HomeCropಈರುಳ್ಳಿ ಬೆಳೆಗೆ ಭೂಮಿ ಸಿದ್ದತೆ 

ಈರುಳ್ಳಿ ಬೆಳೆಗೆ ಭೂಮಿ ಸಿದ್ದತೆ 

ಈರುಳ್ಳಿ ಉತ್ಪಾದನೆಯಲ್ಲಿ ಭಾರತವು  ಎರಡನೇ ಸ್ಥಾನದಲ್ಲಿದೆ. ಭಾರತೀಯ ಈರುಳ್ಳಿಗಳು ಖಾರಕ್ಕೆ ಪ್ರಸಿದ್ಧವಾಗಿವೆ ಮತ್ತು ವರ್ಷವಿಡೀ ಲಭ್ಯವಿವೆ. ಈ ಕಾರಣದಿಂದಾಗಿ ಭಾರತೀಯ ಈರುಳ್ಳಿಗೆ ಸಾಕಷ್ಟು ಬೇಡಿಕೆಯಿದೆ. ಭಾರತವು 3,432.14 ಕೋಟಿ ರೂ. ಮೌಲ್ಯದ 1,537,496.89 MT ತಾಜಾ ಈರುಳ್ಳಿಯನ್ನು ಜಗತ್ತಿಗೆ  ರಫ್ತು ಮಾಡಿದೆ.  ಈರುಳ್ಳಿಯನ್ನು ರಫ್ತುಮಾಡುವ ಪ್ರಮುಖ ರಾಷ್ಟ್ರಗಳೆಂದರೆ ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ, ಯುನೈಟೆಡ್ ಅರಬ್ ಇಎಮ್‌ಟಿಗಳು, ನೇಪಾಳ ಮತ್ತು ಇಂಡೋನೇಷ್ಯಾ. ಭಾರತದಲ್ಲಿ ಈರುಳ್ಳಿ ಬೆಳೆಯುವ ಪ್ರಮುಖ ರಾಜ್ಯಗಳು ಮಹಾರಾಷ್ಟ್ರ, ಮಧ್ಯಪ್ರದೇಶ, ಕರ್ನಾಟಕ, ಗುಜರಾತ್, ರಾಜಸ್ಥಾನ, ಬಿಹಾರ, ಆಂಧ್ರಪ್ರದೇಶ, ಹರಿಯಾಣ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಛತ್ತೀಸ್‌ಗಢ, ಒಡಿಶಾ, ತಮಿಳುನಾಡು, ಜಾರ್ಖಂಡ್ ಮತ್ತು ತೆಲಂಗಾಣ.

ಕಷ್ಟದ ಮಟ್ಟ: ಮಧ್ಯಮ 

ಬೀಜಗಳ/ತಳಿಗಳ  ಆಯ್ಕೆ

ಈರುಳ್ಳಿಯ ಬಹಳಷ್ಟು ತಳಿಗಳು ಲಭ್ಯವಿದ್ದು, ವಿವಿಧ ರೀತಿಯ ಈರುಳ್ಳಿ ತಳಿಗಳನ್ನು  ಆಯ್ಕೆ ಮಾಡಿಕೊಳ್ಳಬಹುದು . ಅವುಗಳೆಂದರೆ    ಕೋ 1, ಕೋ 2, ಎಂಡಿಯು 1, ಅಗ್ರಿಫೌಂಡ್ ರೋಸ್, ಅರ್ಕಾ ಬಿಂದು, ಭೀಮಾ ಶುಭ್ರ, ಭೀಮಾ ಶ್ವೇತಾ, ಭೀಮಾ ಸಫೇದ್, ಪೂಸಾ ವೈಟ್ ರೌಂಡ್, ಅರ್ಕಾ ಯೋಜಿತ್, ಪೂಸಾ ವೈಟ್ ಫ್ಲಾಟ್, ಉದಯಪುರ 102, ಫುಲೆ, ಸಫೆದ್, N25791, ಅಗ್ರಿಫೌಂಡ್ ವೈಟ್, ಫುಲೆ ಸುವರ್ಣ, ಅರ್ಕಾ ನಿಕೇತನ್, ಅರ್ಕಾ ಕೀರ್ತಿಮಾನ್, ಭೀಮಾ ಸೂಪರ್, ಭೀಮಾ ರೆಡ್, ಪಂಜಾಬ್ ಸೆಲೆಕ್ಷನ್, ಪೂಸಾ ರೆಡ್, N2-4-1, ಪೂಸಾ ಮಾಧವಿ, ಅರ್ಕಾ ಕಲ್ಯಾಣ್ ಮತ್ತು ಅರ್ಕಾ ಲಾಲಿಮ.

ಈರುಳ್ಳಿ ಬೀಜಗಳ ಬೀಜೋಪಚಾರ 

ಬೀಜಗಳನ್ನು ಥೈರಾಮ್  2 ಗ್ರಾಂ / ಕೆಜಿ ಮಿಶ್ರಣದಿಂದ  ಬೀಜೋಪಚಾರ ಮಾಡಬೇಕು ಅಥವಾ 4 ಗ್ರಾಂ/ಕೆಜಿ ಟ್ರೈಕೋಡರ್ಮಾ ವಿರಿಡೇಯಿಂದ  ಬೀಜೋಪಚಾರ ಮಾಡುವುದರಿಂದ  ರೋಗಗಳನ್ನು ಹರಡುವುದನ್ನು ತಡೆಯಬಹುದು . ಈರುಳ್ಳಿ ಸಸಿಗಳು ಸಾಯುವುದನ್ನೂ ಸಹ ತಡೆಯಬಹುದು  ಮತ್ತು ಆರೋಗ್ಯಕರ ಸಸಿಗಳನ್ನು ಬೆಳೆಸಲು  ಶಿಫಾರಸು ಮಾಡಲಾಗುತ್ತದೆ.

ಈರುಳ್ಳಿ ಗೆಡ್ಡೆಯ ಬೀಜೋಪಚಾರ ಮಾಡುವುದಾದರೆ, ಗೆಡ್ಡೆಯ ಮೇಲೆ ಹಸಿರು ಚಿಗುರುಗಳನ್ನು ಸಂಪೂರ್ಣವಾಗಿ ಕತ್ತರಿಸಿ ತೆಗೆಯಬೇಕು. ಈರುಳ್ಳಿ ಗೆಡ್ಡೆಗಳನ್ನು  ಬಿತ್ತುವ ಮೊದಲು 5-10 ನಿಮಿಷಗಳ ಕಾಲ ಬಾವಿಸ್ಟಿನ್ (ಅಥವಾ) ಡೈಥೇನ್ M45, 2 ಗ್ರಾಂ/ಲೀಟರ್ ದ್ರಾವಣದೊಂದಿಗೆ ಬೀಜೋಪಚಾರ  ಮಾಡಬೇಕು.

ಈರುಳ್ಳಿ ಬೆಳೆಗೆ  ಸಸಿಮಡಿ  ತಯಾರಿ

ಒಂದು ಹೆಕ್ಟೇರ್ ಗೆ  ಸುಮಾರು 5 ರಿಂದ 7 ಕೆಜಿಯಷ್ಟು ಬೀಜಗಳ ಅವಶ್ಯಕತೆ ಇರುತ್ತದೆ .  ಉತ್ತಮ  ನರ್ಸರಿಯ  ಗಾತ್ರವು ಸುಮಾರು 6 ರಿಂದ 7 ಸೆಂಟ್ಸ್ ಆಗಿರುತ್ತದೆ  . ಭೂಮಿಯನ್ನು 5 ರಿಂದ  6 ಬಾರಿ ಉಳುಮೆ ಮಾಡಿ, ಎಲ್ಲಾ ಕಸವನ್ನು  ತೆಗೆಯಬೇಕು. ಮಣ್ಣಿಗೆ 500 ಕೆಜಿ ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಬೆರೆಸಿ, ಎತ್ತರದ  ಸಸಿ ಮಡಿಗಳನ್ನು ತಯಾರಿಸಬೇಕು.  ಸಸಿ ಮಡಿಗಳು ಕ್ರಮವಾಗಿ 10-15 ಸೆಂ.ಮೀ ಎತ್ತರ, 1.0 ಮೀ ಅಗಲ ಮತ್ತು1.2 ಮೀ ಉದ್ದ ಇರಬೇಕು. ಹಾಗೆಯೇ  ಕ್ರಮವಾಗಿ  ಪ್ರತಿ ಮಡಿಗಳ  ನಡುವೆ 30 ಸೆಂ.ಮೀ ರಷ್ಟು ಅಂತರವಿರಬೇಕು. ನಂತರ ಬೀಜಗಳನ್ನು 50 ಎಂಎಂ ನಿಂದ 75 ಎಂಎಂ ಸಾಲುಗಳಲ್ಲಿ  ಬಿತ್ತಲಾಗುತ್ತದೆ. ಇದರ ನಂತರ ಲಘು ನೀರಾವರಿ ನೀಡಬೇಕು.  ಮುಂಗಾರಿನಲ್ಲಿ ಬಿತ್ತನೆ ಮಾಡಿದ  35-40 ದಿನಗಳ ನಂತರ  ಮತ್ತು ಮುಂಗಾರಿನ ಕೊನೆಯಲ್ಲಿ  ಹಾಗು ಹಿಂಗಾರು ಋತುವಿನಲ್ಲಿ ಬಿತ್ತನೆ ಮಾಡಿದ 45-50 ದಿನಗಳ ನಂತರ ಮೊಳಕೆಯೊಡೆದ ಸಸಿಗಳನ್ನು  ಸ್ಥಳಾಂತರಿಸಬೇಕು. 

ಈರುಳ್ಳಿ ಬೆಳೆಗೆ  ಭೂಮಿ ಸಿದ್ಧತೆ

ಈರುಳ್ಳಿ ಭೂಮಿ ತಯಾರಿಕೆಯು, ಭೂಮಿಯನ್ನು ಮೂರರಿಂದ ನಾಲ್ಕು ಬಾರಿ ಉಳುಮೆ ಮಾಡುವುದನ್ನು ಅನುಸರಿಸುತ್ತದೆ.  ಕೊನೆಯ ಉಳುಮೆಯ ಸಮಯದಲ್ಲಿ ಎಕರೆಗೆ 20 ಟನ್ ಕೊಟ್ಟಿಗೆ ಗೊಬ್ಬರವನ್ನು  ಸೇರಿಸಬೇಕು . ಸಸಿಗಳನ್ನು  20 ಸೆಂ.ಮೀ ಅಂತರದ ಸಾಲುಗಳಲ್ಲಿ ಹೆಚ್ಚು ಆಳಕ್ಕೆ ಇಳಿಯದಂತೆ ನಾಟಿ ಮಾಡಿ ಯೂರಿಯಾ: 26 ಕೆಜಿ, ಎಸ್‌ಎಸ್‌ಪಿ: 144 ಕೆಜಿ ಮತ್ತು ಪೊಟ್ಯಾಷ್: 19 ಕೆಜಿಗಳನ್ನು ಮಣ್ಣಿಗೆ ಸೇರಿಸಬೇಕು. ನೀರಾವರಿ ಮಾಡಿದ ನಂತರ ಬೀಜೋಪಚಾರ ಮಾಡಿದ ಗೆಡ್ಡೆಗಳನ್ನು ನೆಡಬೇಕು. 

ಈರುಳ್ಳಿ ಬೆಳೆಗೆ   ಮಣ್ಣಿನ ಅವಶ್ಯಕತೆ

ದೇಶದಾದ್ಯಂತ ಈರುಳ್ಳಿ ಬೆಳೆಯನ್ನು ಬೆಳೆಯಲಾಗುತ್ತದೆ. ಆದ್ದರಿಂದ, ಈರುಳ್ಳಿ ಬೆಳೆಯನ್ನು ಹಲವಾರು ಬಗೆಯ ಮಣ್ಣುಗಳಲ್ಲಿ ಬೆಳೆಯಬಹುದು. ಆದಾಗ್ಯೂ, ನೀರು ಬಸಿದು ಹೋಗುವಂತಹ  ಮರಳು ಮಿಶ್ರಿತ ಗೋಡುಮಣ್ಣು ಹೆಚ್ಚು ಸೂಕ್ತವೆಂದು ಪರಿಗಣಿಸಲಾಗುತ್ತದೆ.

ಈರುಳ್ಳಿ ಬೆಳೆಗೆ  ಮಣ್ಣಿನ pH

ತಟಸ್ಥ pH ಮೌಲ್ಯ ಹೊಂದಿರುವ ಮಣ್ಣು ಸೂಕ್ತವಾಗಿದೆ.

ಹಿನ್ನುಡಿ 

ಈರುಳ್ಳಿ ಬೆಳೆಯು ಗಟ್ಟಿಯಾದ ಬೆಳೆಯಾಗಿದ್ದು,ಈ ಬೆಳೆಯನ್ನು ಎಲ್ಲಿ ಬೇಕಾದರೂ ಬೆಳೆಯಬಹುದು. ಈರುಳ್ಳಿ ಬೆಳೆಯು ಇತರ ಬೆಳೆಗಳಿಗಿಂತ ಭಿನ್ನವಾಗಿ, ದೀರ್ಘಕಾಲದವರೆಗೆ ಸಂಗ್ರಹಿಸಿಡಬಹುದು. ಆದ್ದರಿಂದ, ಈರುಳ್ಳಿ ಬೆಳೆಯನ್ನು  ಯಾವಾಗ ಅಥವಾ ಎಲ್ಲಿ ಬೆಳೆದರೂ ಅದನ್ನು ಸಂಗ್ರಹಿಸಿ, ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು.

ಈರುಳ್ಳಿಗಾಗಿ ಭೂಮಿ  ಸಿದ್ಧತೆ  ಪ್ರಶ್ನೋತ್ತರಗಳು

  1. ಈರುಳ್ಳಿಯ ಬಿತ್ತನೆ ಬೀಜದ ದರ ಅಥವಾ ಪ್ರಮಾಣ  ಎಷ್ಟು?

ಒಂದು ಎಕರೆಗೆ ಸುಮಾರು 2-3 ಕೆಜಿ ಬಿತ್ತನೆ ಬೀಜ ಬೇಕಾಗಿತ್ತದೆ.

