ಸುಸ್ಥಿರ ಕೃಷಿ ಪದ್ದತಿಯಲ್ಲಿ ಸರಳವಾದ ಆದರೆ ಆಳವಾದ ವಿಷಯವೇನೆಂದರೆ ತ್ಯಾಜ್ಯವನ್ನು ಸಂಪತ್ತಾಗಿ ಪರಿವರ್ತಿಸುವುದು. ಸಾವಯವ ಕೃಷಿ ತ್ಯಾಜ್ಯವು ನಮಗೆ ಹೊರೆಯಾಗಿರದೆ ಮಣ್ಣನ್ನು ಸಮೃದ್ಧಗೊಳಿಸುವ, ಸಸ್ಯಗಳನ್ನು ಪೋಷಿಸುವ ಮತ್ತು ಆರೋಗ್ಯಕರ ಪರಿಸರವನ್ನು ಉತ್ತೇಜಿಸುವ ಅಮೂಲ್ಯವಾದ ಜಗತ್ತನ್ನು ಸೃಷ್ಟಿಸುತ್ತದೆ. ಜೈವಿಕ ತ್ಯಾಜ್ಯದ ತ್ವರಿತ ಏರೋಬಿಕ್ ಮಿಶ್ರಗೊಬ್ಬರಕ್ಕಾಗಿ ವಿನ್ಯಾಸಗೊಳಿಸಲಾದ ಸೂಕ್ಷ್ಮಜೀವಿ ಮಿಶ್ರಣವಾದ ಬಯೋಕ್ಯುಲಮ್ AW ಮೂಲಕ ಅಂತಹ ಜಗತ್ತು ಸೃಷ್ಟಿಯಾಗಲು ಸಾಧ್ಯವಾಗುತ್ತದೆ
ಉತ್ಪನ್ನದ ಸಂಯೋಜನೆ
ಇದು ಸ್ವಾಮ್ಯದ ಸ್ವಭಾವದ ಸೂಕ್ಷ್ಮಜೀವಿಗಳನ್ನು ಒಳಗೊಂಡಿರುತ್ತದೆ ಮತ್ತು ಕಿಣ್ವಗಳೊಂದಿಗೆ ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಮಿಶ್ರಣವನ್ನು ಹೊಂದಿರುತ್ತದೆ.
ಬಯೋಕ್ಯುಲಮ್ AW ಕೆಲಸ ಮಾಡುವ ವಿಧಾನ
ಬಯೋಕ್ಯುಲಮ್-AW ತ್ಯಾಜ್ಯವನ್ನು ಏರೋಬಿಕ್ ರೂಪದಲ್ಲಿ ಕೊಳೆಯುವಂತೆ ಮಾಡುತ್ತದೆ, ಮಿಶ್ರ ಗೊಬ್ಬರದ ಪದಾರ್ಥಗಳ ತಾಪಮಾನವನ್ನು 25 ರಿಂದ 300 ಸಿ (ಡಿಗ್ರಿ ಸೆಲ್ಸಿಯಸ್) ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯು ದೊಡ್ಡಗಾತ್ರದ ಸಾವಯವ ಅಣುಗಳನ್ನು ಚೂರಾಗಿಸುತ್ತದೆ , ಸಾರಜನಕವನ್ನು ಹೀರಿಕೊಳ್ಳುತ್ತದೆ ಮತ್ತು ಇಂಗಾಲದ ಡೈಆಕ್ಸೈಡ್ (CO2)ಅನ್ನು ಬಿಡುಗಡೆ ಮಾಡುತ್ತದೆ. ಇದು ನೈಸರ್ಗಿಕ ಮಿಶ್ರಗೊಬ್ಬರ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ಯಾವುದೇ ವಿಷಕಾರಿ ಅಥವಾ ಅಪಾಯಕಾರಿ ಅಂಶಗಳ ಬಳಕೆಯ ಹೊರತಾಗಿ ತ್ಯಾಜ್ಯವನ್ನು ಸಮೃದ್ಧ ಗೊಬ್ಬರವಾಗಿ ಪರಿವರ್ತಿಸುತ್ತದೆ.
ಬಯೋಕ್ಯುಲಮ್ AW ತಯಾರಿಕೆಯ ವಿಧಾನ:
- ಮಿಶ್ರಣವನ್ನು ತಯಾರಿಸುವುದು: ಬಯೋಕ್ಯುಲಮ್ AW ಪುಡಿಯನ್ನು ನೀರಿನೊಂದಿಗೆ ಬೆರೆಸುವ ಮೂಲಕ ಮಿಶ್ರಣವನ್ನು ತಯಾರಿಸಿ
- ತ್ಯಾಜ್ಯದೊಂದಿಗೆ ಮಿಶ್ರಣ ಮಾಡಿ: ಸಾವಯವ ತ್ಯಾಜ್ಯಕ್ಕೆ ಆ ಮಿಶ್ರಣವನ್ನು ಸಂಪೂರ್ಣವಾಗಿ ಬೆರೆಸಿ, ಮಿಶ್ರಣ ಮಾಡಿ.
- ಗುಡ್ಡೆಯನ್ನು ರಚಿಸಿ: ಸಂಸ್ಕರಿಸಿದ ತ್ಯಾಜ್ಯವನ್ನು ಗುಡ್ಡೆಯಾಗಿ ಇರಿಸಿ ಮತ್ತು ತಾಪಮಾನವನ್ನು ಆಗ್ಗಾಗೆ ಮೇಲ್ವಿಚಾರಣೆ ಮಾಡಿ, ಅದು ಸುಮಾರು 70 ° C ಗೆ ಏರಿಕೆಯಾಗುವಂತೆ ಬಿಡಿ.
- ವಾರಕ್ಕೊಮ್ಮೆ ತಿರಿಗುಸುವುದು: ಸರಿಯಾದ ಗಾಳಿ ಮತ್ತು ತ್ಯಾಜ್ಯದ ಕೊಳೆಯುವಿಕೆಯನ್ನು ಖಚಿತಪಡಿಸಿಕೊಳ್ಳಲು ವಾರಕ್ಕೊಮ್ಮೆ ಗುಡ್ಡೆಯನ್ನು ತಲೆಕೆಳಗಾಗಿ ತಿರುಗಿಸಿ.
- ಕ್ರಿಯಾತ್ಮಕ ಪ್ರಯೋಜನಗಳು: ಇದು ಜೈವಿಕ ವಿಘಟನೀಯ ಸಾವಯವ ಕೃಷಿ ತ್ಯಾಜ್ಯದ ಏರೋಬಿಕ್ ಮಿಶ್ರಗೊಬ್ಬರವನ್ನು ವೇಗಗೊಳಿಸುತ್ತದೆ. ಅಂತಿಮವಾಗಿ ತಯಾರಾಗುವ ಗೊಬ್ಬರದಲ್ಲಿ ಸಸ್ಯ ಪೋಷಕಾಂಶಗಳು ಮತ್ತು ಖನಿಜಗಳನ್ನು ಸಂರಕ್ಷಿಸುತ್ತದೆ.ಇದರ ನಿರ್ವಹಣೆ ತುಂಬಾ ಸುರಕ್ಷಿತ ಮತ್ತು ಬಳಸಲು ಸಹ ಸುಲಭ. ರೋಗಕಾರಕಗಳು, ದುರ್ವಾಸನೆ ಮತ್ತು ಕಳೆ ಬೀಜಗಳಿಂದ ಮುಕ್ತವಾದ ಜೈವಿಕ ಸ್ಥಿರ ಸಾವಯವ ಗೊಬ್ಬರವನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಕೃಷಿ ಭೂಮಿಗಳಲ್ಲಿ ತ್ಯಾಜ್ಯ ನಿರ್ವಹಣೆ ಸಮಸ್ಯೆಗಳನ್ನು ಪರಿಹರಿಸಲು ಇದು ಪರಿಸರ ಸ್ನೇಹಿ ಉತ್ಪನ್ನವಾಗಿದೆ.
ಪ್ರಯೋಜನಗಳು
ಬಯೋಕ್ಯುಲಮ್ AW ಉತ್ಪನ್ನವು ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ, ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಉತ್ತೇಜಿಸುತ್ತದೆ ಮತ್ತು ಅಗತ್ಯ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ,ಅದಲ್ಲದೆ ಕೀಟಗಳು ಮತ್ತು ರೋಗಗಳಿಂದ ಸಸ್ಯಗಳನ್ನು ರಕ್ಷಿಸುತ್ತದೆ. ರೈತರಿಗೆ, ಇದು ಆರೋಗ್ಯಕರ ಬೆಳೆಗಳು, ಅಧಿಕ ಇಳುವರಿ ಮತ್ತು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಇದು ಅಧಿಕ ಲಾಭದಾಯಕತೆ ಮತ್ತು ಸುಸ್ಥಿರ ಕೃಷಿ ಪದ್ಧತಿಗಳಿಗೆ ಕೊಡುಗೆ ನೀಡುತ್ತದೆ.
- ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತದೆ: ಬಯೋಕ್ಯುಲಮ್ AW ಮಣ್ಣಿನಲ್ಲಿ ಸೂಕ್ಷ್ಮಜೀವಿಗಳ ಚಟುವಟಿಕೆಯನ್ನು ಹೆಚ್ಚಿಸುತ್ತದೆ ಮತ್ತು ಅಗತ್ಯ ಪೋಷಕಾಂಶಗಳನ್ನು ಬಿಡುಗಡೆ ಮಾಡುತ್ತದೆ, ಮಣ್ಣಿನ ಆರೋಗ್ಯ ಮತ್ತು ಫಲವತ್ತತೆಯನ್ನು ಸುಧಾರಿಸುತ್ತದೆ.
- ಕೀಟಗಳು ಮತ್ತು ರೋಗಗಳ ವಿರುದ್ಧ ಬೆಳೆಯನ್ನು ರಕ್ಷಿಸುತ್ತದೆ: ಇದು ಸಸ್ಯಗಳನ್ನು ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್ ಸೋಂಕಿನಿಂದ ರಕ್ಷಿಸಲು ಸಹಾಯ ಮಾಡುತ್ತದೆ.ಕೀಟಗಳು ಮತ್ತು ರೋಗಗಳ ಸಂಭವವನ್ನು ಕಡಿಮೆ ಮಾಡುತ್ತದೆ.
- ತ್ವರಿತ ಮಿಶ್ರಗೊಬ್ಬರ ತಯಾರಿಕೆ: ಬಯೋಕ್ಯುಲಮ್ AW ತ್ವರಿತವಾಗಿ ಸಾವಯವ ತ್ಯಾಜ್ಯವನ್ನು ಪೌಷ್ಟಿಕಾಂಶ-ಭರಿತ ಮಿಶ್ರಗೊಬ್ಬರವಾಗಿ ಪರಿವರ್ತಿಸುತ್ತದೆ, ಸಸ್ಯಗಳಿಗೆ ಅಮೂಲ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
- ಬೀಜ ಮೊಳಕೆಯೊಡೆಯುವಿಕೆ ಮತ್ತು ಮೊಳಕೆಗಳ ರಕ್ಷಣೆಯನ್ನು ಸುಧಾರಿಸುತ್ತದೆ: ಇದು ಬೀಜಗಳ ಮೊಳಕೆಯೊಡೆಯುವಿಕೆಯ ಪ್ರಮಾಣವನ್ನು ಹೆಚ್ಚಿಸುತ್ತದೆ ಮತ್ತು ಎಳೆಯ ಮೊಳಕೆಗಳನ್ನು ರಕ್ಷಿಸುತ್ತದೆ, ಆರೋಗ್ಯಕರ ಆರಂಭಿಕ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
- ತ್ವರಿತ ಕ್ರಿಯೆಯ ಮಿಶ್ರಗೊಬ್ಬರದ ಮಿಶ್ರಣ: ಈ ಬಳಸಲು ಸಿದ್ದವಾದ ಸೂತ್ರೀಕರಣವು ಭಾರತೀಯ ರೈತರಿಗೆ ಲಭ್ಯವಿರುವ ಅತ್ಯಂತ ವೇಗವಾಗಿ ಕಾರ್ಯನಿರ್ವಹಿಸುವ ಮಿಶ್ರಗೊಬ್ಬರ ಮಿಶ್ರಣವಾಗಿದ್ದು, ಏರೋಬಿಕ್ ಪ್ರಕ್ರಿಯೆಗಳ ಮೂಲಕ ಸಾವಯವ ತ್ಯಾಜ್ಯವನ್ನು ಕೇವಲ 30-35 ದಿನಗಳಲ್ಲಿ ಮಿಶ್ರಗೊಬ್ಬರವಾಗಿ ಪರಿವರ್ತಿಸುತ್ತದೆ.
