HomeCrop ManagementAgri Hacksಬೆಳೆಯಲ್ಲಿ ಬಿಳಿ ಹಿಟ್ಟು ತಿಗಣೆಗಳನ್ನು ಮನೆಯಲ್ಲಿಯೇ ನಿಯಂತ್ರಿಸಿ

ಬೆಳೆಯಲ್ಲಿ ಬಿಳಿ ಹಿಟ್ಟು ತಿಗಣೆಗಳನ್ನು ಮನೆಯಲ್ಲಿಯೇ ನಿಯಂತ್ರಿಸಿ

ಹಿಟ್ಟು ತಿಗಣೆಗಳು ಬೆಚ್ಚನೆ ವಾತಾವರಣದಲ್ಲಿ ಕಂಡುಬರುವ, ಮೃದು-ದೇಹದ, ರೆಕ್ಕೆಗಳಿಲ್ಲದ ಕೀಟಗಳಾಗಿದ್ದು, ಅವು ಸಾಮಾನ್ಯವಾಗಿ ಎಲೆ, ಕಾಂಡ ಮತ್ತು ಸಸ್ಯಗಳ ಹಣ್ಣುಗಳ ಮೇಲೆ ಬಿಳಿ ಹತ್ತಿಯ ರಾಶಿಯಂತೆ ಕಂಡುಬರುತ್ತವೆ. ಕಡಿಮೆ ದಾಳಿಯ  ಮಟ್ಟದಲ್ಲಿ ಹಾನಿಯು ಸಾಮಾನ್ಯವಾಗಿ ಗಮನಾರ್ಹವಲ್ಲ. ಆದಾಗ್ಯೂ, ಹೆಚ್ಚಿನ ಸಂಖ್ಯೆಯಲ್ಲಿ ಅವು ಎಲೆಗಳ ಹಳದಿ ಬಣ್ಣಕ್ಕೆ ಕಾರಣವಾಗಬಹುದು, ಹಾಗಾಗಿ ಸಸ್ಯವು ದುರ್ಬಲಗೊಳ್ಳುತ್ತದೆ. ಹಿಟ್ಟು ತಿಗಣೆಗಳು  ಸಾಮಾನ್ಯ ಹಸಿರುಮನೆ ಕೀಟವಾಗಿದ್ದು ಅದು ಅಲಂಕಾರಿಕ ಸಸ್ಯಗಳು, ಮನೆ ಗಿಡಗಳು ಮತ್ತು ಹಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ.

ಬೇಕಿರುವ ಸಾಮಾಗ್ರಿಗಳು : 

  • ನೀರು 
  • ಬೇವಿನ ಎಣ್ಣೆ ಅಥವಾ ಎಲೆ 
  • ಹಲ್ಲುಜ್ಜುವ ಬ್ರಷ್ 
  • ಸೀಮೆಎಣ್ಣೆ 
  • ಸೋಪಿನ ದ್ರಾವಣ 

ಮೊದಲನೆಯದಾಗಿ ಬೆಳೆಗಳ ಮೇಲೆ ಕೀಟಗಳನ್ನು ಪತ್ತೆಹಚ್ಚುವುದು: 

  • ನಿಯಮಿತವಾಗಿ ನಿಮ್ಮ ಬೆಳೆಯನ್ನು ಪರೀಕ್ಷಿಸುತ್ತಿರಬೇಕು.ಮೊದಲನೆಯದಾಗಿ, ನಿಮ್ಮ ಬೆಳೆಯಲ್ಲಿ ಬಿಳಿ ಹಿಟ್ಟು ತಿಗಣೆಗಳು  ಕಂಡುಬಂದರೆ, ಅವುಗಳು ಮೊದಲಿಗೆ ಎಲೆಯ ಕೆಳಭಾಗದಲ್ಲಿ ಗುಂಪುಗಳಲ್ಲಿ  ಕಂಡುಬರುತ್ತವೆ, ಇದನ್ನು ನಿವಾರಿಸಲು ಮನೆಯಲ್ಲಿ ತಯಾರಿಸಿದ ಔಷಧಿಗಳನ್ನು ಬಳಸಿ ಹಿಟ್ಟುತಿಗಣಗಳನ್ನು ನಿಯಂತ್ರಿಸಬಹದು.     

ಹಾಗಿದ್ದಲ್ಲಿ ಮನೆಯಲ್ಲಿಯೇ ತಯಾರಿಸಬಹುದಾದ ಔಷಧಿಗಳ ಬಗ್ಗೆ ತಿಳಿಯೋಣವೇ? 

ಬೇವಿನ ಎಣ್ಣೆಯನ್ನು ಸಿಂಪಡಿಸುವುದು

ಬೆಳೆಯಲ್ಲಿ ಕಂಡುಬರುವ ಕೀಟದ ಪರಿಣಾಮವು ಹೆಚ್ಚಾಗಿದ್ದರೆ, ಬೇವಿನ ಎಣ್ಣೆ ಮತ್ತು ಬೇವಿನ ಎಲೆಯನ್ನು ನೀರಿನಲ್ಲಿ ನಲವತ್ತೆಂಟು ಗಂಟೆಗಳು ನೆನೆಸಿ ಹಾಗೂ ಸಿಂಪಡಿಸುವ ಅರ್ಧ ಗಂಟೆ ಮುಂಚಿತವಾಗಿ ಎಲೆಗಳನ್ನು ನೀರಿನಿಂದ ತೆಗೆದು ನೀರನ್ನು ಬಸಿದು ನೀರಿನ   ದ್ರಾವಣವನ್ನು ತಯಾರಿಸಿ ಸಿಂಪಡಿಸಬಹುದು, ಇದನ್ನು ಸಿಂಪಡಿಸುವುದರಿಂದ ಬಿಳಿ ಹಿಟ್ಟು ತಿಗಣೆಯನ್ನು ತಡೆಯಬಹುದು ಬೇವಿನಲ್ಲಿರುವ ಆಂಟಿ-ಆಕ್ಸಿಡೆಂಟ್ ಗುಣಗಳು ಕೀಟಗಳನ್ನು ಕೊಲ್ಲಲು ಮತ್ತು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.

ಹಲ್ಲುಜ್ಜುವ ಬ್ರಷ್ನೊಂದಿಗೆ  ಹುಳುಗಳನ್ನು ಸ್ವಚ್ಛಗೊಳಿಸುವುದು

ಬೆಳೆಗಳ ಮೇಲೆ ಕೀಟಗಳು  ಕಾಣಿಸಿಕೊಂಡಾಗ, ಯಾವುದೇ ಕೀಟನಾಶಕವನ್ನು ಸಿಂಪಡಿಸುವ ಮೊದಲು ಬಿಳಿ ಹಿಟ್ಟು ತಿಗಣೆಗಳ ಗುಂಪುಗಳನ್ನು ಹಲ್ಲುಜ್ಜುವ ಬ್ರಷ್‌ನಿಂದ ಕೀಟಗಳ ಸಮೂಹವನ್ನು ಸ್ವಚ್ಛಗೊಳಿಸಬೇಕು. ಹೀಗೆ ಮಾಡುವುದರಿಂದ ಸುಮಾರು 70 ರಿಂದ 80 ಪ್ರತಿಶತದಷ್ಟು ಬಿಳಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಬಹುದು.

ಸೀಮೆಎಣ್ಣೆ ಸಿಂಪಡಿಸಿ

ಸೀಮೆ ಎಣ್ಣೆಯಲ್ಲಿಯೂ ಕೂಡ ವಿವಿಧ ಆಂಟಿ-ಆಕ್ಸಿಡೆಂಟ್ಗಳು  ಇರುವುದರಿಂದ, ಇದನ್ನು2 ಮಿಲಿ ಪ್ರತೀ 1  ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಬಿಳಿ ಹಿಟ್ಟು ತಿಗಣೆಗಳಿಂದ  ಬೆಳೆಯನ್ನು ರಕ್ಷಿಸುತ್ತದೆ.

ಸೋಪ್ ದ್ರಾವಣವನ್ನು ಸಿಂಪಡಿಸಿ

10  ಹನಿ ಸೋಪ್ ದ್ರಾವಣವನ್ನು1 ಲೀಟರ್ ನೀರಿನಲ್ಲಿ ಬೆರೆಸಿ ಸೋಂಕಿತ ಗಿದಗಳಿಗೆ ಬೆರೆಸಿ ಸಿಂಪಡಿಸಿದರೆ ಬಿಳಿ ಹಿಟ್ಟು ತಿಗಣೆಗಳನ್ನು ನಿಯಂತ್ರಿಸಬಹುದು. 

ಕಾಕ್ಟೇಲ್ ವಿಧಾನ : 

1/2 ಲೀಟರ್ ನೀರಿಗೆ + 1 ಚಮಚ ಬೇವಿನ ಎಣ್ಣೆ + 250 ಮಿಲಿ ಐಸೊಪ್ರೊಪೈಲ್ ಎಥನಾಲ್ + 10 ಹನಿ ಸೋಪಿನ ದ್ರಾವಣವನ್ನು ಬೆರೆಸಿ  ಸಿಂಪಡಿಸಿದರೆ ಹೆಚ್ಚು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದು. 

ಈ ಎಲ್ಲಾ ವಿಧಾನಗಳನ್ನು ಅನುಸರಿಸಿ ಹಿಟ್ಟು ತಿಗಣೆಗಳಿಂದ ಸೋಂಕಿತ ಗೊಂಡಿರುವ ಬೆಳೆಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿರಿ. ಯಾವುದೇ ವಿಧಾನವನ್ನು ಮೊದಲು ಒಂದು ಗಿಡದ ಮೇಲೆ ಪ್ರಯೋಗಿಸಿದ ನಂತರ ಎಲ್ಲ ಸೋಂಕಿತ ಗಿಡಗಳ ಮೇಲೆ ಸಿಂಪಡಿಸುವುದನ್ನು ಅನುಸರಿಸಿ. 

Categories:
spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು