ಭಾರತವು ವಿಶ್ವದ ಎರಡನೇ ಅತಿದೊಡ್ಡ ಚಹಾ ಉತ್ಪಾದಕ ರಾಷ್ಟ್ರವಾಗಿದೆ . ಭಾರತದ ಹವಾಮಾನವು ಚಹಾ ಬೆಳೆ ಬೆಳೆಯಲು ಅತ್ಯುತ್ತಮವಾಗಿದೆ. 2020-21 ಸಾಲಿನಲ್ಲಿ ಭಾರತವು 27 ಮಿಲಿಯನ್ ಟನ್ ಚಹಾವನ್ನು ಉತ್ಪಾದಿಸಿದೆ . ಭಾರತವು ವಿಶ್ವದ ಮೂರನೇ ಅತಿದೊಡ್ಡ ಚಹಾ ಸೇವಿಸುವ ರಾಷ್ಟ್ರವಾಗಿದೆ . ವಿಶಿಷ್ಟವಾದ ಸ್ವಾದವನ್ನು ಹೊಂದಿರುವ ಆಧಾರದ ಮೇಲೆ ಚಹಾದಲ್ಲಿ ಹಲವು ವಿಧಗಳಿವೆ ಮತ್ತು ಈ ಚಹಾದ ವಿಧಗಳಿಗೆ ಅವು ಬೆಳೆಯುವ ಸ್ಥಳಗಳ ಹೆಸರನ್ನು ನೀಡಲಾಗಿದೆ. ಕೆಲವು ವಿಶಿಷ್ಟವಾದ ಚಹಾಗಳೆಂದರೆ ಅಸ್ಸಾಂ, ಡಾರ್ಜಿಲಿಂಗ್ ಮತ್ತು ಡೋರ್ಸ್.ಭಾರತವು ಹಲವು ದೇಶಗಳಿಗೆ ಚಹಾವನ್ನು ರಫ್ತ ಮಾಡುತ್ತದೆ.ಅವುಗಳಲ್ಲಿ ಅತಿ ಪ್ರಮುಖ ರಾಷ್ಟ್ರಗಳು ಇರಾನ್, ಯುಎಇ, ಯುಎಸ್ಎ, ಯುಕೆ, ಪೋಲೆಂಡ್, ಕೆನಡಾ, ಸೌದಿ ಅರೇಬಿಯಾ, ಈಜಿಪ್ಟ್, ಅಫ್ಘಾನಿಸ್ತಾನ, ಬಾಂಗ್ಲಾದೇಶ, ಚೀನಾ, ಸಿಂಗಾಪುರ್, ಶ್ರೀಲಂಕಾ, ಕೀನ್ಯಾ, ಜಪಾನ್, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ.
ಪ್ರತಿ ವರ್ಷ ವಿವಿಧ ದೇಶಗಳ ವಿವಿಧ ತಳಿಗಳು ಮಾರುಕಟ್ಟೆಗೆ ಅತಿ ಹೆಚ್ಚಿನ ಮಟ್ಟದಲ್ಲಿ ಬರುತ್ತವೆ. ಆದಾಗ್ಯೂ, ಕೆಲ ಜನಪ್ರಿಯ ತಳಿಗಳನ್ನು ಸುಮಾರು ದಶಕಗಳಿಂದ ಬೆಳೆಸಿಕೊಂಡು ಬರಲಾಗುತ್ತಿದೆ . ಇವುಗಳಲ್ಲಿ ಪಾಂಡಿಯನ್, ಸುಂದರಂ, ಗೋಲ್ಕೊಂಡ, ಜಯರಾಮ್, ಎವರ್ಗ್ರೀನ್, ಅಥೆ, ಬ್ರೂಕ್ಲ್ಯಾಂಡ್, ಬಿಎಸ್ಎಸ್ 1, ಬಿಎಸ್ಎಸ್ 2, ಬಿಎಸ್ಎಸ್ 3, ಬಿಎಸ್ಎಸ್ 4 ಮತ್ತು ಬಿಎಸ್ಎಸ್ 5 ಅತಿ ಹೆಚ್ಚು ಜನಪ್ರಿಯ ತಳಿಗಳಿಗಿವೆ,
ಚಹಾವನ್ನು ಸಾಮಾನ್ಯವಾಗಿ ಕಸಿ ಮಾಡುವುದು /ಗ್ರಾಫ್ಟ್‌ಗಳ ಮತ್ತು ಕ್ಲಿಪ್ಪಿಂಗ್ಸ್ಗಳ ( ಕಾಂಡಗಳು, ರೆಂಬೆಗಳು ಅಥವಾ ತಾಯಿ ಗಿಡದ ತುಂಡುಗಳು/ಕಡ್ಡಿಗಳು )ಮೂಲಕ ಪ್ರಸರಣ ಮಾಡಲಾಗುತ್ತದೆ. ಕಡ್ಡಿಗಳನ್ನು /ಕಟಿಂಗ್ಸ್ಗಳನ್ನು ಸಾಮಾನ್ಯವಾಗಿ ಬೇಸಿಗೆಯ ಪ್ರಾರಂಭದಲ್ಲಿ (ಏಪ್ರಿಲ್ – ಮೇ) ತಯಾರಿಸಲಾಗುತ್ತದೆ . ಈ ರೀತಿಯಾಗಿ ತಾಯಿ ಸಸ್ಯವು ಸೂಕ್ತವಾದ ಪರಿಸ್ಥಿತಿಗಳೊಂದಿಗೆ ಆಘಾತದಿಂದ ಚೇತರಿಸಿಕೊಳ್ಳುತ್ತದೆ ಮತ್ತು ಗ್ರಾಫ್ಟ್‌ಗಳನ್ನು ಸ್ಥಿರಗೊಳಿಸಲು ಅನುಕೂಲಕರವಾದ ಪರಿಸ್ಥಿತಿಗಳನ್ನು ಹೊಂದಿರುತ್ತದೆ. ಚಹಾ ಕ್ಲಿಪ್ಪಿಂಗ್ಸ್ಗಳನ್ನು ( ಕಾಂಡಗಳು, ರೆಂಬೆಗಳು ಅಥವಾ ತಾಯಿ ಗಿಡದ ತುಂಡುಗಳು ) ಗುಣಪಡಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಕೆಲವೊಮ್ಮೆ ಪಾಚಿಯೊಂದಿಗೆ ಮುಚ್ಚಲಾಗುತ್ತದೆ
ನರ್ಸರಿಯನ್ನು ನೆರಳಿನ ಪ್ರದೇಶದಲ್ಲಿ ಅಥವಾ ಹಸಿರು ನೆರಳಿನ ಪದರದಿಂದ / ನೆರಳು ಬಲೆಗಳಿಂದ ನಿರ್ಮಿಸಬೇಕು . ನಾಟಿ ಮಾಡಿದ ಗಿಡಗಳಿಗೆ ತೇವಾಂಶವನ್ನು ಒದಗಿಸಲು ಮತ್ತು ಹವಾಗುಣವನ್ನು ನಿಯಂತ್ರಿಸಲು ಪಾಲಿಥಿನ್ ಟೆಂಟ್ ಅನ್ನು ಬಳಸಲಾಗುತ್ತದೆ. ಪ್ರಸರಣಕ್ಕೆ ಸಹ ಪಾಲಿಥಿನ್ ಚೀಲಗಳನ್ನು ಬಳಸಲಾಗುತ್ತದೆ. ಈ ಪಾಲಿಥಿನ್ ಚೀಲಗಳಲ್ಲಿ ಪೊಟ್ಯಾಷ್ , ಮೆಗ್ನೀಸಿಯಮ್ ಸಲ್ಫೇಟ್ ಮತ್ತು ಜಿಂಕ್ ಸಲ್ಫೇಟ್ ತುಂಬಿಸಿ,
ಮರಳು, ಜಿಗಟು ಮಣ್ಣು ಹಾಗು ಕಾಂಪೋಸ್ಟ್ ಗೊಬ್ಬರವನ್ನು 1: 1: 3 ಅನುಪಾತದಲ್ಲಿ ಪಾಲಿಥಿನ್ ಚೀಲಗಳಲ್ಲಿ ತುಂಬಿಸಬೇಕು.
ಚಹಾ ಬೆಳೆಯುವ ಭೂಮಿಯನ್ನು ಚೆನ್ನಾಗಿ ಹದಗೊಳಿಸಬೇಕು ಮತ್ತು ನೀರು ಚೆನ್ನಾಗಿ ಹರಿದುಹೋಗುವಂತೆ ಸೂಕ್ತವಾದ ಹರಿಗಾಲುವೆಗಳನ್ನು ನಿರ್ಮಿಸಿ. ಕಳೆಗಳನ್ನು ಕಿತ್ತು ಹಾಕಿ ಚೆನ್ನಾಗಿ ಭೂಮಿಯನ್ನು ಹದಗೊಳಿಸಬೇಕು.
ಭೂಮಿಯನ್ನು ಎರಡು ಬಾರಿ ಉಳುಮೆ ಮಾಡಬೇಕು. ಸಾರಜನಕ ಹಾಗು ಪೊಟ್ಯಾಷ್ ಮಿಶ್ರಣವನ್ನು 2:3 ಅನುಪಾತದಲ್ಲಿ ಮತ್ತು ರಾಕ್ ಫಾಸ್ಫೇಟ್ ಅನ್ನು 100 ಕೆಜಿ/ಹೆಕ್ಟೇರ್ ಗೆ ಹಾಕಬೇಕು. ಚಹಾ ಬೆಳೆಯನ್ನು ಹೆಚ್ಚು ಗುಡ್ಡಗಾಡು ಪ್ರದೇಶಗಳಲ್ಲಿ ಬೆಳೆಸುವುದರಿಂದ ಗೊಬ್ಬರ ಹಾಕುವುದಿಲ್ಲ. ಕಸಿ ಮಾಡಿದ ಗಿಡಗಳು 90 – 100 ದಿನಗಳ ನಂತರ ಬೇರೂರಲು ಪ್ರಾರಂಭಿಸುತ್ತದೆ. ಸಸಿಗಳನ್ನು ಸಮೃದ್ಧವಾದ ಬೇರುಗಳ ಸಮೇತ ನೆಡಲಾಗುತ್ತದೆ. ಗಿಡಗಳನ್ನು ನೆಡುವುದಕ್ಕೆ ಹಲವು ವಿಧಾನಗಳಿವೆ, ಅವುಗಳು ಯಾವುದೆಂದರೆ ಏಕ ಮತ್ತು ಡಬಲ್ ಹೆಡ್ಜ್.
ಹೆಚ್ಚಿನ ಸಾವಯವ ಹೊಂದಿರುವ 4.5 ರಿಂದ 5.5 ರ pH ಮೌಲ್ಯ ಹೊಂದಿರುವ ಆಮ್ಲೀಯ ಮಣ್ಣು ಚಹಾ ಬೆಳೆಗೆ ಅಗತ್ಯವಾಗಿರುತ್ತದೆ. ಸಮುದ್ರಮಟ್ಟದಿಂದ 1000 – 2500 ಮೀ ಎತ್ತರದಲ್ಲಿರುವ ಬೆಟ್ಟ ಪ್ರದೇಶಗಳಲ್ಲಿ ಬೆಳೆದ ಚಹಾದ ಗುಣಮಟ್ಟ ಉತ್ಕಷ್ಟವಾಗಿರುತ್ತದೆ. . ಚಹಾ ಬೆಳೆಗೆ ಸೂಕ್ತವಾದ ತಾಪಮಾನ 20 – 27oC ಆಗಿದೆ.
ಚಹಾ ಬೆಳೆಯು ದೀರ್ಘಕಾಲಿಕ ಬೆಳೆಯಾಗಿದ್ದು, ಬೆಳೆಗೆ ಯಾವುದೇ ರೀತಿಯ ಹಾನಿಯಾಗದೆ ಇದ್ದರೆ ಮತೊಮ್ಮೆ ನಾಟಿ ಮಾಡುವ ಅಗತ್ಯವಿರುವುದಿಲ್ಲ. ಚಹಾ ಬೆಳೆಯು ಕೊಯ್ಲುಗೆ ಎರಡು ವರ್ಷಗಳ ಅಗತ್ಯತೆ ಇರುತ್ತದೆ. ಚಹಾ ಎಲೆಗಳನ್ನು ಬೆಳೆಸಿ ಅದನ್ನು ಸಂಸ್ಕರಿಸಲಾಗುತ್ತದೆ. ಚಹಾ ಬೆಳೆಯು ಒಂದು ಕಠಿಣ ಬೆಳೆಯಾಗಿದ್ದು, ಅದನ್ನು ಸೂಕ್ತವಾಗಿ ಬೆಳೆಸಲು ಮತ್ತು ಪ್ರಕ್ರಿಯೆಗೊಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ.
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…