News

ಪ್ರಾಣಿಗಳ ಅನುವಂಶಿಕ ಸಂಪನ್ಮೂಲ ಸಂರಕ್ಷಣೆಯಲ್ಲಿ ಭಾರತ ಮುಂಚೂಣಿಯಲ್ಲಿದೆ: ಜಾಗತಿಕ ಅಧಿವೇಶನದಲ್ಲಿ ಉಪಾಧ್ಯಕ್ಷತೆ ವಹಿಸಲು ಆಯ್ಕೆ

ಪರಿಚಯ

ಪ್ರಾಣಿಗಳ ಅನುವಂಶಿಕ ಸಂಪನ್ಮೂಲದ 12ನೇ ಅಂತರ್ ಸರ್ಕಾರಿ ತಾಂತ್ರಿಕ  ಕಾರ್ಯಗಳ ಸಂಘದ (ITWG) ಅಧಿವೇಶನವು ರೋಮ್ ನಲ್ಲಿ ಆಯೋಜಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಭಾರತ ದೇಶವನ್ನು ಉಪಾಧ್ಯಕ್ಷತೆ ವಹಿಸಲು ಆಯ್ಕೆ ಮಾಡಲಾಗಿದ್ದು, ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು  ಪ್ರತಿನಿಧಿಸಿದೆ. FAO ಆಯೋಗದ ಆಹಾರ ಮತ್ತು ಕೃಷಿ ಅನುವಂಶಿಕ ಸಂಪನ್ಮೂಲದಿಂದ ಅಂತರ ಸರ್ಕಾರಿ ತಾಂತ್ರಿಕ ಕಾರ್ಯಗಳ ಸಂಘ (ITWG) ಸ್ಥಾಪನೆಯಾಗಿದ್ದು,  ಸದರಿಯು  ಪ್ರಾಣಿಗಳ ಅನುವಂಶಿಕ ಸಂಪನ್ಮೂಲ ಸಂಬಂಧಿತ ತಾಂತ್ರಿಕ ಸಮಸ್ಯೆಗಳ ಪರಿಶೀಲನೆ ಹಾಗೂ ಆಯೋಗಕ್ಕೆ

ಸೂಕ್ತ ಶಿಫಾರಸುಗಳನ್ನು ಮಾಡಿದೆ.

ಅವಲೋಕನ-

ಪ್ರಾಣಿಗಳ ಅನುವಂಶಿಕ ಸಂಪನ್ಮೂಲದ 12ನೇ  ITWG ಅಧಿವೇಶನವು, ರೋಮ್ ನಲ್ಲಿ ಆಯೋಜಿಸಲಾಗಿತ್ತು. ಈ ಅಧಿವೇಶನಕ್ಕೆ ಭಾರತ ದೇಶವನ್ನು ಉಪಾಧ್ಯಕ್ಷತೆ ವಹಿಸಲು ಆಯ್ಕೆ ಮಾಡಲಾಗಿದ್ದು,ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸಿದೆ. FAO ಆಯೋಗದ ಆಹಾರ ಮತ್ತು ಕೃಷಿ ಅನುವಂಶಿಕ ಸಂಪನ್ಮೂಲವು ITWG ವಿನ  ಸ್ಥಾಪನೆಗೆ ಕಾರಣವಾಗಿದ್ದು, ಸದರಿ ಕಾರ್ಯಕ್ರಮದ ಮುಖ್ಯ ಉದ್ದೇಶ ಪ್ರಾಣಿಗಳ ಅನುವಂಶಿಕ  ಸಂಪನ್ಮೂಲ ಸಂಬಂಧಿತ ತಾಂತ್ರಿಕ ಸಮಸ್ಯೆಗಳ ಪರಿಶೀಲನೆ, ಮುಂದೂವರಿದು ಪ್ರಾಣಿಗಳ ಅನುವಂಶಿಕ  ಸಂಪನ್ಮೂಲ ಸಂಬಂಧಿತ ಆಯೋಗದ ಕಾರ್ಯಕ್ರಮಗಳ ಕುರಿತು ಸೂಕ್ತ ಶಿಫಾರಸ್ಸುಗಳನ್ನು ನೀಡುವುದು. ಸದರಿ ಅಧಿವೇಶನದಲ್ಲಿ ಕ್ರಿಯಾ ಯೋಜನೆಯ ಅನುಷ್ಠಾನ, ಪ್ರಾಣಿಗಳ ಅನುವಂಶಿಕ  ಸಂಪನ್ಮೂಲದ ವೈವಿಧ್ಯತೆಯ ಮೇಲ್ವಿಚಾರಣೆ, ದೇಶದ 3ನೇ ವರದಿಯನ್ನು ಸಿದ್ಧಪಡಿಸುವುದು ,ಮುಂತಾದ ಪ್ರಾಣಿಗಳ ಅನುವಂಶಿಕ ಸಂಪನ್ಮೂಲ ಸಂಬಂಧಿತ ಹಲವಾರು ಪ್ರಮುಖ ಅಂಶಗಳನ್ನು ಚರ್ಚಿಸಲಾಯಿತು. ಭಾರತವು, ದೇಶೀಯ ಪ್ರಾಣಿಗಳ ವೈವಿಧ್ಯತೆ- ಮಾಹಿತಿ ವ್ಯವಸ್ಥೆ  (DAD-IS)ಯಲ್ಲಿ  ಮಾಹಿತಿಯನ್ನು ಸಂಗ್ರಹಿಸುವ ವಿಧಾನವನ್ನು ಪ್ರಸ್ತುತಪಡಿಸಿತು, ಜೊತೆಗೆ ದೇಶೀಯ ಪ್ರಾಣಿಗಳ ಸಂಖ್ಯೆಯನ್ನು ಪಟ್ಟಿಮಾಡುವ ಹಾಗೂ ಸಂಘಟಿಸು ವ್ಯವಸ್ಥೆಯನ್ನು ತಿಳಿಸಿದೆ. ಸದರಿ ಕಾರ್ಯಾಗಾರವು ಸೂಕ್ಷ್ಮಜೀವಿಗಳ ಪಾತ್ರ, ಹವಾಮಾನ ಬದಲಾವಣೆಗೆ ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವಲ್ಲಿ ಆನುವಂಶಿಕ ಸಂಪನ್ಮೂಲಗಳ ಪಾತ್ರವನ್ನು ಮೆಲುಕುಹಾಕಿದೆ.

       ಪ್ರಾಣಿಗಳ ಅನುವಂಶಿಕ ಸಂಪನ್ಮೂಲದ ITWGವು ಮುಖ್ಯವಾಗಿ ಪ್ರಾಣಿಗಳ ಅನುವಂಶಿಕ ಸಂಪನ್ಮೂಲದ ಸಂರಕ್ಷಣೆ, ಸುಸ್ಥಿರ ಬಳಕೆ ಹಾಗೂ ಸದರಿಯ ಅಭಿವೃದ್ಧಿ ಮೇಲೆ ಹಚ್ಚಿನ ನಿಗಾ ತೋರಿದೆ. ಇದು ಜನರ ಜೀವನೋಪಾಯ, ಆಹಾರ ಭದ್ರತೆ ಹಾಗೂ ಪ್ರಪಂಚದಾದ್ಯಂತ ಲಕ್ಷಾಂತರ ಜನರ ಒಳಿತಿಗಾಗಿ ಅತ್ಯಗತ್ಯವಾಗಿದೆ. ಏಕೆಂದರೆ, ಇದರಿಂದ ಕೃಷಿ ಮತ್ತು ಜಾನುವಾರು ವಲಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಜನರಿಗೆ ಹಾಗೂ ಜಾನುವಾರು ಮೂಲದ ಆಹಾರವನ್ನು ಅವಲಂಬಿಸಿರುವವರಿಗೆ ಪ್ರಯೋಜಕಾರಿಯಾಗಲಿದೆ. ಅದಲ್ಲದೇ, ಪ್ರಾಣಿಗಳ ಆನುವಂಶಿಕ ಸಂಪನ್ಮೂಲಗಳ ಸಂರಕ್ಷಣೆಯಿಂದ ಪರಿಸರ ಹಾಗೂ ಜೀವ ವೈವಿಧ್ಯತೆಯ ಮೇಲೆ ಸಕಾರಾತ್ಮಕ ಪ್ರಭಾವ ಬೀರಲಿದೆ.

ಪ್ರಮುಖ ಮಾಹಿತಿ

 ಪ್ರಾಣಿಗಳ ಅನುವಂಶಿಕ  ಸಂಪನ್ಮೂಲದ 12ನೇ ಅಂತರ್ ಸರ್ಕಾರಿ ತಾಂತ್ರಿಕ  ಕಾರ್ಯಗಳ ಸಂಘದ (ITWG) ಅಧಿವೇಶನಕ್ಕೆ ಭಾರತ ದೇಶವನ್ನು ಉಪಾಧ್ಯಕ್ಷತೆ ವಹಿಸಲು ಆಯ್ಕೆ ಮಾಡಲಾಗಿದ್ದು, ಏಷ್ಯಾ ಮತ್ತು ಪೆಸಿಫಿಕ್ ಖಂಡವನ್ನು ಪ್ರತಿನಿಧಿಸಿದೆ.

  • FAO ಆಯೋಗದ ಆಹಾರ ಮತ್ತು ಕೃಷಿ ಅನುವಂಶಿಕ ಸಂಪನ್ಮೂಲದಿಂದ  ITWG ಸ್ಥಾಪನೆಯಾಗಿದ್ದು,  ಸದರಿಯು ಪ್ರಾಣಿಗಳ ಅನುವಂಶಿಕ ಸಂಪನ್ಮೂಲ ಸಂಬಂಧಿತ ತಾಂತ್ರಿಕ ಸಮಸ್ಯೆಗಳ ಪರಿಶೀಲನೆ ಹಾಗೂ ಆಯೋಗಕ್ಕೆ ಸೂಕ್ತ ಶಿಫಾರಸ್ಸುಗಳನ್ನು ಮಾಡಿದೆ.

ಸದರಿ ಅಧಿವೇಶನದಲ್ಲಿ ಕ್ರಿಯಾ ಯೋಜನೆಯ ಅನುಷ್ಠಾನ, ಪ್ರಾಣಿಗಳ ಅನುವಂಶಿಕ  ಸಂಪನ್ಮೂಲದ ವೈವಿಧ್ಯತೆಯ ಮೇಲ್ವಿಚಾರಣೆ, ದೇಶದ 3ನೇ ವರದಿಯನ್ನು ಸಿದ್ಧಪಡಿಸುವುದು, ಜೊತೆಗೆ ಪ್ರಾಣಿಗಳ ಅನುವಂಶಿಕ ಸಂಪನ್ಮೂಲ ಸಂಬಂಧಿತ ಹಲವಾರು ಪ್ರಮುಖ ಅಂಶಗಳನ್ನು ಚರ್ಚಿಸಲಾಯಿತು.

ಸೂಕ್ಷ್ಮಜೀವಿಗಳ ಪಾತ್ರ, ಹವಾಮಾನ ಬದಲಾವಣೆಗೆ ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವಲ್ಲಿ ಆನುವಂಶಿಕ ಸಂಪನ್ಮೂಲಗಳ ಪಾತ್ರವನ್ನು ಹಾಗೂ ಪ್ರಾಣಿಗಳ ಅನುವಂಶಿಕ  ಸಂಪನ್ಮೂಲ ಸಂಬಂಧಿತ ಲಾಭ ಹಂಚಿಕೆಯ ಕುರಿತು ಸದರಿ ಕಾರ್ಯಗಾರದಲ್ಲಿ ಚರ್ಚಿಸಲಾಯಿತು.

ದೇಶೀಯ ಪ್ರಾಣಿಗಳ ವೈವಿಧ್ಯತೆ- ಮಾಹಿತಿ ವ್ಯವಸ್ಥೆ(DAD-IS)ಯಲ್ಲಿ  ಮಾಹಿತಿಯನ್ನು ಸಂಗ್ರಹಿಸುವ ವಿಧಾನವನ್ನು ಪ್ರಸ್ತುತಪಡಿಸಿತು, ಜೊತೆಗೆ ದೇಶೀಯ ಪ್ರಾಣಿಗಳ ಸಂಖ್ಯೆಯನ್ನು ಪಟ್ಟಿಮಾಡುವ ವ್ಯವಸ್ಥೆಯನ್ನು ಭಾರತವು ಪ್ರಸ್ತುತ ಪಡಿಸಿದೆ.

ಜರ್ಮ್ ಪ್ಲಾಸ್ಮ್ ಕ್ರಯೋಸಂರಕ್ಷಣೆ  ಮತ್ತು AnGRನ ಅಸ್ಪಸ್ಟ ದಾಖಲೀಕರಣಕ್ಕೆ ರಾಷ್ಟ್ರೀಯ ಆದ್ಯತೆಗಳನ್ನು ಸದಸ್ಯರು ಪ್ರಸ್ತುತ ಪಡಿಸಿದರು, ಜೊತೆಗೆ ಪ್ರಶಂಶಣೆ ನೀಡಿದರು.

  • ಪ್ರಾಣಿಗಳ ಅನುವಂಶಿಕ ಸಂಪನ್ಮೂಲದ ಸಂರಕ್ಷಣೆಯಿಂದ ಪರಿಸರದ ಮೇಲೆ, ಜೀವವೈವಿಧ್ಯತೆಯ ಮೇಲೆ, ಆಹಾರ ಭದ್ರತೆ ಹಾಗೂ ಪ್ರಾಣಿಮೂಲದ ಆಹಾರವನ್ನು ಅವಲಂಬಿಸುವವರ ಜೀವನೋಪಾಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರಲಿದೆ.

ತೀರ್ಮಾನ-

        ಪ್ರಾಣಿಗಳ ಅನುವಂಶಿಕ  ಸಂಪನ್ಮೂಲದ 12ನೇ ITWG ಅಧಿವೇಶನವು, ರೋಮ್ ನಲ್ಲಿ, ಜನವರಿ 18 ರಿಂದ 20,2023 ರಲ್ಲಿ ಜರುಗಿತು.  ಸದರಿ ಅಧಿವೇಶನದಲ್ಲಿ ಭಾರತ ದೇಶವನ್ನುಉಪಾಧ್ಯಕ್ಷತೆ ವಹಿಸಲು ಆಯ್ಕೆ ಮಾಡಲಾಗಿದ್ದು, ಏಷ್ಯಾ ಮತ್ತು ಪೆಸಿಫಿಕ್ ಪ್ರದೇಶವನ್ನು ಪ್ರತಿನಿಧಿಸಿದೆ .ಡಾ||ಬಿ ಎನ್ ತ್ರಿಪಾಠಿ, ಉಪ ಮಹಾ ನಿದೇರ್ಶಕರು (ಪ್ರಾಣಿ ವಿಜ್ಞಾನ) ಹಾಗೂ ಭಾರತದ ರಾಷ್ಟ್ರೀಯ ಸಂಯೋಜಕರು, ದೇಶೀಯ ಪ್ರಾಣಿಗಳ ವೈವಿಧ್ಯತೆ- ಮಾಹಿತಿ ವ್ಯವಸ್ಥೆ(DAD-IS)ಯಲ್ಲಿ ಮಾಹಿತಿ ನವೀಕರಿಸುವಲ್ಲಿ ಅನುಭವವನ್ನು ಹಂಚಿಕೊಂಡಿದ್ದರು. ಈ ಅಧಿವೇಶನದಲ್ಲಿ ಮುಖ್ಯವಾಗಿ ಕ್ರಿಯಾ ಯೋಜನೆಯ ಅನುಷ್ಠಾನದ ಪರಿಶೀಲನೆ, ಪ್ರಾಣಿಗಳ ಅನುವಂಶಿಕ  ಸಂಪನ್ಮೂಲದ ವೈವಿಧ್ಯತೆಯ ಮೇಲ್ವಿಚಾರಣೆ ಹಾಗೂ ದೇಶದ 3ನೇ ವರದಿಯನ್ನು ಸಿದ್ಧಪಡಿಸುವುದಾಗಿತ್ತು. ಮುಂತಾದ ಪ್ರಾಣಿಗಳ ಅನುವಂಶಿಕ  ಸಂಪನ್ಮೂಲ ಸಂಬಂಧಿತ ಹಲವಾರು ಪ್ರಮುಖ ಅಂಶಗಳನ್ನು ಚರ್ಚಿಸಲಾಯಿತು. 

ಇದರ ಜೊತೆಗೆ ಸೂಕ್ಷ್ಮಜೀವಿಗಳ ಪಾತ್ರ, ಹವಾಮಾನ ಬದಲಾವಣೆಗೆ ಹಾಗೂ ಹವಾಮಾನಕ್ಕೆ ಹೊಂದಿಕೊಳ್ಳುವಲ್ಲಿ ಆನುವಂಶಿಕ ಸಂಪನ್ಮೂಲಗಳ ಪಾತ್ರವನ್ನು, ಹಾಗೂ ಪ್ರಾಣಿಗಳ ಅನುವಂಶಿಕ ಸಂಪನ್ಮೂಲ ಸಂಬಂಧಿತ  ಪ್ರವೇಶ,ಲಾಭ ಹಂಚಿಕೆಯ ಕುರಿತು ಚರ್ಚಿಸಲಾಯಿತು.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025