ಶಿಫಾರಸ್ಸು
- ನರ್ಸರಿ ಮತ್ತು ಮುಖ್ಯ ಬೆಳೆಗಳು ಸೇರಿದಂತೆ ಕ್ಷೇತ್ರ ಬೆಳೆಗಳು, ತೋಟಗಾರಿಕೆ ಬೆಳೆಗಳು, ಬಹುವಾರ್ಷಿಕ ಮತ್ತು ತರಕಾರಿ ಬೆಳೆಗಳಂತಹ ಎಲ್ಲಾ ಬೆಳೆಗಳಿಗೆ ಶಿಫಾರಸು ಮಾಡಲಾಗಿದೆ.
- ಪೂರ್ಣಗೊಂಡ ಮಿಶ್ರಗೊಬ್ಬರವನ್ನು ಹುಲ್ಲುಹಾಸುಗಳು, ನರ್ಸರಿಗಳು ಮತ್ತು ರೈತರ ಹೊಲಗಳಲ್ಲಿ ಬಳಸಬಹುದು. ಇದನ್ನು ಕೃಷಿ ಮತ್ತು ತೋಟಗಾರಿಕೆ ಬೆಳೆಗಳಲ್ಲಿ ಜೈವಿಕ ಸಾವಯವ ಮಣ್ಣಿನ ಸಮೃದ್ಧವಾಗಿಸುವ ಉತ್ಪನ್ನವಾಗಿ ಬಳಸಬಹುದು.
- ಕೃಷಿ ಕಾರ್ಯಾಚರಣೆಯ ಸಮಯದಲ್ಲಿ ಉತ್ಪತ್ತಿಯಾಗುವ ಎಲ್ಲಾ ರೀತಿಯ ಸಾವಯವ ಕೃಷಿ ತ್ಯಾಜ್ಯಗಳನ್ನುಬಳಸಲು ಸೂಕ್ತವಾಗಿದೆ. ಈ ತ್ಯಾಜ್ಯವು ಸಾವಯವ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಸರಿಯಾದ ಮಿಶ್ರಗೊಬ್ಬರವು ಹೆಚ್ಚಿನ ಪೋಷಕಾಂಶಗಳನ್ನು ಹೊಂದಿರುವ ಸ್ಥಿರ ಸಾವಯವ ಗೊಬ್ಬರದ ಸಮೃದ್ಧ ಪೂರೈಕೆಯಾಗಿ ಪರಿವರ್ತಿಸುತ್ತದೆ.
ಬಳಕೆಯ ಪ್ರಮಾಣ
ಬಯೋಕ್ಯುಲಮ್ AW ನೊಂದಿಗೆ ಅತ್ಯುತ್ತಮ ಫಲಿತಾಂಶಗಳನ್ನು ಸಾಧಿಸಲು, ಸರಿಯಾದ ಪ್ರಮಾಣದಲ್ಲಿ ಬಳಸುವುದು ಮುಖ್ಯವಾಗಿದೆ. 1 ಕೆಜಿ ಬಯೋಕ್ಯುಲಮ್ AW ಉತ್ಪನ್ನವು 1,000 ಕಿಲೋಗ್ರಾಂಗಳಷ್ಟು (1 ಮೆಟ್ರಿಕ್ ಟನ್) ಸಾವಯವ ತ್ಯಾಜ್ಯವನ್ನು ಗೊಬ್ಬರವನ್ನಾಗಿ ತಯಾರಿಸುವ ಸಾಮರ್ಥ್ಯವನ್ನು ಹೊಂದಿದೆ.
ಬಳಕೆಯ ವಿಧಾನ
- ತ್ಯಾಜ್ಯದ ತೇವಾಂಶ ಹೆಚ್ಚಾಗಿದ್ದರೆ ಬಯೋಕ್ಯುಲಮ್ ಪುಡಿಯನ್ನು ನೇರವಾಗಿ ತ್ಯಾಜ್ಯದ ಮೇಲೆ ಸಿಂಪಡಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ತ್ಯಾಜ್ಯವು ಒಣಗಿದ್ದರೆ, ಒಂದು ಕೆಜಿ ಬಯೋಕ್ಯುಲಮ್ AW ಅನ್ನು 30 ಲೀಟರ್ ನೀರಿನಲ್ಲಿ ಬೆರೆಸಿ, ಮಿಶ್ರಣ ತಯಾರಿಸಿ ನಂತರ ಆ ಮಿಶ್ರಣವನ್ನು ತ್ಯಾಜ್ಯದ ಮೇಲೆ ಸಿಂಪಡಿಸಿ. ಮಿಶ್ರಣ ಮಾಡಿದ ನಂತರ, ಸಂಸ್ಕರಿಸಿದ ತ್ಯಾಜ್ಯವನ್ನು ಗುಡ್ಡೆಯ ರೂಪದಲ್ಲಿ ಇರಿಸಿ. ಉತ್ತಮ ಫಲಿತಾಂಶಗಳಿಗಾಗಿ, ಗುಡ್ಡೆಯ ಅಗಲವನ್ನು 3 ರಿಂದ 4 ಮೀಟರ್ ಮತ್ತು ಎತ್ತರವನ್ನು 2 ಮೀಟರ್ ವರೆಗೆ ಇರುವಂತೆ ನೋಡಿಕೊಳ್ಳಿ.
- ಗುಡ್ಡೆಯ ತೇವಾಂಶದ ಮಟ್ಟವನ್ನು 40-45% ವರೆಗೆ ಇರುವಂತೆ ಖಚಿತಪಡಿಸಿಕೊಳ್ಳಿ. ಅಗತ್ಯವಿದ್ದರೆ, ತೇವಾಂಶದ ಮಟ್ಟವನ್ನು ಕಾಪಾಡಿಕೊಳ್ಳಲು ಆಗ್ಗಾಗೆ ನೀರನ್ನು ಸಿಂಪಡಿಸಿ.
- ಸೂಕ್ತ ಗಾಳಿಯ ವ್ಯವಸ್ಥೆಯನ್ನು ಒದಗಿಸಲು ಪ್ರತಿ ವಾರ ಗುಡ್ಡೆಯನ್ನು ತಲೆಕೆಳಗಾಗಿ ತಿರುಗಿಸಿ.
- ಗುಡ್ಡೆ ರಚನೆಯ ಮೊದಲ ವಾರದಲ್ಲಿ ತಾಪಮಾನವು 60 ° C ಗಿಂತ ಹೆಚ್ಚಾಗದಿದ್ದರೆ, ಬಯೋಕ್ಯುಲಮ್ AW ಅನ್ನು ಮೊದಲ ಬಾರಿಗೆ ಬಳಸಿದ ಪ್ರಮಾಣದ ಅರ್ಧದಷ್ಟು ಪ್ರಮಾಣದಲ್ಲಿ ಬಳಸಿ.
- ಸಾಮಾನ್ಯವಾಗಿ ತೆರೆದ ಪ್ರದೇಶದಲ್ಲಿ ತಾಪಮಾನ ಏರಿಕೆಯಾಗುವುದಿಲ್ಲ ಮತ್ತು ಕಳೆಗಳ ಬೀಜ ಮತ್ತು ಕೀಟಗಳನ್ನು ನಿಯಂತ್ರಿಸುವುದು ಕಷ್ಟವಾಗಿರುತ್ತದೆ. ಆದರೆ, ಬಯೋಕ್ಯುಲಮ್ AW ಕೃಷಿ ತ್ಯಾಜ್ಯವನ್ನು 35 ರಿಂದ 40 ದಿನಗಳಲ್ಲಿ ಕೊಳೆಯುವಂತೆ ಮಾಡುವುದು ಮಾತ್ರವಲ್ಲದೆ ಕಳೆಗಳ ಬೀಜ ಮತ್ತು ಕೀಟಗಳನ್ನು ನಿಯಂತ್ರಿಸುತ್ತದೆ
ಬಯೋಕ್ಯುಲಮ್ AW ನ ಶೇಖರಣೆ ಮತ್ತು ಶೇಖರಣಾ ಸಾಮರ್ಥ್ಯ
ಬಯೋಕ್ಯುಲಮ್ AW ಅನ್ನು ಒಣ ವಾತಾವರಣದಲ್ಲಿ ಇರಿಸಿ ಮತ್ತು ನೇರ ಸೂರ್ಯನ ಬೆಳಕಿನಿಂದ ದೂರದಲ್ಲಿ, 10 ರಿಂದ 40 ° C ತಾಪಮಾನದಲ್ಲಿ ಇರಿಯಬೇಕು. ಈ ಉತ್ಪನ್ನವು ಒಂದು ವರ್ಷದ ಶೇಖರಣಾ ಸಾಮರ್ಥ್ಯವನ್ನು ಹೊಂದಿದೆ.
ಹಿನ್ನುಡಿ
ಕೃಷಿಯಲ್ಲಿ ಸಾವಯವ ತ್ಯಾಜ್ಯವನ್ನು ನಿರ್ವಹಿಸಲು ಬಯೋಕ್ಯುಲಮ್ AW ಸಮರ್ಥನೀಯ ಮತ್ತು ಸಮರ್ಥ ಪರಿಹಾರವಾಗಿದೆ. ತ್ಯಾಜ್ಯವನ್ನು ತ್ವರಿತವಾಗಿ ಪೋಷಕಾಂಶ-ಸಮೃದ್ಧ ಮಿಶ್ರಗೊಬ್ಬರವಾಗಿ ಪರಿವರ್ತಿಸುವ ಮೂಲಕ, ಇದು ಮಣ್ಣಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸುತ್ತದೆ. ಈ ನವೀನ ಉತ್ಪನ್ನವು ಅಧಿಕ ಬೆಳೆ ಇಳುವರಿಯನ್ನು ಬೆಂಬಲಿಸುತ್ತದೆ ಮತ್ತು ರಾಸಾಯನಿಕ ಗೊಬ್ಬರಗಳ ಬಳಕೆಯ ಅಗತ್ಯವನ್ನು ಕಡಿಮೆ ಮಾಡುತ್ತದೆ. ಇದು ರೈತರಿಗೆ ಮತ್ತು ಕೈ ತೋಟ ಮಾಲೀಕರಿಗೆ ಅಮೂಲ್ಯವಾದ ಸಾಧನವಾಗಿದೆ. ಜೈವಿಕ ತ್ಯಾಜ್ಯವನ್ನು ಆರೋಗ್ಯಕರ ಮತ್ತು ಹೆಚ್ಚು ಉತ್ಪಾದಕ ಕೃಷಿ ಅಭ್ಯಾಸಕ್ಕಾಗಿ ಶಕ್ತಿಯುತ ಸಂಪನ್ಮೂಲವಾಗಿ ಪರಿವರ್ತಿಸಲು ಬಯೋಕ್ಯುಲಮ್ AW ಅನ್ನು ಇಂದೇ ಆಯ್ಕೆಮಾಡಿ.