ಕೀಟಗಳನ್ನು ನಿಯಂತ್ರಿಸಲು ಸ್ಪ್ರೆಯೇರನ್ನು ಬಳಸಲಾಗುತ್ತದೆ. ಕೀಟನಾಶಕಗಳನ್ನು ನೀರಿನಲ್ಲಿ ಬೆರೆಸಿ ನಂತರ ಸೋಂಕಿತ ಪ್ರದೇಶಗಳಿಗೆ ಸಿಂಪಡಿಸಲಾಗುತ್ತದೆ. ಉತ್ಪಾದನೆಯನ್ನು ಕಡಿಮೆ ಮಾಡುವ, ಅಪಾಯಕಾರಿ ಕೀಟಗಳನ್ನು ಕೊಲ್ಲಲು ಬಳಸಲಾಗುತ್ತದೆ. ಬೆಳೆ ಬೆಳವಣಿಗೆಯ ಸಮಯದಲ್ಲಿ ಸಸ್ಯಗಳಿಗೆ ರಸಗೊಬ್ಬರಗಳು ಮತ್ತು ಕೀಟನಾಶಕಗಳಂತಹ ದ್ರವಗಳನ್ನು ಸಿಂಪಡಿಸಲು ಇದನ್ನು ಬಳಸಲಾಗುತ್ತದೆ.
ಈ ಸ್ಪ್ರೇಯರ್, ಬಳಕೆದಾರರ ಆದ್ಯತೆಗಳ ಪ್ರಕಾರ ಒತ್ತಡ (ಪ್ರೆಜರ್)ವನ್ನು ನಿಯಂತ್ರಿಸಲು ರೇಗುಲೇಟರ್ ಅನ್ನು ಹೊಂದಿದೆ. ನೆಪ್ಚೂನ್ ನ್ಯಾಪ್ಸಾಕ್ ಸ್ಪ್ರೇಯರ್ ಅನ್ನು ಅಧಿಕ ಸಾಮರ್ಥ್ಯದ ಪಾಲಿಥಿಲೀನ್ ಪ್ಲಾಸ್ಟಿಕ್ನಿಂದ ತಯಾರಿಸಲಾಗಿದೆ, ಇದು ತುಕ್ಕು ನಿರೋಧಕವಾಗಿದೆ. ಈ ಸ್ಪ್ರೇ ಪಂಪ್ ,ಹ್ಯಾಂಡಲ್ ಅನ್ನು ಹೊಂದಿದ್ದು, ಇದನ್ನು ಬಳೆಕೆದಾರರ ಸೌಕರ್ಯಕ್ಕಾಗಿ ವಿನ್ಯಾಸಗೊಳಿಸಲಾಗಿದೆ.
ನೆಪ್ಚೂನ್ ಬಿ ಎಸ್ 13+ (ಪ್ಲಸ್) ಡಬಲ್ ಮೋಟರ್ ಬ್ಯಾಟರಿ ಚಾಲಿತ ಸ್ಪ್ರೇಯರ್ ನ ವಿಶೇಷತೆಗಳು :
- ಬಳಕೆದಾರರ ಕೈಪಿಡಿ – ಇದರಲ್ಲಿ ನಾವು ಸ್ಪ್ರೇಯರ್ ಯನ್ನು ಹೇಗೆ ಬಳಸಬೇಕು ಹಾಗೂ ಸ್ಪ್ರೇಯರ್ ನ ವಿವಿಧ ಭಾಗಗಳ ಬಗ್ಗೆ ಎಲ್ಲಾ ವಿವರಗಳನ್ನುಓದಿ ತಿಳಿಯಬಹುದು.
- ಈ ಸ್ಪ್ರೇಯರ್ 20 ಲೀಟರ್ ಸಾಮರ್ಥ್ಯವನ್ನು ಹೊಂದಿದೆ.
- ಈ ಸ್ಪ್ರೇಯರ್ ಡಬಲ್ ಮೋಟರ್ ಬ್ಯಾಟರಿಯನ್ನು ಹೊಂದಿದೆ .
- ಈ ಸ್ಪ್ರೇಯರ್ ಪವರ್ ಸಾಕೆಟ್ ಅಥವಾ ಚಾರ್ಜಿಂಗ್ ಸಾಕೆಟ್ ಹೊಂದಿದೆ .
- ಪ್ರೆಜರ್ ರೇಗುಲೇಟರ್– ಇದು ಹೊರಹೋಗುವ ಸ್ಪ್ರೇ ಪರಿಮಾಣವನ್ನು ನಿಯಂತ್ರಿಸುತ್ತದೆ.
- ಫಿಲ್ಟರ್– ಸ್ಪ್ರೇ ನೀರಿನಿಂದ ದೂಳು ಮತ್ತು ಜಲ್ಲಿಕಲ್ಲುಗಳನ್ನು ಫಿಲ್ಟರ್ ಮಾಡುತ್ತದೆ.
- ಸ್ಪ್ರೇ ಲ್ಯಾನ್ಸ್ ಪೈಪ್ – ಎಕ್ಸ್ಟ್ರಾ ಲ್ಯಾನ್ಸ್ ಹೊಂದಿರುತ್ತದೆ, ವಿಶೇಷವಾಗಿ ಪವರ್ ಸ್ಪ್ರೇ ಗೆ ಬಳಸಲಾಗುತ್ತದೆ .
- ಹೊಸ್ ಪೈಪ್ ಅಥವಾ ಔಟ್ಲೆಟ್ ಪೈಪ್ ಅನ್ನು ಹೊಂದಿದೆ.
- ಟ್ರಿಗರ್– ಇವೆಲ್ಲಾ ವಿವಿಧ ರೀತಿಯ ನಳಿಕೆಗಳು ಅಥವಾ ನಾಝಲ್ಸ್ ಅಂತ ಹೇಳಬಹುದು.
- ಸ್ಪ್ರೇಯರ್ ಅನ್ನು ಚಾರ್ಜ್ ಮಾಡಲು ಚಾರ್ಜರ್ ಇರುತ್ತದೆ
- ಈ ಎಲ್ಲಾ ಭಾಗಗಳು ಅಥವಾ ಪಾರ್ಟ್ಸ್ , ಸ್ಪ್ರೇಯರ್ ಜೊತೆಗೆ ಲಭ್ಯವಿರುತ್ತದೆ.
ಸ್ಪ್ರೇಯರ್ ಅನ್ನು ಜೋಡಿಸೋಣ ಬನ್ನಿ :
- ಈ ಹೊಸ್ ಪೈಪ್ ಅನ್ನು ಸ್ಪ್ರೇಯರ್ ನ ಔಟ್ಲೆಟ್ಗೆ ಕನೆಕ್ಟ್ ಮಾಡಬೇಕು.
- ಹೊಸ್ ಪೈಪ್ ನ ಮತ್ತೊಂದು ತುದಿಯನ್ನು ಟ್ರಿಗರ್ ಗೆ ಕನೆಕ್ಟ್ ಮಾಡಬೇಕು.
- ಟ್ರಿಗರ್ ಸಹ ಆನ್/ಆಫ್ ಸ್ವಿಚ್ ಹೊಂದಿರುತ್ತದೆ, ಅದನ್ನು ಬಳಸುವುದು ಸಹ ಸುಲಭ.
- ಟ್ರಿಗರ್ ನ ಮತ್ತೊಂದು ತುದಿಯನ್ನು ಸ್ಪ್ರೇ ಲ್ಯಾನ್ಸ್ ಪೈಪ್ ಗೆ ಕನೆಕ್ಟ್ ಮಾಡಬೇಕು.
- ನಂತರ ಲ್ಯಾನ್ಸ್ ಅನ್ನು ನಾಝಲ್ ಗೆ ಕನೆಕ್ಟ್ ಮಾಡಬೇಕು.
- ನಾಝಲ್ ಗಳಲ್ಲಿ ಮತ್ತೆ ಹಲವು ವಿಧಗಳಿವೆ. ಅವಶ್ಯಕತೆಗೆ ಅನುಗುಣವಾಗಿ ಬಳಸಬಹುದು.
- ಸಾಮಾನ್ಯವಾಗಿ ಬಳಸವುದು ಎಂದರೆ ಫ್ಲವರ್ ಸ್ಪ್ರೇ ನಾಝಲ್.
- ಕೆಲವು ಇತರ ರೀತಿಯ ನಾಝಲ್ ಗಳು ಇವೆ , ಅವುಗಳನ್ನು ಅವಶ್ಯಕತೆಗಳಿಗೆ ಅನುಗುಣವಾಗಿ ಬಳಸಬಹುದು.
ನಿರ್ಣಯ:
ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗೆ ನೀಡಲಾದ ಲಿಂಕ್ ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ.