HomeNewsImportant Eventsಡೈರಿ ಉತ್ಪನ್ನಗಳು, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಯಂತ್ರೋಪಕರಣಗಳ ಪ್ರದರ್ಶನ - ಅಂತರರಾಷ್ಟ್ರೀಯ ಡೈರಿ ಎಕ್ಸ್‌ಪೋ...

ಡೈರಿ ಉತ್ಪನ್ನಗಳು, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಯಂತ್ರೋಪಕರಣಗಳ ಪ್ರದರ್ಶನ – ಅಂತರರಾಷ್ಟ್ರೀಯ ಡೈರಿ ಎಕ್ಸ್‌ಪೋ 2023

ಅಂತರರಾಷ್ಟ್ರೀಯ ಡೈರಿ ಎಕ್ಸ್‌ಪೋ 2023 – ಡೈರಿ ಉತ್ಪನ್ನಗಳು, ಸೇವೆಗಳು, ಯಂತ್ರೋಪಕರಣಗಳು, ಸಲಕರಣೆಗಳು, ತಂತ್ರಜ್ಞಾನ ,ಸಂಸ್ಕರಣೆ  ಮತ್ತು ಡೈರಿ ವಲಯದ ಪಾಲುದಾರರ ೮[೮ ಪರಸ್ಪರ ಪ್ರಯೋಜನಕ್ಕಾಗಿ ಒಂದೇ ಸೂರಿನಡಿ ಮಾಹಿತಿ ನೀಡುವ 3 ದಿನಗಳ ಅಂತರರಾಷ್ಟ್ರೀಯ ಡೈರಿ ಪ್ರದರ್ಶನವಾಗಿದೆ. ಡೈರಿ ಎಕ್ಸ್‌ಪೋ 2023 ರ 2 ನೇ ಆವೃತ್ತಿಯನ್ನು ಮೀಡಿಯಾ ಡೇ  ಮಾರ್ಕೆಟಿಂಗ್ ಸಹಯೋಗದೊಂದಿಗೆ ಯೋಜಿಸುತ್ತಿದ್ದು, ಇದರಲ್ಲಿ  ಡೈರಿ ಉತ್ಪನ್ನಗಳು, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್, ಶೀತಲೀಕರಣ, ಯಂತ್ರೋಪಕರಣ ಮತ್ತು ಸಂಬಂಧಿತ ಉದ್ಯಮಗಳ  ಅಂತರರಾಷ್ಟ್ರೀಯ ಪ್ರದರ್ಶನವಾಗಿದೆ. 

ಎಕ್ಸ್‌ಪೋ ನ ಅವಲೋಕನ : 

  1. ಕಾರ್ಯಕ್ರಮದ  ಹೆಸರು: ಡೈರಿ ಅಂತರರಾಷ್ಟ್ರೀಯ ಎಕ್ಸ್‌ಪೋ 2023
  2. ಪ್ರಾರಂಭ ದಿನಾಂಕ:   ಫೆಬ್ರವರಿ  03 – 05, 2023
  3. ಕಾರ್ಯಕ್ರಮದ   ಅವಧಿ:  ಫೆಬ್ರವರಿ  03 – 05, 2023 (3 ದಿನಗಳು)
  4. ಕಾರ್ಯಕ್ರಮದ ವಿಳಾಸ: ಹೈಟೆಕ್ಸ್ ಎಕ್ಸಿಬಿಷನ್ ಸೆಂಟರ್ – ಹೈಟೆಕ್ಸ್ ಇಂಟರ್ನ್ಯಾಷನಲ್ ಕನ್ವೆನ್ಷನ್ ಮತ್ತು ಎಕ್ಸಿಬಿಷನ್ ಸೆಂಟರ್, ಹೈದರಾಬಾದ್, ತೆಲಂಗಾಣ 500060 ಭಾರತ. 
  5. ಪ್ರಾಯೋಜಕರು : ಮೀಡಿಯಾ ಡೇ ಮಾರ್ಕೆಟಿಂಗ್
  6. ವೆಬ್‌ಸೈಟ್: https://dairyexpo.in/

ಎಕ್ಸ್‌ಪೋ ನಲ್ಲಿ ಪಡೆಯಬಹುದಾದ ವಿವರಗಳು : 

  • ಡೈರಿ ಉದ್ಯಮದಲ್ಲಿರುವ ಪಾಲುದಾರರ ಸಂಪೂರ್ಣ ಮಾಹಿತಿಯನ್ನು ಒಂದೇ ಸೂರಿನಡಿ ಪಡೆಯಬಹುದು.  
  • ಇದು ಉದ್ಯಮದ ಪಾಲುದಾರರಿಗೆ ಪರಸ್ಪರ ಮಾತುಕತೆ  ಮತ್ತು ಬೆಳವಣಿಗೆಗೆ ನ್ಯಾಯಯುತ ಅವಕಾಶವನ್ನು ನೀಡುತ್ತದೆ.  
  • ಇತ್ತೀಚಿನ ತಂತ್ರಜ್ಞಾನಗಳು, ಹೊಸ ಉದ್ಯಮಿಗಳು, ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಯಂತ್ರೋಪಕರಣಗಳ ಪೂರೈಕೆಯ ನಿರ್ವಹಣೆ ಮತ್ತು ಡೈರಿ ಸಂಬಂಧಿತ ಉದ್ಯಮಗಳನ್ನು ಪ್ರದರ್ಶಿಸಲಾಗುತ್ತದೆ.
  • ಎಲ್ಲಾ ಇತ್ತೀಚಿನ ಡೈರಿ ಉದ್ಯಮಗಳಿಗೆ ಒಂದೇ ಸ್ಥಳದಲ್ಲಿ ಪರಿಹಾರ ನೀಡಲಾಗುತ್ತದೆ.   
  • ಪ್ರಮುಖ ಮಾರಾಟಗಾರರಿಂದ ಹೊಸ ಉತ್ಪನ್ನಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ಪಡೆಯಬಹುದು. 
  • ವ್ಯಾಪಾರದ ಅಗತ್ಯಗಳಿಗೆ ಯಾವ ಮಾಹಿತಿ  ಸೂಕ್ತವೆಂದು ಹೋಲಿಸಿ, ನಿರ್ಧರಿಸಬಹುದು. 
  • ಇತ್ತೀಚಿನ ಟ್ರೆಂಡ್‌ಗಳ ಕುರಿತು ತಿಳಿಯಬಹುದು . 
  • ನಿಮ್ಮ ವ್ಯಾಪಾರಕ್ಕಾಗಿ ಸರಿಯಾದ ಪಾಲುದಾರರೊಂದಿಗೆ ಸಂಪರ್ಕ ಪಡೆಕೊಳ್ಳಬಹುದು.  
  • ಖರೀದಿ ನಿರ್ಧಾರಗಳನ್ನು ಮಾಡಲು ಸಹಾಯ ಮಾಡುತ್ತದೆ. 

ಎಕ್ಸ್‌ಪೋ ನ ಮುಖ್ಯ ಉದ್ದೇಶಗಳು :

  • ಉತ್ತಮ ಗುಣಮಟ್ಟದ ಜಾನುವಾರುಗಳನ್ನು ಸಾಕಲು ರೈತರನ್ನು ಪ್ರೇರೇಪಿಸುವುದು. 
  • ಹೈನುಗಾರಿಕೆಯ  ನೂತನ ಯಂತ್ರೋಪಕರಣಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಬಹುದು. 
  • ಅಂತರರಾಷ್ಟ್ರೀಯ ಡೈರಿ ಪ್ರದರ್ಶನದಲ್ಲಿ  ಪ್ರತಿ ವರ್ಷ  ಬಹುರಾಷ್ಟ್ರೀಯ ಕಂಪನಿಗಳು ಮತ್ತು ರೈತರನ್ನು ಒಂದೇ ಸೂರಿನಡಿ ಸೇರಿಸಿ ಮಾಹಿತಿ ವಿನಿಯೋಗ ಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ.   

ನೋಂದಣಿ ಪ್ರಕ್ರಿಯೆ : 

ಈ ಪ್ರದರ್ಶನದಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಹಂತಗಳ ಮೂಲಕ ಅರ್ಜಿ ಸಲ್ಲಿಸಬಹುದು:

  • ಮುಖ್ಯ ವೆಬ್‌ಸೈಟ್‌ಗೆ ಭೇಟಿ ನೀಡಿ : http://tradeshows.tradeindia.com/dairyexpo/
  • ಅಲ್ಲಿ “ಭೇಟಿ”  ಮತ್ತು “ಪ್ರದರ್ಶಕರ”   ಬಟನ್ ಅನ್ನು ಕಾಣಬಹುದು
  • “ಭೇಟಿ” ಬಟನ್ ಮೇಲೆ ಕ್ಲಿಕ್ ಮಾಡಿ
  • ನೋಂದಣಿ ಫಾರ್ಮ್ ತೆರೆಯುತ್ತದೆ
  • ಎಲ್ಲಾ ವಿವರಗಳನ್ನು ಭರ್ತಿ ಮಾಡಿ
  • “ಸಲ್ಲಿಸು” ಬಟನ್ ಮೇಲೆ ಕ್ಲಿಕ್ ಮಾಡಿ
  • ಆಗ ಎಕ್ಸ್‌ಪೋ ಗೆ ಭೇಟಿ ನೀಡಲು ನಿಮ್ಮ ನೋಂದಣಿ ಖಚಿತವಾಗುತ್ತದೆ 
  • ಈಗ ನೀವು ಎಕ್ಸ್‌ಪೋ ಗೆ ಭೇಟಿ ನೀಡಬಹುದು

ಈ ಅಂತರರಾಷ್ಟ್ರೀಯ ಎಕ್ಸ್‌ಪೋ ಮೂಲಕ – ಇತ್ತೀಚಿನ ಆಹಾರ ಮತ್ತು ಡೈರಿ ತಂತ್ರಜ್ಞಾನಗಳು ಹಾಗೂ ಹೈನುಗಾರಿಕೆ ಉದ್ಯಮವನ್ನು ಉತ್ತೇಜಿಸಲು, ಖರೀದಿದಾರ-ಮಾರಾಟಗಾರರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಂತಿಮ ಬಳಕೆದಾರರ ಎಲ್ಲಾ ಭಾಗಗಳಿಗೆ ಜಾಗೃತಿ ಮೂಡಿಸಲು ಒಂದು ವೇದಿಕೆಯನ್ನು ಪ್ರಾರಂಭಿಸಲಾಗಿದೆ. 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು