ಜವಾಹರಲಾಲ್ ನೆಹರು ಕೃಷಿ ವಿಶ್ವ ವಿದ್ಯಾಲಯ (ಜೆಎನ್‌ಕೆವಿವಿ) ಜಬಲ್‌ಪುರ, ರಾಜಮಾತಾ ವಿಜಯರಾಜೆ ಸಿಂಧಿಯಾ ಕೃಷಿ ವಿಶ್ವ ವಿದ್ಯಾಲಯ, ಗ್ವಾಲಿಯರ್ ಮತ್ತು ಇಕ್ರಿಸ್ಯಾಟ್, ಪತಂಚೆರು ಹೈದರಾಬಾದ್‌ನ ಜಂಟಿ ಸಹಯೋಗದೊಂದಿಗೆ ಪೂಸಾ ಸಂಸ್ಥೆ ಎಂದೂ ಕರೆಯಲ್ಪಡುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯು (ಐಎಆರ್‌ಐ) ‘ಪೂಸಾ ಜೆಜಿ 16 ಎಂಬ ಹೊಸ ಬರ-ಸಹಿಷ್ಣು ಕಡಲೆ ತಳಿಯನ್ನು ಅಭಿವೃದ್ಧಿಪಡಿಸಿದೆ. ಜೆಜಿ 16 ಯು ಬರ-ಸಹಿಷ್ಣು ಮತ್ತು ಅಧಿಕ ಇಳುವರಿ ನೀಡುವ ಕಡಲೆ ತಳಿಯಾಗಿದೆ
ICC 4958 ರಿಂದ ಬರ ಸಹಿಷ್ಣುತೆಯ ಜೀನ್ ಅನ್ನು ಬಳಸಿಕೊಂಡು ಜೀನೋಮಿಕ್ ಅಸಿಸ್ಟೆಡ್ ಬ್ರೀಡಿಂಗ್ ತಂತ್ರಗಳ ಮೂಲಕ ಈ ಪೂಸಾ ಜೆಜಿ 16 ಎಂಬ ತಳಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕಡಲೆ ತಳಿಯ ಬರ ನಿರೋಧಕತೆಯನ್ನು ಪರಿಶೀಲಿಸಲು ಅಖಿಲ ಭಾರತ ಸಹಯೋಗ ಸಂಶೋಧನಾ ಕಾರ್ಯಕ್ರಮವು ದೇಶಾದ್ಯಂತ ಪ್ರಯೋಗವನ್ನು ಮಾಡಿದೆ. ಈ ಹೊಸ ತಳಿಯು,ಬರ ಪೀಡಿತ ಪ್ರದೇಶದಲ್ಲಿ ಹೆಕ್ಟೇರ್‌ಗೆ ಎರಡು ಟನ್‌ಗಳಷ್ಟು ಉತ್ಪಾದನೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಬರ ಪೀಡಿತ ಪ್ರದೇಶದಲ್ಲಿಈ ತಳಿಯು ಫ್ಯುಸೇರಿಯಮ್ ಸೊರಗು ರೋಗ ಮತ್ತು ಸಸಿಯ ಕುಂಠಿತ ಬೆಳವಣಿಗೆಗೆ ನಿರೋಧಕತೆಯನ್ನು ತೋರುತ್ತದೆ ಹಾಗು ಈ ತಳಿಯು ವೇಗದ ಬೆಳೆವಣಿಗೆಯ ಅವಧಿಯನ್ನು /ತ್ವರಿತ ಪಕ್ವತೆಯ ಅವಧಿಯನ್ನು ಹೊಂದಿದೆ (110 ದಿನಗಳು).
ಫ್ಯುಸೇರಿಯಮ್ ಸೊರಗು ರೋಗ:
ಫ್ಯುಸೇರಿಯಮ್ ಸೊರಗು ರೋಗ ಎಂಬ ವ್ಯಾಪಕವಾದ ಸಸ್ಯರೋಗವು ಮಣ್ಣಿನಲ್ಲಿ ವಾಸಿಸುವ ಫ್ಯುಸೇರಿಯಮ್ ಆಕ್ಸಿಸ್ಪೊರಮ್ ಎಂಬ ಶಿಲೀಂಧ್ರದಿಂದ ಉಂಟಾಗುತ್ತದೆ. ಪ್ರಮುಖ ವಾಣಿಜ್ಯ ಆಹಾರ ಬೆಳೆಗಳು ಸೇರಿದಂತೆ ಸಿಹಿ ಆಲೂಗಡ್ಡೆ, ಟೊಮ್ಯಾಟೊ, ಬೀನ್ಸ್, ಬಳ್ಳಿ ಜಾತಿ ಬೆಳೆಗಳು, ಬಾಳೆ (ಪನಾಮ ವಿಲ್ಟ್ ಎಂದು ಕರೆಯಲಾಗುತ್ತದೆ) ಮತ್ತು ವಿವಿಧ ಇತರೆ ಬೆಳೆಗಳು ಈ ಸೊರಗು ರೋಗಕ್ಕೆ ತುತ್ತಾಗುತ್ತವೆ . F. ಆಕ್ಸಿಸ್ಪೊರಮ್ ಶಿಲೀಂಧ್ರವು ಜೀವಂತ ಮುಖ್ಯ ಸಸಿಯೊಂದಿಗೆ ಸಂಪರ್ಕವಿಲ್ಲದೆ ಮಣ್ಣಿನಲ್ಲಿ ಅನಿರ್ದಿಷ್ಟವಾಗಿ ಉಳಿಯತ್ತದೆ ಮತ್ತು 24 °C (75 °F) ಗಿಂತ ಹೆಚ್ಚಿನ ಮಣ್ಣಿನ ತಾಪಮಾನದಲ್ಲಿಯು ಸಹ ಬೆಳೆಯುತ್ತದೆ.
ರೋಗ ಲಕ್ಷಣಗಳು:
- ಸಸಿ ಸೋಂಕಿಗೆ ಒಳಗಾದಾಗ, ಒಣಗಿ ಸಾಯುತ್ತದೆ.
- ಎಲೆಗಳು ಸಹ ಒಣಗುತ್ತವೆ,ಸಸಿಯ ಕುಂಠಿತ ಬೆಳವಣಿಗೆಗೆ ಕಾರಣವಾಗುತ್ತವೆ.ಕ್ರಮೇಣವಾಗಿ ಕಾಂಡ ಬುಡದಿಂದ ಮೇಲಕ್ಕೆ ತೆಳು ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಬದಲಾಗುತ್ತದೆ.
- ಬೇರುಗಳು ಮತ್ತು ಕೆಳ ಕಾಂಡದಲ್ಲಿ ಕ್ಸೈಲಮ್ ನಾಳೀಯ ಅಂಗಾಂಶದ ಮೇಲೆ ಕಪ್ಪು ಬಣ್ಣದ ಪಟ್ಟಿಗಳನ್ನು ಕಾಣಬಹುದು. ಇದು ಬೇರು ಕೊಳೆತಕ್ಕೆ ಕಾರಣವಾಗುತ್ತದೆ.