Crop

ಶುಂಠಿ ಬೆಳೆಗೆ ಭೂಮಿ ಸಿದ್ಧತೆ

ಭಾರತವು 2021-22ರಲ್ಲಿ 21.20 ಲಕ್ಷ ಟನ್ ಶುಂಠಿಯನ್ನು ಉತ್ಪಾದಿಸಿದೆ ಹಾಗು ಅದೇ ವರ್ಷದಲ್ಲಿ,ಭಾರತವು 837.34 ಕೋಟಿ ಮೌಲ್ಯದ 1.48 ಲಕ್ಷ ಟನ್ ಶುಂಠಿಯನ್ನು ಬೇರೆ ಬೇರೆ ದೇಶಗಳಿಗೆ ರಫ್ತು ಮಾಡಿದೆ. ಭಾರತದಲ್ಲಿ ಶುಂಠಿ ಬೆಳೆಯುವ ಪ್ರಮುಖ ರಾಜ್ಯಗಳೆಂದರೆ ಮಧ್ಯಪ್ರದೇಶ, ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ, ಕೇರಳ, ಮಹಾರಾಷ್ಟ್ರ ಮತ್ತು ಮೇಘಾಲಯ.

ಶೀತ, ಕೆಮ್ಮು, ವಾಂತಿ, ತಲೆತಿರುಗುವಿಕೆ, ಅಧಿಕ ರಕ್ತದೊತ್ತಡ ಮತ್ತು ದುರ್ಬಲ ದೃಷ್ಟಿಯಂತಹ ಸಮಸ್ಯೆಗಳಿಗೆ ಶುಂಠಿ ಪ್ರಯೋಜನಕಾರಿಯಾಗಿದೆ . ಭಾರತೀಯ ಸಾಂಪ್ರದಾಯಿಕ ಆಯುರ್ವೇದ ಔಷಧದಲ್ಲಿ ಶುಂಠಿಯನ್ನು ಜೀರ್ಣಕ್ರಿಯೆ, ಜ್ವರ ಮತ್ತು ಹೊಟ್ಟೆಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಹಾಗು ಸಮಸ್ಯೆಗಳ ನಿವಾರಣೆಗೆ ಬಳಸಲಾಗುತ್ತದೆ

ಕಷ್ಟದ ಮಟ್ಟ : ಕಠಿಣ

ಗೆಡ್ಡೆಗಳ ಆಯ್ಕೆ

ಭಾರತದಲ್ಲಿ ಹೈಬ್ರಿಡ್ ಮತ್ತು ವಂಶಾಂತರೀ ಬೆಳೆಗಳ ತಳಿಗಳಿಗಿಂತ, ಹಲವು ಸ್ಥಳೀಯ ಹಾಗು ಸಾಂಪ್ರದಾಯಿಕ ತಳಿಗಳಿವೆ . ಶುಂಠಿಯ ಕೆಲವು ಪ್ರಮುಖ ತಳಿಗಳೆಂದರೆ IISR ಸುಪ್ರಭಾ, ಸುರುಚಿ, ಸುರಭಿ, ಹಿಮಗಿರಿ, ಚೀನಾ, ಅಸ್ಸಾಂ, ಮಾರನ್, ಹಿಮಾಚಲ, ನಾಡಿಯಾ, ಮತ್ತು ವಿದೇಶಿ ತಳಿಯಾದ ರಿಯೋ-ಡಿ-ಜನೈೆರೋ ತಳಿಯು ಅತ್ಯಂತ ಜನಪ್ರಿಯವಾಗಿದೆ

ಶುಂಠಿ ಗೆಡ್ಡೆಗಳ ಸಂಸ್ಕರಣೆ

ಶುಂಠಿಯನ್ನು ಗೆಡ್ಡೆ/ರೈಜೋಮ್‌ (ಬೇರು ಕಾಂಡ) ಮೂಲಕ ಬೆಳೆಸಲಾಗುತ್ತದೆ.ಈ ಗೆಡ್ಡೆಗಳನ್ನು, 25-5.0 ಸೆಂ.ಮೀ ಉದ್ದ, 20-25 ಗ್ರಾಂ ತೂಕ ಮತ್ತು ಕನಿಷ್ಠ ಒಂದು ಅಥವಾ ಎರಡು ಗಿಣ್ಣು ಮೊಗ್ಗು ಇರುವಂತೆ ಸುರಕ್ಷಿತವಾಗಿ ಸಣ್ಣ ತುಂಡುಗಳಾಗಿ ಕತ್ತರಿಸಬೇಕು. ಈ ರೀತಿ ಮಾಡಿದ ಶುಂಠಿ ಗೆಡ್ಡೆಗಳನ್ನು 30 ನಿಮಿಷಗಳ ಕಾಲ ಮ್ಯಾಂಕೋಜೆಬ್ 0.3% ದ್ರಾವಣದಲ್ಲಿ (3 ಗ್ರಾಂ/ಲೀ ನೀರು) ಅದ್ದಿ ತೆಗೆದ ನಂತರ 3 ರಿಂದ 4 ಗಂಟೆಗಳ ಕಾಲ ನೆರಳಿನಲ್ಲಿ ಒಣಗಿಸಬೇಕು . ಈ ರೀತಿ ಮಾಡುವುದರಿಂದ ಗೆಡ್ಡೆಗಳಲ್ಲಿ ಕಂಡುಬರುವ ಹಾಗು ಗಿಣ್ಣು ಮೊಗ್ಗುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುವ ಯಾವುದೇ ಶಿಲೀಂಧ್ರ ಸೋಂಕನ್ನು ತಡೆಗಟ್ಟಬಹುದು

ಶುಂಠಿ ಬೆಳೆಗೆ ಭೂಮಿ ಸಿದ್ಧತೆಗಳು :

ಶುಂಠಿ ಬೆಳೆಯಲು ಭೂಮಿಯನ್ನು 4 ರಿಂದ 5 ಬಾರಿ ಚೆನ್ನಾಗಿ ಉಳುಮೆ ಮಾಡಬೇಕು . ಬಿತ್ತನೆ ಸಮಯದಲ್ಲಿ 25-30 ಟನ್/ಹೆಕ್ಟೇರ್ ಅಷ್ಟು ಚೆನ್ನಾಗಿ ಕೊಳೆತ ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್‌ ಅನ್ನು ಸೇರಿಸಿ. ನಂತರ 1 ಮೀಟರ್‌ ಅಗಲ, 30 ಸೆಂ.ಮೀ ಎತ್ತರದ ಮಡಿಗಳನ್ನು 50 ಸೆಂ.ಮೀ ಅಂತರ ಇರುವಂತೆ ಸಿದ್ಧಪಡಿಸಬೇಕು. ಶುಂಠಿ ಗೆಡ್ಡೆಗಳು ಮುಖ್ಯವಾಗಿ ಜಂತುಹುಳುಗಳ ದಾಳಿಗೆ ಗುರಿಯಾಗುತ್ತವೆ ಹಾಗು ಇದು ಇಳುವರಿಯನ್ನು ಕಡಿಮೆ ಮಾಡುತ್ತದೆ. ಶುಂಠಿ ಬಿತ್ತನೆ ಸಮಯದಲ್ಲಿ ಬೇವಿನ ಹಿಂಡಿಯನ್ನು 2 ಟನ್/ಹೆಕ್ಟೇರ್ ಗೆ ಮಣ್ಣಿನಲ್ಲಿ ಸೇರಿಸುವುದರಿಂದ ಜಂತುಹುಳುಗಳ ದಾಳಿಯನ್ನು ಕಡಿಮೆ ಮಾಡಬಹುದು

ಶುಂಠಿ ಬೆಳೆಗೆ ಸಾಮಾನ್ಯವಾಗಿ NPK 100:50:50 ಕೆಜಿ/ ಹೆಕ್ಟೇರ್ ರಸಗೊಬ್ಬರಗಳನ್ನು ಶಿಫಾರಸು ಮಾಡಲಾಗುತ್ತದೆ. ಈ ಶಿಫಾರಸು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ. ನಾಟಿ ಮಾಡುವ ಸಮಯದಲ್ಲಿ ಪೂರ್ತಿ ಪ್ರಮಾಣದ ರಂಜಕವನ್ನು ನೀಡಬೇಕು, ಸಮ ಪ್ರಮಾಣದ ಸಾರಜನಕ ಮತ್ತು ಪೊಟ್ಯಾಷ್‌ ಅನ್ನು ನಾಟಿ ಮಾಡಿದ ನಂತರ ನೀಡಬೇಕು

ಶುಂಠಿ ಬೆಳೆಗೆ ಮಣ್ಣಿನ ಅವಶ್ಯಕತೆಗಳು:

ಶುಂಠಿಗ ಬೆಳೆಗೆ ನಿರ್ದಿಷ್ಟ ರೀತಿಯ ಮಣ್ಣಿನ ಅವಶ್ಯಕತೆ ಇರುತ್ತದೆ . ಶುಂಠಿಯನ್ನು ಅದರ ವ್ಯಾಪಕ ಸ್ವಭಾವದಿಂದಾಗಿ ವರ್ಷದಿಂದ ವರ್ಷಕ್ಕೆ ಒಂದೇ ಮಣ್ಣಿನಲ್ಲಿ ಬೆಳೆಯಲು ಸಾಧ್ಯವಾಗವುದಿಲ್ಲ . ಹೆಚ್ಚು ಸಾವಯವ ಹೊಂದಿದ ಮರಳು ಗೂಡು ಮಣಿನಲ್ಲಿ, ನೀರು ಬಸಿದು ಹೋಗುವಂತಹ ಮರಳು ಮಿಶ್ರಿತಗೊಂಡ ಹಾಗೂ ಕೆಂಪು ಅಥವಾ ಜಂಬುಇಟ್ಟಿಗೆ ಮಣ್ಣಿನಲ್ಲಿ ಶುಂಠಿಯು ಚೆನ್ನಾಗಿ ಬೆಳೆಯುತ್ತದೆ.

ಶುಂಠಿ ಬೆಳೆಗೆ ಮಣ್ಣಿನ pH: 

ಶುಂಠಿ ಬೆಳೆಗೆ 5.5 ರಿಂದ 6.5 pH ಹೊಂದಿದ ಮರಳು ಗೂಡು ಅಥವಾ ಸಡಿಲವಾದ ಮಣ್ಣು ಸೂಕ್ತವಾಗಿದೆ

ಹಿನ್ನುಡಿ

ಶುಂಠಿ ಬೆಳೆಯು ಒಂದು ಸಮಗ್ರ ಬೆಳೆಯಾಗಿದ್ದು, ಇದನ್ನು ಪದೇ ಪದೇ ಒಂದೇ ಮಣ್ಣಿನಲ್ಲಿ ಬೆಳೆಯಲು ಸಾದ್ಯವಾಗುವುದಿಲ್ಲ. ಶುಂಠಿ ಬೆಳೆಯು ದೀರ್ಘಾವಧಿಯ ಬೆಳೆಯಾಗಿದ್ದು. ಮೌಲ್ಯವರ್ಧನೆಯಿಲ್ಲದಿದ್ದರೂ ಸಹ ಹೆಚ್ಚಿನ ಬೇಡಿಕೆಯ ಬೆಳೆಯಾಗಿದೆ ಮತ್ತು ಅಧಿಕ ಆದಾಯದ ಭರವಸೆಯನ್ನು ನೀಡುತ್ತದೆ.

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024