News

ಲಕ್ಷ ಗಳಿಕೆಯ ಅಣಬೆ ಕೃಷಿಯನ್ನು ಕೈಗೊಂಡು ಉತ್ತಮ ಲಾಭ ಪಡೆಯಿರಿ

ಅಣಬೆಗಳು ಖಾದ್ಯ  ಶಿಲೀಂದ್ರಗಳಾಗಿದ್ದು, ಅವು ಮರದ ಅಥವಾ ಇತರ ಸಾವಯವ ವಸ್ತುಗಳಂತಹ ತೇವಾಂಶವುಳ್ಳ ಮೇಲ್ಭಾಗಗಳಲ್ಲಿ ಬೆಳೆಯುತ್ತವೆ. ಎಲ್ಲಾ ರೀತಿಯ ಅಣಬೆಗಳು ಖಾದ್ಯವಲ್ಲ  ಅಥವಾ ತಿನ್ನಲು ಯೋಗ್ಯವಲ್ಲ, ಆದರೆ ತಿನ್ನಬಹುದಾದ ಅಣಬೆಗಳು  ಉತ್ತಮ ಮಾರುಕಟ್ಟೆ ಬೆಲೆಯನ್ನು ಹೊಂದಿವೆ. ಅಣಬೆ ಬೇಸಾಯವು ಭಾರತ ಕೃಷಿ ವ್ಯವಹಾರದಲ್ಲಿ ವೇಗವಾಗಿ ಬೆಳೆಯುತ್ತಿರುವ  ಕ್ಷೇತ್ರವಾಗಿದ್ದು,  ಕಡಿಮೆ ಹೂಡಿಕೆ ಮತ್ತು ಕಡಿಮೆ ನಿರ್ವಹಣೆಯ ವೈಶಿಷ್ಟ್ಯಗಳು ಈ ಅಣಬೆ ಕೃಷಿ ವ್ಯವಹಾರಕ್ಕೆ ಯುವ ರೈತರನ್ನು ಇದರೆಡೆಗೆ ಆಕರ್ಷಿಸುತ್ತಿದೆ. ಇದನ್ನು ಮುಖ್ಯವಾಗಿ ಅರೆಕಾಲಿಕ ಅಥವಾ ಪರ್ಯಾಯ ಆದಾಯವಾಗಿ ಬೆಳೆಯಲಾಗುತ್ತದೆ.

ಅನುಕೂಲಕರ ಹವಾಮಾನದಿಂದಾಗಿ, ಕೇರಳದಲ್ಲಿ ಅಣಬೆ ಕೃಷಿಯು  ದೇಶದಲ್ಲಿ ಮೂರನೇ ಸ್ಥಾನದಲ್ಲಿದೆ. ಬಿಹಾರ ರಾಜ್ಯ ಸರ್ಕಾರವು ಅಣಬೆ ಕೃಷಿಯಲ್ಲಿ ವಿವಿಧ ತರಬೇತಿಗಳನ್ನು ನಡೆಸುತ್ತಿದೆ. ಗುಜರಾತ್‌ನಲ್ಲಿ ಅಣಬೆ ಕೃಷಿಯನ್ನು ಗೃಹಿಣಿಯರು, ವೃತ್ತಿಪರರು ಮತ್ತು ಕೆಲವು ವಿದ್ಯಾರ್ಥಿಗಳು ಮಾಡುತ್ತಾರೆ. ನಿರೀಕ್ಷಿತ ಆದಾಯವು ಪ್ರತಿ ಚದರ ಅಡಿಗೆ 1000 ರೂಗಳಷ್ಟಿದೆ. ಪ್ರತಿ ಕೆಜಿ ಅಣಬೆಯ ಸರಾಸರಿ ಬೆಲೆ INR 150 ರಿಂದ 200 ರಷ್ಟಿದೆ. ಪ್ರತಿ ರಾಜ್ಯದಲ್ಲಿ ಪ್ರತಿ ಕೆಜಿಗೆ  ಅಣಬೆಗಳ  ಬೆಲೆ ಬದಲಾಗುತ್ತದೆ. ಉದಾಹರಣೆಗೆ, ಕೇರಳದಲ್ಲಿ INR 189, ಬಿಹಾರದಲ್ಲಿ INR 180-200 ಮತ್ತು ಗುಜರಾತ್‌ನಲ್ಲಿ INR 130 ರಷ್ಟಿದೆ. 

ಉತ್ತಮ ಅಣಬೆ ಕೃಷಿಯನ್ನು ಪ್ರಾರಂಭಿಸುವ ಮುನ್ನ !!!!

ನೀವು ಅಣಬೆ ಬೇಸಾಯವನ್ನು ಯೋಜಿಸುತ್ತಿದ್ದರೆ, ನಿಮಗೆ ಮೊದಲು ಬೇಕಾಗಿರುವುದು ಕೃಷಿಯನ್ನು ಹೇಗೆ ಮಾಡಬೇಕು, ಅದರ ಹಿಂದಿನ ಕಾರ್ಯ ವಿಧಾನಗಳು ಏನು, ಬಳಸುವ ತಂತ್ರಗಳು ಮತ್ತು ಮುಖ್ಯವಾಗಿ ಅದರ ಮಾರುಕಟ್ಟೆಯ ಬಗ್ಗೆ ಸರಿಯಾದ ತಿಳುವಳಿಕೆ. ಅಣಬೆ ಕೃಷಿಗೆ ಕಡಿಮೆ ಸ್ಥಳ ಮತ್ತು ಕನಿಷ್ಠ ಹೂಡಿಕೆಯ ಅಗತ್ಯವಿರುತ್ತದೆ. ಇದು ಮರದ ಪುಡಿ ಅಥವಾ ಮರದ ತುಂಡುಗಳಲ್ಲಿ ಅಥವಾ ಈ ಯಾವುದೇ ವಸ್ತುಗಳ ಮಿಶ್ರಣದಲ್ಲಿ ಬೆಳೆಯುತ್ತದೆ. ಆದ್ದರಿಂದ, ನೀವು ವ್ಯವಹಾರಕ್ಕೆ ಹೂಡುವ  ಮೊತ್ತದ  ಬಗ್ಗೆ ಹೆಚ್ಚು ಚಿಂತಿಸಬೇಕಾಗಿಲ್ಲ ಹಾಗೂ ಅಣಬೆ ಜಾತಿಗಳನ್ನು ಎಚ್ಚರಿಕೆಯಿಂದ ಆರಿಸಬೇಕು ಮತ್ತು ಯಾವ ಋತುವಿನಲ್ಲಿ ಯಾವ ಜಾತಿಯ ಅಣಬೆಗೆ ಹೆಚ್ಚು ಬೆಲೆ ಸಿಗುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕು.

ಭಾರತದಲ್ಲಿ ಅಣಬೆ ಕೃಷಿಯ ವಿಧಗಳು :

ಭಾರತದಲ್ಲಿ ಅಣಬೆ ಬೇಸಾಯಕ್ಕೆ ಮೂರು ವಿಧದ ಅಣಬೆಗಳನ್ನು ಬಳಸಲಾಗುತ್ತದೆ.

  1. ಬಟನ್ ಅಣಬೆಗಳು,
  2. ಸಿಂಪಿ ಅಣಬೆಗಳು ಮತ್ತು
  3. ಭತ್ತದ ಒಣಹುಲ್ಲಿನ ಅಣಬೆಗಳು
  • ಬಟನ್ ಅಣಬೆ  ಕೃಷಿಯನ್ನು ಮುಖ್ಯವಾಗಿ ಚಳಿಗಾಲದಲ್ಲಿ ಹಾಗೂ ಹವಾಮಾನ ಪರಿಸ್ಥಿತಿಗಳು ಹೆಚ್ಚು ಸೂಕ್ತವಿದ್ದಾಗ  ಮಾಡಲಾಗುತ್ತದೆ.
  • ಸಿಂಪಿ  ಅಣಬೆಗಳು  ತಮ್ಮ ಬೆಳವಣಿಗೆಗೆ ಉತ್ತರದ ಬಯಲು ಪ್ರದೇಶಗಳನ್ನು ಇಷ್ಟಪಡುತ್ತವೆ.
  • ಭತ್ತದ ಒಣಹುಲ್ಲಿನ ಅಣಬೆಗಳು ತಾಪಮಾನವು 35-40 ಡಿಗ್ರಿ ಸೆಲ್ಸಿಯಸ್ ಇರುವ ಪ್ರದೇಶಗಳಲ್ಲಿ ಬೆಳೆಯಲು ಸೂಕ್ತವಾಗಿದೆ.

ದೊಡ್ಡ ಮಾರುಕಟ್ಟೆ ಹೊಂದಿರುವ ಅಣಬೆಗಳ ಬೇಸಾಯಕ್ಕೆ ಬಳಸುವ ಅತ್ಯಂತ ಜನಪ್ರಿಯ ಅಣಬೆ ವಿಧವೆಂದರೆ ಬಟನ್ ಅಣಬೆಗಳು. ಅವು ಬಿಳಿ ಬಣ್ಣ ಮತ್ತು ಆಕರ್ಷಕವಾಗಿರುತ್ತವೆ.

ಸಣ್ಣ ಪ್ರಮಾಣದ ಅಣಬೆ ಕೃಷಿಯನ್ನು ಹೇಗೆ ಪ್ರಾರಂಭಿಸುವುದು?

ಅಣಬೆ ಕೃಷಿಯು ಸರಳವಾಗಿದ್ದು ಮತ್ತು ಹೆಚ್ಚಿನ ಏಕಾಗ್ರತೆ ಮತ್ತು ಶ್ರದ್ಧೆಯಿಂದ ಮಾಡಬೇಕಾದ ವಿವಿಧ ಹಂತಗಳನ್ನು ಒಳಗೊಂಡಿರುತ್ತದೆ. ಇಲ್ಲಿ ನಾವು ಬಟನ್ ಅಣಬೆ ಕೃಷಿಯ ವಿವರಗಳನ್ನು ವಿವರಿಸಿದ್ದೇವೆ.

ಹಂತ 1- ಕೃತಕ ಗೊಬ್ಬರ

ಗೊಬ್ಬರ  ತಯಾರಿಕೆಯು ಅಣಬೆ ಕೃಷಿಯ ಮೊದಲ ಹಂತವಾಗಿದೆ. ಸಮವಾದ ತಟ್ಟೆಗಳಲ್ಲಿ ತೆರೆದ ಸ್ಥಳದಲ್ಲಿ ಇದನ್ನು ಎಚ್ಚರಿಕೆಯಿಂದ ಮಾಡಬೇಕು. ನೀರಿನ ಶೇಖರಣೆಯನ್ನು ತಪ್ಪಿಸಲು ಗೊಬ್ಬರದಲ್ಲಿ ಸರಿಯಾದ ಒಳಚರಂಡಿ ಇರಬೇಕು. ತಯಾರಿಸಿದ ಗೊಬ್ಬರವನ್ನು ಮಳೆಯಿಂದ ರಕ್ಷಿಸಬೇಕು.. ಈ ಗೊಬ್ಬರವು  ನೈಸರ್ಗಿಕ ಅಥವಾ ರಾಸಾಯನಿಕ ಗೊಬ್ಬರವಾಗಿರಬಹುದು. 

ರಾಸಾಯನಿಕ ಗೊಬ್ಬರವನ್ನು ಹೊಟ್ಟು, ಕ್ಯಾಲ್ಸಿಯಂ ಅಮೋನಿಯಂ ನೈಟ್ರೇಟ್ / ಅಮೋನಿಯಂ ಸಲ್ಫೇಟ್, ಜಿಪ್ಸಮ್, ಯೂರಿಯಾ ಮತ್ತು ಗೋಧಿ ಹುಲ್ಲನ್ನು ಬಳಸಿ ತಯಾರಿಸಲಾಗುತ್ತದೆ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಚಿಮುಕಿಸುವ ವಿಧಾನವನ್ನು ಬಳಸಿಕೊಂಡು ನೀರಿನಲ್ಲಿ ನೆನೆಸಿ ರಾಶಿಯನ್ನು ತಯಾರಿಸಲಾಗುತ್ತದೆ.

ನೈಸರ್ಗಿಕ ಗೊಬ್ಬರವು ಗೋಧಿ ಹುಲ್ಲು ಮತ್ತು ಜಿಪ್ಸಮ್ ಅನ್ನು ಕುದುರೆ ಸಗಣಿ ಮತ್ತು ಕೋಳಿ ಗೊಬ್ಬರದೊಂದಿಗೆ ಬೆರೆಸಲಾದ ಮಿಶ್ರ ಗೊಬ್ಬರವಾಗಿರುತ್ತದೆ. ಕಾಂಪೋಸ್ಟ್ ತಯಾರಿಕೆಗೆ ತಾಜಾ ಗೊಬ್ಬರವನ್ನು ಮಾತ್ರ ಬಳಸಲಾಗುತ್ತದೆ. ಗೋಧಿ ಒಣಹುಲ್ಲಿನ ಒದ್ದೆಯಾಗಲು ನೀರನ್ನು ಸಿಂಪಡಿಸಿ, ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಹುದುಗಲು ಬಿಡಬೇಕು. ಗೊಬ್ಬರದ  ರಾಶಿಯನ್ನು ನಿಯಮಿತವಾಗಿ ತಿರುಗಿಸಬೇಕು  ಮತ್ತು ಅದನ್ನು ತೇವವಾಗಿ ಇರಿಸಿ. ಕೋಣೆಯಲ್ಲಿ ಅಮೋನಿಯಾದ ವಾಸನೆ  ಬಂದಾಗ, ಅದು ಕೊಳೆಯುತ್ತಿದೆ ಎಂದರ್ಥ. ನೈಸರ್ಗಿಕ ಗೊಬ್ಬರ ಬಳಸಿ ಸಾವಯವ ಅಣಬೆ ಕೃಷಿ ಮಾಡಬಹುದು. 

ಗೊಬ್ಬರ ಬಳಸಲು ಸಿದ್ಧವಾದಾಗ, ಅವುಗಳನ್ನು 15-18 ಸೆಂ.ಮೀ ದಪ್ಪದಲ್ಲಿ ಗೊತ್ತುಪಡಿಸಿದ 

ಟ್ರೇಗಳಲ್ಲಿ ತುಂಬಿಸಲಾಗುತ್ತದೆ. ಟ್ರೇ ತುಂಬುವಾಗ ತೇವಾಂಶವನ್ನು ನಿಯಮಿತವಾಗಿ ಕಾಪಾಡಿಕೊಳ್ಳಬೇಕು. 

ಹಂತ 2-  ಸ್ಪಾನ್ (ಬೀಜಗಳಿಗೆ ಸಮಾನ) ಬೆಳೆಯುವಿಕೆ

ಇದು ಅಣಬೆಯು ತನ್ನ ಕವಕಜಾಲದಿಂದ ಹೊರ ಬರುವ ಪ್ರಕ್ರಿಯೆಯಾಗಿದೆ. ನೀವು ಸ್ಪಾನ್ ಅನ್ನು ಗೊಬ್ಬರ  ತುಂಬುವಿಕೆಯ ನಂತರ ಅಥವಾ ಟ್ರೇಗಳಲ್ಲಿ ಗೊಬ್ಬರ  ತುಂಬುವ ಮೊದಲು ಕಾಂಪೋಸ್ಟ್ನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಬಹುದು. ಬಿತ್ತನೆ ಮಾಡಿದ ನಂತರ, ಅದನ್ನು ಪತ್ರಿಕೆಗಳಿಂದ ಮುಚ್ಚಿ ಮತ್ತು ತೇವಾಂಶವನ್ನು ಕಾಪಾಡಲು ನಿಯಮಿತವಾಗಿ ನೀರನ್ನು ಸಿಂಪಡಿಸಿ.

ಹಂತ 3- ಕೇಸಿಂಗ್ ಮಣ್ಣು

ಕೇಸಿಂಗ್ ಮಣ್ಣು ಅಣಬೆಗಳ ಮೇಲೆ ಹರಡಬೇಕು. ಇದು ಹಸುವಿನ ಸಗಣಿಯೊಂದಿಗೆ ಬೆರೆಸಿದ ಮಣ್ಣು ಮತ್ತು ಸೂಕ್ಷ್ಮಜೀವಿಗಳನ್ನು ತೊಡೆದುಹಾಕಲು ಸಂಪೂರ್ಣವಾಗಿ ಫಿಲ್ಟರ್ ಮಾಡಿದ ಮತ್ತು ಕ್ರಿಮಿ ಮುಕ್ತಗೊಳಿಸಿದ ಮಣ್ಣು. ಇದನ್ನು ಮಿಶ್ರಗೊಬ್ಬರದ ಮೇಲೆ ಹರಡಬೇಕು ಮತ್ತು 72 ಗಂಟೆಗಳ ಕಾಲ 27 ಡಿಗ್ರಿಗೆ ಹತ್ತಿರವಾದ ತಾಪಮಾನವನ್ನು ಕಾಪಾಡಬೇಕು.

ಹಂತ 4-  ಅಣಬೆಗಳು ಬರುವ ಹಂತ

ಇದು 15 ದಿನಗಳ ನಂತರ ಬಟನ್ ಅಣಬೆಗಳ ಮೇಲಿನ ‘ಗುಂಡಿಗಳು’ ಎದ್ದುಕಾಣುವ ಮತ್ತು ಅವುಗಳ ಕಾಂಡಗಳು  ಬಿಗಿಯಾಗುವ ಹಂತವಾಗಿದೆ. ಇವು ಕೊಯ್ಲಿಗೆ ಸಿದ್ದವಾಗಿರುವ ಹಂತವಾಗಿವೆ. 

ಹಂತ 5- ಕೊಯ್ಲು

ಕೊಯ್ಲಿಗೆ ಸಿದ್ದವಾದ ಅಣಬೆಯನ್ನು ನಿಧಾನವಾಗಿ ಮಣ್ಣಿನ ಮೇಲಿಂದ ಒತ್ತಿ ತಿರುವಿ ತೆಗೆಯಬೇಕು ಅಥವಾ ಚಾಕುವಿನಿಂದ ಬುಡದಲ್ಲಿ ಕೊಯ್ಯಬೇಕು. ಅಣಬೆಗಳನ್ನು ಕೊಯ್ದ ನಂತರ ಅದೇ ಗೊಬ್ಬರವನ್ನು 6 ತಿಂಗಳವರೆಗೆ ಬಳಸಬಹುದು. 

ಭಾರತದಲ್ಲಿ ಅಣಬೆ ಕೃಷಿ ಎಷ್ಟು ಲಾಭದಾಯಕ?

ಉತ್ತರ ಪ್ರದೇಶ, ತ್ರಿಪುರಾ ಮತ್ತು ಕೇರಳ ಅತಿ ಹೆಚ್ಚು ಅಣಬೆ ಉತ್ಪಾದಿಸುವ ರಾಜ್ಯಗಳಾಗಿವೆ. ಭಾರತದಲ್ಲಿ ಅಣಬೆ ಕೃಷಿಯ ಲಾಭವು – ಪ್ರತಿ ಚದರ ಅಡಿ ಪ್ರದೇಶಕ್ಕೆ ಕನಿಷ್ಠ 1000 ರೂ ಗಳಷ್ಟಿದೆ.  ಭಾರತದಲ್ಲಿ ಅಣಬೆ ಕೃಷಿಯಲ್ಲಿನ ಲಾಭವು ದೊಡ್ಡ ಪ್ರಮಾಣದ ಉತ್ಪಾದನೆಯೊಂದಿಗೆ ಇನ್ನೂ ಹೆಚ್ಚಾಗಬಹುದು.

ಅಣಬೆ ಕೃಷಿಯಲ್ಲಿ ಸಿಗುವ ಲಾಭವು ನೀವು  ಅಣಬೆ ಕೃಷಿ ಮಾಡುವ  ಪ್ರದೇಶ, ಬಳಸುವ ಅಣಬೆಯ ಪ್ರಕಾರ ಮತ್ತು ಕಂಡುಕೊಳ್ಳುವ ಉತ್ತಮ ಮಾರುಕಟ್ಟೆಯನ್ನು ಅವಲಂಬಿಸಿರುತ್ತದೆ. ಇವೆಲ್ಲವನ್ನೂ ನಿರ್ವಹಿಸಬಹುದಾದರೆ ಅಣಬೆ ಕೃಷಿ ವ್ಯವಹಾರವನ್ನು ಪ್ರಾರಂಭಿಸಿ ಹೆಚ್ಚಿನ ಆದಾಯವನ್ನು ಗಳಿಸಬಹುದು. 

Recent Posts

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024

ಬೇಸಿಗೆ ಅಥವಾ ಝೈದ್ ಬೆಳೆಗಳನ್ನು ಮಾರ್ಚ್ ನಿಂದ ಜೂನ್ ನಡುವೆ ಬೆಳೆಯಲಾಗುತ್ತದೆ

ಭಾರತವು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ದೇಶವಾಗಿದ್ದು, ಕೃಷಿಯ ಹಲವಾರು ಋತುಗಳನ್ನು ಹೊಂದಿದೆ. ಬೆಳೆಗಳ ನಾಟಿ ಸಮಯವು ಬೆಳೆ ಪ್ರಕಾರ, ಋತುಗಳು, ಪ್ರದೇಶ ಮತ್ತು ಹವಾಮಾನವನ್ನು ಅವಲಂಬಿಸಿ…

March 26, 2024

ನರ್ಸರಿ ಬೆಳೆಸುವುದು: ಬಲವಾದ ಮತ್ತು ಆರೋಗ್ಯಕರ ಸಸಿಗಳಿಗಾಗಿ ಈ ಲೇಖನವನ್ನು ಓದಿರಿ

ಆರೋಗ್ಯಕರ ಬೀಜಗಳನ್ನು ಬಿತ್ತುವುದು ಅಥವಾ ಆರೋಗ್ಯಕರ ಸಸಿಗಳನ್ನು ನೆಡುವುದು ಆರೋಗ್ಯಕರ ಮತ್ತು ಉತ್ಪಾದಕ ಬೆಳೆಯನ್ನು ಸಾಧಿಸುವಲ್ಲಿ ಪ್ರಮುಖ ಅಂಶವಾಗಿದೆ. ತರಕಾರಿಗಳು, ಹಣ್ಣುಗಳು ಮತ್ತು ಅಲಂಕಾರಿಕ ಸಸ್ಯಗಳು ಸೇರಿದಂತೆ…

March 23, 2024