Crop

ಮೆಕ್ಕೆಜೋಳದ ಬೆಳೆಗೆ ಭೂಮಿ ಸಿದ್ಧತೆ

ಮುಸುಕಿನ ಜೋಳ ಅಥವಾ ಮೆಕ್ಕೆಜೋಳ ಅಥವಾ ಗೋವಿನ ಜೋಳವು, ಪ್ರಪಂಚದ ಒಂದು ವೈವಿಧ್ಯಮಯವಾದ ಬೆಳೆಯಾಗಿದೆ. ಭಾರತವು ಮೆಕ್ಕೆಜೋಳ ಉತ್ಪಾದನೆಯಲ್ಲಿ , ಜಗತ್ತಿನ ೭ ನೇ  ಅತೀ  ದೊಡ್ಡ  ರಾಷ್ಟ್ರವಾಗಿದೆ.  2021-22ನೇ ಸಾಲಿನಲ್ಲಿ ಭಾರತ ದೇಶವು 7,615.46 ಕೋಟಿ ಮೌಲ್ಯದ 3,690,469.12 MT ಮೆಕ್ಕೆಜೋಳವನ್ನು ವಿಶ್ವದ ಇತರ ದೇಶಗಳಿಗೆ ರಫ್ತುಮಾಡಲಾಗಿದೆ.ಭಾರತದಲ್ಲಿ ಅತಿ ಹೆಚ್ಚು  ಮೆಕ್ಕೆಜೋಳ ಬೆಳೆಯುವ ರಾಜ್ಯಗಳೆಂದರೆ  ಆಂಧ್ರ ಪ್ರದೇಶ, ಕರ್ನಾಟಕ, ಬಿಹಾರ, ಮಹಾರಾಷ್ಟ್ರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ತಮಿಳುನಾಡು. ಮೆಕ್ಕೆಜೋಳದ ವೈವಿದ್ಯತೆಯಿಂದ  ಹಾಗು ಭಿನ್ನ ಹವಾಗುಣದಲ್ಲೂ ಬೆಳೆಯುವ ಸಾಮರ್ಥ್ಯದಿಂದಾಗಿ ಸಾಂಪ್ರದಾಯಿಕವಲ್ಲದ ಪ್ರದೇಶಗಳಾದ  ಜಮ್ಮು ಮತ್ತು ಕಾಶ್ಮೀರ ಮತ್ತು ಇತರೆ   ಈಶಾನ್ಯ ರಾಜ್ಯಗಳಲ್ಲಿ ಸಹಾ  ಮೆಕ್ಕೆಜೋಳ ಬೆಳೆಯು  ಒಂದು ಪ್ರಮುಖ ಬೆಳೆಯಾಗಿದೆ.

ಕಷ್ಟದ ಮಟ್ಟ: ಮಧ್ಯಮ

ಬಿತ್ತನೆ ಬೀಜಗಳ ಆಯ್ಕೆ

ಇಂದು ಮಾರುಕಟ್ಟೆಯಲ್ಲಿ 3000 ಕ್ಕೂ ಹೆಚ್ಚು ವಿಧದ ಜೋಳದ ತಳಿಗಳನ್ನು ಕಾಣಬಹುದಾಗಿದೆ. ಅವುಗಳಲ್ಲಿ ಹೆಚ್ಚು ಪ್ರಸಿದ್ಧವಾದ ತಳಿಗಳೆಂದರೆ ಆಂಬ್ರೋಸಿಯಾ ಹೈಬ್ರಿಡ್ ಕಾರ್ನ್, ಜುಬಿಲಿ ಹೈಬ್ರಿಡ್ ಕಾರ್ನ್, ಹನಿ ಸೆಲೆಕ್ಟ್ ಹೈಬ್ರಿಡ್ ಕಾರ್ನ್, ಗೋಲ್ಡನ್ ಬಾಂಟಮ್ ಕಾರ್ನ್, ಪಯೋನೀರ್(P3396 ಮತ್ತು P3344), ಡೆಕಾಲ್ಬ್ (DKC 9178 ಮತ್ತು DKC 9081), ಸಿಂಜೆಂಟಾ (NK7328 ಮತ್ತು NK30), ಸಿಪಿ (818  ಮತ್ತು 333), ಟಾಟಾ ಸೀಡ್ಸ್ (DMH 8255), Advanta (Hi-Brix 53), ಕಾವೇರಿ ಸೀಡ್ಸ್ (KMH 1411) ಮತ್ತು ಹೈಟೆಕ್ ಸೋನಾ – 5101.

