ಅಣಬೆಗಳು ಖಾದ್ಯ ಶಿಲೀಂದ್ರಗಳಾಗಿದ್ದು, ಅವು ಮರದ ಅಥವಾ ಇತರ ಸಾವಯವ ವಸ್ತುಗಳಂತಹ ತೇವಾಂಶವುಳ್ಳ ಮೇಲ್ಭಾಗಗಳಲ್ಲಿ ಬೆಳೆಯುತ್ತವೆ. ಎಲ್ಲಾ ರೀತಿಯ ಅಣಬೆಗಳು ಖಾದ್ಯವಲ್ಲ ಅಥವಾ ತಿನ್ನಲು ಯೋಗ್ಯವಲ್ಲ, ಆದರೆ ತಿನ್ನಬಹುದಾದ ಅಣಬೆಗಳು ಉತ್ತಮ ಮಾರುಕಟ್ಟೆ ಬೆಲೆಯನ್ನು ಹೊಂದಿವೆ. ಅಣಬೆ ಬೇಸಾಯವು ಭಾರತ ಕೃಷಿ ವ್ಯವಹಾರದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರವಾಗಿದ್ದು, ಕಡಿಮೆ ಹೂಡಿಕೆ ಮತ್ತು ಕಡಿಮೆ ನಿರ್ವಹಣೆಯ ವೈಶಿಷ್ಟ್ಯಗಳು ಈ ಅಣಬೆ ಕೃಷಿ ವ್ಯವಹಾರಕ್ಕೆ ಯುವ ರೈತರನ್ನು ಇದರೆಡೆಗೆ ಆಕರ್ಷಿಸುತ್ತಿದೆ. ಇದನ್ನು ಮುಖ್ಯವಾಗಿ ಅರೆಕಾಲಿಕ ಅಥವಾ ಪರ್ಯಾಯ ಆದಾಯವಾಗಿ ಬೆಳೆಯಲಾಗುತ್ತದೆ.
ಅನುಕೂಲಕರ ಹವಾಮಾನದಿಂದಾಗಿ, ಕೇರಳದಲ್ಲಿ ಅಣಬೆ ಕೃಷಿಯು ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಹಾರ ರಾಜ್ಯ ಸರ್ಕಾರವು ಅಣಬೆ ಕೃಷಿಯಲ್ಲಿ ವಿವಿಧ ತರಬೇತಿಗಳನ್ನು ನಡೆಸುತ್ತಿದೆ. ಗುಜರಾತ್‌ನಲ್ಲಿ ಅಣಬೆ ಕೃಷಿಯನ್ನು ಗೃಹಿಣಿಯರು, ವೃತ್ತಿಪರರು ಮತ್ತು ಕೆಲವು ವಿದ್ಯಾರ್ಥಿಗಳು ಮಾಡುತ್ತಾರೆ. ನಿರೀಕ್ಷಿತ ಆದಾಯವು ಪ್ರತಿ ಚದರ ಅಡಿಗೆ 1000 ರೂಗಳಷ್ಟಿದೆ. ಪ್ರತಿ ಕೆಜಿ ಅಣಬೆಯ ಸರಾಸರಿ ಬೆಲೆ INR 150 ರಿಂದ 200 ರಷ್ಟಿದೆ. ಪ್ರತಿ ರಾಜ್ಯದಲ್ಲಿ ಪ್ರತಿ ಕೆಜಿಗೆ ಅಣಬೆಗಳ ಬೆಲೆ ಬದಲಾಗುತ್ತದೆ. ಉದಾಹರಣೆಗೆ, ಕೇರಳದಲ್ಲಿ INR 189, ಬಿಹಾರದಲ್ಲಿ INR 180-200 ಮತ್ತು ಗುಜರಾತ್‌ನಲ್ಲಿ INR 130 ರಷ್ಟಿದೆ.
ನೀವು ಅಣಬೆ ಬೇಸಾಯವನ್ನು ಯೋಜಿಸುತ್ತಿದ್ದರೆ, ನಿಮಗೆ ಮೊದಲು ಬೇಕಾಗಿರುವುದು ಕೃಷಿಯನ್ನು ಹೇಗೆ ಮಾಡಬೇಕು, ಅದರ ಹಿಂದಿನ ಕಾರ್ಯ ವಿಧಾನಗಳು ಏನು, ಬಳಸುವ ತಂತ್ರಗಳು ಮತ್ತು ಮುಖ್ಯವಾಗಿ ಅದರ ಮಾರುಕಟ್ಟೆಯ ಬಗ್ಗೆ ಸರಿಯಾದ ತಿಳುವಳಿಕೆ. ಅಣಬೆ ಕೃಷಿಗೆ ಕಡಿಮೆ ಸ್ಥಳ ಮತ್ತು ಕನಿಷ್ಠ ಹೂಡಿಕೆಯ ಅಗತ್ಯವಿರುತ್ತದೆ. ಇದು ಮರದ ಪುಡಿ ಅಥವಾ ಮರದ ತುಂಡುಗಳಲ್ಲಿ ಅಥವಾ ಈ ಯಾವುದೇ ವಸ್ತುಗಳ ಮಿಶ್ರಣದಲ್ಲಿ ಬೆಳೆಯುತ್ತದೆ. ಆದ್ದರಿಂದ, ನೀವು ವ್ಯವಹಾರಕ್ಕೆ ಹೂಡುವ ಮೊತ್ತದ ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ ಹಾಗೂ ಅಣಬೆ ಜಾತಿಗಳನ್ನು ಎಚ್ಚರಿಕೆಯಿಂದ ಆರಿಸಬೇಕು ಮತ್ತು ಯಾವ ಋತುವಿನಲ್ಲಿ ಯಾವ ಜಾತಿಯ ಅಣಬೆಗೆ ಹೆಚ್ಚು ಬೆಲೆ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.
ದೊಡ್ಡ ಮಾರುಕಟ್ಟೆ ಹೊಂದಿರುವ ಅಣಬೆಗಳ ಬೇಸಾಯಕ್ಕೆ ಬಳಸುವ ಅತ್ಯಂತ ಜನಪ್ರಿಯ ಅಣಬೆ ವಿಧವೆಂದರೆ ಬಟನ್ ಅಣಬೆಗಳು. ಅವು ಬಿಳಿ ಬಣ್ಣ ಮತ್ತು ಆಕರ್ಷಕವಾಗಿರುತ್ತವೆ.
ಅಣಬೆ ಕೃಷಿಯು ಸರಳವಾಗಿದ್ದು ಮತ್ತು ಹೆಚ್ಚಿನ ಏಕಾಗ್ರತೆ ಮತ್ತು ಶ್ರದ್ಧೆಯಿಂದ ಮಾಡಬೇಕಾದ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಇಲ್ಲಿ ನಾವು ಬಟನ್ ಅಣಬೆ ಕೃಷಿಯ ವಿವರಗಳನ್ನು ವಿವರಿಸಿದ್ದೇವೆ.
ಗೊಬ್ಬರ ತಯಾರಿಕೆಯು ಅಣಬೆ ಕೃಷಿಯ ಮೊದಲ ಹಂತವಾಗಿದೆ. ಸಮವಾದ ತಟ್ಟೆಗಳಲ್ಲಿ ತೆರೆದ ಸ್ಥಳದಲ್ಲಿ ಇದನ್ನು ಎಚ್ಚರಿಕೆಯಿಂದ ಮಾಡಬೇಕು. ನೀರಿನ ಶೇಖರಣೆಯನ್ನು ತಪ್ಪಿಸಲು ಗೊಬ್ಬರದಲ್ಲಿ ಸರಿಯಾದ ಒಳಚರಂಡಿ ಇರಬೇಕು. ತಯಾರಿಸಿದ ಗೊಬ್ಬರವನ್ನು ಮಳೆಯಿಂದ ರಕ್ಷಿಸಬೇಕು.. ಈ ಗೊಬ್ಬರವು ನೈಸರ್ಗಿಕ ಅಥವಾ ರಾಸಾಯನಿಕ ಗೊಬ್ಬರವಾಗಿರಬಹುದು.
ರಾಸಾಯನಿಕ ಗೊಬ್ಬರವನ್ನು ಹೊಟ್ಟು, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ / ಅಮೋನಿಯಂ ಸಲ್ಫೇಟ್, ಜಿಪ್ಸಮ್, ಯೂರಿಯಾ ಮತ್ತು ಗೋಧಿ ಹುಲ್ಲನ್ನು ಬಳಸಿ ತಯಾರಿಸಲಾಗುತ್ತದೆ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಚಿಮುಕಿಸುವ ವಿಧಾನವನ್ನು ಬಳಸಿಕೊಂಡು ನೀರಿನಲ್ಲಿ ನೆನೆಸಿ ರಾಶಿಯನ್ನು ತಯಾರಿಸಲಾಗುತ್ತದೆ.
ನೈಸರ್ಗಿಕ ಗೊಬ್ಬರವು ಗೋಧಿ ಹುಲ್ಲು ಮತ್ತು ಜಿಪ್ಸಮ್ ಅನ್ನು ಕುದುರೆ ಸಗಣಿ ಮತ್ತು ಕೋಳಿ ಗೊಬ್ಬರದೊಂದಿಗೆ ಬೆರೆಸಲಾದ ಮಿಶ್ರ ಗೊಬ್ಬರವಾಗಿರುತ್ತದೆ. ಕಾಂಪೋಸ್ಟ್ ತಯಾರಿಕೆಗೆ ತಾಜಾ ಗೊಬ್ಬರವನ್ನು ಮಾತ್ರ ಬಳಸಲಾಗುತ್ತದೆ. ಗೋಧಿ ಒಣಹುಲ್ಲಿನ ಒದ್ದೆಯಾಗಲು ನೀರನ್ನು ಸಿಂಪಡಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಹುದುಗಲು ಬಿಡಬೇಕು. ಗೊಬ್ಬರದ ರಾಶಿಯನ್ನು ನಿಯಮಿತವಾಗಿ ತಿರುಗಿಸಬೇಕು ಮತ್ತು ಅದನ್ನು ತೇವವಾಗಿ ಇರಿಸಿ. ಕೋಣೆಯಲ್ಲಿ ಅಮೋನಿಯಾದ ವಾಸನೆ ಬಂದಾಗ, ಅದು ಕೊಳೆಯುತ್ತಿದೆ ಎಂದರ್ಥ. ನೈಸರ್ಗಿಕ ಗೊಬ್ಬರ ಬಳಸಿ ಸಾವಯವ ಅಣಬೆ ಕೃಷಿ ಮಾಡಬಹುದು.
ಗೊಬ್ಬರ ಬಳಸಲು ಸಿದ್ಧವಾದಾಗ, ಅವುಗಳನ್ನು 15-18 ಸೆಂ.ಮೀ ದಪ್ಪದಲ್ಲಿ ಗೊತ್ತುಪಡಿಸಿದ
ಟ್ರೇಗಳಲ್ಲಿ ತುಂಬಿಸಲಾಗುತ್ತದೆ. ಟ್ರೇ ತುಂಬುವಾಗ ತೇವಾಂಶವನ್ನು ನಿಯಮಿತವಾಗಿ ಕಾಪಾಡಿಕೊಳ್ಳಬೇಕು.
ಇದು ಅಣಬೆಯು ತನ್ನ ಕವಕಜಾಲದಿಂದ ಹೊರ ಬರುವ ಪ್ರಕ್ರಿಯೆಯಾಗಿದೆ. ನೀವು ಸ್ಪಾನ್ ಅನ್ನು ಗೊಬ್ಬರ ತುಂಬುವಿಕೆಯ ನಂತರ ಅಥವಾ ಟ್ರೇಗಳಲ್ಲಿ ಗೊಬ್ಬರ ತುಂಬುವ ಮೊದಲು ಕಾಂಪೋಸ್ಟ್ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬಹುದು. ಬಿತ್ತನೆ ಮಾಡಿದ ನಂತರ, ಅದನ್ನು ಪತ್ರಿಕೆಗಳಿಂದ ಮುಚ್ಚಿ ಮತ್ತು ತೇವಾಂಶವನ್ನು ಕಾಪಾಡಲು ನಿಯಮಿತವಾಗಿ ನೀರನ್ನು ಸಿಂಪಡಿಸಿ.
ಕೇಸಿಂಗ್ ಮಣ್ಣು ಅಣಬೆಗಳ ಮೇಲೆ ಹರಡಬೇಕು. ಇದು ಹಸುವಿನ ಸಗಣಿಯೊಂದಿಗೆ ಬೆರೆಸಿದ ಮಣ್ಣು ಮತ್ತು ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಸಂಪೂರ್ಣವಾಗಿ ಫಿಲ್ಟರ್ ಮಾಡಿದ ಮತ್ತು ಕ್ರಿಮಿ ಮುಕ್ತಗೊಳಿಸಿದ ಮಣ್ಣು. ಇದನ್ನು ಮಿಶ್ರಗೊಬ್ಬರದ ಮೇಲೆ ಹರಡಬೇಕು ಮತ್ತು 72 ಗಂಟೆಗಳ ಕಾಲ 27 ಡಿಗ್ರಿಗೆ ಹತ್ತಿರವಾದ ತಾಪಮಾನವನ್ನು ಕಾಪಾಡಬೇಕು.
ಇದು 15 ದಿನಗಳ ನಂತರ ಬಟನ್ ಅಣಬೆಗಳ ಮೇಲಿನ ‘ಗುಂಡಿಗಳು’ ಎದ್ದುಕಾಣುವ ಮತ್ತು ಅವುಗಳ ಕಾಂಡಗಳು ಬಿಗಿಯಾಗುವ ಹಂತವಾಗಿದೆ. ಇವು ಕೊಯ್ಲಿಗೆ ಸಿದ್ದವಾಗಿರುವ ಹಂತವಾಗಿವೆ.
ಕೊಯ್ಲಿಗೆ ಸಿದ್ದವಾದ ಅಣಬೆಯನ್ನು ನಿಧಾನವಾಗಿ ಮಣ್ಣಿನ ಮೇಲಿಂದ ಒತ್ತಿ ತಿರುವಿ ತೆಗೆಯಬೇಕು ಅಥವಾ ಚಾಕುವಿನಿಂದ ಬುಡದಲ್ಲಿ ಕೊಯ್ಯಬೇಕು. ಅಣಬೆಗಳನ್ನು ಕೊಯ್ದ ನಂತರ ಅದೇ ಗೊಬ್ಬರವನ್ನು 6 ತಿಂಗಳವರೆಗೆ ಬಳಸಬಹುದು.
ಉತ್ತರ ಪ್ರದೇಶ, ತ್ರಿಪುರಾ ಮತ್ತು ಕೇರಳ ಅತಿ ಹೆಚ್ಚು ಅಣಬೆ ಉತ್ಪಾದಿಸುವ ರಾಜ್ಯಗಳಾಗಿವೆ. ಭಾರತದಲ್ಲಿ ಅಣಬೆ ಕೃಷಿಯ ಲಾಭವು – ಪ್ರತಿ ಚದರ ಅಡಿ ಪ್ರದೇಶಕ್ಕೆ ಕನಿಷ್ಠ 1000 ರೂ ಗಳಷ್ಟಿದೆ. ಭಾರತದಲ್ಲಿ ಅಣಬೆ ಕೃಷಿಯಲ್ಲಿನ ಲಾಭವು ದೊಡ್ಡ ಪ್ರಮಾಣದ ಉತ್ಪಾದನೆಯೊಂದಿಗೆ ಇನ್ನೂ ಹೆಚ್ಚಾಗಬಹುದು.
ಅಣಬೆ ಕೃಷಿಯಲ್ಲಿ ಸಿಗುವ ಲಾಭವು ನೀವು ಅಣಬೆ ಕೃಷಿ ಮಾಡುವ ಪ್ರದೇಶ, ಬಳಸುವ ಅಣಬೆಯ ಪ್ರಕಾರ ಮತ್ತು ಕಂಡುಕೊಳ್ಳುವ ಉತ್ತಮ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಇವೆಲ್ಲವನ್ನೂ ನಿರ್ವಹಿಸಬಹುದಾದರೆ ಅಣಬೆ ಕೃಷಿ ವ್ಯವಹಾರವನ್ನು ಪ್ರಾರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು.
ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…
ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…
ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…
ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್ ರವರ ಈ ನವೀನ…
ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…
ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…