ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಿಸಾನ್ ಡ್ರೋನ್ ಯೋಜನೆಯು ಭಾರತದಾದ್ಯಂತ ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.ಡ್ರೋನ್ಗಳನ್ನು ಬಳಸಿಕೊಂಡು ಬೆಳೆಗೆ ಕೀಟನಾಶಕಗಳನ್ನು ಸಿಂಪಡಿಸುವಲ್ಲಿ ರೈತರಿಗೆ ಸಹಾಯ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ. ಇದು 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈಗಾಗಲೇ 100 ಕಿಸಾನ್ ಡ್ರೋನ್ಗಳನ್ನು ಪ್ರಾರಂಭ ಮಾಡಲಾಗಿದೆ ಮತ್ತು ದೇಶದಲ್ಲಿ ಡ್ರೋನ್ ಸ್ಟಾರ್ಟ್-ಅಪ್ಗಳನ್ನು ಉತ್ತೇಜಿಸುವ ಯೋಜನೆಯನ ಹಮ್ಮಿಕೊಂಡಿದೆ. ಈ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಲು ಸರ್ಕಾರ – ರೈತರಿಗೆ ನೆರವು ನೀಡುತ್ತದೆ.
ಕಿಸಾನ್ ಡ್ರೋನ್ ಯೋಜನೆ – ಇದರ ಬಗ್ಗೆ ಅವಲೋಕನ
- ಯೋಜನೆಯ ಹೆಸರು – ಕಿಸಾನ್ ಡ್ರೋನ್ ಯೋಜನೆ
- ಯೋಜನೆಯ ತಿದ್ದುಪಡಿ ದಿನಾಂಕ – ಜನವರಿ 2022 ರಂದು ನೀಡಲಾದ ಪರಿಷ್ಕೃತ ಮಾರ್ಗಸೂಚಿಗಳು
- ಯೋಜನೆಯ ಮೊತ್ತದ ಹಂಚಿಕೆ – ರೂ. 200 ಕೋಟಿ
- ಪ್ರಾಯೋಜಿತ ಸರ್ಕಾರ – ಕೇಂದ್ರ ಸರ್ಕಾರ
- ಸಹಾಯವಾಣಿ ಸಂಖ್ಯೆ – 011-23381092.
ಕಿಸಾನ್ ಡ್ರೋನ್ ಯೋಜನೆಯ ವೈಶಿಷ್ಟ್ಯಗಳು
ನ೦. |
ಕಿಸಾನ್ ಡ್ರೋನ್ ಯೋಜನೆ ಬಗ್ಗೆ ವಿವರಗಳು |
|
1. | ಡ್ರೋನ್ಗಳನ್ನು ತಯಾರಿಸುವವರು ಯಾರು? | ಗರುಡ ಏರೋಸ್ಪೇಸ್, ಚೆನ್ನೈ ಮೂಲದ ಸ್ವದೇಶಿ ಸ್ಟಾರ್ಟ್ಅಪ್. |
2. | ಡ್ರೋನ್ ಸಾಮರ್ಥ್ಯ ಎಷ್ಟು? | 10 ರಿಂದ 15 ಕೆಜಿ ಗು ಅಧಿಕ ಸಾಮರ್ಥ್ಯ. |
3. | ಸಿಂಪಡಿಸಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ? | ಒಂದು ಎಕರೆ ಜಮೀನಿನಲ್ಲಿ ಕೀಟನಾಶಕವನ್ನು ಸಿಂಪಡಿಸಲು 15 ನಿಮಿಷ ಬೇಕು. |
4. | ರೈತರ ಗುಂಪು ಅಥವಾ ಸಂಸ್ಥೆಗೆ ಸಬ್ಸಿಡಿ ಎಷ್ಟು ಸಿಗುತ್ತದೆ ? | ಒಟ್ಟಾರೆ ಬೆಲೆಯ 75% ವರೆಗೆ. |
5. | ರೈತರು ಅದನ್ನು ವೈಯಕ್ತಿಕ ಕಾರ್ಯಕಾಗಾಗಿ ಖರೀದಿಸಿದಾಗ ಎಷ್ಟು ವೆಚ್ಳವಾಗುತ್ತದೆ ? | ಅನುದಾನವು 40% ರಿಂದ 50% ವರೆಗೆ ಇರುತ್ತದೆ. |
6. | ಸಣ್ಣ, ಅತಿ ಸಣ್ಣ ರೈತರು ಮತ್ತು ಮಹಿಳೆಯರಿಗೆ ಅನುದಾನದ ಮೊತ್ತವೇನು? | ಸುಮಾರು ರೂ 50,000 ದಷ್ಟು. |
7. | ಡ್ರೋನ್ಗಳು ಪಡೆಯಲು ಎಲ್ಲಿ ಸಂಪರ್ಕಿಸಬೇಕು ? | ಕೃಷಿ ವಿಜ್ಞಾನ ಕೇಂದ್ರಗಳಲ್ಲಿ. |
ಕಿಸಾನ್ ಡ್ರೋನ್ ಯೋಜನೆಯ ಪ್ರಯೋಜನಗಳು ?
ಯೋಜನೆಯ ಪ್ರಯೋಜನಗಳೆಂದರೆ:
- ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವುದು, ಬೆಳೆ ಮೌಲ್ಯಮಾಪನ ಮಾಡುವುದು, ಪೋಷಕಾಂಶಗಳು ಮತ್ತು ಕೀಟನಾಶಕಗಳನ್ನು ಡ್ರೋನ್ ಗಳನ್ನ ಬಳಸಿ ಸಿಂಪಡಿಸಬಹುದು.
- ಕೃಷಿ ಕಾರ್ಯಗಳಿಗೆ ಉಪಯೋಗವಾಗಲು ಡ್ರೋನ್ಅನ್ನು ಖರೀದಿಸಲು ರೈತರಿಗೆ ಅನುದಾನ ಸಿಗಲಿದೆ.
- ಇದು ರೈತರಿಗೆ ಡ್ರೋನ್ ಬಳಸಿಕೊಂಡು ಸಸ್ಯ ರೋಗ ಹಾಗೂ ಕೀಟಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಅನುವು ಮಾಡಿಕೊಡುತ್ತದೆ. ಅದು ಅವರ ಶ್ರಮ ಮತ್ತು ಸಮಯವನ್ನು ಉಳಿಸುತ್ತದೆ, ಅವರು ಆ ಸಮಯವನ್ನು ತಮ್ಮ ಗಳಿಕೆಯನ್ನು ಹೆಚ್ಚಿಸಲು ಬೇರೆಡೆ ಬಳಸಬಹುದು.
- ಇದು 7 ರಿಂದ 10 ನಿಮಿಷಗಳಲ್ಲಿ ಒಂದು ಎಕರೆ ಭೂಮಿಯಲ್ಲಿ ಔಷಧಿಗಳು , ಯೂರಿಯಾ ಮತ್ತು ಕೀಟನಾಶಕಗಳನ್ನು ಸುಲಭವಾಗಿ ಸಿಂಪಡಿಸಲು, ರೈತರಿಗೆ ಸಹಾಯ ಮಾಡುತ್ತದೆ
ಕಿಸಾನ್ ಡ್ರೋನ್ ಯೋಜನೆಯ ಕೊರತೆಗಳೇನು ?
ಇಲ್ಲಿಯವರೆಗೆ, 2022 ರ ವೇಳೆಗೆ ರೈತರ ಆದಾಯವನ್ನು ಹೆಚ್ಚಿಸುವ ಆರಂಭಿಕ ಭರವಸೆಯ ಮೇಲೆ ಕಾರ್ಯನಿರ್ವಹಿಸಲು ಸರ್ಕಾರದಿಂದ ಯಾವುದೇ ಗಮನಾರ್ಹ ಪ್ರಯತ್ನಗಳಾಗಿಲ್ಲ. ರಸಗೊಬ್ಬರ ಮತ್ತು ಕೀಟನಾಶಕಗಳನ್ನು ಸಿಂಪಡಿಸುವುದರಿಂದ ಉತ್ಪಾದನೆಗೆ ಸಹಾಯವಾಗುತ್ತದೆ. ಆದರೆ , ಇದು ಹೆಚ್ಚಾಗಿ ಉದ್ಯಮಗಳಿಗೆ ಲಾಭವನ್ನು ನೀಡುತ್ತದೆ.
ಕಿಸಾನ್ ಡ್ರೋನ್ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?
ಈ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನವೆಂದರೆ :ಕೃಷಿಗಾಗಿ ಯಾವುದೇ ಆಧುನಿಕ ಯಂತ್ರಕ್ಕೆ ಅರ್ಜಿ ಸಲ್ಲಿಸುವುದು.
ಹಂತ 1 – https://agrimachinery.nic.in/Farmer/SHGGroups/Registration ಗೆ ಭೇಟಿ ನೀಡಿ.
ಹಂತ 2 – ನೋಂದಣಿ ವಿಭಾಗಕ್ಕೆ ತೆರಳಿ.
ಹಂತ 3 – ಮೂರು ಆಯ್ಕೆಗಳಲ್ಲಿ, ರೈತರನ್ನು ಆಯ್ಕೆಮಾಡಿ.
ಹಂತ 4 – ವಿವರಗಳನ್ನು ನಿಗಾ ವಹಿಸಿ ಭರ್ತಿ ಮಾಡಿ ಮತ್ತು ಸಲ್ಲಿಸಿ.
ಅಗತ್ಯವಿರುವ ದಾಖಲೆಗಳು ?
- ಆಧಾರ್ ಕಾರ್ಡ್
- ಭೂಮಿಯ ವಿವರಗಳನ್ನು ದಾಖಲಿಸಲು ಭೂಮಿಯ ಹಕ್ಕು (ROR)ಪತ್ರ .
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ಬ್ಯಾಂಕ್ ಪಾಸ್ ಪುಸ್ತಕದ ಮೊದಲ ಪುಟದ ಫೋಟೋ ಪ್ರತಿ
- ಯಾವುದೇ ಐಡಿ ಪುರಾವೆಯ ಪ್ರತಿ
- SC / ST / OBC ಜಾತಿ ವರ್ಗ ಪ್ರಮಾಣಪತ್ರದ ಪ್ರತಿ.
ಕಿಸಾನ್ ಡ್ರೋನ್ ಯೋಜನೆಯಲ್ಲಿ, ಡ್ರೋನ್ಗಳನ್ನು ಹಾರಿಸಲು ರೈತರಿಗೆ ತರಬೇತಿಯನ್ನು ನೀಡುತ್ತದೆ. ತರಬೇತಿ ಕಾರ್ಯಕ್ರಮಗಳನ್ನು ಕೃಷಿ ಕಾಲೇಜುಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ಈ ತರಬೇತಿಗೆ ರೈತರು ಯಾವುದೇ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಆದಾಗ್ಯೂ, ಮೊಬೈಲ್ ಟವರ್ಗಳು ಮತ್ತು ಹೈ-ಟೆನ್ಷನ್ ಲೈನ್ಗಳನ್ನು ಹೊಂದಿರುವ ಸ್ಥಳಗಳಲ್ಲಿ ಡ್ರೋನ್ಗಳನ್ನು ಅನುಮತಿಯೊಂದಿಗೆ ಬಳಸಬೇಕಾಗುತ್ತದೆ.