Crop

ಸಾಸಿವೆ ಬೆಳೆಗೆ ಭೂಮಿ ಸಿದ್ಧತೆ

ಸಾಸಿವೆ ಬೆಳೆಯಲ್ಲಿ ಮೂರು ವಿಧಗಳಿವೆ ಕಂದು, ಕಪ್ಪು ಮತ್ತು ಬಿಳಿ.  ಅವುಗಳಲ್ಲಿ ಕಪ್ಪು ಸಾಸಿವೆ ಅತ್ಯಂತ ಜನಪ್ರಿಯವಾಗಿದೆ. ಭಾರತದ ದೇಶವು   2020-2021ರ  ಸಾಲಿನಲ್ಲಿ 109.50 ಲಕ್ಷ ಟನ್ ಅಷ್ಟು ಸಾಸಿವೆಯನ್ನು ಉತ್ಪಾದಿಸಿದೆ.ರಾಜಸ್ಥಾನವು ಭಾರತದ ಅತಿದೊಡ್ಡ ಸಾಸಿವೆ ಬೆಳೆಯುವ ರಾಜ್ಯವಾಗಿದೆ .ಸಾಸಿವೆ ಬೆಳೆಯುವ ಐದು ಅಗ್ರ ರಾಜ್ಯಗಳೆಂದರೆ ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯಪ್ರದೇಶ, ಹರಿಯಾಣ, ಗುಜರಾತ್ ಮತ್ತು ಪಶ್ಚಿಮ ಬಂಗಾಳ. ತೈಲ ಬಳಕೆಗೆ ಭಾರತದಲ್ಲಿ 60-65% ರಷ್ಟು ದೇಶೀಯ ಬೇಡಿಕೆಯಿದೆ. 2020-2021ರ ಸಾಲಿನಲ್ಲಿ ಭಾರತ ದೇಶವು  13 ಮಿಲಿಯನ್ ಟನ್ ಅಷ್ಟು  ಸಾಸಿವೆ ಎಣ್ಣೆಯನ್ನು ಉತ್ಪಾದಿಸಿದೆ. 

ಕಷ್ಟದ ಮಟ್ಟ :

(ಸುಲಭ/ ಮಧ್ಯಮ /ಕಠಿಣ)

ಬೀಜಗಳ ಆಯ್ಕೆ

ಮಾರುಕಟ್ಟೆಯಲ್ಲಿ 10,000 ಕ್ಕೂ ಹೆಚ್ಚು ಸಾಸಿವೆ ತಳಿಗಳಿವೆ. ಅವುಗಳಲ್ಲಿ NRCDR 02, NRCDR 601, NRCHB 101, DRMRIJ 31, DRMR150-35, NRCYS 05-02, ಟೋರಿಯಾ, ಬ್ರೌನ್ ಸರೋನ್, ವರುಣ, ಶೇಖರ್, ವೈಭವ್, ವರ್ಧನ್,, ರೋಹಿಣಿ, ನರೇಂದ್ರ, ವೈಬ್ಹವ್, ವರ್ದನ್, ಕ್ರಾಂತಿ, ಕೃಷ್ಣ, ವರ್ದನ್ ರೈ-8501, ಕಿರಣ್, ಹಯಾಲ PVC (9-22-1), ರೈ ವರುಣ, T- 36 (ಹಳದಿ), ITSA, ಸಂಗಮ್, TL 15, ಭವಾನಿ, T -36, PT 303, PT 30, ಗೌರಾಣಿ (B54), 18-2-9, PT 507, D. K 1, ಮತ್ತು T 9 (ಕಪ್ಪು) ಪ್ರಮುಖ ತಳಿಗಳಾಗಿವೆ  

ಸಾಸಿವೆ ಬೀಜೋಪಚಾರ

ಸಾಸಿವೆ ಬೀಜಗಳನ್ನು ಬಿತ್ತನೆ ಮಾಡುವ ಮೊದಲು ಪ್ರತಿ ಕೆಜಿ ಬೀಜಗಳಿಗೆ 3 ಗ್ರಾಂಗಳಷ್ಟು ಥೈರಾಮ್ ನೊಂದಿಗೆ ಮಿಶ್ರಣ ಮಾಡಿ, ಬೀಜೋಪಚಾರ ಮಾಡಬೇಕು . ಸಾಸಿವೆ ಬೀಜಗಳನ್ನು ನೆನೆಸಿ,  24 ಗಂಟೆಗಳ ಕಾಲ ನೆರಳಿನಲ್ಲಿ ಸಹ ಒಣಗಿಸಬೇಕು. 

ಸಾಸಿವೆ ಬೆಳೆಗಾಗಿ ಭೂಮಿ ಸಿದ್ಧತೆ :

ಸಾಸಿವೆ ಬೆಳೆಯಲು ಚಳಿಗಾಲ ಅತ್ಯಂತ ಸೂಕ್ತ ಸಮಯವಾಗಿದೆ. ಸಾಸಿವೆ ಬೆಳೆಯ ಬಿತ್ತನೆಗೆ ಮೊದಲು ಹೊಲವನ್ನು, ಯಾವುದೇ ಕಳೆ ಮತ್ತು ಉಬ್ಬು ತಗ್ಗುಗಳಿಲ್ಲದೆ ಸಿದ್ಧಪಡಿಸಬೇಕು.ಒಂದು ಹೆಕ್ಟೇರ್ ಭೂಮಿಯ ಬಿತ್ತನೆಗೆ 5-6 ಕೆಜಿಗಳಷ್ಟು ಬೀಜಗಳು ಬೇಕಾಗುತ್ತದೆ.  

ಆರಂಭಿಕ ಹಂತದಲ್ಲಿ ಪ್ರತಿ ಹೆಕ್ಟೇರಿಗೆ 25 ಟನ್ ಕೊಟ್ಟಿಗೆ ಗೊಬ್ಬರ , 25 ಕೆಜಿ ಸಾರಜನಕ ಮತ್ತು 60 ಕೆಜಿ ರಂಜಕ  ಹಾಕಬೇಕು. ಭೂಮಿಯನ್ನು ಕನಿಷ್ಠ ಎರಡು ಬಾರಿ ಉಳುಮೆ ಮಾಡಬೇಕಾಗುತ್ತದೆ.

ಸಾಸಿವೆ ಬೆಳೆಯ ಬಿತ್ತನೆಗೆ ಎರಡು ವಿಧಾನಗಳಿವೆ.  ಬೀಜಗಳನ್ನು ಪ್ರಸಾರ ಬಿತ್ತನೆ ಮಾಡುವುದು ( ಕೈಯಿಂದ ಬಿತ್ತನೆ)   ಅಥವಾ ಡ್ರಿಲ್ ಮೆಷಿನ್ ( ಡ್ರಿಲ್ ಮಾಡುವ ) ಯಂತ್ರದಿಂದ  ಬಿತ್ತುವುದು.  ಬಿತ್ತನೆ ಮಾಡುವ ಮೊದಲು ಹೊಲಕ್ಕೆ ನೀರುಣಿಸಬೇಕು. 

ಒಟ್ಟು ಮೊತ್ತದಲ್ಲಿ  ಭೂಮಿಗೆ 45 ಕೆಜಿ ಸಾರಜನಕ, 35 ಕೆಜಿ P2O5(ಟ್ರಿಪಲ್ ಸೂಪರ್ ಫಾಸ್ಫೇಟ್) ಮತ್ತು 25 ಕೆಜಿ K2O(ಪೊಟ್ಯಾಸಿಯಮ್ ಆಕ್ಸೈಡ್) ಬೇಕಾಗುತ್ತದೆ. ಬಿತ್ತನೆ ಮಾಡುವ ಕನಿಷ್ಠ ನಾಲ್ಕು ದಿನಗಳ ಮೊದಲು ಎಲ್ಲಾ ಪೋಷಕಾಂಶಗಳನ್ನು ಭೂಮಿಗೆ ಹಾಕಬೇಕು. 

ಸಾಸಿವೆ ಬೆಳೆಗೆ  ಮಣ್ಣಿನ ಅವಶ್ಯಕತೆಗಳು

ಸಾಸಿವೆ ಬೆಳೆಯು ವಿವಿಧ ರೀತಿಯ ಮಣ್ಣಿನಲ್ಲಿ ಬೆಳೆಯುವಂತಹ ಬೆಳೆ. ಸಾಸಿವೆ ಬೆಳೆಗೆ  ನೀರು  ಬಸಿದು ಹೋಗುವಂತಹ ಹಾಗು ಮರಳು ಮಿಶ್ರಿತಗೊಂಡ ಲೋಮಿ ಮಣ್ಣು ಸೂಕ್ತವಾಗಿದೆ.   ಸಾಸಿವೆಯೂ  6.0 ರಿಂದ 7.5  pH ಮೌಲ್ಯ ಹೊಂದಿದ ಕ್ಷಾರೀಯ ಮಣ್ಣಿನಲ್ಲಿಯೂ ಸಹ  ಉತ್ತಮವಾಗಿ ಬೆಳೆಯುತ್ತದೆ.

ಹಿನ್ನುಡಿ

ಸಾಸಿವೆ ಬೆಳೆಯು ದೇಶದ ಅತ್ಯಂತ ಹಳೆಯ ಬೆಳೆಗಳಲ್ಲಿ ಒಂದಾಗಿದೆ. ಸಾಸಿವೆ ಬೆಳೆಯ ಬಿತ್ತನೆಯಲ್ಲಿ ಈಗಲು ಸಹ  ಸಾಂಪ್ರದಾಯಿಕ ಮಾದರಿಯ ವಿವಿಧ ಕೃಷಿ ವಿಧಾನಗಳನ್ನು ಬಳಸಲಾಗುತ್ತಿದೆ. ಸಾಸಿವೆ ಬೆಳೆಯೂ ಸುಲಭವಾಗಿ ಬೆಳೆಯಬಹುದಾದ ಬೆಳೆಯಾಗಿದೆ. ಪ್ರಾರಂಭಿಕ ಹಂತದಲ್ಲಿ ಇರುವ ರೈತರಿಗೆ, ಸಾಸಿವೆ ಬೆಳೆಯ ಕೃಷಿ ಒಂದು  ಅತ್ಯುತ್ತಮ ಆಯ್ಕೆಯಾಗಿದೆ. ಸಾಸಿವೆ ಬೆಳೆಯ ಜೊತೆಗೆ , ಸಾಸಿವೆ ಎಣ್ಣೆ ಉತ್ಪಾದಿಸುವುದರಿಂದ  ಇದರ ಕೃಷಿಯು ಯಾವಾಗಲೂ ಹೆಚ್ಚಿನ ಬೇಡಿಕೆಯಲ್ಲಿರುತ್ತದೆ. 

Recent Posts

ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ

ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…

July 17, 2024

ಸೈನಿಕ ಹುಳು: ಜೋಳದ ಬೆಳೆಯಲ್ಲಿ ವಿನಾಶಕಾರಿ ಕೀಟ

ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ  ನಷ್ಟವನ್ನು ಉಂಟುಮಾಡುತ್ತದೆ. ಇದು…

July 11, 2024

ಮೆಕ್ಕೆಜೋಳ: ನಾಟಿ ಮತ್ತು ಸುಧಾರಿತ ಬೇಸಾಯ ಕ್ರಮಗಳು

ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…

June 28, 2024

ಸಮೃದ್ಧ ಕೊಯ್ಲಿಗೆ ಪಪ್ಪಾಯಿ ಕೃಷಿ ಪದ್ಧತಿಗಳು

ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…

June 24, 2024

ಸಾಫ್ಟ್ ರೊಟ್ ರೋಗ ಭೀತಿ: ಶುಂಠಿಯನ್ನು ವಿನಾಶದಿಂದ ರಕ್ಷಿಸುವುದು

ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ?  ಆದಾಗ್ಯೂ, ಸಾಫ್ಟ್ ರೊಟ್…

June 19, 2024

ಸೋಯಾಬೀನ್: ನಾಟಿ ಮತ್ತು ಕೃಷಿ ಅಭ್ಯಾಸಗಳು

ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…

June 17, 2024