News

ಕೃಷಿಕರ ಲಾಭದಾಯಕ ಕೊಯ್ಲು: ಕೃಷಿ ಉತ್ಪನ್ನಗಳ ರಪ್ತುವಿನಲ್ಲಿ ಭಾರತ ಎತ್ತರದ ಸ್ಥಾನ  ಪಡೆದಿದೆ

ಪರಿಚಯ

            ವಾಣಿಜ್ಯ ಗುಪ್ತಚರ ಮತ್ತು ಅಂಕಿ ಅಂಶಗಳ ನಿರ್ದೇಶನಾಲಯದ ವರದಿಗಳ ಪ್ರಕಾರ, ಭಾರತದ ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು, ಪ್ರಸ್ತುತ 2022-23ನೇ ಸಾಲಿನ 9 ತಿಂಗಳ ಅಂದರೆ ಏಪ್ರಿಲ್ಡಿಸೆಂಬರ್ ವರದಿಗಳ ಪ್ರಕಾರ ಕಳೆದ ಸಾಲಿಗಿಂತ ಶೇಕಡ 13 ರಷ್ಟು ಏರಿಕೆ ಕಂಡುಬಂದಿದೆ. ಪ್ರಸಕ್ತ ಸಾಲಿನಲ್ಲಿ ಭಾರತದ ರಫ್ತು ಗುರಿ ಶೇಕಡ 84 ರಷ್ಟು ಸಾಧನೆ ಹೊಂದಲು ಕೃಷಿ ಮತ್ತು ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಮಾರ್ಗದರ್ಶಣವು ಪ್ರಮುಖ ಪಾತ್ರವಹಿಸಿದೆ. ಪ್ರಸಕ್ತ ಸಾಲಿನಲ್ಲಿ ದ್ವಿದಳ ಧಾನ್ಯಗಳ ರಫ್ತು ಶೇಕಡ 80.38 ರಷ್ಟು ಹೆಚ್ಚಾಗಿದ್ದು, ಡೈರಿ ಉತ್ಪನ್ನಗಳ ರಪ್ತು ಶೇಕಡ 19.45 ರಷ್ಟು ಏರಿಕೆಯನ್ನು ದಾಖಲಿಸಿದೆ.

ಅವಲೋಕನ

   ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು ಕಳೆದ ಸಾಲಿಗೆ ಹೋಲಿಸಿದಾಗ, ಪ್ರಸ್ತುತ ಸಾಲಿನಲ್ಲಿ ಪ್ರಸಕ್ತ ಅವಧಿಗೆ ಶೇಕಡ 13 ರಷ್ಟು ಏರಿಕೆ ಕಂಡುಬಂದಿದೆ. ಸದರಿ ಸಾಧನೆ ಗೈಯಲು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಕೃಷಿ ಮತ್ತು ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಸತತ ಪ್ರಯತ್ನಗಳು ಕಂಡು ಬರುತ್ತವೆ. ಪ್ರಸ್ತುತ ಆರ್ಥಿಕ ಸಾಲಿನ 9 ತಿಂಗಳ ಅವಧಿಯಲ್ಲಿ APEDA ಉತ್ಪನ್ನಗಳ ರಫ್ತು ಒಟ್ಟಾರೆ 19.7 USD ಶತಕೋಟಿಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ನಿಗದಿಪಡಿಸಿರುವ ರಫ್ತುವಿನಲ್ಲಿ ಶೇಕಡ 84 ರಷ್ಟು ಸಾಧನೆ ಸಾಧಿಸಿದೆ. ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ಉಪಕರಣಗಳ ರಫ್ತು ಶೇಕಡ 30.36 ರಷ್ಟು ಏರಿಕೆ ಕಂಡುಬಂದರೆ, ತಾಜಾ ಹಣ್ಣು ಹಾಗೂ ತರಕಾರಿಗಳ  ರಫ್ತು ಶೇಕಡ 4 ರಷ್ಟು ಹೆಚ್ಚಾಗಿದೆ. ಇಷ್ಟೇ ಅಲ್ಲದೇ, ಧಾನ್ಯಗಳ ಹಾಗೂ ಇತರೆ ಧಾನ್ಯಗಳ ಸಂಸ್ಕರಿಸಿದ ಪದಾರ್ಥಗಳ ರಫ್ತು ಶೇಕಡ 24.35 ರಷ್ಟು ಹೆಚ್ಚಿದೆ. ಜೊತೆಗೆ ಡೈರಿ ಉತ್ಪನ್ನಗಳು, ಗೋಧಿ ಮತ್ತು ಇತರ ಧಾನ್ಯಗಳ ಉತ್ಪನ್ನಗಳ ರಫ್ತುವಿನಲ್ಲಿ ಕೂಡ ಏರಿಕೆ ದಾಖಲೆಯಾಗಿದೆ. ಕೃಷಿ ಮತ್ತು ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತುವಿನಲ್ಲಿ ಏರಿಕೆಯು APEDAವಿನ ಉಪಕ್ರಮಗಳಿಂದ ಸಾಧ್ಯವಾಗಿದೆ. ವಿವಿಧ ದೇಶಗಳಲ್ಲಿ B2B ಪ್ರದರ್ಶನಗಳನ್ನು ಆಯೋಜಿಸುವುದು, ಭಾರತದ ಭೌಗೋಳಿಕ ಸೂಚನೆಗಳನ್ನು ಉತ್ತೇಜಿಸುವಂತಹ ರಫ್ತುಗಳನ್ನು ಪ್ರಚಾರ ಮಾಡುವುದು, ಇತ್ಯಾದಿ.

         ಭಾರತದಲ್ಲಿ ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತುವಿನಲ್ಲಿ ಏರಿಕೆಯು ರೈತರಿಗೆ ಲಾಭದಾಯಕವಾಗಿದೆ. ಕೃಷಿ ಮತ್ತು ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ ಕೈಗೊಂಡ ಉಪಕ್ರಮಗಳಿಂದ ಭಾರತದಲ್ಲಿ ರಫ್ತು ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸಿದೆ, ಹೆಚ್ಚಿನ ಭಾರತೀಯ ಕೃಷಿ ಉತ್ಪನ್ನಗಳ ರಫ್ತು ಕಂಡುಬಂದಿದೆ, ರೈತರಿಗೆ ತಾವು ಬೆಳೆದ ಉತ್ಪನ್ನಗಳಿಗೆ ಲಾಭ ಕಲ್ಪಿಸಲು ಹೆಚ್ಚಿನ ಅವಕಾಶಗಳುನ್ನು ಹಾಗೂ ಮಾರುಕಟ್ಟೆಯನ್ನು ಒದಗಿಸಿದೆ. ಪ್ರತ್ಯೇಕವಾಗಿ ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ಉತ್ಪನ್ನಗಳು, ಡೈರಿ ಮತ್ತು ಕೋಳಿ ಉತ್ಪನ್ನಗಳ ರಪ್ತು, ಭಾರತೀಯ ಕೃಷಿ ಉತ್ಪನ್ನಗಳಿಗೆ ಬೇಡಿಕೆಯು  ಹೆಚ್ಚಾಗಿದೆ ಎಂದು ನಿರೂಪಿಸಿದೆ. ಇದರಿಂದ ರೈತರಿಗೆ ತಮ್ಮ ತಮ್ಮ ಉತ್ಪನ್ನಗಳಿಗೆ ಹೆಚ್ಚಿನ ಆದಾಯವನ್ನು ಸಾಧಿಸುವಂತೆ ಅನುವು ಮಾಡುವ ಮೂಲಕ ಉಪಕಾರಿಯಾಗಿ ಹೊರಹೊಮ್ಮಿದೆ. ಅದಲ್ಲದೇ, ವಿವಿಧ ದೇಶಗಳಲ್ಲಿ B2B ಪ್ರದರ್ಶನಗಳ ಮೂಲಕ ಭಾರತೀಯ ಉತ್ಪನ್ನಗಳ ಉತ್ತೇಜನ ಜೊತೆಗೆ  ಹೊಸ ಮಾರುಕಟ್ಟೆಗಳ ಅನ್ವೇಷಣೆಯು APEDAದ ಪ್ರಯತ್ನವಾಗಿದ್ದು, ರೈತರಿಗೆ ತಮ್ಮ ತಮ್ಮ ಉತ್ಪನ್ನಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಹೊಸವೆದಿಕೆಯನ್ನು ಸೃಷ್ಟಿಸಿದೆ.

ಪ್ರಮುಖ ಅಂಶಗಳು

  •     ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು ಹಿಂದಿನ ಸಾಲಿಗೆ (ಏಪ್ರಿಲ್-ಡಿಸೆಂಬರ್‌2022) ಹೋಲಿಸಿದಾಗ, ಇದೇ ಅವಧಿಗೆ ಶೇಕಡ 13 ರಷ್ಟು ಏರಿಕೆಯಾಗಿದೆ.
  •     ಪ್ರಸ್ತುತ 2022-23ನೇ ಸಾಲಿನ ರಪ್ತು 23.6 USD ಶತಕೋಟಿಯಾಗಿದ್ದು, ಶೇಕಡ 84 ರಷ್ಟು ಸಾಧನೆ ಮಾಡಲಾಗಿದೆ.
  •     ಹಣ್ಣು ಮತ್ತು ತರಕಾರಿಗಳ ಸಂಸ್ಕರಣಾ ಉಪಕರಣಗಳ ರಫ್ತು ಶೇಕಡ 30.36 ರಷ್ಟು ಏರಿಕೆ ಕಂಡುಬಂದರೆ, ತಾಜಾ ಹಣ್ಣು ಹಾಗೂ ತರಕಾರಿಗಳ  ರಫ್ತು ಶೇಕಡ 4 ರಷ್ಟು ಹೆಚ್ಚಾಗಿದೆ.
  •     ಧ್ಯಾನ್ಯಗಳ ಹಾಗೂ ಇತರೆ ಧ್ಯಾನ್ಯಗಳ ಸಂಸ್ಕರಿಸಿದ ಪದಾರ್ಥಗಳ ರಫ್ತು ಶೇಕಡ 24.35 ರಷ್ಟು ಹೆಚ್ಚಿದೆ
  •     ಮಸೂರ ರಫ್ತು ಶೇಕಡ 80.38 ರಷ್ಟು ಕಂಡು ಬಂದಿದ್ದು, ಕೋಳಿ ರಫ್ತು ಶೇಕಡ 91.70 ರಷ್ಟು ಏರಿಕೆಯಾಗಿದೆ.
  •     ಬಾಸುಮತಿ ಅಕ್ಕಿಯ ರಫ್ತು ಶೇಕಡ 40.26 ಹಾಗೂ ಇತರೆ ಅಕ್ಕಿಯ ರಫ್ತು ಶೇಕಡ 4 ರಷ್ಟು ಹೆಚ್ಚಾಗಿದೆ.
  •     ಇತರೆ ಧಾನ್ಯಗಳು ರಫ್ತು ಶೇಕಡ 13.64 ರಷ್ಟಾಗಿದ್ದು,  ಗಿರಣಿ ಉತ್ಪನ್ನಗಳ ರಫ್ತು ಶೇಕಡ 35.71 ರಷ್ಟಿದೆ.
  •     ಕಳೆದ 2021-22 ನೇ ಸಾಲಿನಲ್ಲಿ ದೇಶದ ಕೃಷಿ ಉತ್ಪನ್ನಗಳ ರಫ್ತು ಶೇಕಡ 19.92% ರಷ್ಟು ಸಾಧಿಸಿದ್ದು ಸುಮಾರು 50 ಬಿಲಿಯನ್ USD ತಲುಪಿದೆ.
  •     B2B ಪ್ರದರ್ಶನಗಳು ಮತ್ತು ಮಾರುಕಟ್ಟೆ ಪ್ರಚಾರಗಳಂತಹ ವಿವಿಧ ಉಪಕ್ರಮಗಳನ್ನು ಮಾಡಿರುವ APEDA ಸದರಿ ಸಾಧನೆ ಮಾಡಲು ಕಾರಣವಾಗಿದೆ.
  •     ಭೌಗೋಳಿಕ ಸೂಚನೆಗಳನ್ನು ಉತ್ತೇಜಿಸುವುದರ ಜೊತೆಗೆ ಭಾರತೀಯ ವೈನ್ ರಫ್ತುಗಳನ್ನು ಹೆಚ್ಚಿಸಲು APEDA ಕ್ರಮಗಳನ್ನು ತೆಗೆದುಕೊಂಡಿದೆ.

ತೀರ್ಮಾನ

            ಕೃಷಿ ಮತ್ತು ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ (APEDA) ಪ್ರಯತ್ನಗಳಿಂದಾಗಿ ಭಾರತದ ಕೃಷಿ ಹಾಗೂ ಆಹಾರ ಸಂಸ್ಕರಣಾ ಉತ್ಪನ್ನಗಳ ರಫ್ತುವಿನಲ್ಲಿ ಕಂಡು ಬಂದಿರುವ ಏರಿಕೆಯು ಪ್ರಮುಖವಾಗಿ ರೈತರಿಗೆ ಉತ್ತೇಜನವಾಗಿದೆ. ಹೆಚ್ಚಾಗಿರುವ ರಫ್ತಿನಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನು ಜಾಗತಿಕವಾಗಿ ಮಾರಾಟ ಮಾಡಲು ಹೆಚ್ಚಿನ ಅವಕಾಶಗಳನ್ನು ಸೂಚಿಸುತ್ತವೆ, ಇದು ಸಂಭಾವ್ಯ ಬೆಲೆ ಏರಿಕೆ ಮತ್ತು ಹೆಚ್ಚಿದ ಆದಾಯಕ್ಕೆ ಕಾರಣವಾಗುತ್ತದೆ. B2B ಪ್ರದರ್ಶನಗಳು ಮತ್ತು ಭೌಗೋಳಿಕ ಸೂಚನೆಗಳ ಮೂಲಕ ವಿವಿಧ ದೇಶಗಳಲ್ಲಿ ಭಾರತೀಯ ಕೃಷಿ ಉತ್ಪನ್ನಗಳನ್ನು ಉತ್ತೇಜಿಸಲು APEDAದ ಪ್ರಯತ್ನಗಳು ರೈತರಿಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಇನ್ನಷ್ಟು ಅವಕಾಶಗಳನ್ನು ಒದಗಿಸುವ ಮೂಲಕ ಹೊಸ ಮಾರುಕಟ್ಟೆಗಳನ್ನು ತೆರೆಯುತ್ತಿವೆ. ಒಟ್ಟಿನಲ್ಲಿ, ಇದು ಭಾರತದ ಕೃಷಿಕರಿಗೆ ಲಾಭದಾಯಕವಾಗಿದೆ.

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024