HomeNewsNational Agri Newsಯಶಸ್ಸಿನ ಕಡೆ ನಮ್ಮ ನಡೆ: 2023-24ರ ಬಜೆಟ್ ಹಂಚಿಕೆಯಲ್ಲಿ ರೈತರಿಗೆ ಮೊದಲನೇಯ ಸ್ಥಾನ

ಯಶಸ್ಸಿನ ಕಡೆ ನಮ್ಮ ನಡೆ: 2023-24ರ ಬಜೆಟ್ ಹಂಚಿಕೆಯಲ್ಲಿ ರೈತರಿಗೆ ಮೊದಲನೇಯ ಸ್ಥಾನ

  • 2023-24ನೇ ಸಾಲಿನ ಕೇಂದ್ರ ಬಜೆಟ್, ಆಧುನಿಕ ಕೃಷಿಯನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಇದು  ರೈತರಗೆ, ಮದ್ಯಮ ವರ್ಗದವರಿಗೆ, ಮಹಿಳಯರಿಗೆ ಹಾಗೂ ಯುವಕರಿಗೆ ಬಹಳ ಉಪಯೋಗವಾಗಲಿದೆ.  
  • ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ, ಒಟ್ಟು ರೂ 1.25 ಲಕ್ಷ ಕೋಟಿಗಳ ಬಜೆಟ್ ಅನ್ನು ಹೊಂದಿದೆ. ಈ ಮೊತ್ತ ಕೆಳಗಿನವುಗಳನ್ನು ಸಹ ಒಳಗೊಂಡಿದೆ. 

ü  ಸುಮಾರು ರೂ. 60,000 ಕೋಟಿ ಮೊತ್ತ  ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಮತ್ತು 

ü  ಸುಮಾರು ರೂ 23,000 ಕೋಟಿ ಮೊತ್ತ ಕಿಸಾನ್ ಕ್ರೆಡಿಟ್ ಕಾರ್ಡ್ಗಾಗಿ,  ಶೇ. 86 ಪ್ರತಿಷತ ಸಣ್ಣ ರೈತರಿಗೆ ಉಪಯೋಗವಾಗಲಿದೆ.

  •  ಬಜೆಟ್ ಕೆಳಗಿನವುಗಳನ್ನು ಸಹ ಒಳಗೊಂಡಿದೆ

ü  ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗಿಸಿಕೊಂಡ ರೈತರ ಕೃಷಿ ಸಾಲದ ಗುರಿ ಒಟ್ಟು 20 ಲಕ್ಷ ಕೋಟಿ

ü  ತಂತ್ರಜ್ಞಾನದ ಮೂಲಕ ಕೃಷಿ ಕ್ಷೇತ್ರವನ್ನು ಉತ್ತೇಜಿಸಲು ರೂ.600 ಕೋಟಿ ಮೊತ್ತ 

ü  ಸುಮಾರು ರೂ. 450 ಕೋಟಿ ಮೊತ್ತ ಡಿಜಿಟಲ್ ಅಗ್ರಿಕಲ್ಚರ್ ಮಿಷನ್ ಗೆ

ü  ಸುಮಾರು ರೂ.  450 ಕೋಟಿ ಮೊತ್ತ ನೈಸರ್ಗಿಕ ಕೃಷಿಗೆ

ü  ಸುಮಾರು 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಯತ್ತ ಆರ್ಕಷಿಸಲು 10000 ಬಯೋ ಇನ್‌ಪುಟ್ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. 

  •   ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗೆ ಆದ್ಯತೆ ನೀಡಲು ರೂ.1,623 ಕೋಟಿ
  • ಕೃಷಿ ವೇಗವರ್ಧಕ ನಿಧಿಯಡಿಯಲ್ಲಿ ಕೃಷಿಸ್ಟಾರ್ಟ್ಅಪ್ಗಳಿಗೆ  ಸುಮಾರು 5 ವರ್ಷಗಳ ಅವಧಿಗೆ ರೂ. 500 ಕೋಟಿ ನಿಯೋಜಿಸಲಾಗಿದೆ
  • ತೋಟಗಾರಿಕೆ ಕ್ಷೇತ್ರದ ಅಭಿವೃದ್ಧಿಯನ್ನು ಸಾಧಿಸಲು ಸುಮಾರು ರೂ. 2,200 ಕೋಟಿ ಮಾತ್ರವನ್ನು ಪ್ರಚಾರಿಸಿದೆ.
  • ಜನ ಸಾಮಾನ್ಯರಿಗೆ ಉಪಯೋಗವಾಗಲು ಹಾಗೂ ಅವರ ಜೀವನವನ್ನು ಸುಧಾರಿಸುವ ಸಲುವಾಗಿ ಬಜೆಟ್ ನಿರ್ಧರಿಸಿದೆ
  •  ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ ಉಚಿತ ಪಡಿತರ ಕ್ಕಾಗಿ ಹೆಚ್ಚಿನ ಬಜೆಟ್ ಹಂಚಿಕೆ
  •  ಪ್ರಧಾನ ಮಂತ್ರಿ ಆವಾಸ್ ಯೋಜನೆಗೆ ಶೇ 66 ರಷ್ಟು ಹೆಚ್ಚಿನ ಅಂದರೆ 79,000 ಕೋಟಿ  ಹಂಚಿಕೆಯನ್ನು ಹೆಚ್ಚಿಸಲಾಗಿದೆ
  • ಆಸಕ್ತ ಮಕ್ಕಳಿಗೆ ಹಾಗೂ  ಯುವಕರಿಗೆ ರಾಷ್ಟ್ರೀಯ ಡಿಜಿಟಲ್ ಗ್ರಂಥಾಲಯವನ್ನು ತೆರೆಯುವುದು ಹಾಗೂ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸೃಷ್ಟಿಸುವುದು
  • ಕೋವಿಡ್ ಸಾಂಕ್ರಾಮಿಕದಿಂದ ಪೀಡಿತವಾದ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಪರಿಹಾರ.
ಯೋಜನೆ/ವಲಯ ಬಜೆಟ್ ಹಂಚಿಕೆ (INR Cr.)
ಒಟ್ಟು MAFWಗೆ 1.25 ಲಕ್ಷ
ಪಿ ಎಂ ಕಿಸಾನ್ ಸಮ್ಮಾನ್ ನಿಧಿ 60,000
ಕೆಸಿಸಿ 23,000
ಪಶುಸಂಗೋಪನೆಯಡಿ ಕೃಷಿ ಸಾಲ 20 ಲಕ್ಷ
ಡಿಜಿಟಲ್ ಕೃಷಿ 450
ತಾಂತ್ರಿಕ ಪ್ರಚಾರ 600
ನೈಸರ್ಗಿಕ ಕೃಷಿಗೆ ಪ್ರಚಾರ 459
ಹೊಸ FPOs 955
ಆಹಾರ ಮತ್ತು ರಾಷ್ಟ್ರೀಯ ಭದ್ರತೆಗೆ 1623
ಕೃಷಿ ವೇಗವರ್ಧಕ ನಿಧಿ 500
ತೋಟಗಾರಿಕೆ 2,200
PMAY 79,000

           

“ನಿರೀಕ್ಷೆಯಂತೆ, ಇತ್ತೀಚಿನ ಕೇಂದ್ರ ಬಜೆಟ್‌, ಕೃಷಿ-ಸ್ಟಾರ್ಟ್‌ಅಪ್‌ಗಳ ಮೇಲೆ ನಿರ್ದಿಷ್ಟವಾಗಿ  ಗಮನವಹಿಸುವುದರ ಮೂಲಕ ಕೃಷಿ ವಲಯಕ್ಕೆ ಸ್ಪಷ್ಟ ಒತ್ತು ನೀಡಿದ್ದಾರೆ.

ಇದು,  ಅಂತಾರಾಷ್ಟ್ರೀಯ ಆರ್ಥಿಕ ಮಂಡಳಿಯೊಂದಿಗೆ (IFC) ನಮ್ಮ ಚರ್ಚೆಯಾದಾಗ, ಸಮಗ್ರ ಕೃಷಿ ಪರಿಸರ ವ್ಯವಸ್ಥೆಯನ್ನು  ಅಭಿವೃದ್ಧಿಪಡಿಸುವ ಪ್ರಾಮುಖ್ಯತೆಯನ್ನು  ಒತ್ತಿಹೇಳಿರುವುದಕ್ಕೆ ಹೊಂದಾಣಿಕೆಯಾಗುತ್ತದೆ.

 ಕೃಷಿ ಕ್ಷೇತ್ರದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಪ್ರಾರಂಭಿಸಲು, ಯುವ ಉದ್ಯಮಿಗಳನ್ನು ಆಕರ್ಷಿಸುವ ಮೂಲಕ ಈ  ಕೃಷಿ ರಂಗವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಅಗ್ರಿ-ಸ್ಟಾರ್ಟ್‌ಅಪ್‌ಗಳ ಸಂಖ್ಯೆ 10,000 ಕ್ಕೆ ಏರುವ ನಿರೀಕ್ಷೆಯಿದೆ.

ಈ ಬೆಳವಣಿಗೆಯನ್ನು ಬೆಂಬಲಿಸುವ ಸಲುವಾಗಿ, ಕೃಷಿ-ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಲು ಬಯಸುವ ಯುವ ಉದ್ಯಮಿಗಳಿಗೆ ಸರ್ಕಾರವು ವೇಗವರ್ಧಕ ಹಣವನ್ನು ಒದಗಿಸಬೇಕು. ಕೃಷಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲವಾಗುವಂತೆ ಇದು ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ, ಇದು ಮುಂಬರುವ ದಶಕಗಳಲ್ಲಿ ಗಮನಾರ್ಹ ರೂಪಾಂತರಕ್ಕೆ ಒಳಗಾಗುವ ನಿರೀಕ್ಷೆಯಿದೆ.”

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು