Crop

ಭತ್ತದ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2021 – 22 ರಲ್ಲಿ ಖಾರಿಫ್ ಋತುವಿನಲ್ಲಿ 111.76 ಮಿಲಿಯನ್ ಟನ್ಗಳಷ್ಟು ಭತ್ತವನ್ನು ಉತ್ಪಾದಿಸಿದೆ.ಭಾರತವು ವಿಶ್ವದ ಎರಡನೇ ಅತಿ ದೊಡ್ಡ ಅಕ್ಕಿ ಉತ್ಪಾದಕ ರಾಷ್ಟ್ರವಾಗಿದೆ. ಕಳೆದ ಒಂದು ದಶಕದಲ್ಲಿ ಭತ್ತದ ಬೆಳೆ ಉತ್ಪಾದನೆಯಲ್ಲಿ ಸ್ಥಿರವಾದ ಬೆಳವಣಿಗೆ ಕಂಡುಬಂದಿದೆ. ಭಾರತವು ಭತ್ತದ ಕೃಷಿಯಲ್ಲಿ ಅತಿ ಹೆಚ್ಚು ಪ್ರದೇಶವನ್ನು ಹೊಂದಿದೆ,ಇದು ಇತರ ಕೃಷಿ ಬೆಳೆಗಳಿಗಿಂತ ಹೆಚ್ಚಿನದಾಗಿದೆ. ದೇಶದಾದ್ಯಂತ ಅಕ್ಕಿಯನ್ನು ಉತ್ಪಾದಿಸಲಾಗುತ್ತದೆ.

ಕಷ್ಟದ ಮಟ್ಟ : ಕಠಿಣ

ಬೀಜಗಳ ಆಯ್ಕೆ

ಮಾರುಕಟ್ಟೆಯಲ್ಲಿ 10,000 ಕ್ಕೂ ಹೆಚ್ಚು ಅಕ್ಕಿ ತಳಿಗಳಿವೆ. ಬಾಸುಮತಿ, ಜೋಹಾ, ಜ್ಯೋತಿ, ನವರ, ಪೊನ್ನಿ, ಪೂಸಾ, ಸೋನಾ ಮಸೂರಿ, ಜಯ, ಕಲಾಜಿರಿ (ಸುಗಂಧ), ಬೋಳಿ, ಪಾಲಕ್ಕಾಡ್ ಮಟ್ಟಾ, ಕಟ್ಟಮೋಡನ್, ಕೈರಲಿ, ಜ್ಯೋತಿ, ಭದ್ರ, ಆಶಾ, ರಕ್ತಶಾಲಿ ಮುಂತಾದವುಗಳು ದೇಶದಲ್ಲಿ ಬೆಳೆಯುವ ಪ್ರಮುಖ ಭತ್ತದ ತಳಿಗಳಿವೆ. ಕೇರಳದ; ಕೆಂಪು ಕವುನಿ, ಕೈವಾರ ಸಾಂಬಾ, ಮಾಪಿಳ್ಳೈ ಸಾಂಬಾ, ಕುರುವಿ ಕಾರ್, ಮತ್ತು ತಮಿಳುನಾಡಿನ ಪೂಂಗರ್.

ಕಳೆದ ವರ್ಷವೊಂದರಲ್ಲೇ 800ಕ್ಕೂ ಹೆಚ್ಚು ಬಗೆಯ ಹೊಸ ಭತ್ತದ  ತಳಿಗಳನ್ನು  ಪರಿಚಯಿಸಲಾಗಿದೆ.

ಬೀಜಗಳನ್ನು ಮೊದಲೇ ನೆನೆಸುವುದು

ಬೀಜಗಳನ್ನು ಮೊದಲೇ ನೆನೆಸಲು ಎರಡು ವಿಧಾನಗಳಿವೆ. ಸೀಡ್ ಪ್ರೈಮಿಂಗ್ ಮತ್ತು ಮೊಳಕೆಯೊಡೆಯಲು ಮುಂಚಿತವಾಗಿ ನೆನೆಸುವುದು .  ಸೀಡ್ ಪ್ರೈಮಿಂಗ್ ಎಂದರೆ ಭತ್ತದ ಬೀಜಗಳನ್ನು  4-8 ಗಂಟೆಗಳ ಕಾಲ ನೆನೆಸಿ, ಬಿತ್ತನೆ ಮಾಡುವ ಮೊದಲು ಬೀಜಗಳನ್ನು ಮತ್ತೆ ಒಣಗಿಸುವುದು. 

ಭತ್ತದ ಬೀಜಗಳು  ಮೊಳಕೆಯೊಡೆಯಲು, ಬೀಜಗಳನ್ನು 12-14 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಬೇಕು.

ಬೀಜೋಪಚಾರ

ಭತ್ತದಲ್ಲಿ ಜೈವಿಕ  ಬೀಜೋಪಚಾರ:

ಭತ್ತದಲ್ಲಿ ಬೀಜ ಬೀಜೋಪಚಾರಕ್ಕೆ ಹಲವಾರು ವಿಧಗಳಿವೆ. ಭತ್ತದ ಬೀಜೋಪಚಾರದಲ್ಲಿ  ಸಾವಯವ ಮತ್ತು ಅಜೈವಿಕ ವಿಧಾನಗಳಿವೆ. ಜನಪ್ರಿಯ ಸಾವಯವ ಬಿಜೋಪಚಾರದಲ್ಲಿ 600g/ha ಅಜೋಸ್ಪಿರಿಲಿಯಂ ಅಥವಾ 1200g/ha ಅಜೋಫೋವನ್ನು ಬಳಸಬೇಕು.ಇದರಲ್ಲಿ, ಬೀಜಗಳನ್ನು ಜೈವಿಕ ಬಯೋ – ಇನಾಕ್ಯುಲೇಷನ್ ಮಾಡಬೇಕು, ಬಿತ್ತನೆ ಮಾಡುವ ಮೊದಲು ರಾತ್ರಿಯಿಡೀ  ಸಾಕಷ್ಟು ಪ್ರಮಾಣದ ನೀರಿನಲ್ಲಿ ನೆನೆಸಿಡಲಾಗುತ್ತದೆ.ಭತ್ತದಲ್ಲಿ,ಜೈವಿಕ ನಿಯಂತ್ರಣ ಏಜೆಂಟ್‌ಗಳು ಜೈವಿಕ ಗೊಬ್ಬರಗಳೊಂದಿಗೆ ಹೊಂದಿಕೊಳ್ಳುತ್ತವೆ. ಆದ್ದರಿಂದ ಜೈವಿಕ ಗೊಬ್ಬರಗಳು ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳನ್ನು ಒಟ್ಟಿಗೆ ಮಿಶ್ರಣ ಮಾಡಬಹುದು. 

ಭತ್ತದ ಬೀಜೋಪಚಾರವನ್ನು ಸ್ಯೂಡೋಮೊನಾಸ್ ಫ್ಲೋರೊಸೆನ್ಸ್‌ನ ಟಾಲ್ಕ್-ಆಧಾರಿತ ಸ್ಯೂಡೋಮೊನಾಸ್ ಫ್ಲೋರೊಸೆನ್ಸ್‌ನೊಂದಿಗೆ 10 ಗ್ರಾಂ/ಕೆಜಿ ಬೀಜವನ್ನು ಬೆರೆಸಿ, 1 ಲೀಟರ್ ನೀರಿನಲ್ಲಿ ರಾತ್ರಿಯಿಡೀ ನೆನೆಸಲಾಗುತ್ತದೆ. ಹೆಚ್ಚುವರಿ ನೀರನ್ನು ಬೇರ್ಪಡಿಸಬಹುದು ಮತ್ತು ಬೀಜಗಳನ್ನು ಮೊಳಕೆಯೊಡೆಯಲು 24 ಗಂಟೆಗಳ ಕಾಲ ಬಿಡಲಾಗುತ್ತದೆ ಮತ್ತು ನಂತರ ಬಿತ್ತಲಾಗುತ್ತದೆ.

ಭತ್ತದಲ್ಲಿ ರಾಸಾಯನಿಕ  ಬೀಜೋಪಚಾರ

ಶಿಲೀಂಧ್ರನಾಶಕ ಮತ್ತು ಜೈವಿಕ ನಿಯಂತ್ರಣ ಏಜೆಂಟ್‌ಗಳು ಹೊಂದಿಕೆಯಾಗುವುದಿಲ್ಲ. ಶಿಲೀಂಧ್ರನಾಶಕ ಬೀಜ ಸಂಸ್ಕರಣೆ ಎಂದರೇ 1 ಕೆಜಿ ಬೀಜಗಳನ್ನು ಬೆನ್ಲೇಟ್ ಅಥವಾ ಮ್ಯಾಂಕೋಜೆಬ್ ಅಥವಾ ಅರಜೋನ್ ಕೆಂಪು 3 ಗ್ರಾಂ/ಲೀಟರ್ ನಂತಹ  ಶಿಲೀಂಧ್ರನಾಶಕಗಳೊಂದಿಗೆ  ಲೇಪಿಸುವುದು  .

 1 ಕೆಜಿ ಬೀಜಗಳಿಗೆ, 2 ಗ್ರಾಂ/ಲೀಟರ್  ನೀರಿನಲ್ಲಿ ಕಾರ್ಬೆಂಡಜಿಮ್ ಅಥವಾ ಪೈರೊಕ್ವಿಲಾನ್ ಅಥವಾ ಟ್ರೈಸೈಕ್ಲೋಜೋಲ್ ದ್ರಾವಣವನ್ನು ಬೆರೆಸುವುದರಿಂದ,ಬೀಜದಿಂದ ಹರಡುವ ರೋಗಗಳನ್ನು ನಿರ್ವಹಣೆ ಮಾಡಬಹುದು.

1ಕೆಜಿ ಬೀಜಗಳಿಗೆ ,ಕಾರ್ಬೆಂಡಜಿಮ್(ಬಾವಿಸ್ಟಿನ್)ಅನ್ನು 2ಗ್ರಾಂ/ಲೀಟರ್ ನೀರಿಗೆ  ಲೇಪಿಸಲಾಗುತ್ತದೆ. ಬೀಜಗಳನ್ನು ನಂತರ 10 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಮತ್ತು ಹೆಚ್ಚುವರಿ ನೀರನ್ನು ಹೊರಹಾಕಲಾಗುತ್ತದೆ. ಇದನ್ನು ತೇವ  ಬೀಜಗಳ  ಬೀಜೋಪಚಾರ ಎಂದು ಕರೆಯಲಾಗುತದೆ ,ಇದು ಬೆಂಕಿ ರೋಗ ಮತ್ತು ಇತರ ರೋಗಗಳಿಂದ 40 ದಿನಗಳವರೆಗೆ ರಕ್ಷಣೆ ನೀಡುತ್ತದೆ. ಬೀಜೋಪಚಾರ ಮಾಡಿದ  ಬೀಜಗಳನ್ನು ಕತ್ತಲೆ ಪ್ರದೇಶದಲ್ಲಿ ಗೋಣಿ ಚೀಲದಲ್ಲಿ ಶೇಖರಿಸಿ ಇಡಿ ಮತ್ತು ಹೆಚ್ಚು ಗೋಣಿ ಚೀಲಗಳಿಂದ ಮುಚ್ಚಬೇಕು. ಮೊಳಕೆಯೊಡೆಯಲು ಬೀಜಗಳನ್ನು 24 ಗಂಟೆಗಳ ಕಾಲ ತೊಂದರೆಯಾಗದಂತೆ ಇಡಬೇಕು.

ಭತ್ತದ  ಸಸಿಮಡಿ ತಯಾರಿಕೆ :

ವಿವಿಧ ರೀತಿಯ ಭತ್ತದ ಸಸಿಮಡಿ ವಿಧಗಳಿವೆ. ಕೆಸರು ಮಡಿಗಳು ಇವೆ.  2.5 ಮೀ ಅಗಲ ಮತ್ತು 30 ಸೆಂ.ಮೀ ವಿಸ್ತಾರದ ಚಾನಲ್‌ಗಳೊಂದಿಗೆ ಸಸಿಮಡಿಯನ್ನು ತಯಾರಿಸಲಾಗುತ್ತದೆ . ಭೂಮಿಯ ಮಣ್ಣು ಮತ್ತು ಇಳಿಜಾರಿನ ಪ್ರಕಾರ,ಮಡಿಯು  ಬದಲಾಗಬಹುದು.

ಸಸಿಮಡಿಗೆ ಸಾಕಷ್ಟು ನೀರಿನ ವ್ಯವಸ್ಥೆ  ಹಾಗೂ ಸರಿಯಾದ ಒಳಚರಂಡಿ ಇರಬೇಕು. ಮಡಿಯನ್ನು ಒಣ ಉಳುಮೆ ಮಾಡಿ, ಒಂದು ಟನ್  FYM  ಅನ್ನು ಹಾಕಬೇಕು. ಮತ್ತೊಮ್ಮೆ  ಉಳುಮೆ ಮಾಡಿ,ಮಡಿಯ ತುಂಬಾ ನೀರನ್ನು ನಿಲ್ಲಿಸಬೇಕು . ಎರಡು ದಿನ ಗಳ ಕಾಲ ನೀರನ್ನು ಹಾಗೆಯೇ ನಿಲ್ಲಿಸಬೇಕು. ನಂತರ ಭತ್ತದ ಗದ್ದೆಯಲ್ಲಿ ಉಳುಮೆ ಮಾಡಬೇಕು. 

ಗದ್ದೆಯಲ್ಲಿ ನಿಂತಿರುವ ನೀರಿನಲ್ಲಿ 5 – 10 ಸೆಂ.ಮೀ ಆಳದವರೆಗೆ ಉಳುಮೆ ಮಾಡಿ. ಕಬ್ಬಿಣದ ಪಡ್ಲರ್ ನಿಂದ ಉಳುಮೆ ಮಾಡಿ. ಉತ್ತಮ ನೀರಿನ ಹರಿವಿಗಾಗಿ  ವಿರುದ್ಧ ದಿಕ್ಕಿನಲ್ಲಿ ಮಣ್ಣನ್ನು ಸಡಿಲಗೊಳಿಸಿ.  ಇತ್ತೀಚಿನ ಕೆಲವು ಹೊಸ ಮತ್ತು ವಿಶಿಷ್ಟವಾದ ಭತ್ತದ ಸಸಿಮಡಿ ತಯಾರಿಕೆ ವಿಧಾನಗಳಲ್ಲಿ ದಪೋಗ್, ಮ್ಯಾಟ್ ಮತ್ತು ಒಣ ಸಸಿ ಮಡಿ ವಿಧಾನಗಳು ಸೇರಿವೆ. 

ಭತ್ತದ  ಭೂಮಿ ಸಿದ್ಧತೆ :

  • ಭತ್ತಕ್ಕೆ ಕಪ್ಪು ಮಿಶ್ರಿತ  ಮಣ್ಣು ಅವಶ್ಯಕತೆ ಇರುತ್ತದೆ. ಜೇಡಿಮಣ್ಣು ಮಿಶ್ರಿತ  ಅಥವಾ ಕಪ್ಪು ಮಿಶ್ರಿತ ಮಣ್ಣಿನಲ್ಲಿ ಭತ್ತವು ಉತ್ತಮವಾಗಿ ಬೆಳೆಯುತ್ತದೆ.
  • ಮಣ್ಣಿನ pH : ಸ್ವಲ್ಪ ಆಮ್ಲೀಯತೆ ಇರುವ  ಮಣ್ಣು(pH 6).

ಭತ್ತದ ಗದ್ದೆ ತಯಾರಿ ( ಕಸಿ ವಿಧಾನ):

ನಾಟಿ ಮಾಡುವ ಒಂದು ಅಥವಾ ಎರಡು ದಿನಗಳ ಮೊದಲು ಗದ್ದೆಗೆ ನೀರನ್ನು ತುಂಬಿಸಿ , ಗದ್ದೆಯನ್ನು ಸಿದ್ಧಪಡಿಸಲಾಗುತ್ತದೆ.ಉತ್ತಮ ಬೇಸಾಯಕ್ಕಾಗಿ ಗದ್ದೆಯನ್ನು ಒಂದು ಅಥವಾ ಎರಡು ಬಾರಿ  ಉಳುಮೆ ಮಾಡಲಾಗುತ್ತದೆ. ಕೊನೆಯ ಉಳುಮೆಯಲ್ಲಿ 6.25ಟನ್ /ಹೆಕ್ಟೇರ್ ಗೆ 12.5 ಟನ್ FYM ಅಥವಾ ಕಾಂಪೋಸ್ಟ್ ಅಥವಾ ಹಸಿರು ಎಲೆ ಗೊಬ್ಬರವನ್ನು ಸೇರಿಸಲಾಗುತ್ತದೆ.. ನಾಟಿ ಮಾಡುವ ಹತ್ತು ದಿನಗಳ ಮೊದಲು 22ಕೆಜಿ / ಹೆಕ್ಟೇರ್ ಗೆ ಯೂರಿಯ ಗೊಬ್ಬರವನ್ನು ಹಾಕಬೇಕು . ನಾಟಿ ಮಾಡುವ ಸಮಯದಲ್ಲಿ ಗದ್ದೆಯಲ್ಲಿ ಕನಿಷ್ಠ 2-2.5ಸೆಂ.ಮೀ ನೀರು ಇರಬೇಕು 

ಹಿನ್ನುಡಿ

ಭತ್ತದ  ಬೆಳೆಗೆ  ಹೆಚ್ಚಿನ ಕಾಳಜಿ ಮತ್ತು ಸಂರಕ್ಷಣೆ ತುಂಬಾ ಅಗತ್ಯವಿರುತ್ತದೆ. ಭತ್ತದ ಬೆಳೆಯ ಕೃಷಿ ಅಷ್ಟು ಸುಲಭವಲ್ಲ .ಅಕ್ಕಿಯು ದೇಶದ ಅತ್ಯಂತ ಪ್ರಧಾನ ಆಹಾರವಾಗಿದೆ, ಆದ್ಧರಿಂದ ಅಕ್ಕಿಗೆ ಮಾರುಕಟ್ಟೆಯಲ್ಲಿ ಯಾವಾಗಲು ಉತ್ತಮ ಬೇಡಿಕೆ ಇರುತ್ತದೆ . 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024