ಕಮಲಂ ಅಥವಾ ಡ್ರ್ಯಾಗನ್ ಹಣ್ಣು, ಕ್ಯಾಕ್ಟಸ್ ಆಧಾರಿತ ಹಣ್ಣಾಗಿದ್ದು,ತನ್ನ ಆರ್ಥಿಕ ಮೌಲ್ಯಕ್ಕೆ ಹಾಗೂ ಆರೋಗ್ಯಕರವಾದ ಗುಣಗಳಿಗೆ ಹೆಸರುವಾಸಿಯಾಗಿದೆ. ಈ ಹಣ್ಣಿನ ಮೂಲ ಸ್ಥಾನವು ದಕ್ಷಿಣ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕ ಆಗಿದ್ದು, ಈಗ ಭಾರತ ಸೇರಿದಂತೆ ವಿಶ್ವದಾದ್ಯಂತ 22 ಕ್ಕೂ ಹೆಚ್ಚಿನ ದೇಶಗಳಲ್ಲಿ ಬೆಳೆಯಲಾಗುತ್ತಿದೆ.
ಕಮಲಂ ಅಥವಾ ಡ್ರ್ಯಾಗನ್ ಹಣ್ಣು, ಮೊದಲನೇಯ ವರ್ಷದಿಂದಲೇ ತ್ವರಿತ ಲಾಭವನ್ನು ನೀಡಲಾರಂಭಿಸುತ್ತದೆ ಮತ್ತು 3-4 ವರ್ಷಗಳಲ್ಲಿ ಹೆಚ್ಚಿನ ಆರ್ಥಿಕ ಲಾಭವನ್ನು ಕಂಡುಕೊಳ್ಳಬಹುದು. ಪ್ರಸ್ತುತ ಬೆಳೆಗೆ ಸುಮಾರು 20 ವರ್ಷಗಳ ಜೀವಿತಾವಧಿಯಿದ್ದು , ಗಿಡವನ್ನು ನೆಟ್ಟ 2 ವರ್ಷಗಳಲ್ಲಿ ಪ್ರತಿ ಎಕರೆಗೆ 10 ಟನ್ ಗಳ ಇಳುವರಿ ಪಡೆಯಬಹುದು. ಪ್ರತಿ ಕೆ.ಜಿ. ಹಣ್ಣಿಗೆ ರೂ.100/- ಮಾತ್ರದ ಮಾರುಕಟ್ಟೆ ದರ ಇದ್ದಲ್ಲಿ ವರ್ಷಕ್ಕೆ ರೂ.10,00,000/- ಆದಾಯ ಪಡೆಯಬಹುದು. ಆದ್ದರಿಂದ ಕಮಲಂ ಹಣ್ಣು ಬೆಳೆಯುವ ರೈತರಿಗೆ ಹೆಚ್ಚಿನ ಆರ್ಥಿಕ ಲಾಭ ದೊರೆಯುತ್ತದೆ.
4 ಬರ-ನಿರೋಧಕ ಬೆಳೆ: ಕಮಲಂ ಬರ-ನಿರೋಧಕ ಬೆಳೆಯಾಗಿದ್ದು, ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಸಹ ಬೆಳೆಯಬಹುದು. ಇತರೆ ಬೆಳೆಗಳು ಸಾಮಾನ್ಯವಾಗಿ ಬೆಳೆಯದ ಒಣ ಪ್ರದೇಶಗಳಲ್ಲಿ, ರೈತರು ಸದರಿ ಬೆಳೆಯನ್ನು ಬೆಳೆದು ಪ್ರಯೋಜನವನ್ನು ಪಡೆದುಕೊಳ್ಳಬಹುದು.
ಕೆಲವು ಸಂಬಂಧಿತ ವಿಷಯಗಳು ಮತ್ತು ಅಂಕಿ ಅಂಶಗಳು
ವಿಷಯ | ವಿವರಣೆ |
ಬೆಳೆಯ ಹೆಸರು | ಕಮಲಂ/ ಡ್ರಾಗನ್ ಹಣ್ಣು |
ಮೂಲ ಸ್ಥಾನ | ದಕ್ಷಿಣ ಮೆಕ್ಸಿಕೋ, ಮಧ್ಯ ಮತ್ತು ದಕ್ಷಿಣ ಅಮೇರಿಕ |
ಪ್ರಮುಖವಾಗಿ ಕರೆಯುವ ಹೆಸರು | ಪಿತಾಯ, ಪಿಟಾಯಾ, ಪಿಟಾಯಾ ರೋಜಾ, ಪಿತಾಜಾ |
ಆರ್ಥಿಕ ಮೌಲ್ಯ | ಜ್ಯೂಸ್, ಜಾಮ್, ಜೆಲ್ಲಿ ಮುಂತಾದ ಆಹಾರ ಉತ್ಪನ್ನಗಳು ಜೊತೆಗೆ ಆರೋಗ್ಯಕರ ಉಪಯುಕ್ತತೆಗಳು ಅಂದರೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು, ಜೀರ್ಣಕ್ರಿಯೆಗೆ ಸಹಾಯ ಮಾಡುವುದು ಆಗಿರುತ್ತದೆ ಜೊತೆಗೆ ಫೈಬರ್, ಆಂಟಿಆಕ್ಸಿಡೆಂಟ್ಗಳು ಮತ್ತು ವಿಟಮಿನ್ಗಳಲ್ಲಿ ಸಮೃದ್ಧವಾಗಿದೆ. |
ಕೃಷಿ ವಿಸ್ತರಣೆ | ಆಗ್ನೇಯ –ಏಷ್ಯಾ, ಭಾರತ, ಯುಎಸ್ಎ, ಕೆರಿಬಿಯನ್, ಆಸ್ಟ್ರೇಲಿಯಾ |
ಭಾರತದ ಸಾಗುವಳಿ ಪ್ರದೇಶ | > 3,000 ಹೆಕ್ಟೇರ್ |
ಭಾರತಕ್ಕೆ ಕಮಲಂ ಹಣ್ಣುಗಳ ಆಮದು | 2017ರಲ್ಲಿ 327 ಟನ್, 2019ರಲ್ಲಿ 9162 ಟನ್, 2020ರಲ್ಲಿ ಅಂದಾಜು 11916 ಟನ್, 2021ರಲ್ಲಿ ಅಂದಾಜು 15491 ಟನ್ |
ಆಮದು ಮೌಲ್ಯ (2021) | ರೂ.100 ಕೋಟಿಗಳು |
ಇಳುವರಿ ಪ್ರತಿ ಎಕರೆಗೆ | 10 ಟನ್ |
ಮಾರುಕಟ್ಟೆ ದರ | ರೂ.100 ಪ್ರತಿ ಕೆ.ಜಿ. ಗೆ |
ಲಾಭ ವೆಚ್ಚ ಅನುಪಾತ (BCR) | 2.58 |
ಕಮಲಂ ಹಣ್ಣಿಗೆ MIDH ಗುರಿ | 5 ವರ್ಷಗಳಲ್ಲಿ 50,000 ಹೆಕ್ಟೇರ್ |
ಇಳುವರಿ ನೀರಿಕ್ಷೆ ಅವಧಿ | ಸುಮಾರು 20 ವರ್ಷ |
ಸೆಂಟರ್ ಆಫ್ ಎಕ್ಸಲೆನ್ಸ್ | 09-03-2023ರಂದು ಬೆಂಗಳೂರಿನ IIHR ನಲ್ಲಿ ಸ್ಥಾಪನೆ |
ಸೆಂಟರ್ ಆಫ್ ಎಕ್ಸಲೆನ್ಸ್ ಫೋಕಸ್ | ಉತ್ಪಾದನೆ, ಕೊಯ್ಲಿನ ನಂತರದ ಕಾರ್ಯಗಳು, ಮೌಲ್ಯವರ್ಧನೆ ಮತ್ತು ಸಂಶೋಧನೆ |
ರೈತರಲ್ಲಿ ಹೆಚ್ಚುತ್ತಿರುವ ಆಸಕ್ತಿ ಮತ್ತು ಅಲ್ಪ ಭೂಮಿಯಲ್ಲಿಯೇ ಕಮಲವನ್ನು ಬೆಳೆಸುವುದರಿಂದ ಅವರು ಪಡೆಯುತ್ತಿರುವ ತ್ವರಿತ ಆದಾಯದೊಂದಿಗೆ, ಕಮಲಂ ಹೊಸ ಪ್ರದೇಶಗಳಿಗೆ ವಿಸ್ತರಿಸುತ್ತದೆ ಮತ್ತು ದೇಶೀಯ ಕೃಷಿಯು ಆಮದುಗಳನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ ಎಂದು ನಿರೀಕ್ಷಿಸಲಾಗಿದೆ. ಕಮಲಂ ಹಣ್ಣಿನ ಉತ್ಕೃಷ್ಟತೆಯ ಕೇಂದ್ರದ ಸ್ಥಾಪನೆಯು ಕಮಲಂ ಹಣ್ಣಿನ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಲು, ಮೌಲ್ಯವರ್ಧನೆ ಮತ್ತು ರೈತ ಸಮುದಾಯದ ಆರ್ಥಿಕ ಅಭಿವೃದ್ಧಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆಯು (PMFME) 2020 ರಲ್ಲಿ ಆಹಾರ ಸಂಸ್ಕರಣಾ ಕೈಗಾರಿಕೆಗಳ ಸಚಿವಾಲಯ (MoFPI) ಪ್ರಾರಂಭಿಸಿದ ಒಂದು ಉಪಕ್ರಮವಾಗಿದೆ. ಈ ದೂರದೃಷ್ಟಿಯ ಯೋಜನೆಯನ್ನು…
ಸಾಮಾನ್ಯವಾಗಿ ಸೈನಿಕ ಹುಳು ಎಂದು ಕರೆಯಲ್ಪಡುವ ಸ್ಪೋಡೋಪ್ಟೆರಾ ಫ್ರುಗಿಪರ್ಡಾ ಪ್ರಪಂಚದಾದ್ಯಂತದ ಬೆಳೆಗಳ ಮೇಲೆ ಹೆಚ್ಚು ಆಕ್ರಮಣಕಾರಿ ಕೀಟಗಳಲ್ಲಿ ಪ್ರಮುಖವಾಗಿದ್ದು, ಮುಖ್ಯ ಬೆಳೆಗಳಿಗೆ ತೀವ್ರ ನಷ್ಟವನ್ನು ಉಂಟುಮಾಡುತ್ತದೆ. ಇದು…
ಮೆಕ್ಕೆ ಜೋಳ (ಜಿಯಾ ಮೇಸ್ ಎಲ್.) ಹೆಚ್ಚು ಹೊಂದಿಕೊಳ್ಳಬಲ್ಲ ಬೆಳೆಗಳಲ್ಲಿ ಒಂದಾಗಿದೆ, ಇದು ವ್ಯಾಪಕ ಶ್ರೇಣಿಯ ಕೃಷಿ-ಹವಾಮಾನ ಪರಿಸ್ಥಿತಿಗಳಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಇದು ಎಲ್ಲಾ ಧಾನ್ಯಗಳಿಗಿಂತ ದೊಡ್ಡ…
ಪಪ್ಪಾಯಿ (ಕಾರಿಕಾ ಪಪ್ಪಾಯಿ) ಒಂದು ಉಷ್ಣವಲಯದ ಹಣ್ಣಾಗಿದ್ದು, ಅಡುಗೆಮನೆಯ ತೋಟಗಳಲ್ಲಿ ಬೆಳೆಯಲು ಸೂಕ್ತವಾಗಿದೆ. ಪಪ್ಪಾಯಿಯು ವಿಟಮಿನ್ ಸಿ, ವಿಟಮಿನ್ ಎ, ಖನಿಜಗಳು ಮತ್ತು ಪೊಟ್ಯಾಸಿಯಮ್ನಂತಹ ಪೋಷಕಾಂಶಗಳ ಸಮೃದ್ಧ…
ಶುಂಠಿಯು ಹೆಚ್ಚು ಬೇಡಿಕೆಯಿರುವ ಮಸಾಲೆ ಬೆಳೆಯಾಗಿದ್ದು, 2022 ರಲ್ಲಿ ಭಾರತವು ಸುಮಾರು 2.12 ಮಿಲಿಯನ್ ಮೆಟ್ರಿಕ್ ಟನ್‌ಗಳನ್ನು ಉತ್ಪಾದಿಸುತ್ತದೆ ಎಂದು ನಿಮಗೆ ತಿಳಿದಿದೆಯೇ? ಆದಾಗ್ಯೂ, ಸಾಫ್ಟ್ ರೊಟ್…
ಹೆಚ್ಚಿನ ಪ್ರೊಟೀನ್ ಮತ್ತು ಎಣ್ಣೆಯ ಅಂಶದಿಂದಾಗಿ ಸೋಯಾಬೀನ್ ಅನ್ನು ಗೋಲ್ಡನ್ ಬೀನ್ ಅಥವಾ ಮಿರಾಕಲ್ ಕ್ರಾಪ್ ಎಂದೂ ಕರೆಯಲಾಗುತ್ತದೆ. ಸೋಯಾಬೀನ್ ಚೀನಾದಲ್ಲಿ ಹುಟ್ಟಿಕೊಂಡ ದ್ವಿದಳ ಧಾನ್ಯದ ವಿಧ.…