Crop

ಕಾಫಿ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2021-2022ರ ಸಾಲಿನಲ್ಲಿ 3.69 ಲಕ್ಷ ಟನ್ಗಳಷ್ಟು  ಕಾಫಿಯನ್ನು ಉತ್ಪಾದಿಸಿದೆ. ವಿಶ್ವದ ಅತಿ ಹೆಚ್ಚು ಕಾಫಿ ಬೆಳೆಯುವ ರಾಷ್ಟಗಳೆಂದರೆ ಬ್ರೆಜಿಲ್, ವಿಯೆಟ್ನಾಂ, ಕೊಲಂಬಿಯಾ, ಇಂಡೋನೇಷಿಯಾ ಮತ್ತು ಇಥಿಯೋಪಿಯಾ.  ಭಾರತವು ವಿಶ್ವದ ಏಳನೇ ಅತಿ ದೊಡ್ಡ ಕಾಫಿ ಬೆಳೆಯುವ ರಾಷ್ಟ್ರವಾಗಿದೆ. ಭಾರತದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳಲ್ಲಿ  ಅತಿ ಹೆಚ್ಚು ಕಾಫಿ ಬೆಳೆಯನ್ನು ಬೆಳೆಸಲಾಗುತ್ತದೆ .  ಭಾರತದ  ಕಾಫಿ ಬೀಜಗಳನ್ನು  ಉತ್ತಮ ಮಿಶ್ರಣಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಭಾರತವು,  ಒಟ್ಟು ಕಾಫಿ ಉತ್ಪಾದನೆಯ  ಸುಮಾರು 80% ರಷ್ಟನ್ನು ವಿವಿಧ ದೇಶಗಳಿಗೆ ವ್ಯಾಪಕವಾಗಿ ರಫ್ತು ಮಾಡುತ್ತದೆ. ಮುಖ್ಯವಾಗಿ ಭಾರತವು ಇಟಲಿ, ಜರ್ಮನಿ, ರಷ್ಯಾ, ಸ್ಪೇನ್, ಬೆಲ್ಜಿಯಂ, ಸ್ಲೊವೇನಿಯಾ, ಯುನೈಟೆಡ್ ಸ್ಟೇಟ್ಸ್ ಮತ್ತು ಯುನೈಟೆಡ್ ಕಿಂಗ್‌ಡಮ್‌ ದೇಶಗಳಿಗೆ ರಫ್ತು ಮಾಡುತ್ತದೆ. ಎರಡು ರೀತಿಯ ಕಾಫಿಯ ವಿಧಗಳನ್ನು ಬೆಳೆಸಲಾಗುತ್ತದೆ . ಅವುಗಳು ಯಾವುದೆಂದರೆ   ಅರೇಬಿಕಾ ಮತ್ತು ರೋಬಸ್ಟಾ.

ಕಷ್ಟದ  ಮಟ್ಟ:  ಕಠಿಣ

ಬೀಜಗಳ ಆಯ್ಕೆ:

ಕಾಫಿಯಲ್ಲಿ ಎರಡು ಪ್ರಮುಖ ವಿಧಗಳಿವೆ, ಅರೇಬಿಕಾ ಮತ್ತು ರೋಬಸ್ಟಾ. ಈ ಎರಡು ವಿಧಗಳಲ್ಲಿ ಜನಪ್ರಿಯ ಮಿಶ್ರತಳಿಗಳೆಂದರೆ ಕೆಂಟ್, ಎಸ್-795, ಕಾವೇರಿ ಮತ್ತು ಸೆಲೆಕ್ಷನ್ 9.

ಕಾಫಿ ಬೀಜಗಳ ಬೀಜೋಪಚಾರ

ನಮ್ಮಲ್ಲೇ ಲಭ್ಯವಿರುವ ಕಾಫಿ ಬೀಜಗಳಿಂದ ಕಾಫಿ ಗಿಡಗಳನ್ನು ಬೆಳೆಸುವುದು ತುಂಬಾ ಕಷ್ಟಕರ, ಆದ್ದರಿಂದ ಕಾಫಿ ಬೀಜಗಳನ್ನು ಸಾಮಾನ್ಯವಾಗಿ ವಿಶ್ವಾಸಾರ್ಹ ಚಿಲ್ಲರೆ ವ್ಯಾಪಾರಿಗಳಿಂದ ಖರೀದಿಸಲಾಗುತ್ತದೆ. ಕಾಫಿ ಬೀಜಗಳನ್ನು ಅಜೋಸ್ಪಿರಿಲಮ್ ಮತ್ತು ಫಾಸ್ಫೋಬ್ಯಾಕ್ಟೀರಿಯಾದ  ದ್ರಾವಣದಿಂದ ಬೀಜೋಪಚಾರ ಮಾಡಬೇಕು.  ಕಾಫಿ ಬೀಜಗಳನ್ನು ಹಲವಾರು ರಾಸಾಯನಿಕಗಳೊಂದಿಗೆ ಬೀಜೋಪಚಾರ ಮಾಡುವುದಿಲ್ಲ ಯಾಕೆಂದರೆ ಕಾಫಿ ಬೀಜಗಳು  ಬಹಳ ಸೂಕ್ಷ್ಮ ವಾಗಿರುವ ಕಾರಣದಿಂದ ಹೆಚ್ಚು ರಾಸಾಯನಿಕಗಳನ್ನು ಉಪಯೋಗಿಸಿ ಬೀಜೋಪಚಾರ ಮಾಡಿದರೆ ಕಾಫಿ ಬೀಜದ ಮೊಳಕೆಯೊಡೆಯುವ ಪ್ರಕ್ರಿಯೆಯ ಮೇಲೆ ಅಡ್ಡ ಪರಿಣಾಮ ಬೀರುತ್ತದೆ .  ಕಾಫಿ ಬೀಜದ ಸಿಪ್ಪೆಗಳನ್ನು  ಎಚ್ಚರಿಕೆಯಿಂದ ತೆಗೆದುಹಾಕಬೇಕು. ನಂತರ ಬೀಜಗಳನ್ನು ಸೋಡಿಯಂ ಹೈಪೋಕ್ಲೋರೈಟ್‌ನ 1% ದ್ರಾವಣದಿಂದ  ಚೆನ್ನಾಗಿ ತೊಳೆಯಬೇಕು. ಯಾವುದೇ ರಾಸಾಯನಿಕ ಉಳಿಕೆಗಳನ್ನು  ತೆಗೆದುಹಾಕಲು ಬೀಜಗಳನ್ನು ತಕ್ಷಣವೇ ಖನಿಜೀಕರಿಸಿದ ನೀರಿನಿಂದ  ತೊಳೆಯಬೇಕು.  ನಂತರ ಬೀಜಗಳನ್ನು 48 ಗಂಟೆಗಳ ಕಾಲ ನೆನೆಸಿಡಬೇಕು. 

ಕಾಫಿ ಬೆಳೆಗೆ  ನರ್ಸರಿ ಬೇಡ್  ತಯಾರಿ

ಕಾಫಿ ಸಸಿಗಳನ್ನು ಸಾಮಾನ್ಯವಾಗಿ ಖರೀದಿಸಿ, ನೆಡಲಾಗುತ್ತದೆ.  ಕಾಫಿ ಬೀಜಗಳು ಬಹಳ ಸೂಕ್ಷ್ಮವಾಗಿರುವುದರಿಂದ ಬೀಜದಿಂದ ಕಾಫಿ ಸಸಿಗಳನ್ನು ಬೆಳೆಸುವದು ತುಂಬಾ ಕಷ್ಟ ಮತ್ತು ಬೆಳೆಸುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತದೆ. 

ನರ್ಸರಿಗಳಲ್ಲಿ ಕಾಫಿ ಸಸಿಗಳನ್ನು ಸಾಮಾನ್ಯವಾಗಿ ಪಾಲಿಥಿನ್ ಚೀಲಗಳಲ್ಲಿ ಬೆಳೆಸಲಾಗುತ್ತದೆ. ಈ ಪಾಲಿಥಿನ್ ಚೀಲಗಳಲ್ಲಿ ಉತ್ತಮವಾದ ಮಣ್ಣು, ವರ್ಮಿಕ್ಯುಲೈಟ್ ಮತ್ತು ಹ್ಯೂಮಸ್ (ಭಾಗಶಃ ಕೊಳೆತ ಸಾವಯವ ವಸ್ತು ;ಮಣ್ಣಿನ ಸಾವಯವ ಘಟಕ) ಮಿಶ್ರಣವನ್ನು  ತುಂಬಿಸಬೇಕು . ನಂತರ ಬೀಜಗಳನ್ನು ಪಾಲಿಥಿನ್ ಚೀಲಗಳಲ್ಲಿ ಬಿತ್ತನೆ ಮಾಡಿ ನೆರಳಿನಲ್ಲಿ ಇರಿಸಬೇಕು. ಸಾಮಾನ್ಯವಾಗಿ ಬೀಜಗಳು, ಮೊಳಕೆಯೊಡೆಯಲು 2.5 ತಿಂಗಳು ತೆಗೆದುಕೊಳ್ಳುತ್ತವೆ . ಕಾಫಿ ಬೀಜಗಳು ಬಹಳ ಸೂಕ್ಷ್ಮವಾಗಿರುವುದರಿಂದ ಅತಿಯಾದ ನೀರಾವರಿ ಅಥವಾ ಕಡಿಮೆ ಪ್ರಮಾಣದ ನೀರಾವರಿ ಕೊಡುವುದರಿಂದ  ಬೀಜಗಳು  ನಾಶವಾಗುತ್ತವೆ  .

ಕಾಫಿ ಬೆಳೆಗೆ  ಭೂಮಿ ಸಿದ್ಧತೆ

ಕಾಫಿ ಬೆಳೆಯುವ ತೋಟಗಳು ಕಳೆಗಳಿಂದ  ಮುಕ್ತವಾಗಿರಬೇಕು. ಯಾವುದೇ ಕಳೆ ಇಲ್ಲದ ರೀತಿಯಲ್ಲಿ ತೋಟವನ್ನು ಸ್ವಚ್ಛಗೊಳಿಸಬೇಕು. ಉತ್ತಮ ನೀರಿನ ನಿರ್ವಹಣೆಗಾಗಿ ಕಾಫಿಯನ್ನು ಇಳಿಜಾರಿನ ಪ್ರದೇಶದಲ್ಲಿ ಬೆಳೆಯುವುದರಿಂದ, ಮಣ್ಣು ಸಂರಕ್ಷಣಾ ಕ್ರಮಗಳನ್ನು ಅನುಸರಿಸಬೇಕು. ಯಾವುದೇ ಪೋಷಕಾಂಶ ಅಥವಾ ಗೊಬ್ಬರವನ್ನು ಹಾಕುವ ಮೊದಲು ಹೊಲವನ್ನು ಮಣ್ಣಿನ ಪರೀಕ್ಷೆಗೆ ಒಳಪಡಿಸಬೇಕು. ಮಣ್ಣಿನ ಪರೀಕ್ಷೆಯ ಫಲಿತಾಂಶಗಳ ಆಧಾರದ ಮೇಲೆ, ಅದಕ್ಕೆ ಅನುಗುಣವಾಗಿ ಸುಣ್ಣವನ್ನು ಹಾಕಬೇಕು. 5 ಟನ್ / ಹೆಕ್ಟೇರ್‌ಗೆ ಕೊಟ್ಟಿಗೆ ಗೊಬ್ಬರ  ಅಥವಾ ಕಾಂಪೋಸ್ಟ್‌ನಂತಹ ಬೃಹತ್ ಸಾವಯವ ಗೊಬ್ಬರಗಳನ್ನು (ಕೊಟ್ಟಿಗೆ ಗೊಬ್ಬರ ,ಕಾಂಪೋಸ್ಟ್ ಮತ್ತು ಹಸಿರು ಎಲೆ ಗೊಬ್ಬರದ ಮಿಶ್ರಣ ) ಸೇರಿಸುವುದು ಪ್ರಸ್ತುತ ವಿಧಾನವಾಗಿದೆ . ಕಾಫಿ ಸಸಿಗಳನ್ನು ಸಾಮಾನ್ಯವಾಗಿ ನೆರಳು ಇರುವ  ಪ್ರದೇಶಗಳಲ್ಲಿ ಬೆಳೆಸಲಾಗುತ್ತದೆ , ಸಾಮಾನ್ಯವಾಗಿ ಅರಣ್ಯ ಬೆಳೆಗಳೊಂದಿಗೆ ಕಾಫಿ ಬೆಳೆಯನ್ನು ಬೆಳೆಸಲಾಗುತ್ತದೆ. 

ಕಾಫಿ ಬೆಳೆಗೆ ಮಣ್ಣಿನ ಅವಶ್ಯಕತೆ

5 ರಿಂದ 6 pH  ಮೌಲ್ಯ ಹೊಂದಿದ, ನೀರು ಬಸಿದು ಹೋಗುವ ಆಮ್ಲಿಯ ರಸಸಾರವಿರುವ ಮತ್ತು ಸಾವಯವಯುಕ್ತ ಮಣ್ಣು ಕಾಫಿ ಬೆಳೆಗೆ ಸೂಕ್ತವಾಗಿದೆ. ಮಣ್ಣಿನ ಫಲವತ್ತತೆಯ ಮಟ್ಟವನ್ನು ಕಂಡುಹಿಡಿಯಲು ಪ್ರತಿ 2 ವರ್ಷಗಳಿಗೊಮ್ಮೆ ಮಣ್ಣಿನ ಪರೀಕ್ಷೆಯನ್ನು ಮಾಡಬೇಕು.

ಹಿನ್ನುಡಿ

ಕಾಫಿ ಬೆಳೆಯು ಅತ್ಯಂತ ಸೂಕ್ಷ್ಮವಾದ ಬೆಳೆಯಾಗಿದ್ದು, ಬೆಳೆಯ ನಿರ್ವಹಣೆಯು ತುಂಬಾ ಕಷ್ಟವಾಗಿದೆ . ಕಾಫಿ ಬೆಳೆಯನ್ನು ವ್ಯವಸ್ಥಿತವಾಗಿ  ಬೆಳೆಸಿದರೆ, ರೈತನಿಗೆ ಹೂಡಿಕೆಯ ಮೇಲೆ ಹೆಚ್ಚಿನ ಲಾಭ ದೊರೆಯುತ್ತದೆ.

Recent Posts

ಕಬ್ಬಿನ ಇಂಟರ್ನೋಡ್ ಬೋರರ್  ಮುತ್ತಿಕೊಳ್ಳುವಿಕೆ ಮತ್ತು ಅದರ ನಿರ್ವಹಣೆಯ

ಪ್ರಪಂಚದ ಅನೇಕ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಬ್ಬು ಒಂದು ಪ್ರಮುಖ ನಗದು ಬೆಳೆಯಾಗಿದೆ. ಆದಾಗ್ಯೂ, ಕಬ್ಬಿನ ಮಧ್ಯ ಕೊರಕವು ಗಮನಾರ್ಹವಾದ ಕೀಟವಾಗಿದ್ದು, ಕಬ್ಬು ರೈತರಿಗೆ ಗಣನೀಯ…

May 8, 2024

ಕಬ್ಬಿನ ಆರಂಭಿಕ ಚಿಗುರು ಕೊರೆಯುವವರ ವಿರುದ್ಧ ಹೋರಾಟ: ಪರಿಣಾಮಕಾರಿ ನಿರ್ವಹಣೆ ತಂತ್ರಗಳು

ಕಬ್ಬಿನ ಆರಂಭಿಕ ಚಿಗುರು ಕೊರೆಯುವ ಕೀಟ, ಚಿಲೋ ಇನ್ಫ್ಯೂಸ್ಕಾಟೆಲಸ್ ಒಂದು ಕೀಟ ಕೀಟವಾಗಿದ್ದು, ಇದು ಸಸ್ಯದ ಎಳೆಯ ಚಿಗುರುಗಳಿಗೆ ಕೊರೆಯುವ ಮೂಲಕ ಕಬ್ಬಿನ ಬೆಳೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.…

April 15, 2024

ಮಣ್ಣಿನ pH – ಬೆಳೆ ಉತ್ಪಾದನೆಯಲ್ಲಿ ಪ್ರಮುಖ ಅಂಶ

ಮಣ್ಣಿನ pH ಎಂಬುದು ಮಣ್ಣಿನ ಆಮ್ಲೀಯತೆ ಅಥವಾ ಕ್ಷಾರೀಯತೆಯ ಅಳತೆಯಾಗಿದೆ, ಇದು ಮಣ್ಣಿನಲ್ಲಿರುವ ಹೈಡ್ರೋಜನ್ ಅಯಾನುಗಳ (H+) ಸಾಂದ್ರತೆಯಿಂದ ನಿರ್ಧರಿಸಲ್ಪಡುತ್ತದೆ. pH ಪ್ರಮಾಣವು 0 ರಿಂದ 14…

April 8, 2024

ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (PLI) ಯೋಜನೆ

ಉತ್ಪಾದನೆ ಆಧಾರಿತ ವಲಯಗಳು ಭಾರತದ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆಹಾರ ಸಂಸ್ಕರಣಾ ವಲಯಕ್ಕೆ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್‌ಐ) ಯೋಜನೆಯು ಮಾರ್ಚ್ 2021 ರಲ್ಲಿ ಪ್ರಾರಂಭವಾದ…

April 6, 2024

ಮಾವಿನ ಹಣ್ಣಿನ ನೊಣದ ಪರಿಣಾಮಕಾರಿ ನಿರ್ವಹಣೆ

ಬೇಸಿಗೆ ಕಾಲ ಈಗಾಗಲೇ ಬಂದಿದೆ. ನಿಮ್ಮ ಬಹು ನಿರೀಕ್ಷಿತ ಮಾವಿನ ಕೊಯ್ಲಿಗೆ ನೀವು ಕಾಯುತ್ತಿದ್ದೀರಾ? ರೈತರೇ ಎಚ್ಚರ! ಹಣ್ಣಿನ ನೊಣಗಳು ನಿಮ್ಮ ಮಾವಿನ ಇಳುವರಿಯನ್ನು ತಡೆಯಲು ಮತ್ತು…

March 30, 2024

ಬೇಸಿಗೆ ಅಥವಾ ಝೈದ್ ಬೆಳೆಗಳನ್ನು ಮಾರ್ಚ್ ನಿಂದ ಜೂನ್ ನಡುವೆ ಬೆಳೆಯಲಾಗುತ್ತದೆ

ಭಾರತವು ವೈವಿಧ್ಯಮಯ ಹವಾಮಾನ ಪರಿಸ್ಥಿತಿಗಳನ್ನು ಹೊಂದಿರುವ ದೇಶವಾಗಿದ್ದು, ಕೃಷಿಯ ಹಲವಾರು ಋತುಗಳನ್ನು ಹೊಂದಿದೆ. ಬೆಳೆಗಳ ನಾಟಿ ಸಮಯವು ಬೆಳೆ ಪ್ರಕಾರ, ಋತುಗಳು, ಪ್ರದೇಶ ಮತ್ತು ಹವಾಮಾನವನ್ನು ಅವಲಂಬಿಸಿ…

March 26, 2024