HomeCropಭತ್ತದ ಬೆಳೆಯಲ್ಲಿ ಪ್ರಮುಖ ರೋಗಗಳು 

ಭತ್ತದ ಬೆಳೆಯಲ್ಲಿ ಪ್ರಮುಖ ರೋಗಗಳು 

ವೈಜ್ಞಾನಿಕ ಹೆಸರು: ಒರಿಜಾ ಸಟಿವ 

ಭತ್ತವು ಭಾರತದ ಪ್ರಮುಖ ಆಹಾರ ಬೆಳೆಗಳಲ್ಲಿ ಒಂದಾಗಿದೆ, ಭತ್ತದ ಬೆಳೆಯ ಒಟ್ಟು ಬೆಳೆ ಪ್ರದೇಶದ 1/4 ನೇ ಭಾಗವನ್ನು ಒಳಗೊಂಡಿದೆ. ವಿಶ್ವದ ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಜನರ ಬಹು ಮುಖ್ಯ ಆಹಾರ  ಅಕ್ಕಿಯಾಗಿದೆ. ಜಾಗತಿಕವಾಗಿ  ಅಕ್ಕಿ ಉತ್ಪಾದನೆಯಲ್ಲಿ ಚೀನಾದ  ನಂತರ ಭಾರತ ಎರಡನೇ ಸ್ಥಾನದಲ್ಲಿದೆ. 2022-23 ರಲ್ಲಿ ಒಟ್ಟು ಅಕ್ಕಿ ಉತ್ಪಾದನೆ 125 ಮಿಲಿಯನ್ ಟನ್‌ಗಳು. 2022-23ರಲ್ಲಿ ಭತ್ತದ ಕೃಷಿಯ ಒಟ್ಟು ಪ್ರದೇಶವು 45.5 ಮಿಲಿಯನ್ ಹೆಕ್ಟೇರ್‌ಗಳಾಗಿದ್ದು, ಸರಾಸರಿ ಉತ್ಪಾದಕತೆ ಸುಮಾರು 4.1 ಟನ್/ಹೆ. ಭಾರತದಲ್ಲಿ, ಮುಂಗಾರಿನಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಇದು ಉಷ್ಣವಲಯದ ಮತ್ತು ಉಪೋಷ್ಣವಲಯದ ಬಿಸಿ ಮತ್ತು ಆರ್ದ್ರತೆ ಯ  ವಾತಾವರಣದಲ್ಲಿ ಚೆನ್ನಾಗಿ ಬೆಳೆಯುತ್ತದೆ. 

ಪ್ರಮುಖ ರೋಗಗಳು: 

  1. ಬೆಂಕಿ ರೋಗ :

  2. ಕಾರಣವಾದ ಜೀವಿ :  ಪೈರಿಕ್ಯುಲೇರಿಯಾ ಒರಿಜೆ (ಲೈಂಗಿಕ ಹಂತ: ಮ್ಯಾಗ್ನಾಪೋರ್ತೆ ಗ್ರೀಸಿಯೆ  ) 

ರೋಗ ಬಾಧಿಸುವ ಹಂತಗಳು

ಇದು ಭತ್ತದ ಅತ್ಯಂತ ವಿನಾಶಕಾರಿ ರೋಗಗಳಲ್ಲಿ ಒಂದಾಗಿದೆ. ಈ ರೋಗವು ಭತ್ತದ ಸಸ್ಯಗಳ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ, ಮುಖ್ಯವಾಗಿ ಎಲೆಗಳು,ಹೂಗೊಂಚಲು , ಬೀಜಗಳು  ಮತ್ತು ಕಾಂಡ, ಈ ರೋಗಾವು  70 – 80%ನಷ್ಟು ಧಾನ್ಯ ನಷ್ಟವನ್ನು ಉಂಟುಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ. 

ಲಕ್ಷಣಗಳು: 

  • ಲೀಫ್ ಬ್ಲಾಸ್ಟ್/ ಎಲೆ ಬೆಂಕಿ ರೋಗ : ಬೂದು ಮಧ್ಯ ಮತ್ತು ಕಂದು ಅಂಚಿನೊಂದಿಗೆ ಸ್ಪಿಂಡಲ್ ಆಕಾರದ ಚುಕ್ಕೆಗಳು, ನಂತರ ‘ಬ್ಲಾಸ್ಟ್’ ಅಥವಾ ‘ಬರ್ನ್ಟ್’ ಕಾಣಿಸಿಕೊಳ್ಳುವಿಕೆಗೆ ಕಾರಣವಾಗುತ್ತವೆ 
  • ಕುತ್ತಿಗೆ ಬೆಂಕಿ ರೋಗ/ ನೆಕ್ ಬ್ಲಾಸ್ಟ್  – ತೆನೆಯ ಕೆಳಭಾಗದಲ್ಲಿ ಕತ್ತಿನ ಮೇಲೆ ಕಪ್ಪು ಅಥವಾ ಕಂಡು ಬಣ್ಣದ ಮಚ್ಛೆ ಕಾಣಿಸಿಕೊಂಡು ತೆನೆ ಜೊಳ್ಳಾಗುತ್ತದೆ ಮತ್ತು ಕತ್ತಿನ ಭಾಗ ಮುರಿದು ತೆನೆ ಜೋತು ಬೀಳುತ್ತದೆ . 
  • ನೋಡ್ ಬ್ಲಾಸ್ಟ್/ ಗಿಣ್ಣಿನ ಬೆಂಕಿ ರೋಗ  – ಬಾಧಿತ  ಸಸ್ಯದ ಗಿಣ್ಣುಗಳು ಕಪ್ಪು ಮಚ್ಚೆಯನ್ನು  ಉಂಟುಮಾಡುತ್ತವೆ ಇದು ನಂತರ ಒಡೆಯುತ್ತದೆ 

ಭತ್ತದ  ಬೆಂಕಿ ರೋಗಕ್ಕೆ  ಅನುಕೂಲಕರವಾದ ಪರಿಸ್ಥಿತಿಗಳು:

ದೀರ್ಘಕಾಲದ ಅಥವಾ ಆಗಾಗ್ಗೆ ಮಳೆ ಬೀಳುವ ಪ್ರದೇಶಗಳು, ಕಡಿಮೆ ಮಣ್ಣಿನ ತೇವಾಂಶ, ತಂಪಾದ ತಾಪಮಾನ ಮತ್ತು ಸುಮಾರು 93-99% ನಷ್ಟು ಹೆಚ್ಚಿನ ಸಾಪೇಕ್ಷ ಆರ್ದ್ರತೆ ಹೊಂದಿರುವ ವಾತಾವರಣದಲ್ಲಿ ಬೆಳೆಯುವ ಭತ್ತದ ಬೆಳೆಯು ಈ ರೋಗಕ್ಕೆ ಹೆಚ್ಚು ಒಳಗಾಗುತ್ತದೆ. 

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಕಾಂಟಾಫ್ ಶಿಲೀಂಧ್ರನಾಶಕ ಹೆಕ್ಸಾಕೊನಜೋಲ್ 5 % EC
ನೇಟಿವೋ ಶಿಲೀಂಧ್ರನಾಶಕ ಟೆಬುಕೋನಜೋಲ್ 50% +ಟ್ರೈಫ್ಲೋಕ್ಸಿಸ್ಟ್ರೋಬಿನ್ 25% WG
ಧನುಕಾ ಕಾಸು-ಬಿ ಶಿಲೀಂಧ್ರನಾಶಕ ಕಸುಗಮಸಿನ್ 3% SL
ಫಾಲಿಕರ್ ಶಿಲೀಂಧ್ರನಾಶಕ ಟೆಬುಕೊನಜೋಲ್ 250 EC

 

2 . ಬ್ಯಾಕ್ಟೀರಿಯಲ್ ಲೀಫ್ ಬ್ಲೈಟ್/ ದುಂಡಾಣು ಮಚ್ಚೆ  ರೋಗ

ಕಾರಣವಾದ ಜೀವಿ: ಕ್ಸಾಂಥೋಮೊನಾಸ್ ಒರಿಝೆ 

ದುಂಡಾಣು ಮಚ್ಚೆ ರೋಗದ  ಹಂತಗಳು: ತೆಂಡೆ ಹೊಡೆಯುವ ಹಂತದಿಂದ ಕಾಳು ಕಟ್ಟುವ ಹಂತದವರೆಗೆ 

ಲಕ್ಷಣಗಳು:

  • ನೀರಿನಲ್ಲಿ ನೆನೆಸಿದ ಚುಕ್ಕೆಗಳ ಕಲೆಗಳು ಎಲೆಗಳ ಮೇಲೆ ಕಾಣಿಸಿಕೊಳ್ಳುತ್ತವೆ, ಈ ಕಲೆಗೆಳ  ಕ್ರಮೇಣ ಕಲೆಗಳು  , ಬಿಳಿ ಗೆರೆಗಳ  ಹಾಗೆ  ಎಲೆಯ ತುದಿಯಿಂದ ಬುಡಕ್ಕೆ ರೂಪುಗೊಳ್ಳುತ್ತವೆ 
  • ಎಲೆಗಳ ವಿಲ್ಟಿಂಗ್ ಮತ್ತು ಹಳದಿ 
  • ಸಾಮಾನ್ಯವಾಗಿ ‘ಸೀಡ್ಲಿಂಗ್  ವಿಲ್ಟ್’ ಅಥವಾ ‘ಕ್ರೆಸೆಕ್’ ಎಂದು ಕರೆಯಲಾಗುತ್ತದೆ 

ಭತ್ತದ ಬೆಳೆಯಲ್ಲಿ  ಬ್ಯಾಕ್ಟೀರಿಯಾ ಎಲೆ ಕೊಳೆತ / ಎಲೆಯ ದುಂಡಾಣು ರೋಗಕ್ಕೆ ಅನುಕೂಲಕರ ಪರಿಸ್ಥಿತಿಗಳು 

ನೀರಾವರಿ ಮತ್ತು ಮಳೆಯಾಶ್ರಿತ ತಗ್ಗು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. 25 – 34 ° C ತಾಪಮಾನ, 70% ಕ್ಕಿಂತ ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಬಲವಾದ ಗಾಳಿ ಮತ್ತು ನಿರಂತರ ಮಳೆಯು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ. 

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಬ್ಲೂ ಕಾಪರ್  ಕಾಪರ್  ಆಕ್ಸಿಕ್ಲೋರೈಡ್ 50% WP
ಕ್ರಿಸ್ಟೋಸೈಕ್ಲಿನ್ ಸ್ಟ್ರೆಪ್ಟೊಮೈಸಿನ್ ಸಲ್ಫೇಟ್ 90% + ಟೆಟ್ರಾಸಿಲಿನ್ ಹೈಡ್ರೋಕ್ಲೋರೈಡ್ 10% SP
ಜಿಯೋಲೈಫ್ ಜಿಯೋಮೈಸಿನ್ ಕನ್ಸೋರ್ಟಿಯಂ ಆಫ್ ಪ್ಲಾಂಟ್ ಎಕ್ಸ್ಟ್ರಾಕ್ಟ್ಸ್
ಕೊನಿಕಾ ಕಾಸುಗಮೈಸಿನ್ 5% + ಕಾಪರ್ ಆಕ್ಸಿ ಕ್ಲೋರೈಡ್ 45% WP

 

3 .  ಭತ್ತದ ಎಲೆ ಕವಚದ  ಕೊಳೆ ರೋಗ

ಕಾರಣವಾದ ಜೀವಿ: ಸರೋಕ್ಲಾಡಿಯಮ್ ಒರಿಝೆ 

ರೋಗ ಬಾಧಿಸುವ ಹಂತಗಳು: ತೆಂಡೆ ಬರುವ ಹಂತ 

ಲಕ್ಷಣಗಳು:

  • ಅನಿಯಮಿತ ಕಂದು ಬಣ್ಣದ ನೀರು ತುಂಬಿದ  ಗಾಯಗಳು  ಭತ್ತದ ಬಾವುಟದ ಗರಿಯ  ಕವಚದ ಮೇಲೆ ಕಾಣಿಸಿಕೊಳ್ಳುತ್ತದೆ 
  • ಪೀಡಿತ ತೆನೆಯ  ಎಲೆಗಳ ಕವಚದೊಳಗೆ ಬಿಳಿ ಪುಡಿಯ ಶಿಲೀಂಧ್ರ 

ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು: 

ಇದು ಶುಷ್ಕ ಋತುಗಳಿಗೆ ಹೋಲಿಸಿದರೆ ಆರ್ದ್ರ ಋತುಗಳಲ್ಲಿ ಹೆಚ್ಚು ಕಂಡುಬರುತ್ತದೆ .  ಹೆಚ್ಚಿನ ಸಾರಜನಕ ಫಲೀಕರಣ, ರೋಗ ಮತ್ತು ಗಾಯಗೊಂಡ ಗಿಡಗಳು, ಹೆಚ್ಚಿನ ಸಾಪೇಕ್ಷ ಆರ್ದ್ರತೆ ಮತ್ತು 20 – 28 ° C ತಾಪಮಾನ ಹೊಂದಿರುವ ವಾತಾವರಣ ಹಾಗು ಕಡಿಮೆ ಅಂತರದಲ್ಲಿ ನಾಟಿ ಮಾಡಿದ  ಭತ್ತದ  ಬೆಳೆಗಳಲ್ಲಿ  ಈ ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಧನುಸ್ಟಿನ್ ಶಿಲೀಂಧ್ರನಾಶಕ ಕಾರ್ಬೆಂಡಜಿಮ್ 50% WP
ಕವಚ್ ಶಿಲೀಂಧ್ರನಾಶಕ ಕ್ಲೋರೋಥಲೋನಿಲ್ 75% WP
ಟಾಟಾ ಮಾಸ್ಟರ್ ಶಿಲೀಂಧ್ರನಾಶಕ ಮೆಟಾಲಾಕ್ಸಿಲ್ 8% + ಮ್ಯಾಂಕೋಜೆಬ್ 64% WP
ಕೊನಿಕಾ ಕಾಸುಗಮೈಸಿನ್ 5% + ಕಾಪರ್ ಆಕ್ಸಿಕ್ಲೋರೈಡ್ 45%

 

  1. ಕಂದು ಚುಕ್ಕೆ ರೋಗ / ರೈಸ್ ಬ್ರೌನ್ ಸ್ಪಾಟ್: 

ಕಾರಣವಾದ ಜೀವಿ : ಹೆಲ್ಮಿಂಥೋಸ್ಪೋರಿಯಮ್ ಒರಿಜೆ

ರೋಗ ಬಾಧಿಸುವ ಹಂತಗಳು:  ಮೊಳಕೆಯೊಡೆಯುವ ಹಂತದಿಂದ ಕಾಳು ತುಂಬುವ ಹಂತದವರೆಗೆ  

ಲಕ್ಷಣಗಳು: 

  • ಹಳದಿ ಬಣ್ಣದ ವರ್ತುಲ ಇರುವ ಅಂಡಾಕಾರದ ಅಥವಾ ವೃತ್ತಾಕಾರದ  ಗಾಢ ಕಂದು ಬಣ್ಣದ ಚುಕ್ಕೆಗಳು ಅತ್ಯಂತ ಗೋಚರ ಸಂಕೇತವಾಗಿದೆ.  
  • ತೆನೆಗಳಲ್ಲಿ ಕಂಡುಬರುವ ಸೋಂಕು ಅಸ್ತವ್ಯಸ್ತವಾದ ಧಾನ್ಯದ  ತುಂಬುವಿಕೆಗೆ ಕಾರಣವಾಗಬಹುದು ಮತ್ತು ಧಾನ್ಯದ ಗುಣಮಟ್ಟ ಕಡಿಮೆಯಾಗಬಹುದು . 

ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು: 

ಸಾಪೇಕ್ಷ ಆರ್ದ್ರತೆ 86 – 100% ಕ್ಕಿಂತ ಹೆಚ್ಚು, 16 – 36 ° ತಾಪಮಾನ,  ಸೋಂಕಿತ ಬೀಜಗಳು, ಹೆಚ್ಚು ಕಳೆಗಳು ಇರುವ ಜಾಮೀನು, ಸೋಂಕಿತ ಬತ್ತದ ಗಿಡಗಳು  ಈ ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಟಿಲ್ಟ್ ಶಿಲೀಂಧ್ರನಾಶಕ ಟಿಲ್ಟ್ ಶಿಲೀಂಧ್ರನಾಶಕ ಪ್ರೊಪಿಕೊನಜೋಲ್ 25% EC
ಕಾಂಟಾಫ್ ಪ್ಲಸ್ ಶಿಲೀಂಧ್ರನಾಶಕ ಹೆಕ್ಸಾಕೊನಜೋಲ್ 5 % SC
ಮರ್ಜೆರ್ ಶಿಲೀಂಧ್ರನಾಶಕ ಟ್ರೈಸೈಕ್ಲಾಜೋಲ್ 18 % + ಮ್ಯಾಂಕೋಜೆಬ್ 62 % WP
ಗೋಡಿವಾ ಸೂಪರ್ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4%SC
  1. ಕಾಡಿಗೆ ರೋಗ / ಫಾಲ್ಸ್ ಸ್ಮಟ್ 

ಕಾರಣವಾದ ಜೀವಿ:  ಉಸ್ಟಿಲಜಿನೊಯಿಡಿಯಾ ವೈರೆನ್ಸ್ 

ರೋಗ ಬಾಧಿಸುವ ಹಂತಗಳು: ತೆನೆಯಲ್ಲಿ ಹೂಬಿಡುವ ಹಂತದಿಂದ ತೆನೆ ಕಟ್ಟುವ ಹಂತದವರೆಗೆ  

ಲಕ್ಷಣಗಳು: 

  • ಸ್ಪೈಕ್‌ಲೆಟ್‌ಗಳು/ ಹೂಗೊಂಚಲು  ಕಿತ್ತಳೆ ಅಥವಾ ಹಸಿರು ಮಿಶ್ರಿತ ಕಪ್ಪು ಬಣ್ಣದ ವೆಲ್ವೆಟ್ನಂತಹ  ಸ್ಮಟ್ ಬಾಲ್‌ಗಳನ್ನು ಹೊಂದಿರುತ್ತವೆ ಅಥವಾ ಕಾಳುಗಳು ಹಳದಿ ಅಥವಾ ದಟ್ಟ ಹಸಿರು ಬಣ್ಣದ ಮಣಿಗಳಾಗಿ ಮಾರ್ಪಾಡಾಗುತ್ತೆ.
  • ದಟ್ಟವಾದ  ಧಾನ್ಯಗಳಿಗೆ ಕಾರಣವಾಗುತ್ತದೆ 

ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು: 

25 – 35 ° C ಹೊಂದಿರುವ ತಾಪಮಾನ, 90% ಕ್ಕಿಂತ ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಭಾರೀ ಮಳೆ ಮತ್ತು ಗಾಳಿಗಳು ಕಾಡಿಗೆ ರೋಗದ  ಸೋಂಕಿಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಅಮಿಸ್ಟಾರ್ ಟಾಪ್ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 18.2% + ಡೈಫೆನೊಕೊನಜೋಲ್ 11.4% SC
ರೋಕೊ ಶಿಲೀಂಧ್ರನಾಶಕ ಥಿಯೋಫನೇಟ್ ಮೀಥೈಲ್ 70% WP
ಕಸ್ಟೋಡಿಯಾ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% SC
ಬಿ ಕಂಟ್ರೋಲ್  ಶಿಲೀಂಧ್ರನಾಶಕ ವಾಲಿಡಾಮೈಸಿನ್ 3% L

 

  1. ಎಲೆ ಕವಚದ ಮಚ್ಚೆ ರೋಗ 

ಕಾರಣವಾದ ಜೀವಿ  : ರೈಜೋಕ್ಟೋನಿಯಾ ಸೋಲಾನಿ 

ರೋಗ ಬಾಧಿಸುವ ಹಂತಗಳು: : ತೆಂಡೆಬರುವ ಹಂತದಿಂದ ಗರ್ಭಅಂಕುರದ ಹಂತದವರೆಗೆ 

ಲಕ್ಷಣಗಳು

  • ಆರಂಭದಲ್ಲಿ, ಹಸಿರು ಮಿಶ್ರಿತ ಬೂದು ಅಂಡಾಕಾರದ ಅಥವಾ ದೊಡ್ಡ ವೃತದ  ಗಾಯಗಳು ನೀರಿನ ಮಟ್ಟದ ಬಳಿ ಎಲೆಗಳ ಕವಚದ ಮೇಲೆ ಕಾಣಿಸಿಕೊಳ್ಳುತ್ತವೆ 
  • ನಂತರ, ಇದು ಬೂದು ಮಿಶ್ರಿತ ಬಿಳಿ ಮಧ್ಯಭಾಗ ಮತ್ತು ಕಂದು ಅಂಚಿನೊಂದಿಗೆ ತೀವ್ರತರದಲ್ಲಿ ಬೆಳೆಗಳಲ್ಲಿ ಗಾಯಗಳನ್ನು ರೂಪಿಸುತ್ತದೆ 

ರೋಗದ ಬೆಳವಣಿಗೆಗೆ ಅನುಕೂಲಕರ ಪರಿಸ್ಥಿತಿಗಳು: 

ಮಳೆಗಾಲದಲ್ಲಿ ರೋಗ ಹರಡುವಿಕೆ ಹೆಚ್ಚಾಗಿ ಕಂಡುಬರುತ್ತದೆ. ಹೆಚ್ಚಿನ ತಾಪಮಾನ, ಹೆಚ್ಚಿನ ಸಾಪೇಕ್ಷ ಆರ್ದ್ರತೆ, ಹೆಚ್ಚಿನ ಸಾರಜನಕ ಫಲೀಕರಣ, ಕಡಿಮೆ ಅಂತರದಲ್ಲಿ ನೆಟ್ಟ ಬತ್ತದ ಬೆಳೆಗಳು,  ಎಲೆ ಕವಚದ ಮಚ್ಚೆ ರೋಗದ  ಸೋಂಕಿಗೆ ಅನುಕೂಲಕರವಾದ ಪರಿಸ್ಥಿತಿಗಳಾಗಿವೆ.

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಫೋಲಿಕರ್ ಶಿಲೀಂಧ್ರನಾಶಕ ಟೆಬುಕೊನಜೋಲ್ 250 EC
ಕಸ್ಟೋಡಿಯಾ ಶಿಲೀಂಧ್ರನಾಶಕ ಅಜೋಕ್ಸಿಸ್ಟ್ರೋಬಿನ್ 11% + ಟೆಬುಕೊನಜೋಲ್ 18.3% SC
ಬಾವಿಸ್ಟಿನ್ ಶಿಲೀಂಧ್ರನಾಶಕ ಕಾರ್ಬೆಂಡಜಿಮ್ 50% WP
ಟಾಟಾ ಅಯಾನ್ ಶಿಲೀಂಧ್ರನಾಶಕ ಕ್ರೆಸೋಕ್ಸಿಮ್-ಮೆಥೈಲ್ 40%WG

 

  1. ರೈಸ್ ಟಂಗ್ರೋ ರೋಗ 

ರೈಸ್ ಟಂಗ್ರೋ ರೋಗಕ್ಕೆ ಕಾರಣವಾದ ಜೀವಿ: ರೈಸ್ ಟಂಗ್ರೋ ವೈರಸ್ (ಆರ್ಟಿಎಸ್ವಿ  ಮತ್ತು ಆರ್ಟಿಬಿವಿ ) 

ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ವಿಶೇಷವಾಗಿ ಸಸ್ಯಕ ಹಂತ 

ವೆಕ್ಟರ್/ ರೋಗವಾಹಕ : ಲೀಫ್‌ಹಾಪರ್ಸ್/ ಜಿಗಿ ಹುಳಗಳು 

 ಲಕ್ಷಣಗಳು

  • ಕುಂಠಿತಗೊಂಡ ಸಸ್ಯಗಳು, ಎಲೆಗಳು ಹಳದಿ ಬಣ್ಣ ಅಥವಾ ಕಿತ್ತಳೆ-ಹಳದಿ  ಬಣ್ಣಕ್ಕೆ ತಿರುಗುತ್ತದೆ .

 ಅನುಕೂಲಕರ ಪರಿಸ್ಥಿತಿಗಳು: 

ವೆಕ್ಟರ್ /ರೋಗವಾಹಕ ಇರುವುದರಿಂದ  , ಸೋಂಕಿತ ಸ್ಟಬಲ್ಸ್ಗಳು ಮತ್ತು ಹೊಲದಲ್ಲಿರುವ  ಕಳೆಗಳ ಮೂಲಕ ವೈರಸ್ ಮೂಲಗಳು RTV ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳಾಗಿವೆ.

ರಾಸಾಯನಿಕ ನಿರ್ವಹಣೆ: 

(ಗಮನಿಸಿ: ರೈಸ್ ಟಂಗ್ರೋ ವೈರಸ್‌ನಿಂದ ಬೆಳೆ ಸೋಂಕಿತವಾಗಿದ್ದರೆ, ಅದನ್ನು ನಿರ್ವಹಿಸಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಕೆಳಗಿನ ಉತ್ಪನ್ನಗಳು  ರೋಗವಾಹಕವನ್ನು  ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು)

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಚೆಸ್ ಕೀಟನಾಶಕ  ಪೈಮೆಟ್ರೋಜಿನ್ 50% ವಾಟರ್ ಡಿಸ್ಪರ್ಸಿಬಲ್ ಗ್ರ್ಯಾನ್ಯೂಲ್‌ಗಳಲಲಿ([WDG]
ಲಾರಾ 909 ಕೀಟನಾಶಕ  ಕ್ಲೋರೊಪಿರಿಫಾಸ್ 50%+ ಸೈಪರ್ಮೆಥ್ರಿನ್5% EC
ಅಂಶುಲ್ ಲಕ್ಷ  ಕೀಟನಾಶಕ  ಲ್ಯಾಂಬ್ಡಾ ಸೈಲೋಥ್ರಿನ್ 5% EC
ಅನಂತ್  ಕೀಟನಾಶಕ  ಥಿಯಾಮೆಥಾಕ್ಸಮ್ 25 % WG

 

  1. ಫುಟ್ ರಾಟ್  / ಬಕಾನೆ / ಫೂಲಿಷ್  ಸೀಡಲಿಂಗ್ ರೋಗ

: ಗಿಬ್ಬರೆಲ್ಲಾ ಫ್ಯೂಜಿಕುರೊಯಿ 

ಬಾಧಿಸುವ ಹಂತಕ್ಕೆ ಕಾರಣವಾದ ಜೀವಿಗಳು: ಮೊಳಕೆಯೊಡೆಯುವ ಹಂತದಿಂದ ಕಾಳು ತುಂಬುವವರೆಗೆ 

ಲಕ್ಷಣಗಳು

  • ಇದು ನರ್ಸರಿಯಲ್ಲಿನ ಮೊಳಕೆ ಬೀಜಗಳು  ಮತ್ತು ಮುಖ್ಯ ಜಮೀನಿನ ಸಸ್ಯಗಳ ಮೇಲೆ ಪರಿಣಾಮ ಬೀರುತ್ತದೆ 
  • ಸೋಂಕಿತ ಸಸ್ಯಗಳು ಹಳದಿ ಹಸಿರು ಮತ್ತು ತೆಳು ಎಲೆಗಳೊಂದಿಗೆ ಎತ್ತರದ ಮತ್ತು ತೆಳ್ಳಗಿನ ತೆನೆಗಳನ್ನು ಗಳನ್ನು ಉತ್ಪಾದಿಸುತ್ತವೆ. 

ಅನುಕೂಲಕರ ಪರಿಸ್ಥಿತಿಗಳು:

 ಸೋಂಕಿತ ಬೀಜಗಳು, ಬಲವಾದ ಗಾಳಿ ಮತ್ತು ನೀರು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸುತ್ತದೆ. ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ರೋಕೋ ಶಿಲೀಂಧ್ರನಾಶಕ (ಬೀಜೋಪಚಾರಕ್ಕೆ) ಥಿಯೋಫನೇಟ್ ಮೀಥೈಲ್ 70% WP
ಕಂಪ್ಯಾನಿಯನ್ ಶಿಲೀಂಧ್ರನಾಶಕ ಮ್ಯಾಂಕೋಜೆಬ್ 63%+ಕಾರ್ಬೆಂಡಜಿಮ್ 12% WP
ನೇಟಿವೋ   ಶಿಲೀಂಧ್ರನಾಶಕ ಟೆಬುಕೊನಜೋಲ್50% + ಟ್ರೈಫ್ಲೋಕ್ಸಿಸ್ಟ್ರೋಬಿ ನ್ 25%WG
ಟಾಟಾ ಅಯಾನ್   ಶಿಲೀಂಧ್ರನಾಶಕ ಕ್ರೆಸೊಕ್ಸಿಮ್-ಮೀಥೈಲ್40% +ಹೆಕ್ಸಾಕೊನಜೋಲ್ 8% WG

 

  1. ಭತ್ತದ ಕಾಂಡ ಕೊಳೆತ: 

ಕಾರಣವಾದ ಜೀವಿ: ಸ್ಕ್ಲೆರೋಟಿಯಮ್ ಒರಿಝೆ

 ಬಾಧಿಸುವ ಹಂತಗಳು: ಕಾಳು ತುಂಬುವ / ಕಟ್ಟುವ ಆರಂಭಿಕ ಹಂತ

ಲಕ್ಷಣಗಳು: 

  • ಪ್ರಾರಂಭದಲ್ಲಿ , ಹೊರಗಿನ ಎಲೆಗಳ ಪೊರೆಗಳ ಕೆಳಭಾಗದಲ್ಲಿ ಸಣ್ಣ ಕಪ್ಪು ಗಾಯಗಳು ಕಂಡುಬರುತ್ತವೆ  
  • ಸೋಂಕಿತ ಗೆಣ್ಣುಗಳು ಅಥವಾ ಸಸ್ಯಗಳು  ಬಾಗುತ್ತವೆ ಮತ್ತು ಸೀಮೆ ಸುಣ್ಣದಂತಹ ಧಾನ್ಯಗಳನ್ನು ಉತ್ಪಾದಿಸುತ್ತದೆ 

ಅನುಕೂಲಕರ ಪರಿಸ್ಥಿತಿಗಳು: 

ಹೆಚ್ಚಿನ ಸಾರಜನಕ ರಸಗೊಬ್ಬರಗಳ ಬಳಕೆ. ಕೋರೆಗಳು, ಕೀಟಗಳ ದಾಳಿಯಿಂದ ಉಂಟಾದ  ಗಾಯಗಳನ್ನು ಹೊಂದಿರುವ ಸಸ್ಯಗಳು ರೋಗದ ಸೋಂಕಿಗೆ ಅನುಕೂಲಕರ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು. 

ರಾಸಾಯನಿಕ ನಿರ್ವಹಣೆ:

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಬಾವಿಸ್ತೀನ್  ಶಿಲೀಂಧ್ರನಾಶಕ  ಕಾರ್ಬೆಂಡಜಿಮ್ 50% WP
ಅವನ್ಸರ್ ಗ್ಲೋ  ಶಿಲೀಂಧ್ರನಾಶಕ 8.3% ಅಜೋಕ್ಸಿಸ್ಟ್ರೋಬಿನ್+66.7% WG ಮ್ಯಾಂಕೋಜೆಬ್
ಅವ್ತಾರ್   ಶಿಲೀಂಧ್ರನಾಶಕ ಜಿನೆಬ್ 68%+ಹೆಕ್ಸಾಕೊನಜೋಲ್4%
ಬಿ ಕಂಟ್ರೋಲ್   ಶಿಲೀಂಧ್ರನಾಶಕ ವ್ಯಾಲಿಡಾಮೈಸಿನ್3% L
  1. ರೈಸ್ ಗ್ರಾಸಿ ಸ್ಟಂಟ್ ರೋಗ 

ಕಾರಣವಾದ ಜೀವಿ : ರೈಸ್ ಗ್ರಾಸಿ ಸ್ಟಂಟ್ ಟೆನ್ಯುವೈರಸ್

ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ಆದರೆ ಕಾಳು ತುಂಬುವ  ಹಂತದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ 

 ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH) 

ಲಕ್ಷಣಗಳು: 

  • ಕುಂಠಿತ ಬೆಳವಣಿಗೆ, ಅತಿಯಾಗಿ ಭತ್ತದ ತೆನೆಯಲ್ಲಿ ಕಾಳು ಕಟ್ಟುವುದು 
  • ಅತಿ ಹೆಚ್ಚಿನ ತೆನೆಯ/ಟಿಲ್ಲರ್ ಗಳ  ಕಾರಣದಿಂದ ಹುಲ್ಲಿನಂತ ನೋಟ  ಮತ್ತು ಸೋಂಕಿತ ಸಸ್ಯಗಳಲ್ಲಿ ಅತ್ಯಂತ ನೇರ ಸಸ್ಯ ಬೆಳವಣಿಗೆ ಕಾಣಬಹುದು 

ಅನುಕೂಲಕರ ಪರಿಸ್ಥಿತಿಗಳು:

ಭತ್ತವನ್ನು ನಿರಂತರವಾಗಿ ಮತ್ತು ವರ್ಷವಿಡೀ ಬೆಳೆಯುವ ಸ್ಥಳಗಳು ರೋಗವನ್ನು ಹರಡಲು ರೋಗವಾಹಕ/ವೆಕ್ಟರ್‌ಗೆ ಅನುಕೂಲಕರ ಪರಿಸ್ಥಿತಿ ಆಗಿರುತ್ತದೆ .

ರಾಸಾಯನಿಕ ನಿರ್ವಹಣೆ: 

(ಗಮನಿಸಿ: ಭತ್ತದ ಹುಲ್ಲಿನ ಸ್ಟಂಟ್ ರೋಗದಿಂದ ಬೆಳೆ ಸೋಂಕಿಗೆ ಒಳಗಾಗಿದ್ದರೆ, ಅದನ್ನು ನಿರ್ವಹಿಸಲಾಗುವುದಿಲ್ಲ ಅಥವಾ ಗುಣಪಡಿಸಲಾಗುವುದಿಲ್ಲ. ರೋಗವಾಹಕವಾದ ಕಂದು ಜಿಗಿ ಹುಳ/ ಬ್ರೌನ್ ಪ್ಲಾಂಟ್ ಹಾಪರ್ (BPH) ಅನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಕೆಳಗಿನ ಉತ್ಪನ್ನಗಳನ್ನು ಬಳಸಬಹುದು)

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಲ್ಯಾನ್ಸರ್ ಗೋಲ್ಡ್  ಕೀಟನಾಶಕ  ಅಸಿಫೇಟ್ 50%+ ಇಮಿಡಾಕ್ಲೋಪ್ರಿಡ್ 1.8% SP
ಪ್ರಿಡೇಟರ್  ಕೀಟನಾಶಕ  ಕ್ಲೋರೋಪಿರಿಫಾಸ್ 50% EC
ಕಾತ್ಯಾಯಿನಿ ಬಿ ಪಿ ಹೆಚ್ ಸೂಪರ್  ಕೀಟನಾಶಕ  ಪೈಮೆಟ್ರೋಜಿನ್ 50% WG
ಓಡಿಸ್  ಕೀಟನಾಶಕ  ಬುಪ್ರೊಫೆಜಿನ್ 20%+ ಅಸಿಫೇಟ್ 50%

 

  1. ಟಂಗ್ರೋ ರೋಗ/ರೈಸ್ ರೆಗ್ಗೇಡ್ ಸ್ಟಂಟ್ ರೋಗ

ಕಾರಣವಾದ ಜೀವಿ: ರೈಸ್ ರೆಗ್ಗೇಡ್ ಸ್ಟಂಟ್ ವೈರಸ್

ಬಾಧಿಸುವ ಹಂತಗಳು: ಎಲ್ಲಾ ಬೆಳವಣಿಗೆಯ ಹಂತಗಳು ಆದರೆ ಕಾಳು ತುಂಬುವ  ಹಂತದಲ್ಲಿ ದಾಳಿಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ 

ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH)

ಲಕ್ಷಣಗಳು:

  • ಅಸಮ ಅಂಚುಗಳನ್ನು ಹೊಂದಿರುವ ಎಲೆಗಳು, ಎಲೆಯ ಬ್ಲೇಡ್ ಅನ್ನು ಸುರುಳಿಯಾಕಾರದ ಆಕಾರಕ್ಕೆ ತಿರುಚಿದ ಹಾಗೆ  “ ರೆಗ್ಗೇಡ್ ನೋಟ”
  •  ಕುಂಠಿತ ಬೆಳವಣಿಗೆ, ಅಪೂರ್ಣ ಹೂಗೊಂಚಲು  ಹೊರಹೊಮ್ಮುವಿಕೆ 

ಅನುಕೂಲಕರ ಪರಿಸ್ಥಿತಿಗಳು: 

ಭತ್ತವನ್ನು ನಿರಂತರವಾಗಿ ಮತ್ತು ವರ್ಷಪೂರ್ತಿ ಬೆಳೆಯುವ ಪ್ರದೇಶಗಳು ರೋಗಕಾರಕಕ್ಕೆ ನಿರಂತರ ಆತಿಥ್ಯವನ್ನು ಒದಗಿಸುವ ರೋಗ ಹರಡುವಿಕೆಗೆ ಅನುಕೂಲಕರವಾದ ಪರಿಸ್ಥಿತಿಗಳನ್ನು ಸೃಷ್ಟಿಸಬಹುದು. 

ರಾಸಾಯನಿಕ ನಿರ್ವಹಣೆ:

(ಗಮನಿಸಿ: ಟಂಗ್ರೋ ರೋಗ/ರೈಸ್ ರೆಗ್ಗೇಡ್ ಸ್ಟಂಟ್ ರೋಗದಿಂದ ಬೆಳೆ ಸೋಂಕಿತವಾಗಿದ್ದರೆ, ಅದನ್ನು ನಿರ್ವಹಿಸಲು ಅಥವಾ ಗುಣಪಡಿಸಲು ಸಾಧ್ಯವಿಲ್ಲ. ಕೆಳಗಿನ ಉತ್ಪನ್ನಗಳನ್ನು ವೆಕ್ಟರ್/ ರೋಗವಾಹಕ: ಕಂದು ಜಿಗಿ ಹುಳ /ಬ್ರೌನ್ ಪ್ಲಾಂಟ್ ಹಾಪರ್ (BPH) ಅನ್ನು ನಿಯಂತ್ರಿಸಲು ಮತ್ತು ಭತ್ತದ ಗದ್ದೆಯಲ್ಲಿ ವೈರಸ್ ಹರಡುವುದನ್ನು ತಡೆಯಲು ಬಳಸಬಹುದು). 

ವ್ಯಾವಹಾರಿಕ ಹೆಸರು (ಟ್ರೇಡ್ ನೇಮ್) ತಾಂತ್ರಿಕ ಅಂಶದ ಹೆಸರು /ರಾಸಾಯನಿಕ ಹೆಸರು  
ಲ್ಯಾನ್ಸರ್ ಗೋಲ್ಡ್  ಕೀಟನಾಶಕ  ಅಸಿಫೇಟ್ 50%+ ಇಮಿಡಾಕ್ಲೋಪ್ರಿಡ್ 1.8% SP
ಪ್ರಿಡೇಟರ್  ಕೀಟನಾಶಕ  ಕ್ಲೋರೋಪಿರಿಫಾಸ್ 50% EC
ಕಾತ್ಯಾಯಿನಿ ಬಿ ಪಿ ಹೆಚ್ ಸೂಪರ್  ಕೀಟನಾಶಕ  ಪೈಮೆಟ್ರೋಜಿನ್ 50% WG
ಓಡಿಸ್  ಕೀಟನಾಶಕ  ಬುಪ್ರೊಫೆಜಿನ್ 20%+ ಅಸಿಫೇಟ್ 50%

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು