News

ಬದಲಾವಣೆಯ ಕ್ರಾಂತಿ: “ಕೃಷಿ ಕ್ಷೇತ್ರದಲ್ಲಿ ಸಮರ್ಥ ಮತ್ತು ಸುಸ್ಥಿರ ಬದಲಾವಣೆಗಾಗಿ ಜಿ20 ದೇಶಗಳ ಸಹಭಾಗಿತ್ವ”

 ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ನೇತೃತ್ವದಲ್ಲಿ, ಭಾರತವು ಜಿ 20 ರ ಕೃಷಿ ಕಾರ್ಯಕಾರಿ ಗುಂಪು (AWG) ಸಚಿವರ ಸಭೆಯ ಮೂರು ದಿನಗಳ ಕಾರ್ಯಕ್ರಮವನ್ನು ಹೈದರಾಬಾದ್‌ನಲ್ಲಿ 2023 ಜೂನ್ 15 ರಿಂದ 17 ರವರೆಗೆ ಆಯೋಜಿಸಲಾಗಿತ್ತು. ಪ್ರಮುಖ ಕೃಷಿ ತಜ್ಞರು, ಮಂತ್ರಿಗಳು ಮತ್ತು ಸಂಸ್ಥೆಗಳ ಕ್ರಿಯಾತ್ಮಕ ಸಹಯೋಗದಲ್ಲಿ ಅವರು ಕೃಷಿಯಲ್ಲಿನ ಪ್ರಮುಖ ಸವಾಲುಗಳನ್ನು ಚರ್ಚಿಸಿದರು  ಮತ್ತು ಸುಸ್ಥಿರ ಕೃಷಿಯನ್ನು ಉತ್ತೇಜಿಸಿದರು. 

 ಈ ನಿರ್ಣಾಯಕ ಸಭೆಯಲ್ಲಿ ಅವರು, ಕೃಷಿಯ ಭವಿಷ್ಯವನ್ನು ರೂಪಿಸುವ ಮತ್ತು ಸಹಯೋಗವನ್ನು ಬೆಳೆಸುವ ಆದ್ಯತೆಯ ಕ್ಷೇತ್ರಗಳು ಮತ್ತು ಸಭೆಗಳ  ಬಗ್ಗೆ ಪರಿಶೀಲಿಸಿದರು. 

ಅವಲೋಕನ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಗೌರವಾನ್ವಿತ ನಾಯಕತ್ವದಲ್ಲಿ, ಕೃಷಿಯನ್ನು ಪ್ರಮುಖ ಚರ್ಚೆಯ ವಿಷಯವಾಗಿ ತೆಗೆದುಕೊಂಡು, ಭಾರತವು ಜಿ-20 ನ ಅಧ್ಯಕ್ಷರ ಜವಾಬ್ದಾರಿಯನ್ನು ಹೆಮ್ಮೆಯಿಂದ ವಹಿಸಿಕೊಂಡಿದೆ. ಜಿ –20 ಕೃಷಿ ಮಂತ್ರಿಗಳ ಸಭೆಯು ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು, ಸುಸ್ಥಿರ ಕೃಷಿಯನ್ನು ಉತ್ತೇಜಿಸಲು, ರೈತರಿಗೆ ಮೂಲಸೌಕರ್ಯವನ್ನು ಬಲಪಡಿಸಲು ಮತ್ತು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳುವಲ್ಲಿ ಸಹಯೋಗ ಮತ್ತು ಸಾಮೂಹಿಕ ಕ್ರಮವನ್ನು ಉತ್ತೇಜಿಸುವ ವೇದಿಕೆಯಾಗಿದೆ. 

 ಕೃಷಿ ಕಾರ್ಯಕಾರಿ ಗುಂಪುಸಭೆಯು ನಾಲ್ಕು ಆದ್ಯತೆಯ ಕ್ಷೇತ್ರಗಳನ್ನು ಒಳಗೊಂಡಿದೆ:- 

  • ಆಹಾರ ಭದ್ರತೆ ಮತ್ತು ಪೋಷಣೆ
  • ಸುಸ್ಥಿರ ಕೃಷಿ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಉತ್ತೇಜಿಸುವುದು
  • ಸಣ್ಣ ಮತ್ತು ಅತಿ ಸಣ್ಣ ರೈತರು ಮತ್ತು ಯುವಕರಿಗೆ ಮೂಲಸೌಕರ್ಯಗಳನ್ನು ಬಲಪಡಿಸುವುದು
  • ಕೃಷಿಯಲ್ಲಿ ಉತ್ತಮ ಪರಿವರ್ತನೆಗಾಗಿ ಡಿಜಿಟಲೀಕರಣವನ್ನು ಬಳಸಿಕೊಳ್ಳುವುದು

ಪ್ರಮುಖ ಅಂಶಗಳು

  • ಆಹಾರ ಭದ್ರತೆ, ಸುಸ್ಥಿರ ಕೃಷಿ, ಮೂಲಸೌಕರ್ಯ ಮತ್ತು ಡಿಜಿಟಲ್ ರೂಪಾಂತರಕ್ಕಾಗಿ ಜಿ 20 ಕೃಷಿ ಮಂತ್ರಿಗಳ ಸಭೆ ಹೈದರಾಬಾದ್‌ನಲ್ಲಿ ಪ್ರಾರಂಭವಾಯಿತು.
  • ಈ ಪ್ರದರ್ಶನದಲ್ಲಿ ತ್ಯಾಜ್ಯ ನಿರ್ವಹಣೆ, ಕೃಷಿ ಆವಿಷ್ಕಾರಗಳು ಮತ್ತು ನಿಖರ ಕೃಷಿ ಸೇರಿದಂತೆ ಕೃಷಿಯಲ್ಲಿನ ಸಾಧನೆಗಳನ್ನು ಪ್ರದರ್ಶಿಸುತ್ತದೆ.
  • ಸಭೆಯ ಆದ್ಯತೆಯ ಕ್ಷೇತ್ರಗಳಲ್ಲಿ – ಆಹಾರ ಭದ್ರತೆ, ಕೃಷಿ ವೈವಿಧ್ಯೀಕರಣ, ಹವಾಮಾನ ಸ್ಥಿತಿಸ್ಥಾಪಕ ಕೃಷಿ, ಸಣ್ಣ ರೈತರಿಗೆ ಮೂಲಸೌಕರ್ಯ ಮತ್ತು ಡಿಜಿಟಲೀಕರಣಕ್ಕೆ ಮುಖ್ಯ ಆಧ್ಯತೆ ನೀಡಲಾಗಿದೆ.
  • ಸಮಿತಿಯ ಚರ್ಚೆಯಲ್ಲಿ ರೈತರು ಕೃಷಿ ವ್ಯವಹಾರವನ್ನು ಲಾಭದಾಯಕವಾಗಿ ನಿರ್ವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ಸುಸ್ಥಿರ ಆಹಾರ ಪೂರೈಕೆ ಸರಪಳಿ ವ್ಯವಸ್ಥೆಗಳಿಗೆ ಒತ್ತು ನೀಡುತ್ತವೆ.
  • ಮುಖ್ಯವಾಗಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ಮತ್ತು ಡಿಜಿಟಲ್ ವಿಭಜನೆಯನ್ನು ಸೇತುವೆ ಮಾಡುವ ತಂತ್ರಗಳನ್ನು ಪ್ರದರ್ಶಿಸಲಾಯಿತು.
  • ಜಿ 20 ನಲ್ಲಿ ಭಾರತದ ನಾಯಕತ್ವವು ಜಾಗತಿಕ ಕೃಷಿ ಅಭಿವೃದ್ಧಿ ಮತ್ತು ಜ್ಞಾನ ಹಂಚಿಕೆಯಲ್ಲಿ ಅದರ ಬದ್ಧತೆಯನ್ನು ಪ್ರದರ್ಶಿಸುತ್ತದೆ.
  • ಸುಸ್ಥಿರ ಕೃಷಿ ಪದ್ಧತಿಗಳಿಗೆ ಕೊಡುಗೆ ನೀಡುವ ಮೊದಲ ಹೆಜ್ಜೆಯಾಗಿ ಭಾರತದ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ ಮತ್ತು ಬೆಳೆ ವೈವಿಧ್ಯತೆಯ ಜಾಗೃತಿ ಕಾರ್ಯಕ್ರಮಗಳು ಜಿ 20 ಸಭೆಗಳೊಂದಿಗಿನ ಒಮ್ಮತವನ್ನು ಸಾರುತ್ತದೆ.
  • ಭಾರತದಲ್ಲಿ ಜಾರಿಗೊಳಿಸಲಾದ ಯಶಸ್ವಿ ನೀತಿಗಳು ಮತ್ತು ಕಾರ್ಯಕ್ರಮಗಳು ಆಹಾರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ರೈತರ ಕಲ್ಯಾಣಕ್ಕೆ ಆದ್ಯತೆ ನೀಡುವಲ್ಲಿ ಯಶಸ್ವಿಯಾಯಿತು.
  • ಜಿ 20 ಕೃಷಿ ಮಂತ್ರಿಗಳ ಸಭೆಯು ಕೃಷಿಯಲ್ಲಿ ಚೇತರಿಸಿಕೊಳ್ಳುವ ಮತ್ತು ಸಮೃದ್ಧ ಭವಿಷ್ಯಕ್ಕಾಗಿ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ.

ಜಿ 20 ಪ್ರಾಮುಖ್ಯತೆ ಮತ್ತು ಭಾರತದ ಪಾತ್ರ:

G20 ನಲ್ಲಿ ಭಾರತದ ಭಾಗವಹಿಸುವಿಕೆ ಮತ್ತು ನಾಯಕತ್ವವು ಜಾಗತಿಕ ಕೃಷಿ ಅಭಿವೃದ್ಧಿಗೆ ಅದರ ಬದ್ಧತೆಯನ್ನು ತೋರಿಸುತ್ತದೆ. ಪ್ರಬಲವಾದ ಕೃಷಿ ಕ್ಷೇತ್ರದೊಂದಿಗೆ, ಭಾರತವು ತನ್ನ ಜ್ಞಾನ ಮತ್ತು ಅನುಭವಗಳನ್ನು ಜಾಗತಿಕ ಕೃಷಿ ಸಮುದಾಯದ ಪ್ರಯೋಜನಕ್ಕಾಗಿ ಹಂಚಿಕೊಂಡಿದೆ. ದೇಶದ ಪೂರ್ವಭಾವಿ ಕಾರ್ಯಕ್ರಮಗಳಾದ ಅಂತರಾಷ್ಟ್ರೀಯ ಸಿರಿಧಾನ್ಯಗಳ ವರ್ಷ, ಬೆಳೆ ವೈವಿಧ್ಯತೆಯ ಜಾಗೃತಿ ಕಾರ್ಯಕ್ರಮ, ಸಾವಯವ ಮತ್ತು ನೈಸರ್ಗಿಕ ಕೃಷಿಯ ಉತ್ತೇಜನ ಮತ್ತು ಐಸಿಎಆರ್ನ ಹವಾಮಾನ-ಸೂಕ್ತ ತಳಿಗಳು,  ಸುಸ್ಥಿರ ಕೃಷಿ ಮತ್ತು ರೈತರ ಕಲ್ಯಾಣಕ್ಕೆ ಅದರ ಸಮರ್ಪಣೆಯನ್ನು ಎತ್ತಿ ತೋರಿಸುತ್ತವೆ. ಭಾರತದ ಯಶಸ್ವಿ ನೀತಿಗಳು, ಪ್ರವರ್ತಕ ಕಾರ್ಯಕ್ರಮಗಳು ಮತ್ತು ಸುಸ್ಥಿರ ಪರಿಹಾರಗಳು ಆಹಾರ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಮತ್ತು ಕೃಷಿಯ ಭೂನೋಟವನ್ನು ಪರಿವರ್ತಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. 

ಗಮನಾರ್ಹ ಅಂಶಗಳು:

ಗೌರವಾನ್ವಿತ ರಾಜ್ಯ ಸಚಿವ, ಶ್ರೀ ಕೈಲಾಶ್ ಚೌಧರಿ ಅವರ ಉಪಸ್ಥಿತಿಯಲ್ಲಿ ಜಿ –20 ಕೃಷಿ ಮಂತ್ರಿಗಳ ಸಭೆಯ ಮೊದಲ ದಿನವು ವಸ್ತು ಪ್ರದರ್ಶನದ ಮೂಲಕ ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿನ ಸಾಧನೆಗಳನ್ನು ಪ್ರದರ್ಶಿಸಲಾಯಿತು. ವಿವಿಧ ಸಂಸ್ಥೆಗಳು, ಐಸಿಎಆರ್ ಸಂಸ್ಥೆ, ಖಾಸಗಿ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳುಇದರಲ್ಲಿ ಭಾಗವಹಿಸಿದರು.ತ್ಯಾಜ್ಯ ನಿರ್ವಹಣೆ, ನಿಖರವಾದ ಕೃಷಿ, ನವೀಕರಣ ಮೌಲ್ಯ ಸರಪಳಿ ನಿರ್ವಹಣೆಯಲ್ಲಿ ತಮ್ಮ ಇತ್ತೀಚಿನ ಪ್ರಗತಿಯನ್ನು ಪ್ರಸ್ತುತಪಡಿಸಿದರು. 

ಈ ಎರಡು ಕಡೆಯ ಕಾರ್ಯಕ್ರಮದಲ್ಲಿ,

  • ಸಮಿತಿಯ ಮೊದಲ ದಿನದ ಚರ್ಚೆಯಲ್ಲಿ ರೈತರು ಕೃಷಿ ವ್ಯವಹಾರವನ್ನು ಲಾಭದಾಯಕವಾಗಿ ನಿರ್ವಹಿಸುವುದಕ್ಕೆ ಅವಕಾಶವನ್ನು ಕಲ್ಪಿಸುವುದರ ಜೊತೆಗೆ ಸುಸ್ಥಿರ ಪೂರೈಕೆ ಸರಪಳಿ ವ್ಯವಸ್ಥೆಗಳಿಗೆ ಒತ್ತು ನೀಡಲಾಯಿತು.
  • ಎರಡನೇ ದಿನದ ಕಾರ್ಯಕ್ರಮದಲ್ಲಿ ಕೃಷಿಯಲ್ಲಿ ಡಿಜಿಟಲ್ ತಂತ್ರಜ್ಞಾನದ ಶಕ್ತಿಯನ್ನು ಮತ್ತು ಡಿಜಿಟಲ್ ವಿಭಜನೆಯನ್ನು ಸೇತುವೆ ಮಾಡುವ ತಂತ್ರಗಳನ್ನು ಪ್ರದರ್ಶಿಸಲಾಯಿತು.

ಹಿನ್ನುಡಿ :

 G20 ಕೃಷಿ ಮಂತ್ರಿಗಳ ಸಭೆಯು ಕೊನೆಗೊಳ್ಳುತ್ತಿದ್ದಂತೆ, ರೈತರಿಗೆ ಸುಸ್ಥಿರ ಮತ್ತು ಸಮೃದ್ಧ ಭವಿಷ್ಯವನ್ನು ಸೃಷ್ಟಿಸುವಲ್ಲಿ ನಮ್ಮ ಮಂತ್ರಿಗಳು, ತಜ್ಞರು ಮತ್ತು ಸಂಸ್ಥೆಗಳು ಬದ್ಧತೆಯನ್ನು ಮತ್ತು ಒಗ್ಗೂಡುವಿಕೆಯನ್ನು ತೋರಿಸಿತು. ಸಹಯೋಗ, ಜ್ಞಾನದ ಹಂಚಿಕೆ ಮತ್ತು ಡಿಜಿಟಲ್ ಪರಿಹಾರಗಳ ಅಳವಡಿಕೆಯ ಮೂಲಕ, ಸಭೆಯು ವಿಶ್ವಾದ್ಯಂತ ರೈತರಿಗೆ ಪ್ರಯೋಜನವಾಗುವ ನೀತಿಗಳು ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಗುರಿಯನ್ನು ಹೊಂದಿದೆ. “ಒಂದು ಭೂಮಿ, ಒಂದು ಕುಟುಂಬ ಮತ್ತು ಒಂದು ಭವಿಷ್ಯ” ಎಂಬ ಮನೋಭಾವವನ್ನು ಅಳವಡಿಸಿಕೊಳ್ಳುವ ಮೂಲಕ, ರಾಷ್ಟ್ರಗಳ ಸಾಮೂಹಿಕ ಕ್ರಮಗಳು ಚೇತರಿಸಿಕೊಳ್ಳುವ ಮತ್ತು ಅಭಿವೃದ್ಧಿ ಹೊಂದುತ್ತಿರುವ ಕೃಷಿ ಕ್ಷೇತ್ರಕ್ಕೆ ದಾರಿ ಮಾಡಿಕೊಡುತ್ತವೆ. 

 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024