News

ರೈತರಿಗೆ ಅನುಮೋದನೆ ಪ್ರಕ್ರಿಯೆಯನ್ನು ಸರಳ ಮಾಡುವ ನಿಟ್ಟಿನಲ್ಲಿ NHB: ತ್ವರಿತ ಅನುಮೋದನೆ, ಡಿಜಿಟಲ್ ಹಾಗೂ ಕನಿಷ್ಠ ದಾಖಲಾತಿಗಳೊಂದಿಗೆ ಸಾಧ್ಯ.

ಪರಿಚಯ

         ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB), ತೋಟಗಾರಿಕಾ ಯೋಜನೆಗಳಿಗೆ ತ್ವರಿತ ಹಾಗೂ ಸರಳ ಅನುಮೋದನೆ ಪ್ರಕ್ರಿಯೆಯನ್ನು ರೈತರಿಗೆ ಅನುವು ಮಾಡುವಂತೆ ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿತ್ತು. ಸಂಪೂರ್ಣವಾಗಿ ಡಿಜಿಟಲ್ ಮಾಡಿ ಕೇವಲ ಅಗತ್ಯವಿರುವ ಕನಿಷ್ಠ ದಾಖಲಾತಿಗಳೊಂದಿಗೆ ಈಗ ಒಂದೇ ಸರಳ ವಿಧಾನವನ್ನು ಪಾಲಿಸಿದರೆ  ಸದರಿ ಪ್ರಕ್ರಿಯೆಯು ಪೂರ್ಣವಾಗುತ್ತದೆ. ಈ ವಿನ್ಯಾಸವು ಜನವರಿ 1, 2023 ರಿಂದ ಜಾರಿಗೆ ಬರಲಿದ್ದು, ಸದರಿ ವ್ಯವಸ್ಥೆಯು ಪರಿಣಾಮಕಾರಿಯಾಗುವ ಗುರಿಯನ್ನು ಹೊಂದಿದೆ, ಜೊತೆಗೆ ರೈತರಿಗೆ ಸರಳ ವ್ಯಾಪಾರ ಮಾಡಲು ಪ್ರೇರೇಪಿಸಿದೆ.

ಅವಲೋಕನ

ನವದೆಹಲಿಯಲ್ಲಿ ಜರುಗಿದ ಸದರಿ ಸಭೆಯಲ್ಲಿ ತೋಟಗಾರಿಕಾ ಯೋಜನೆಗಳ  ಪ್ರಯೋಜನವನ್ನು ಪಡೆಯುವ ನಿಟ್ಟಿನಲ್ಲಿ, ರೈತರು ಈ ಮೊದಲು ಅನುಸರಿಸುತ್ತಿರುವ   ಪ್ರಕ್ರಿಯೆಯು  ದೀರ್ಘಕಾಲಿಕ ಹಾಗೂ ಕಠಿಣವಾಗಿರುವುದರಿಂದ, ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು (NHB) ರೈತರಿಗೆ ಸರಳ ಅನುಮೋದನೆ ಪ್ರಕ್ರಿಯೆಗೆ ಸೂಕ್ತವಾದ ಮಾರ್ಗವನ್ನು ನೀಡುವಂತೆ ಚರ್ಚಿಸಲಾಯಿತು. ಈ ಸಂಬಂಧ ಅನುಮೋದನೆ ಪ್ರಕ್ರಿಯೆಯನ್ನು ಸರಳೀಕರಣಗೊಳಿಸುವುದು, ಸಂಪೂರ್ಣ ಡಿಜಿಟಲ್ ಮಾಡುವುದು, ಕನಿಷ್ಠ ದಾಖಲೆ ಪಡೆದುಕೊಳ್ಳುವುದರಿಂದ ರೈತರಿಗೆ  ಸುಲಭವಾಗಿ ವ್ಯಾಪಾರಮಾಡಲು ಹುರಿದುಂಬಿಸಿದೆ. ಅದಲ್ಲದೆ ಸ್ವಚ್ಚ ಸಸಿ ಕಾರ್ಯಕ್ರಮ ಎಂಬ ಹೊಸ ವಿನ್ಯಾಸದ ಕುರಿತು ಚರ್ಚಿಸಲಾಗಿದ್ದು, ಈ ಸಂಬಂಧ ಏಷ್ಯನ್ ಅಭಿವೃದ್ಧಿ ಬ್ಯಾಂಕ್ ನೆರವಿನಿಂದ 2100 ಕೋಟಿ ರೂಪಾಯಿಗಳ ಹೂಡಿಕೆಯಿಂದ ರೈತರಿಗೆ ನಾಟಿ ಸಸಿಗಳ ಲಭ್ಯತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸಿಕೊಳ್ಳುವಂತೆ  ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಪ್ರಯತ್ನಿಸಲಿದೆ.  ಈ ಹೊಸ ವಿನ್ಯಾಸವು ಜನವರಿ 1, 2023 ರಿಂದ ಜಾರಿಗೆ ಬರಲಿದೆ.

ಸದರಿ ನಿರ್ಧಾರದಿಂದ ಕನಿಷ್ಠ ದಾಖಲಾತಿಯೊಂದಿಗೆ, ಸಂಪೂರ್ಣ ಡಿಜಿಟಲ್ ಆಗಿ, ಒಂದೇ ಹಂತದಲ್ಲಿ ಅನುಮೋದನೆ ಸಾಧ್ಯವಾಗಲಿದ್ದು, ರೈತರಿಗೆ ಅನುಕೂಲವಾಗಿದೆ. ಇದರಿಂದ ಇನ್ನು ಹೆಚ್ಚಿನ ಯೋಜನೆಗಳಿಗೆ ನಾಂದಿಯಾಗಿ ಹೊರಹೊಮ್ಮಲ್ಲಿದ್ದು, ಇದರ ಪ್ರಕ್ರಿಯೆಯು ಪಾರದರ್ಶಕವಾಗಿದ್ದು ಹೆಚ್ಚು ಪರಿಣಾಮಕಾರಿಯಾಗಿದೆ. ಇದರಿಂದ ರೈತ ಸಮುದಾಯಕ್ಕೆ ಹೆಚ್ಚಿನ ವ್ಯಾಪಾರವನ್ನು ಕೈಗೊಳ್ಲಲು ಉತ್ತೇಜನ ನೀಡಿದೆ. NHBಯ ಉಪ-ಯೋಜನೆಯಾಗಿರುವ ಸ್ವಚ್ಚ ಸಸಿ ಕಾರ್ಯಕ್ರಮವು ರೈತರಿಗೆ ಆರೋಗ್ಯಕರ ಕಸಿ ಲಭ್ಯತೆಯ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಗುಣಮಟ್ಟದ ಕಸಿಯನ್ನು ಒದಗಿಸುವ ಮೂಲಕ ರೈತರಿಗೆ ಅನುಕೂಲವಾಗಿದೆ. ಜೊತೆಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವ ರೈತರಿಗೆ ಪ್ರೋತ್ಸಾಹವನ್ನು ನೀಡಿ, ಇದನ್ನು ಅಳವಡಿಸಿರುವ ರೈತರಿಗೆ ಪ್ರಯೋಜನಕಾರಿಯಾಗಿದೆ.

ಪ್ರಮುಖ ಮಾಹಿತಿ:

  • ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ (NHB) 32ನೇ ಸಭೆಯು ನವದೆಹಲಿಯಲ್ಲಿ ನಡೆದಿದೆ.
  • ತೋಟಗಾರಿಕೆ ಯೋಜನೆಗಳಿಗೆ ಅನುಮೋದನೆ ಪ್ರಕ್ರಿಯೆಯನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಸಂಪೂರ್ಣವಾಗಿ ಡಿಜಿಟಲ್ ಆಗಿ ಪರಿರ್ವತಿಸಿದ್ದು, ಕನಿಷ್ಠ ದಾಖಲಾತಿಯೊಂದಿಗೆ  ರೈತರಿಗೆ ಸರಳಗೊಳಿಸಿದೆ.
  • ಸದರಿ ನಿರ್ಧಾರದ ಪ್ರಮುಖ ಗುರಿ ರೈತರ ವ್ಯಾಪಾರವನ್ನು ಹೆಚ್ಚಿಸುವುದು ಹಾಗು ಸದರಿ ವ್ಯವಸ್ಥೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಪರಿರ್ವತಿಸುವುದಾಗಿದೆ.
  • ಆರೋಗ್ಯಕರವಾದ ಸಸಿಯನ್ನು ರೈತರಿಗೆ ಒದಗಿಸಬೇಕೆಂಬ ವಿಚಾರವನ್ನು ಸಭೆಯಲ್ಲಿ ಚರ್ಚಿಸಲಾಗಿದ್ದು, ನಿರ್ಧಾರದಂತೆ  ಏಷ್ಯನ್ ಅಭಿವೃದ್ಧಿ ಬ್ಯಾಂಕ್ (ADB)ಮೂಲಕ 2100 ಕೋಟಿ ರೂಪಾಯಿ  ಮಾತ್ರವನ್ನು ಹೂಡಿಕೆ ಮಾಡಲಾಗಿತ್ತು
  • ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವಂತೆ ರೈತರಿಗೆ ಪ್ರೋತ್ಸಾಹದಾಯಕವಾಗಿದೆ
  • ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಅಡಿಯಲ್ಲಿರುವ ಕ್ಲಸ್ಟರ್ ಅಭಿವೃದ್ಧಿ ಕಾರ್ಯಕ್ರಮದ ಪ್ರಗತಿ ಪರಿಶೀಲಿಸಲಾಯಿತು ಹಾಗೂ ಅರ್ಜಿಗಳ ಅನುಮೋದನೆ ಪ್ರಕ್ರಿಯೆಯನ್ನು ಸರಳಗೊಳಿಸಲಾಯಿತು.
  • ಹಿಂದಿನ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಸದರಿ ಸಭೆಯಲ್ಲಿ ಅನುಮೋದಿಸಲಾಯಿತು

ತೀರ್ಮಾನ

ಈ ಹಿಂದೆ ನಡೆದ ರಾಷ್ಟ್ರೀಯ ತೋಟಗಾರಿಕಾ ಮಂಡಳಿಯ ಸಭೆಯು, ರೈತರಿಗೆ ತೋಟಗಾರಿಕೆ ಯೋಜನೆಗಳನ್ನು ಅನುಷ್ಠಾನ ಮಾಡುವಲ್ಲಿ ಸುಧಾರಣೆಯ ಕುರಿತು ಚರ್ಚಿಸಲಾಯಿತು. ಜನವರಿ 1, 2023 ರಿಂದ ಜಾರಿಗೆ ಬರಲಿರುವ ಸದರಿ ವಿನ್ಯಾಸವು ಅನುಮೋದನೆಯಲ್ಲಿ ಸರಳ ಮಾರ್ಗ ಹೊಂದಲಿದ್ದು, ಹೆಚ್ಚು ಪರಿಣಾಮಕಾರಿಯಾಗಲಿದೆ. ಮುಂದುವರಿದು, ಆರೋಗ್ಯವಾದ ಕಸಿಯನ್ನು ಒದಗಿಸುವಲ್ಲಿ ಹಾಗೆಯೇ  ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ಅಳವಡಿಸುವಂತೆ ರೈತರಿಗೆ ಉಪಾಯಕಾರಿಯಾಗಲಿದೆ.  ಮುಂದುವರಿದು, ದೇಶದ ತೋಟಗಾರಿಕಾ ವಲಯದಲ್ಲಿ  ಪ್ರಗತಿ ಸಾಧಸುವಲ್ಲಿ ಲಾಭದಾಯಕವಾಗಿದೆ.

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024