Categories: Uncategorized

ರೈತರ  ಸಬಲೀಕರಣ: ಕೃಷಿಯಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲು ಸರ್ಕಾರದ ಪ್ರಯತ್ನ

ಪರಿಚಯ

         ಭಾರತೀಯ ಆಹಾರ ನಿಗಮ ಮಂಡಳಿ ಮತ್ತು ರಾಜ್ಯದ ಸಂಸ್ಥೆಗಳ  ಮುಖಾಂತರ 22 ಬೆಳೆಗಳಿಗೆ ಬೆಂಬಲ  ಬೆಲೆಯ ನೀತಿಯನ್ನು ಭಾರತ ಸರ್ಕಾರವು ಸ್ಥಾಪಿಸಿದೆ. ಸದರಿ ನಿಯಮದಲ್ಲಿ ಕನಿಷ್ಠ ಬೆಂಬಲ ಬೆಲೆಗಳು (MSP) ಮತ್ತು ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) ಸೇರಿದ್ದು, ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗದಿಂದ ನಿರ್ಧರಿಸಲ್ಪಟ್ಟಿರುತ್ತದೆ. ಇವರ ಮುಖ್ಯ ಉದ್ದೇಶವು ಹಲವಾರು PM-KISAN, PMFBY, PMKSY ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ  ರೈತರ ಆದಾಯ  ಹೆಚ್ಚಳ ಹಾಗೂ  ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ತಂತ್ರಜ್ಞಾನದ ಬಳಕೆ.

ಅವಲೋಕನ

            ಭಾರತ ಸರ್ಕಾರವು ರೈತರ ಬೆಳೆಗೆ ಉತ್ತಮ ಬೆಲೆಯನ್ನು ದೊರಕಿಸಿಕೊಡಲು ನೀತಿಗಳನ್ನು ಸ್ಥಾಪಿಸಿದೆ.

ಸದರಿ ನೀತಿಗಳನ್ನು, ಕನಿಷ್ಠ ಬೆಂಬಲ ಬೆಲೆಗಳು (MSP) ಮತ್ತು ನ್ಯಾಯಯುತ ಹಾಗೂ ಲಾಭದಾಯಕ ಬೆಲೆ (FRP) ಎಂದು ಕರೆಯಲಾಗುತ್ತದೆ. ವಿವಿಧ ಸರ್ಕಾರಿ ಏಜೆನ್ಸಿಗಳು ಮತ್ತು ಇತರ ಪ್ರಮುಖ ಅಂಶಗಳ ಅಭಿಪ್ರಾಯಗಳನ್ನು ಪರಿಗಣಿಸಿ, ಸರ್ಕಾರವು 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ನಿರ್ಧರಿಸುತ್ತದೆ. ಭಾರತೀಯ ಆಹಾರ ನಿಗಮ ಮತ್ತು ಇತರ ರಾಜ್ಯ ಏಜೆನ್ಸಿಗಳ ಮೂಲಕ MSP  ದರದಲ್ಲಿ  ಸರ್ಕಾರವು ರೈತರ ಉತ್ಪನ್ನಗಳನ್ನು ಖರೀದಿಸಿ, ರೈತರಿಗೆ ಲಾಭದಾಯಕವಾಗಿದೆ. ಅದಲ್ಲದೇ, ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರವು ಪೂರಕ ಆದಾಯ, ಬೆಳೆ ವಿಮೆ, ನೀರಾವರಿ ಕಾರ್ಯಕ್ರಮಗಳು, ಕೃಷಿ ಚಟುವಟಿಕೆಗಳಲ್ಲಿ ಡ್ರೋನ್ ತಂತ್ರಜ್ಞಾನದ ಬಳಸುವಂತೆ  ಉತ್ತೇಜಿಸಲು ಸರ್ಕಾರವು ಹಲವಾರು ಕಾರ್ಯಕ್ರಮಗಳನ್ನು ಹಾಗೂ ಸುಧಾರಣೆಗಳನ್ನು ಜಾರಿಗೆ ತಂದಿದೆ.

   ರೈತರು, ಸರ್ಕಾರ ಸ್ಥಾಪಿಸಿರುವ ಈ ನೀತಿಗಳಿಗೆ ಪ್ರಾಥಮಿಕ ಫಲಾನುಭವಿಗಳಾಗಿರುತ್ತಾರೆ. ಸರ್ಕಾರದಿಂದ ಸ್ಥಾಪನೆಯಾದ ಖರೀದಿ ಕಾರ್ಯಕ್ರಮಗಳ ಮೂಲಕ ರೈತರು ತಮ್ಮ ಬೆಳೆಗಳಿಗೆ ಬೆಂಬಲ ಬೆಲೆಯನ್ನು ಪಡೆದುಕೊಳ್ಳುತ್ತಾರೆ. ರೈತರ ಉತ್ಪನ್ನಗಳಿಗೆ ನ್ಯಾಯಯುತ ಬೆಲೆಯನ್ನು ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರವು 22 ಬೆಳೆಗಳಿಗೆ MSP ನಿಗದಿಪಡಿಸಿದೆ.  ಸರ್ಕಾರವು ಪ್ರಮುಖವಾಗಿ ಸದರಿ ಕಾರ್ಯಕ್ರಮಗಳ ಮುಖಾಂತರ ರೈತರಿಗೆ  ಕೃಷಿ ಕ್ಷೇತ್ರಕ್ಕೆ ಸ್ಥಿರತೆ ಮತ್ತು ಭದ್ರತೆಯನ್ನು ಒದಗಿಸುವ  ಮೂಲಕ ರೈತರು ತಮ್ಮ ಬೆಳೆಗಳಿಂದ ಆದಾಯವನ್ನು ಪಡೆದು ಸುಸ್ಥಿರ ಜೀವನವನ್ನು ಸಾಗಿಸಲು ಅನುವು ಮಾಡಿದೆ.

ಪ್ರಮುಖ ಅಂಶಗಳು

  •     ಭಾರತ ಸರ್ಕಾರವು, 22 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳು (MSP) ಮತ್ತು ನ್ಯಾಯಯುತ ಮತ್ತು ಲಾಭದಾಯಕ ಬೆಲೆ (FRP) ಯನ್ನು ನಿಗದಿಪಡಿಸುತ್ತದೆ.
  •     ಭಾರತೀಯ ಆಹಾರ ನಿಗಮ ಮತ್ತು ಇತರೆ ರಾಜ್ಯ ಏಜೆನ್ಸಿಗಳ ಮೂಲಕ  ಸರ್ಕಾರವು ರೈತರ ಉತ್ಪನ್ನಗಳನ್ನು MSP ದರದಲ್ಲಿ ಖರೀದಿಸುತ್ತದೆ.
  •     ಸರ್ಕಾರವು ರೈತರ ಆದಾಯವನ್ನು ಹೆಚ್ಚಿಸಲು ಕಾರ್ಯಕ್ರಮಗಳು ಮತ್ತು ಸುಧಾರಣೆಗಳನ್ನು ಜಾರಿಗೊಳಿಸಿದೆ, ಅವುಗಳು:
  1. PM-KISAN ಮುಖಾಂತರ ಪೂರಕ ಆದಾಯ ನೀಡುವುದು.
  2. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ (PMFBY) ಅಡಿಯಲ್ಲಿ ಬೆಳೆ ವಿಮೆ
  3. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ (PMKSY)ಅಡಿಯಲ್ಲಿ ನೀರಾವರಿ
  4. ಕೃಷಿ ಮೂಲಭೂತಸೌಕರ್ಯ ನಿಧಿ ಅಡಿಯಲ್ಲಿ ಮೂಲಸೌಕರ್ಯ ಸೃಷ್ಟಿ
  5. ಕೃಷಿ ಮತ್ತು ಸಂಬಂಧಿತ ವಲಯದ ಸಾಲಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್‌ಗಳು (KCC).
  6. 10,000 ರೈತ ಉತ್ಪಾದಕ ಸಂಸ್ಥೆಗಳ (FPO) ಸೃಷ್ಟಿ
  7. ರಾಷ್ಟ್ರೀಯ ಸುಸ್ಥಿರ ಕೃಷಿ ಮಿಷನ್ (NMSA)
  8. ಕೃಷಿಯಲ್ಲಿ ಡ್ರೋನ್ ತಂತ್ರಜ್ಞಾನದ ಅಳವಡಿಕೆ
  9. ಜೇನುಸಾಕಣೆ, ರಾಷ್ಟ್ರೀಯ ಗೋಕುಲ್ ಮಿಷನ್, ನೀಲಿ ಕ್ರಾಂತಿ, ಬಡ್ಡಿ ರಹಿತ ಸಾಲ ಸೃಷ್ಟಿ, ಅಗ್ರೋ-ಫಾರೆಸ್ರ್ಟೀ , ಬಿದಿರು ಮಿಷನ್ ಪುನಸ್ಚೇತನ ಇತ್ಯಾದಿ.
  •     ಸದರಿ ನೀತಿಗಳು ಮತ್ತು ಸುಧಾರಣೆಗಳು ಕೃಷಿ ಕ್ಷೇತ್ರದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿ, ರೈತರು ಸುಸ್ಥಿರ ಜೀವನವನ್ನು ಸಾಗಿಸಲು ಸಹಾಯ ಮಾಡುತ್ತದೆ.

ತೀರ್ಮಾನ:

ಭಾರತ ಸರ್ಕಾರವು ದೇಶದ ಕೃಷಿ ಕ್ಷೇತ್ರ ಮತ್ತು ರೈತರನ್ನು ಬೆಂಬಲಿಸಲು ಮಹತ್ವದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಳನ್ನು ನಿಗದಿಪಡಿಸುವುದರಿಂದ, ಹಾಗೂ ಪಿಎಂ-ಕಿಸಾನ್, ಬೆಳೆ ವಿಮೆ ಮತ್ತು ನೀರಾವರಿಗೆ ಪ್ರವೇಶ ಸೃಷ್ಟಿಸುವುದರಿಂದ, ಆದಾಯವನ್ನು ಅಧಿಕಗೊಳಿಸುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ, ರೈತರ ಅಭಿವೃದ್ಧಿಗೆ ನಾಂದಿಯಾಗಿಸಿ, ಅಗತ್ಯವಾದ ಸಂಪನ್ಮೂಲಗಳನ್ನು ನೀಡಲಾಗುತ್ತಿದೆ. ರೈತರ ಜೀವನೋಪಾಯವನ್ನು ಸುಧಾರಿಸುವುದು ಹಾಗೂ ಕೃಷಿಯಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿ ಸರ್ಕಾರ ಪ್ರಯತ್ನಿಸಿದೆ. ಜೊತೆಗೆ, ಕೃಷಿ ಮೂಲಭೂತಸೌಕರ್ಯ ನಿಧಿಯಂತಹ ಕಾರ್ಯಕ್ರಮಗಳಿಂದ ರೈತರು ಕೃಷಿ ಚಟುವಟಿಕೆಗಳನ್ನು ಮಾಡಿ ಆದಾಯ ಪಡೆದುಕೊಳ್ಳಬಹುದು. ರೈತರನ್ನು ಮತ್ತು ಕೃಷಿ ಉದ್ಯಮೆದಾರರನ್ನು ಬೆಂಬಲಿಸುವ ಮುಖಾಂತರ ಕೃಷಿ ಕ್ಷೇತ್ರದಲ್ಲಿ ಸುಸ್ಥಿರ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಸರ್ಕಾರ ಅನುವು ಮಾಡಿದೆ. ಸರ್ಕಾರದ ಈ ಪ್ರಯತ್ನದಿಂದ ರೈತರಿಗೆ ಆತ್ಮವಿಶ್ವಾಸವನ್ನು ಹೆಚ್ಚಿಸಿ ತಮ್ಮ ಉತ್ಪನ್ನಗಳನ್ನು ನ್ಯಾಯಯುತ ಬೆಲೆಗೆ ಮಾರಾಟ ಮಾಡಲು ಸಾಧ್ಯವಾಗುತ್ತದೆ ಮತ್ತು ಕೃಷಿ ಉದ್ಯಮದ ದೀರ್ಘಾವಧಿಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

Recent Posts

ಕಬ್ಬು ಬೆಳೆಯಲ್ಲಿ ಬಿಳಿ ಗೊಣ್ಣೆ ಹುಳುವಿನ ಸೋಂಕಿನಿಂದ ಮುತ್ತಿಕೊಳ್ಳುವಿಕೆಯಿಂದ ಅಂತಿಮ ನಿರ್ವಹಣೆ ಕ್ರಮಗಳು

ಕಬ್ಬಿನ ಬಿಳಿ ಗೊಣ್ಣೆ ಹುಳು ಒಂದು ಗಂಭೀರವಾದ ಕೃಷಿ ಕೀಟವಾಗಿದ್ದು, ಇದು ವಿಶ್ವಾದ್ಯಂತ ಕಬ್ಬಿನ ಬೆಳೆಗಳ ಉತ್ಪಾದಕತೆ ಮತ್ತು ಸುಸ್ಥಿರತೆಗೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ. ಈ ಬಿಳಿ ಗೊಣ್ಣೆ…

May 18, 2024

ಕಬ್ಬಿನ ಇಂಟರ್ನೋಡ್ ಬೋರರ್  ಮುತ್ತಿಕೊಳ್ಳುವಿಕೆ ಮತ್ತು ಅದರ ನಿರ್ವಹಣೆಯ

ಪ್ರಪಂಚದ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಬ್ಬು ಒಂದು ಪ್ರಮುಖ ನಗದು ಬೆಳೆಯಾಗಿದೆ. ಆದಾಗ್ಯೂ, ಕಬ್ಬಿನ ಮಧ್ಯ ಕೊರಕವು ಗಮನಾರ್ಹವಾದ ಕೀಟವಾಗಿದ್ದು, ಕಬ್ಬು ರೈತರಿಗೆ ಗಣನೀಯ…

May 8, 2024

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024