ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಎಂಬುವುದು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳು/ಸಸಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಬೀಜ ವ್ಯಾಪಾರದಲ್ಲಿ ಮೋಸವನ್ನು ತಡೆಯವ ನಿಟ್ಟಿನಲ್ಲಿ ಮಾನ್ಯಶ್ರೀ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕೇಂದ್ರ ಸರ್ಕಾರವು ಪ್ರಾರಂಭಿಸಲಿರುವ ಹೊಸ ಉಪಕ್ರಮವಾಗಿದೆ. ಸದರಿ ಉಪಕ್ರಮವು ರೈತರಿಗೆ ಹಾಗೂ ಬೀಜಗಳ ವಲಯದಲ್ಲಿ ಮಧ್ಯಸ್ಥರಿಗೆ ಉಪಕಾರಿಯಾಗಲು ನಿರೀಕ್ಷಿಸಲಾಗಿದೆ.
ಅವಲೋಕನ
ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಶೀಘ್ರದಲ್ಲೇ ಸರ್ಕಾರವು ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಅನ್ನು ಪ್ರಾರಂಭಿಸಲಿದೆ ಎಂದು ಭಾರತದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವರಾದ ಶ್ರೀ ನರೇಂದ್ರ ಸಿಂಗ್ ತೋಮರ್ ರವರು ಘೋಷಿಸಿದ್ದಾರೆ. ಸದರಿ ವ್ಯವಸ್ಥೆಯಿಂದ ಬೀಜ ವ್ಯಾಪಾರ ಕ್ಷೇತ್ರದಲ್ಲಿ ಮೋಸಗಾರರನ್ನು ತಡೆಯುವ ನಿಟ್ಟಿನಲ್ಲಿ ಹಾಗೂ ರೈತರಿಗೆ ಮತ್ತು ಬಿತ್ತನೆ ಬೀಜಗಳ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಪ್ರಯೋಜನವನ್ನು ನೀಡುತ್ತದೆ. ಶ್ರೀಮಾನ್ ತೋಮರ್ ರವರು ಎಣ್ಣೆಕಾಳುಗಳು ಮತ್ತು ಹತ್ತಿ ಬೆಳೆಗಳ ಕ್ಷೇತ್ರದಲ್ಲಿ ಭಾರತವನ್ನು ಸದರಿ ಸ್ವಾವಲಂಬಿಯಾಗಿಸುವಲ್ಲಿ ಬೀಜೊತ್ಪಾದನೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದರು. ಅವರು ವಿಜ್ಞಾನಿಗಳ ಕೊಡುಗೆಯನ್ನು ಪ್ರಶಂಶಿಸಿದರು ಅವರು ವಿಜ್ಞಾನಿಗಳ ಕೊಡುಗೆಯನ್ನು ಪ್ರಶಂಶಿಸಿದರು ನಂತರ ನವದೆಹಲಿಯಲ್ಲಿ ನ್ಯಾಷನಲ್ ಸೀಡ್ ಅಸೋಸಿಯೇಷನ್ ಆಫ್ ಇಂಡಿಯಾ,ಆಯೋಜಿಸಿದ್ದ ದಿ ಇಂಡಿಯನ್ ಸೀಡ್ ಕಾಂಗ್ರೆಸ್ ನಲ್ಲಿ “ಜಾಗತಿಕ ಏಕತೆಗಾಗಿ ಬೀಜಗಳು( ಸೀಡ್ಸ್ ಫರ್ ಗ್ಲೋಬಲ್ ಯೂನಿಟಿ) ” ಎಂಬ ಮಾಹಿತಿಯನ್ನು ಅನಾವರಣಗೊಳಿಸಿದರು. ಪರಸ್ಪರ ನಂಬಿಕೆಯ ವಾತಾವರಣವನ್ನು ಸೃಷ್ಟಿಸುವ ಸರ್ಕಾರದ ದೃಷ್ಟಿಕೋನವು ದೇಶದ ವ್ಯಾಪಾರ ಮತ್ತು ಉದ್ಯಮ ಕ್ಷೇತ್ರವನ್ನು ಬಲಪಡಿಸಲು ಸಹಾಯ ಮಾಡಲಿದೆ.
ರೈತರಿಗೆ ಆಗುವ ಪ್ರಯೋಜನಗಳು:
ಸೀಡ್ ಟ್ರೇಸಬಿಲಿಟಿ ಸಿಸ್ಟಮ್, ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳನ್ನು ಪಡೆಯುವಲ್ಲಿ ಸಹಾಯ ಮಾಡುತ್ತದೆ, ಇದು ಬೆಳೆಯ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸುತ್ತದೆ. ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುವಲ್ಲಿ ಸಹಾಯ ಮಾಡುತ್ತದೆ. ಪ್ರಸ್ತುತ ಅವಕಾಶದಿಂದ ರೈತರಿಗೆ ತಮ್ಮ ಬೀಜಗಳ ಮೂಲವನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ. ಸದರಿಯಿಂದ ಬೀಜ ವ್ಯಾಪಾರ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿ ವಂಚನೆಯನ್ನು ಕಡಿಮೆ ಮಾಡುತ್ತದೆ.
ಪ್ರಮುಖ ಅಂಶಗಳು
- ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ಎಂಬ ಕಾರ್ಯಕ್ರಮವು ರೈತರಿಗೆ ಉತ್ತಮ ಗುಣಮಟ್ಟದ ಬೀಜಗಳ ಲಭ್ಯತೆಯನ್ನು ಖಾತರಿಪಡಿಸಿಕೊಳ್ಳಲು ಮತ್ತು ಬೀಜ ವ್ಯಾಪಾರ ವಲಯದಲ್ಲಿ ವಂಚನೆಯನ್ನು ತಡೆಯಲು ಭಾರತ ಸರ್ಕಾರವು ಪ್ರಾರಂಭಿಸಿರುವ ಒಂದು ಹೊಸ ಉಪಕ್ರಮವಾಗಿದೆ.
- ಪ್ರಸ್ತುತ ವ್ಯವಸ್ಥೆಯು ರೈತರಿಗೆ ಬೀಜಗಳ ಮೂಲವನ್ನು ತಿಳಿದುಕೊಳ್ಳಲು ಅನುವು ಮಾಡಿಕೊಡುತ್ತದೆ, ಇದರಿಂದ ಬೀಜ ವ್ಯಾಪಾರ ವಲಯದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸಿಕೊಂಡು, ವಂಚನೆಯನ್ನು ತಡೆಯುವಲ್ಲಿ ಉಪಕಾರಿಯಾಗಲಿದೆ.
- ಸೀಡ್ ಟ್ರೇಸಬಿಲಿಟಿ ಸಿಸ್ಟಮ್ ನಿಂದ ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸುವ ಮೂಲಕ ರೈತರಿಗೆ ಪ್ರಯೋಜನವನ್ನು ನೀಡಲಿದೆ ಹಾಗೆಯೇ ಕಳಪೆ ಗುಣಮಟ್ಟದ ಬೀಜಗಳಿಂದಾಗಿ ಬೆಳೆಯ ವೈಫಲ್ಯದ ಅಪಾಯವನ್ನು ಕಡತಗೊಳಿಸಬಹುದು.
- ಪ್ರಸಕ್ತ ಸರ್ಕಾರವು ವ್ಯಾಪಾರ ಮತ್ತು ಉದ್ಯಮ ವಲಯ ಸೇರಿದಂತೆ ದೇಶದ ಎಲ್ಲಾ ವರ್ಗಗಳ ಹಿತಾದೃಷ್ಟಿಯಿಂದ ಕಾನೂನು ಮತ್ತು ನೀತಿ ಸುಧಾರಣೆಗಳಿಗೆ ತನ್ನ ಬದ್ಧತೆಯನ್ನು ತೋರಿದೆ.
ತೀರ್ಮಾನ
ಸೀಡ್ ಟ್ರೇಸಬಿಲಿಟಿ ಸಿಸ್ಟಮ್, ಭಾರತ ಸರ್ಕಾರದ ಒಂದು ಮಹತ್ವದ ಉಪಕ್ರಮವಾಗಿದ್ದು, ಬಿತ್ತನೆ ಬೀಜಗಳ ಕ್ಷೇತ್ರದಲ್ಲಿ ರೈತರಿಗೆ ಮತ್ತು ಮಧ್ಯಸ್ಥಗಾರರಿಗೆ ಪ್ರಯೋಜನವನ್ನು ನೀಡುತ್ತದೆ. ಇದು ಬೆಳೆ ಇಳುವರಿ ಮತ್ತು ಗುಣಮಟ್ಟವನ್ನು ಸುಧಾರಿಸಲಿದ್ದು, ಬೆಳೆ ವೈಫಲ್ಯದ ಅಪಾಯವನ್ನು ಕಡಿಮೆ ಮಾಡುತ್ತದೆ, ಮುಂದೂವರಿದು ಬೀಜ ವ್ಯಾಪರದಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಜೊತೆಗೆ ಬೀಜಗಳ ವಲಯದಲ್ಲಿ ಉತ್ತಮ ಕಾರ್ಯನಿರ್ವಹಿಸುವ ಜನರನ್ನು ರಕ್ಷಿಸುತ್ತದೆ. ಸದರಿ ವ್ಯವಸ್ಥೆಯು ಕೃಷಿ ಕ್ಷೇತ್ರದ ಬಗ್ಗೆ ಸರ್ಕಾರದ ಬದ್ಧತೆಯನ್ನು ಹಾಗೆ ಕೃಷಿಕರ ಏಳಿಗೆಯನ್ನು ಖಾತರಿಪಡಿಸಿಕೊಳ್ಳಲು ಪ್ರಯತ್ನಗಳಿಗೆ ನಾಂದಿಯಾಗಿದೆ.