ಅಗ್ರಿ ಕ್ಲಿನಿಕ್ಸ್ ಮತ್ತು ಕೃಷಿ-ವ್ಯಾಪಾರ ಕೇಂದ್ರಗಳ ಯೋಜನೆ
ಭಾರತ ಸರ್ಕಾರವು ಕೃಷಿ-ಕ್ಲಿನಿಕ್ ಮತ್ತು ಕೃಷಿ-ವ್ಯಾಪಾರ ಕೇಂದ್ರಗಳ ಯೋಜನೆಯನ್ನು ಏಪ್ರಿಲ್ 2002 ರಲ್ಲಿ ಪರಿಚಯಿಸಿತು, ಈ ಯೋಜನೆಯು ತರಬೇತಿ ಮತ್ತು ಸಹಾಯಧನದ ಮೇಲೆ ಕೇಂದ್ರೀಕರಿಸುತ್ತದೆ. ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಗ್ರಿಕಲ್ಚರಲ್ ಎಕ್ಸ್ಟೆನ್ಶನ್ ಮ್ಯಾನೇಜ್ಮೆಂಟ್, ಕೃಷಿ ಪದವೀಧರರಿಗೆ ಕೃಷಿ ಸಂಬಂಧಿತ ಚಟುವಟಿಕೆಗಳ ಬಗ್ಗೆ ತರಬೇತಿಯನ್ನು ನೀಡಿ ಕೃಷಿ ಸಂಬಂದಿತ ವ್ಯಾಪಾರ ಘಟಕಗಳನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಕೃಷಿ-ಉದ್ಯಮಗಳನ್ನು ಸ್ಥಾಪಿಸಲು ಸಾಲದ ಸೌಲಭ್ಯದ ಜೊತೆಗೆ ಕೆಲವು ಅಂಶಗಳನ್ನು ಪರಿಗಣಿಸಿ ಸಬ್ಸಿಡಿ/ಸಹಾಯಧನವನ್ನು ನೀಡಲಾಗುತ್ತದೆ.
ಅಥವಾ
ಹಲವಾರು ಅಂಶಗಳನ್ನು ಪರಿಗಣಿಸಿ , ತರಬೇತಿ ಪಡೆದ ಅರ್ಜಿದಾರರಿಗೆ ಕೃಷಿ ಉದ್ಯಮಗಳನ್ನು ಪ್ರಾರಂಭಿಸಲು ಹಣಕಾಸಿನ ಸಹಾಯವನ್ನು ನೀಡಲಾಗುತ್ತದೆ.
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ (STRY)
ಗ್ರಾಮೀಣ ಯುವಕರಿಗೆ ಕೌಶಲ್ಯ ತರಬೇತಿ (STRY) ಯೋಜನೆಯ ಉದ್ದೇಶವೇನೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಉದ್ಯೋಗವನ್ನು ಹೆಚ್ಚಿಸಲು, ಕೃಷಿ ಮತ್ತು ಕೃಷಿಯೇತರ ಕಾರ್ಯಗಳಿಗೆ ಕೌಶಲ್ಯಪೂರ್ಣ ಕಾರ್ಮಿಕರ ಪಡೆಯನ್ನು ಅಭಿವೃದ್ಧಿಪಡಿಸಲು , ಗ್ರಾಮೀಣ ಯುವಕರಿಗೆ ಕೃಷಿ ಹಾಗು ಕೃಷಿಗೆ ಸಂಬಂಧಿತ ಇತರೆ ಕೌಶಲ್ಯ ತರಬೇತಿಯನ್ನು ನೀಡುವುದು. ಗ್ರಾಮೀಣಯುವಕರಿಗೆ ತರಬೇತಿಯನ್ನು ರಾಜ್ಯ / ಜಿಲ್ಲಾ ಮಟ್ಟದಲ್ಲಿ ಗುರುತಿಸಲಾದ ಯಾವುದೇ ತರಬೇತಿ ಸಂಸ್ಥೆಗಳ ಮೂಲಕ ನೀಡಲಾಗುತ್ತದೆ.
ಕೃಷಿ ಯಾಂತ್ರೀಕರಣದ ಉಪ ಮಿಷನ್ (SMAM)
ಈ ಯೋಜನೆಯಡಿಯಲ್ಲಿ, ಭಾರತ ಸರ್ಕಾರವು ವಿವಿಧ ರಾಜ್ಯಗಳಿಗೆ ಕೃಷಿ ಯಾಂತ್ರೀಕರಣಕ್ಕಾಗಿ ಅಂದರೆ ಕೃಷಿ ಯಂತ್ರ ಧಾರೆ ಕೇಂದ್ರಗಳ ಸ್ಥಾಪನೆಗೆ, ಕೃಷಿ ಯಂತ್ರೋಪಕರಣಗಳ ಬ್ಯಾಂಕ್ ಸ್ಥಾಪಿಸಲು ಮತ್ತು ಅತ್ಯುತ್ತಮ ತಂತ್ರಜ್ಞಾನದ ಕೇಂದ್ರಗಳನ್ನು ಸ್ಥಾಪಿಸಲು ಹಣ ಬಿಡುಗಡೆ ಮಾಡುತ್ತದೆ. ಇದು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಕೃಷಿ ಆರ್ಥಿಕತೆಯ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ – ಕೃಷಿ ಮತ್ತು ಸಂಬಂಧಿತ ವಲಯಗಳ ಪುನರುಜ್ಜೀವನಕ್ಕಾಗಿ ಸಂಭಾವನೆಯ ವಿಧಾನಗಳು (RKVY-RAFTAAR)
ಈ ಯೋಜನೆಯು ದೇಶದಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಲ್ಲಿ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಕೃಷಿ ಉದ್ಯಾಮಶೀಲತೆ ಮತ್ತು ಕೃಷಿ ವ್ಯಾವಹಾರಿಕ ವ್ಯವಸ್ಥೆಯನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ ಹಾಗು ಸಂಭಾವ್ಯ ಕೃಷಿಸ್ಟಾರ್ಟಪ್ಗಳಿಗೆ ಹಣಕಾಸಿನ ನೆರವು ಮತ್ತು ಉದ್ಯಮದ ಅಭಿರುದ್ದಿಗೆ ಸಹಕರಿಸುವುದು
ಪ್ರಮಾಣೀಕೃತ ಕೃಷಿ ಸಲಹೆಗಾರ/ಪ್ರಮಾಣೀಕೃತ ಜಾನುವಾರು ಸಲಹೆಗಾರರ ಕಾರ್ಯಕ್ರಮ
ಕೃಷಿ ವಿಸ್ತರಣಾ ಸಿಬ್ಬಂದಿಯನ್ನು ಬೆಳೆ/ಜಾನುವಾರು ತಜ್ಞರಾಗಿ ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ. ಇದು ಮೂಲಭೂತ ವಿಷಯಗಳೊಂದಿಗೆ ಬೆಳೆ/ಜಾನುವಾರುಗಳಲ್ಲಿ ಹೊಸ ತಂತ್ರಜ್ಞಾನವನ್ನು ಒಳಗೊಂಡಿದೆ ಮತ್ತು 3 ತಿಂಗಳ MANAGE ಆನ್ಲೈನ್ ತರಬೇತಿ ಕಾರ್ಯಕ್ರಮವನ್ನು ನಡೆಸುತ್ತದೆ.
ರೈತರು ಮತ್ತು ಮಹಿಳೆಯರಿಗಾಗಿ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು
ಈ ಯೋಜನೆಯು ಭಾರತದಾದ್ಯಂತ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇರುವ ಯುವಕರಿಗೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಕಾರ್ಯಕ್ರಮದ ಮೂಲಕ ಉದ್ಯೋಗ ಕೌಶಲ್ಯಗಳನ್ನು ಒದಗಿಸುವ ಯೋಜನೆಯಾಗಿದೆ
ಈ ಯೋಜನೆಯು ಶಾಲೆಯಿಂದ ಹೊರಗುಳಿದವರಿಗೆ ಮತ್ತು ನಿರುದ್ಯೋಗಿ ಯುವಕರಿಗೆ ನಾವೀನ್ಯ ರೀತಿಯ ಕೌಶಲ್ಯವನ್ನು ಒದಗಿಸುತ್ತದೆ, ಮತ್ತು ಕಡಿಮೆ ಪ್ರಾತಿನಿಧ್ಯತೆ ಹೊಂದಿರುವ ಗುಂಪುಗಳಿಗೆ ಕೌಶಲ್ಯ ಅಗತ್ಯಗಳನ್ನು ನೀಡುವ ವಿಶೇಷ ಯೋಜನೆಗಳನ್ನು ಒಳಗೊಂಡಿದೆ.
ಪ್ರಾಜೆಕ್ಟ್ ಆರ್ಯ (ಕೃಷಿಯಲ್ಲಿ ಯುವಕರನ್ನು ಆಕರ್ಷಿಸುವುದು ಮತ್ತು ಉಳಿಸಿಕೊಳ್ಳುವುದು)
ಪ್ರಾಜೆಕ್ಟ್ ARYA ಗುರಿಯು ಗ್ರಾಮೀಣ ಯುವಕರನ್ನು ವಿವಿಧ ಕೃಷಿ ಮತ್ತು ಸಂಬಂಧಿತ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಮತ್ತು ಸಬಲೀಕರಣಗೊಳಿಸುವುದು. ಯೋಜನೆಯ ಗುರಿಗಳೇನೆಂದರೆ ಉದ್ಯೋಗಗಳನ್ನು ಸೃಷ್ಟಿಸುವುದು, ಸ್ಥಿರ ಆದಾಯವನ್ನು ಖಾತರಿಪಡಿಸುವುದು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಸಂಬಂಧಿತ ಕೈಗಾರಿಕೆಗಳನ್ನು ಮುನ್ನಡೆಸುವುದು.