ಬೀಜಗಳನ್ನು ಮೊದಲೇ ನೆನೆಸುವುದು

ಉತ್ತಮವಾಗಿ ಬೀಜಗಳು ಮೊಳಕೆಯೊಡೆಯಲು ಬೀಜಗಳನ್ನು ರಾತ್ರಿಯಿಡೀ ನೆನೆಸಿಡಬೇಕು. 

ಆದರೆ, ಬೀಜಗಳ ಶೇಖರಣಾ ಉದ್ದೇಶಕ್ಕಾಗಿ ಬೀಜಗಳನ್ನು ಒಣಗಿಸಬೇಕು.  

ಮೆಕ್ಕೆಜೋಳ ಬೀಜಗಳ ಬೀಜೋಪಚಾರ :

ಗೆದ್ದಲುಗಳು ಮತ್ತು ಇತರ ಮಣ್ಣಿನಿಂದ ಹರಡುವ ಕೀಟಗಳನ್ನು ತಡೆಗಟ್ಟಲು ಮೆಕ್ಕೆಜೋಳದ  ಬೀಜಗಳನ್ನು ಇಮಿಡಾಕ್ಲೋಪ್ರಿಡ್ 17.8% ಎಸ್‌ಎಲ್‌ 4 ಮಿ.ಲೀ /ಕೆಜಿ ಗೆ  ಬೆರೆಸಿ ಬೀಜೋಪಚಾರ ಮಾಡಬೇಕು. 

ಸಸಿಯ ಬೆಳವಣಿಗೆ ಹಂತದಲ್ಲಿ ಬರುವ ,ರೋಗಗಳನ್ನು ತಡೆಗಟ್ಟಲು ಮೆಕ್ಕೆಜೋಳದ ಬೀಜಗಳನ್ನು ಕಾರ್ಬೆಂಡೆಜಿಮ್ ಅಥವಾ ಥೈರಮ್‌  2 ಗ್ರಾಂ/ಕೆಜಿ ಜಬೀಗಳೊಂದಿಗೆ ಬೀಜೋಪಚಾರ ಮಾಡಬೇಕು. ಬೀಜೋಪಚಾರ ಮಾಡುವುದರಿಂದ ತುಕ್ಕು ರೋಗ, ಬೂಜು ತುಪ್ಪಟ ರೋಗ , ಕೊಳೆ ರೋಗ ಇತ್ಯಾದಿ ರೋಗಗಳು ಹರಡದಂತೆ ತಡೆಯಬಹುದು ಬೀಜೋಪಚಾರದ ನಂತರ ಬೀಜಗಳನ್ನು 15 ನಿಮಿಷಗಳ ಕಾಲ ನೆರಳಿನಲ್ಲಿ ಒಣಗಿಸಿ ನಂತರ ಬೀಜಗಳನ್ನು ಬಿತ್ತನೆಗೆ ಬಳಸಬೇಕು. 

ಮೆಕ್ಕೆಜೋಳದ  ಬೆಳೆಗೆ ಭೂಮಿಯ ಸಿದ್ಧತೆಗಳು:

ಮೆಕ್ಕೆಜೋಳಕ್ಕೆ ಮಣ್ಣಿನ ವಿಧಗಳು

ಮರಳು ಮಿಶ್ರಿತ ಕೆಂಪು ಮಣ್ಣು ಅಥವಾ ಕಪ್ಪು ಹತ್ತಿ ಮಣ್ಣು ಮೆಕ್ಕೆಜೋಳದ ಉತ್ಪಾದನೆಗೆ  ಸೂಕ್ತ.

ಮೆಕ್ಕೆಜೋಳ ಉತ್ಪಾದನೆಗೆ ಮಣ್ಣಿನ pH

ಮೆಕ್ಕೆಜೋಳವು ನಿರ್ದಿಷ್ಟ ಹವಾಮಾನ ವಲಯದಲ್ಲಿ ಬೆಳೆಯುವ  ಸಾಮರ್ಥ್ಯ ಹೊಂದಿರುವ ಕಾರಣದಿಂದಾಗಿ 5.5 ರಿಂದ 7.5 ವರೆಗಿನ pH ಹೊಂದಿರುವ ಮಣ್ಣಿನಲ್ಲಿ ಚೆನ್ನಾಗಿ ಬೆಳೆಯುತ್ತದೆ.   

pH  6 ರಿಂದ 6.5   ಹೊಂದಿರುವ ಮಣ್ಣು ಮೆಕ್ಕೆಜೋಳದ  ಬೆಳೆಗೆ ಸೂಕ್ತವಾಗಿದೆ 

ಮೆಕ್ಕೆಜೋಳದ ಬಿತ್ತನೆಗೆ ಭೂಮಿ ಸಿದ್ಧತೆಗಳು

ಭೂಮಿಯನ್ನು ಸಿದ್ಧಪಡಿಸುವಾಗ ಸಂಪೂರ್ಣವಾಗಿ ಕಳೆಗಳನ್ನು  ತೆಗೆದುಹಾಕಬೇಕು.ನಾಲ್ಕು ಕುರಫಿ(ಪ್ರಾಂಗ್)  ಬಳಸಿ ಎಲ್ಲ ಕಳೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಬೇಕು. ಇದು  ಈ ಹಿಂದೆ ಕೊಯ್ಲು ಮಾಡಿದ ಬೆಳೆಯ ಶೇಷಗಳನ್ನು ತೆಗೆದುಹಾಕಬೇಕು. ಭೂಮಿಗೆ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟಡ್ ಕಾಯರ್ ಪಿತ್- 12.5 ಟನ್ /ಎಕರೆ   ಮತ್ತು 10 ಪ್ಯಾಕೆಟ್ ಅಝೋಸ್ಪಿರಿಲ್ಲುಮ್ ಅನ್ನು  ಹಾಕಿದ ನಂತರ ಉತ್ತಮ ಬೇಸಾಯಕ್ಕಾಗಿ ಭೂಮಿಯನ್ನು ಐದರಿಂದ ಆರು ಬಾರಿ ಉಳುಮೆ ಮಾಡಬೇಕು . ನಂತರ  45 ಸೆಂ ಮೀ ಅಂತರದಲ್ಲಿ ತೋಡುಗಳನ್ನು ಮತ್ತು  ಸಾಲುಗಳನ್ನು ತಯಾರಿಸಬೇಕು.ತೋಡುಗಳನ್ನು ಹಾಗು ಸಾಲುಗಳನ್ನು ಮಾಡುವುದರಿಂದ ಅನವಶ್ಯಕ ನೀರು ಪೋಲಾಗುವುದನ್ನು ತಡೆಯಬಹುದು . 

ಮೆಕ್ಕೆಜೋಳ ಬಿತ್ತನೆ:

ಮೆಕ್ಕೆಜೋಳ ಬೀಜಗಳನ್ನು ಸಾಮಾನ್ಯವಾಗಿ ಹೊಲದಲ್ಲಿ  ಬಿತ್ತಲಾಗುತ್ತದೆ, ಮೆಕ್ಕೆಜೋಳ ಬೀಜಗಳನ್ನು ಬೋದು ಮಾಡಿದ  ಸಾಲುಗಳಲ್ಲಿ ಕೆಳಗಿನಿಂದ   1/3 ಭಾಗದಲ್ಲಿ  ಬಿತ್ತನೆ  ಮಾಡಲಾಗುತ್ತದೆ. 

ಮೆಕ್ಕೆಜೋಳವು ವೈವಿಧ್ಯಮಯವಾದ ಬೆಳೆಯಾಗಿದ್ದು, ಈ ಬೆಳೆಯನ್ನು ದೇಶದ ಯಾವುದೇ ಪ್ರದೇಶದಲ್ಲಿ ಸಹ ಬೆಳೆಯಬಹುದು. ಕಡಿಮೆ ನಿರ್ವಹಣೆ ಮತ್ತು ಹೆಚ್ಚಿನ ಬೇಡಿಕೆಯಿಂದಾಗಿ ಮೆಕ್ಕೆಜೋಳ ಬೆಳೆದು ಹೆಚ್ಚು ಇಳುವರಿ ಪಡೆಯುಬಹುದು.ಮೆಕ್ಕೆಜೋಳದ ಬೆಳೆಗೆ ಕಡಿಮೆ ಪ್ರಮಾಣದ ನೀರಿನ ಅಗತ್ಯವಿರುತ್ತದೆ.ಸುಲಭ ಬೇಸಾಯದ ಕ್ರಮ ಹಾಗು ಅಧಿಕ ಆದಾಯ ನೀಡುವುದರಿಂದ   ಮೆಕ್ಕೆಜೋಳ ಬೆಳೆಯನ್ನು ಬೆಳೆಯಲು  ಖಂಡಿತವಾಗಿಯೂ  ಶಿಫಾರಸು ಮಾಡಲಾಗುತ್ತದೆ.

Recent Posts

ಸೆಲ್ ಜೆಲ್: ಆಧುನಿಕ ಕೃಷಿಗಾಗಿ ನೀರಿನ ಉತ್ತಮ ಸ್ಥಿತಿಯನ್ನು ರೂಪಿಸುವ ಕ್ರಾಂತಿಕಾರಿ ಉತ್ಪನ್ನ

ಕೃಷಿಯಲ್ಲಿ, ದಕ್ಷತೆ ಮತ್ತು ಉತ್ಪಾದಕತೆ ಯಾವಾಗಲೂ ಮುಖ್ಯವಾಗಿರುತ್ತದೆ. ಈಗ ನಾವು ನಿಮಗೆ ನಿಮ್ಮ ನೀರಿನ ಸ್ಥಿತಿ, ನಿಮ್ಮ ಸಸ್ಯ ಸಂರಕ್ಷಣಾ ರಾಸಾಯನಿಕಗಳು ಮತ್ತು ರಸಗೊಬ್ಬರಗಳ ಪರಿಣಾಮಕಾರಿತ್ವವನ್ನು ಹೆಚ್ಚಿಸುವ…

January 28, 2025

ಎಕ್ಸ್‌ಸ್ಕೇಲೆಂಟ್ : ಡ್ರಿಪ್ ಕ್ಲೀನಿಂಗ್ ಕಾರ್ಯವಿಧಾನದ ಮೂಲಕ ಬೆಳೆಗಳಿಗೆ ಸುರಕ್ಷಿತ ಪರಿಹಾರಗಳು

ಇತ್ತೀಚಿನ ಆಧುನಿಕ ಕೃಷಿಯಲ್ಲಿ ಸಮರ್ಥ ನೀರಿನ ನಿರ್ವಹಣೆ ಮಾಡುವುದು ನಿರ್ಣಾಯಕವಾಗಿದೆ ಮತ್ತು ಹನಿ ನೀರಾವರಿ ಪದ್ದತಿಯು  ನೇರವಾಗಿ ಬೇರುಗಳ ವಲಯವನ್ನು ಗುರಿಯಾಗಿಸಿಕೊಂಡು ಸಸ್ಯಗಳಿಗೆ ನೀರನ್ನು ತಲುಪಿಸುವ ವಿಧಾನವನ್ನು…

January 28, 2025

ಬಯೋಕ್ಯುಲಮ್ AW: ಬೆಳೆ ಸುಸ್ಥಿರತೆಗಾಗಿ ಬಳಸಲು ಸಿದ್ಧವಾಗಿರುವ ಡಿಕಂಪೋಸರ್

ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು…

January 28, 2025

ಎಪಿಸೆಲ್: ಸುಸ್ಥಿರ ಕೃಷಿಗಾಗಿ ನಿಮ್ಮ ಬೆಳೆಗಳ ಸಂಪೂರ್ಣ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ

ಇತ್ತೀಚೆಗೆ ಬದಲಾಗುತ್ತಿರುವ ಕೃಷಿ ಭೂದೃಶ್ಯದ ಕಾರಣವಾಗಿ, ಸಮರ್ಥನೀಯ ಮತ್ತು ಸಮರ್ಥ ಕೃಷಿ ವಿಧಾನಗಳನ್ನು ಕಂಡುಹಿಡಿಯುವುದು ನಿರ್ಣಾಯಕವಾಗಿದೆ. ಅದಕ್ಕಾಗಿಯೇ ಪರಿಚಯಿಸುತ್ತಿದ್ದೇವೆ, ಎಪಿಸೆಲ್! ಎಕ್ಸೆಲ್ ಇಂಡಸ್ಟ್ರೀಸ್‌ ರವರ ಈ ನವೀನ…

January 28, 2025

ಸೆಲ್ ಜೆಲ್‌ನೊಂದಿಗೆ ಕೃಷಿ ದಕ್ಷತೆಯನ್ನು ಹೆಚ್ಚಿಸುವುದು: ನೀರಿನ ಕಂಡೀಷನಿಂಗ್ ಮತ್ತು pH ಸಮತೋಲನ ಮಾಡಲು ಸಲಹೆಗಳು

ನೀರು ಕೃಷಿಯಲ್ಲಿ ಮೂಲಭೂತ ಸಂಪನ್ಮೂಲವಾಗಿದ್ದು, ಬೆಳೆಗಳ ವೃದ್ಧಿಗಾಗಿ ಅಗತ್ಯ ಪೋಷಕಾಂಶಗಳ ಮತ್ತು ಬೆಳೆ ರಕ್ಷಣೆಗೆ ಅಗತ್ಯವಾದ ರಾಸಾಯನಿಕಗಳನ್ನು ಸಾಗಿಸುವಲ್ಲಿ ವಾಹಕವಾಗಿ ಕಾರ್ಯನಿರ್ವಹಿಸುತ್ತದೆ . ಆದಾಗ್ಯೂ, ಕಳೆನಾಶಕಗಳು, ಕೀಟನಾಶಕಗಳು,…

January 28, 2025

ಎಕ್ಸ್‌ಸ್ಕೇಲೆಂಟ್: ಹನಿ ನೀರಾವರಿ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ಸುರಕ್ಷಿತ ಮತ್ತು ಪರಿಣಾಮಕಾರಿ ಪರಿಹಾರ

ಹನಿ ನೀರಾವರಿ ವ್ಯವಸ್ಥೆ ಆಧುನಿಕ ಕೃಷಿಯ ಅತ್ಯಗತ್ಯ ಅಂಶವಾಗಿದೆ. ಇದು ಸಸ್ಯಗಳ ಬೇರುಗಳಿಗೆ ನೇರವಾಗಿ ನೀರನ್ನು ತಲುಪಿಸುವ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ. ಈ ವಿಧಾನವು ನೀರನ್ನು ಸಂರಕ್ಷಿಸುವುದು…

January 28, 2025