2023-24ನೇ ಸಾಲಿನ ಕೇಂದ್ರ ಬಜೆಟ್, ಆಧುನಿಕ ಕೃಷಿಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು ರೈತರಗೆ, ಮದ್ಯಮ ವರ್ಗದವರಿಗೆ, ಮಹಿಳಯರಿಗೆ ಹಾಗೂ ಯುವಕರಿಗೆ ಬಹಳ ಉಪಯೋಗವಾಗಲಿದೆ.
ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಒಟ್ಟು ರೂ 1.25 ಲಕ್ಷ ಕೋಟಿಗಳ ಬಜೆಟ್ ಅನ್ನು ಹೊಂದಿದೆ. ಈ ಮೊತ್ತ ಕೆಳಗಿನವುಗಳನ್ನು ಸಹ ಒಳಗೊಂಡಿದೆ.
ಸುಮಾರು ರೂ. 60,000 ಕೋಟಿ ಮೊತ್ತ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮತ್ತು
ಸುಮಾರು ರೂ 23,000 ಕೋಟಿ ಮೊತ್ತ ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ, ಶೇ. 86 ಪ್ರತಿಷತ ಸಣ್ಣ ರೈತರಿಗೆ ಉಪಯೋಗವಾಗಲಿದೆ.
ಬಜೆಟ್ ಕೆಳಗಿನವುಗಳನ್ನು ಸಹ ಒಳಗೊಂಡಿದೆ
ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ರೈತರ ಕೃಷಿ ಸಾಲದ ಗುರಿ ಒಟ್ಟು 20 ಲಕ್ಷ ಕೋಟಿ.
ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ರೂ.600 ಕೋಟಿ ಮೊತ್ತ
ಸುಮಾರು ರೂ. 450 ಕೋಟಿ ಮೊತ್ತ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಗೆ
ಸುಮಾರು ರೂ. 450 ಕೋಟಿ ಮೊತ್ತ ನೈಸರ್ಗಿಕ ಕೃಷಿಗೆ
ಸುಮಾರು 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಯತ್ತ ಆರ್ಕಷಿಸಲು 10000 ಬಯೋ ಇನ್‌ಪುಟ್ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗೆ ಆದ್ಯತೆ ನೀಡಲು ರೂ.1,623 ಕೋಟಿ
ಕೃಷಿ ವೇಗವರ್ಧಕ ನಿಧಿಯಡಿಯಲ್ಲಿ ಕೃಷಿ-ಸ್ಟಾರ್ಟ್ಅಪ್‌ಗಳಿಗೆ ಸುಮಾರು 5 ವರ್ಷಗಳ ಅವಧಿಗೆ ರೂ. 500 ಕೋಟಿ ನಿಯೋಜಿಸಲಾಗಿದೆ
ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸಲು ಸುಮಾರು ರೂ. 2,200 ಕೋಟಿ ಮಾತ್ರವನ್ನು ಪ್ರಚಾರಿಸಿದೆ.
ಜನ ಸಾಮಾನ್ಯರಿಗೆ ಉಪಯೋಗವಾಗಲು ಹಾಗೂ ಅವರ ಜೀವನವನ್ನು ಸುಧಾರಿಸುವ ಸಲುವಾಗಿ ಬಜೆಟ್ ನಿರ್ಧರಿಸಿದೆ
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಉಚಿತ ಪಡಿತರ ಕ್ಕಾಗಿ ಹೆಚ್ಚಿನ ಬಜೆಟ್ ಹಂಚಿಕೆ
ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶೇ 66 ರಷ್ಟು ಹೆಚ್ಚಿನ ಅಂದರೆ 79,000 ಕೋಟಿ ಹಂಚಿಕೆಯನ್ನು ಹೆಚ್ಚಿಸಲಾಗಿದೆ
ಆಸಕ್ತ ಮಕ್ಕಳಿಗೆ ಹಾಗೂ ಯುವಕರಿಗೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ತೆರೆಯುವುದು ಹಾಗೂ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು
ಕೋವಿಡ್ ಸಾಂಕ್ರಾಮಿಕದಿಂದ ಪೀಡಿತವಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪರಿಹಾರ.
ಯೋಜನೆ/ವಲಯ | ಬಜೆಟ್ ಹಂಚಿಕೆ (INR Cr.) |
ಒಟ್ಟು MAFWಗೆ | 1.25 ಲಕ್ಷ |
ಪಿ ಎಂ ಕಿಸಾನ್ ಸಮ್ಮಾನ್ ನಿಧಿ | 60,000 |
ಕೆಸಿಸಿ | 23,000 |
ಪಶುಸಂಗೋಪನೆಯಡಿ ಕೃಷಿ ಸಾಲ | 20 ಲಕ್ಷ |
ಡಿಜಿಟಲ್ ಕೃಷಿ | 450 |
ತಾಂತ್ರಿಕ ಪ್ರಚಾರ | 600 |
ನೈಸರ್ಗಿಕ ಕೃಷಿಗೆ ಪ್ರಚಾರ | 459 |
ಹೊಸ FPOs | 955 |
ಆಹಾರ ಮತ್ತು ರಾಷ್ಟ್ರೀಯ ಭದ್ರತೆಗೆ | 1623 |
ಕೃಷಿ ವೇಗವರ್ಧಕ ನಿಧಿ | 500 |
ತೋಟಗಾರಿಕೆ | 2,200 |
PMAY | 79,000 |
“ನಿರೀಕ್ಷೆಯಂತೆ, ಇತ್ತೀಚಿನ ಕೇಂದ್ರ ಬಜೆಟ್, ಕೃಷಿ-ಸ್ಟಾರ್ಟ್‌ಅಪ್‌ಗಳ ಮೇಲೆ ನಿರ್ದಿಷ್ಟವಾಗಿ ಗಮನವಹಿಸುವುದರ ಮೂಲಕ ಕೃಷಿ ವಲಯಕ್ಕೆ ಸ್ಪಷ್ಟ ಒತ್ತು ನೀಡಿದ್ದಾರೆ. ಇದು, ಅಂತಾರಾಷ್ಟ್ರೀಯ ಆರ್ಥಿಕ ಮಂಡಳಿಯೊಂದಿಗೆ (IFC) ನಮ್ಮ ಚರ್ಚೆಯಾದಾಗ, ಸಮಗ್ರ ಕೃಷಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು ಒತ್ತಿಹೇಳಿರುವುದಕ್ಕೆ ಹೊಂದಾಣಿಕೆಯಾಗುತ್ತದೆ.
ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು, ಯುವ ಉದ್ಯಮಿಗಳನ್ನು ಆಕರ್ಷಿಸುವ ಮೂಲಕ ಈ ಕೃಷಿ ರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅಗ್ರಿ-ಸ್ಟಾರ್ಟ್‌ಅಪ್‌ಗಳ ಸಂಖ್ಯೆ 10,000 ಕ್ಕೆ ಏರುವ ನಿರೀಕ್ಷೆಯಿದೆ.
ಈ ಬೆಳವಣಿಗೆಯನ್ನು ಬೆಂಬಲಿಸುವ ಸಲುವಾಗಿ, ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಲು ಬಯಸುವ ಯುವ ಉದ್ಯಮಿಗಳಿಗೆ ಸರ್ಕಾರವು ವೇಗವರ್ಧಕ ಹಣವನ್ನು ಒದಗಿಸಬೇಕು. ಕೃಷಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲವಾಗುವಂತೆ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದು ಮುಂಬರುವ ದಶಕಗಳಲ್ಲಿ ಗಮನಾರ್ಹ ರೂಪಾಂತರಕ್ಕೆ ಒಳಗಾಗುವ ನಿರೀಕ್ಷೆಯಿದೆ.”
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…