HomeCropಕೋಸು ಬೆಳೆಗಳಲ್ಲಿ ಡೈಮಂಡ್ ಬ್ಯಾಕ್ ಪತಂಗದ ನಿರ್ವಹಣೆ

ಕೋಸು ಬೆಳೆಗಳಲ್ಲಿ ಡೈಮಂಡ್ ಬ್ಯಾಕ್ ಪತಂಗದ ನಿರ್ವಹಣೆ

 

ವಜ್ರ ಬೆನ್ನಿನ ಪತಂಗವನ್ನು ಕೆಲವೊಮ್ಮೆ ಎಲೆಕೋಸು ಪತಂಗ ಎಂದು ಕರೆಯಲಾಗುತ್ತದೆ, ಇದು ಚಿಟ್ಟೆಯಾಗಿದ್ದು,  ಚಿಕ್ಕದಾದ, ಬೂದು-ಕಂದು ಬಣ್ಣದ ಪತಂಗವು ಹಾಗೂ ಕೆಲವೊಮ್ಮೆ ತಿಳಿ ಬಿಳೀ ಬಣ್ಣದ ಗೆರೆಗಳನ್ನು ಹಾಗೂ  ವಜ್ರದ ಗುರುತನ್ನು   ಬೆನ್ನಿನ ಮೇಲೆ  ಹೊಂದಿರುತ್ತದೆ, ಆದ್ದರಿಂದ ಇದಕ್ಕೆ ವಜ್ರ ಬೆನ್ನಿನ ಪತಂಗ ಎಂದು ಕರೆಯಲಾಗುತ್ತದೆ. ಈ ಕೀಟವು ಹೆಚ್ಚಾಗಿ ಕೋಸು ಬೆಳೆಗಳನ್ನು ದಾಳಿ ಮಾಡುತ್ತವೆ ಹಾಗೂ ಇಳುವರಿಯನ್ನು ಕಡಿಮೆ ಮಾಡುತ್ತವೆ. 

ಕೋಸು ಬೆಳೆಗಳಲ್ಲಿ ವಜ್ರ ಬೆನ್ನಿನ ಹುಳುವಿನ ಲಕ್ಷಣಗಳು 

  • ವಜ್ರ ಬೆನ್ನಿನ ಹುಳುಗಳು  [DBM] ಎಲೆಗಳನ್ನು ತಿನ್ನುವ ಮಾದರಿಯನ್ನು ವಿಂಡೋಯಿಂಗ್ ಎಂದೂ ಕರೆಯಲಾಗುತ್ತದೆ, ಏಕೆಂದರೆ DBM ಹುಳುಗಳು  ಎಲೆಗಳನ್ನು ತಿಂದು, ಮೇಲಿನ ಪದರವನ್ನು ಅರೆಪಾರದರ್ಶಕವಾಗಿ ಮಾಡಿಬಿಡುತ್ತದೆ.   
  • DBM ಆಕ್ರಮಿತ ಸಸಿ ಭಾಗಗಳ ಮೇಲೆ  ಹುಳು-ತಿಂದು ಬಿಟ್ಟ ರಂಧ್ರಗಳು ಮತ್ತು ಅರೆಪಾರದರ್ಶಕ ಮಚ್ಚೆಗಳನ್ನು ಕಾಣಬಹುದು 
  • ಹೊಸದಾಗಿ ಮೊಟ್ಟೆಯೊಡೆದ ಮರಿಹುಳುಗಳು ಎಲೆಗಳನ್ನು ತಿಂದು, ಎಲೆಯ ಪದರದೊಳಗೆ ಒಳಗೆ ಇರುತ್ತವೆ ಮತ್ತು ವಯಸ್ಕ ಹುಳುಗಳು ಸಸಿಯ ಎಲ್ಲಾ ಭಾಗಗಳನ್ನು ತಿನ್ನುತ್ತವೆ. 
  • ಹುಳುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾಗ, ನಿರಂತರವಾಗಿ ಎಲೆಗಳನ್ನು ತಿಂದು ಎಲೆಯ ನಾಳಗಳನ್ನು ಮಾತ್ರ ಬಿಡುತ್ತವೆ 
  • ನಿಯಂತ್ರಿಸಲಾಗದ ಸಂದರ್ಭಗಳಲ್ಲಿ DBM ಹುಳುಗಳು ಎಲೆಕೋಸು ಅಥವಾ ಹೂಕೋಸು ಒಳಗೆ ಸಹ ದಾಳಿ ಮಾಡುತ್ತವೆ ಮತ್ತು ಹೂವನ್ನು ಸೇವಿಸಲು, ಮಾರಾಟ ಮಾಡಲು  ಅನರ್ಹಗೊಳಿಸುತ್ತದೆ. 

ಕೋಸು ಬೆಳೆಗಳಲ್ಲಿ ವಜ್ರ ಬೆನ್ನಿನ ಹುಳುವಿನ  ನಿಯಂತ್ರಣ ಕ್ರಮಗಳು 

  •  DBM ನ  ಮೊಟ್ಟೆಗಳ ಅಥವಾ ಹುಳುಗಳ ಆಕ್ರಮಣವಿಲ್ಲದ ವಾತಾವರಣದಲ್ಲಿ ಸಸಿಗಳನ್ನು ಬೆಳೆಸಬೇಕು 
  • ಕಳೆ ಮುಕ್ತ ಭೂಮಿಯಲ್ಲಿ ಬಿತ್ತನೆ ಮಾಡಿ ಮತ್ತು ಕಳೆ ಮುಕ್ತ ಬೆಳೆಯನ್ನು ಕಾಪಾಡಿಕೊಳ್ಳಿ
  • ಬೆಳೆ ಸರದಿ ಅನುಸರಿಸಿದ್ದಲ್ಲಿ ಸಹ DBM ನ ಆಕ್ರಮಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. 
  • DBM ಅನ್ನು ತಡೆಯಲು ಅಂತರ ಬೆಳೆ ಮತ್ತು ಬಲೆ ಬೆಳೆಯನ್ನು ಅನುಸರಿಸಬಹುದು.ಕೋಸು ಬೆಳೆಗಳ ಜೊತೆ ಮೆಣಸಿನಕಾಯಿ ಸಸಿಗಳನ್ನು ಬೆಳೆದಿದ್ದಲ್ಲಿ DBM ಅನ್ನು ತಡೆಯಬಹುದು. ಟ್ರ್ಯಾಪ್ ಬೆಳೆಗಳಾದ ಸಾಸಿವೆ ಮತ್ತು ರೇಪ್ ಸೀಡ್ ಬೆಳೆಗಳು ಸಹ DBM ನ ದಾಳಿಯನ್ನು ತಡೆಯುತ್ತವೆ. 

 ವಜ್ರ ಬೆನ್ನಿನ ಹುಳುಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು  ರಾಸಾಯನಿಕಗಳು 

ಕೀಫನ್ ಕೀಟನಾಶಕ – 

  •  ಟೋಲ್ಫೆನ್‌ಪಿರಾಡ್ 15% ಇಸಿ  ಅನ್ನು ಹೊಂದಿರುತ್ತದೆ 
  • ಎಲ್ಲಾ ತರಹದ ರಸ  ಹೀರುವ ಕೀಟಗಳು ಮತ್ತು ಜಗಿಯುವ ಕೀಟಗಳ ವಿರುದ್ಧ ಹೆಚ್ಚು ಪರಿಣಾಮಕಾರಿ. 
  • ಇತರೆ ಕೀಟನಾಶಕಗಳಿಗೆ ನಿರೋಧಕತೆ ತೋರುವ ಕೀಟಗಳ ವಿರುದ್ಧ ಸಹ  ಪರಿಣಾಮಕಾರಿ 
  • ಬಳಕೆಯ ಪ್ರಮಾಣ – 1.5 – 2 ಮಿಲಿ / ಲೀಟರ್ ನೀರು. ​

ಸಿಗ್ನಾ ಕೀಟನಾಶಕ – 

  • ಲುಫೆನ್ಯೂರಾನ್ 5.4 % ಇಸಿ  ಅನ್ನು ಹೊಂದಿರುತ್ತದೆ 
  • ಕೈಟಿನ್ ಸಂಶ್ಲೇಷಣೆಯನ್ನು ತಡೆಯುವಲ್ಲಿ ಸಕ್ರಿಯ ಪಾತ್ರವನ್ನು ವಹಿಸುತ್ತದೆ 
  • ಬಳಕೆಯ ಪ್ರಮಾಣ : ಪ್ರತಿ ಲೀಟರ್ ನೀರಿಗೆ 1.5 ರಿಂದ 2 ಮಿಲಿ ​

ಇಂಟರ್ ಪ್ರಿಡ್ ಕೀಟನಾಶಕ – 

  • ಕ್ಲೋರ್‌ಫೆನಾಪಿರ್ 10% ಎಸ್‌ಸಿ  ಅನ್ನು ಹೊಂದಿದೆ 
  • ವಜ್ರ ಬೆನ್ನಿನ ಹುಳುಗಳು ಮತ್ತು ಮೈಟ್ ನುಸಿಗಳಂತಹ ಕೀಟ ನಿಯಂತ್ರಣ ಮಾಡುತ್ತದೆ. 
  • ಇದು ಎಲೆಗಳ ಕೆಳಭಾಗದಲ್ಲಿ ಅಡಗಿರುವ ಕೀಟಗಳನ್ನು ಸಹ ನಿಯಂತ್ರಿಸುತ್ತದೆ. 
  • ಬಳಕೆಯ ಪ್ರಮಾಣ  – 1.5 ಮಿಲಿ/ಲೀಟರ್ ನೀರು ​

ನಿರ್ಣಯ: 

ಈ ಮಾಹಿತಿಯು ನಿಮಗೆ ಉಪಯುಕ್ತವಾಗಿದೆ ಎಂದು ಭಾವಿಸುತ್ತೇವೆ, ಮತ್ತಷ್ಟು ಮಾಹಿತಿ ತಿಳಿಯಲು ನಮ್ಮ ಟೋಲ್ ಫ್ರೀ ನಂಬರ್ 180030002434 ಗೆ ಕರೆ ಮಾಡಿ. ನೀವು ಈ ಉತ್ಪನ್ನಗಳಲ್ಲಿ ಯಾವುದನ್ನಾದರೂ ಖರೀದಿಸಲು ಬಯಸಿದರೆ ಕೆಳಗ್ಗ್ ನೀಡಲಾದ ಲಿಂಕ್ಗಳನ್ನು ಕ್ಲಿಕ್ ಮಾಡಿ ಅಥವಾ ನಮ್ಮ ಬಿಗ್ ಹಾಟ್ ಯಾಪ್ ಅನ್ನು ಅನ್ವೇಷಿಸಿ. 

spot_img

Read More

Stay in Touch

Subscribe to receive latest updates from us.

Related Articles