ಕೊಡುಗೆಯಾಗಿದೆ  – ಹಠಾತ್ ಹವಾಮಾನ ಬದಲಾವಣೆಗಳಿಂದಾಗಿ, ರೈತರು  ಇಳುವರಿಯಲ್ಲಿ ಹೊಡೆತವನ್ನು ಅನುಭವಿಸುತ್ತಿದ್ದಾರೆ.  ಈ ಪರಿಸ್ಥಿತಿಯಲ್ಲಿ, ಬೆಳೆಗಳಿಗೆ ನೀರು ಪೂರೈಕೆಯು  ರೈತರಿಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿದೆ. ರೈತರಿಗೆ ಈ ಯೋಜನೆಯು ಕೃಷಿಯಲ್ಲಿ ನೀರಾವರಿಯ  ಅಗತ್ಯತೆಯನ್ನು ಪೂರೈಸಲು ಕೊಳವೆ ಬಾವಿಗಳನ್ನು ಸ್ಥಾಪಿಸುವ ಮೂಲಕ ರೈತರಿಗೆ ಈ ಯೋಜನೆಯು ವರದಾನವಾಗಿ ಕಾರ್ಯನಿರ್ವಹಿಸುತ್ತದೆ.
  • ಇದು ನೀರಾವರಿ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ – ಡೀಸೆಲ್-ಚಾಲಿತ ಕೊಳವೆ ಬಾವಿಗಳು ದುಬಾರಿಯಾಗಿದೆ ಮತ್ತು ಹಣದುಬ್ಬರವು ರೈತರಿಗೆ ಸಮಸ್ಯೆಯನ್ನು ಉಂಟುಮಾಡಬಹುದು, ಏಕೆಂದರೆ ಅವರು ಈಗಾಗಲೇ ಉತ್ಪಾದನೆಯ ಕುಸಿತದಿಂದ ತೊಂದರೆಗೊಳಗಾಗಿದ್ದಾರೆ.
  • ಕಡಿಮೆಯಾದ ಇಳುವರಿಯನ್ನು ರೈತರು ಎದುರಿಸಬೇಕಾಗಿದೆ. ಈ  ಯೋಜನೆಯು ನೀರಾವರಿಗೆ ಸಹಾಯ ಮಾಡುವ ವಿದ್ಯುತ್ ಕೊಳವೆ ಬಾವಿಗಳನ್ನು ಸ್ಥಾಪಿಸಲು ಅನುದಾನವನ್ನು ನೀಡುತ್ತದೆ  ಮತ್ತು ಕೃಷಿ ನೀರಾವರಿಯನ್ನು ಹೆಚ್ಚು ಸುಲಭಗೊಳಿಸುತ್ತದೆ.  ಬೆಳೆ ಉತ್ಪಾದನೆಯನ್ನು ಹೆಚ್ಚಿಸುವಂತೆ ಮಾಡುತ್ತದೆ ಮತ್ತು ರೈತರಿಗೆ ಅಂತಿಮವಾಗಿ ಹೆಚ್ಚು ಇಳುವರಿ ಪಡೆಯಲು  ಸಹಾಯ ಮಾಡುತ್ತದೆ.

ಖಾಸಗಿ ಕೊಳವೆ ಭಾವಿ  ಸಂಪರ್ಕ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

ರೈತರು ಯೋಜನೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅದಕ್ಕೆ ಕೆಳಗಿನ ಹಂತಗಳು ಸಹಾಯ ಮಾಡಬಹುದು:

  • ಹಂತ 1– ರೈತರು ಅಧಿಕೃತ ವೆಬ್‌ಸೈಟ್ ಆಗಿರುವ https://www.upenergy.in/ ಗೆ ಭೇಟಿ ನೀಡಿ
  • ಹಂತ 2 – ಹೊಸ “ಟ್ಯೂಬ್‌ವೆಲ್ ಸಂಪರ್ಕ” ವಿಭಾಗ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
  • ಹಂತ 3 – ಅದರ ನಂತರ “ಟ್ಯೂಬ್‌ವೆಲ್ ಕನೆಕ್ಷನ್ ಆನ್‌ಲೈನ್ ಅಪ್ಲಿಕೇಶನ್” ಮೇಲೆ  ಕ್ಲಿಕ್ ಮಾಡಿ
  • ಹಂತ 4 -ಹೊಸ ನೋಂದಣಿ ಆಯ್ಕೆಯನ್ನು ಕ್ಲಿಕ್ ಮಾಡಿ
  • ಹಂತ 5 – ನೋಂದಣಿ ವಿವರಗಳನ್ನು ಭರ್ತಿ ಮಾಡಿ
  • ಹಂತ 6 – ಫಾರ್ಮ್ ಅನ್ನು ಸಲ್ಲಿಸಿ.
  • ಎಲ್ಲ ವಿವರಗಳನ್ನು ಸಲ್ಲಿಸಿದ ನಂತರ ರೈತರ ಜಮೀನಿನಲ್ಲಿ ಕೊಳವೆ ಬಾವಿ ಅಳವಡಿಸಲಾಗುವುದು.

ಅಗತ್ಯವಿರುವ ದಾಖಲೆಗಳೇನು?

  • ಅಪ್ಲಿಕೇಶನ್ ಸಂಖ್ಯೆ
  • ರಶೀದಿ ಸಂಖ್ಯೆ
  • ಮೊಬೈಲ್ ಸಂಖ್ಯೆ

ನಿರ್ಣಯ :

ಖಾಸಗಿ ಕೊಳವೆ ಬಾವಿ ಸಂಪರ್ಕ ಯೋಜನೆಯು, ರೈತರಿಗೆ ನೀರಿನ ಅವಶ್ಯಕತೆ ಮತ್ತು ಅವರ ಕೃಷಿ ಅಗತ್ಯಗಳನ್ನು ಪೂರೈಸುತ್ತದೆ.  ಈ ಯೋಜನೆಯಡಿ ಅಳವಡಿಸಲಾಗಿರುವ ಕೊಳವೆಬಾವಿಗಳು ರೈತರಿಗೆ ಹೆಚ್ಚು  ನೀರಿನ ಅಗತ್ಯತೆಗಳನ್ನು ನೆರವೇರಿಸುತ್ತದೆ .  ಹಣ್ಣುಗಳು, ಭತ್ತ, ಹತ್ತಿ ಮತ್ತು ಇತರ ತರಕಾರಿ ಬೆಳೆಗಳನ್ನು ಬೆಳೆಯಲು ರೈತರಿಗೆ ಅನುದಾನ ನೀಡುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ರೈತರು ಸುಲಭವಾಗಿ ಅಂತರ್ಜಲವನ್ನು ಕಾಪಾಡಲು  ಪರಿಣಾಮಕಾರಿಯಾಗಿದೆ.   ಈ ಎಲ್ಲಾ ಪ್ರಯೋಜನಗಳ ಜೊತೆಗೆ ಉತ್ತಮ ಬೆಳೆ ಇಳುವರಿಯನ್ನು ಪಡೆಯಲು ಸಹಾಯ ಮಾಡುತ್ತದೆ, ಈ ಯೋಜನೆಯು,ಅಧಿಕ ಬೆಳೆ ಲಾಭ ಪಡೆಯಲು  ಅನುಕೂಲಕರವಾಗಿದೆ.

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024