  1. ಈರುಳ್ಳಿಯ ಜನಪ್ರಿಯ ತಳಿಗಳು ಯಾವುವು?
ರಾಜ್ಯಗಳು  ತಳಿಗಳು 
ಕರ್ನಾಟಕ ಮತ್ತು ತೆಲಂಗಾಣ ನಾಸಿಕ್ ಕೆಂಪು ಈರುಳ್ಳಿ (N-53), ರಾಯಲ್ ಸೆಲೆಕ್ಷನ್  ಈರುಳ್ಳಿ, ಪ್ರೇಮ ಈರುಳ್ಳಿ, JSC ನಾಸಿಕ್ ಕೆಂಪು ಈರುಳ್ಳಿ (N-53), ಪ್ರೇಮ 178 ಈರುಳ್ಳಿ
ಆಂಧ್ರಪ್ರದೇಶ ನಾಸಿಕ್ ಕೆಂಪು ಈರುಳ್ಳಿ (N-53), ಪ್ರೇಮ ಈರುಳ್ಳಿ, JSC ನಾಸಿಕ್ ಕೆಂಪು ಈರುಳ್ಳಿ (N-53), ಪ್ರೇಮ 178 ಈರುಳ್ಳಿ, ಗುಲ್ಮೊಹರ್ ಈರುಳ್ಳಿ
ಮಧ್ಯಪ್ರದೇಶ ನಾಸಿಕ್ ಕೆಂಪು ಈರುಳ್ಳಿ (N-53), ಗುಲ್ಮೊಹರ್ ಈರುಳ್ಳಿ, ರೈಸ್ ಲಕ್ಷ್ಮಿ ಈರುಳ್ಳಿ ಬೀಜಗಳು ಡೈಮಂಡ್ ಸೂಪರ್, ರಾಯಲ್ ಸೆಲೆಕ್ಷನ್ ಈರುಳ್ಳಿ, ರೈಸ್ ಲಕ್ಷ್ಮಿ ಈರುಳ್ಳಿ ಡೈಮಂಡ್ ಸೂಪರ್
ಮಹಾರಾಷ್ಟ್ರ ನಾಸಿಕ್ ಕೆಂಪು ಈರುಳ್ಳಿ (N-53), ಗುಲ್ಮೊಹರ್ ಈರುಳ್ಳಿ ಬೀಜಗಳು, JSC ನಾಸಿಕ್ ಕೆಂಪು ಈರುಳ್ಳಿ (N-53), ರಾಯಲ್ ಸೆಲೆಕ್ಷನ್ ಈರುಳ್ಳಿ, ರೈಸ್ ಆಗ್ರೋ ಲಕ್ಷ್ಮಿ ಈರುಳ್ಳಿ ಡೈಮಂಡ್ ಸೂಪರ್
ಉತ್ತರ ಪ್ರದೇಶ ನಾಸಿಕ್ ಕೆಂಪು ಈರುಳ್ಳಿ (N-53), ರಾಯಲ್ ಸೆಲೆಕ್ಷನ್ ಈರುಳ್ಳಿ, ಪ್ರೇಮ ಈರುಳ್ಳಿ, ಜೆ ಎಸ್ ಸಿ  ನಾಸಿಕ್ ಕೆಂಪು ಈರುಳ್ಳಿ (N-53), ಗುಲ್ಮೊಹರ್ ಈರುಳ್ಳಿ
  1. ಈರುಳ್ಳಿ ಮೊಳಕೆ ನಾಟಿ ಮಾಡಲು ಸೂಕ್ತ ಸಮಯ ಯಾವುದು?

ಮುಂಗಾರಿನಲ್ಲಿ; ಬಿತ್ತನೆ ಮಾಡಿದ 35 – 40 ದಿನಗಳ ನಂತರ ಮತ್ತು ಮುಂಗಾರು ಮತ್ತು ಹಿಂಗಾರು  ಋತುವಿನ ಕೊನೆಯಲ್ಲಿ 45 – 50 ದಿನಗಳ ನಂತರ, ಸಸಿಗಳು   ನಾಟಿಗೆ ಸಿದ್ಧವಾಗುತ್ತವೆ.

  1. ಈರುಳ್ಳಿ ಬೆಳೆಗೆ ಶಿಫಾರಸ್ಸಿನ ಗೊಬ್ಬರದ ಪ್ರಮಾಣ ? 

ಈರುಳ್ಳಿಗೆ ಗೊಬ್ಬರದ ಸಾಮಾನ್ಯ ಪ್ರಮಾಣ 38:14:22 ಕೆಜಿ/ಎಕರೆ. ಕ್ಷೇತ್ರದಲ್ಲಿ ಹಾಕಬಹುದಾದ ವಾಣಿಜ್ಯ ಪ್ರಮಾಣವನ್ನು ಕೆಳಗಿನ ಕೋಷ್ಟಕದಲ್ಲಿ ನೀಡಲಾಗಿದೆ:

ಪೋಷಕಾಂಶಗಳು  ರಸಗೊಬ್ಬರಗಳು  ಸಾಮಾನ್ಯ ಬಳಕೆಯ ಪ್ರಮಾಣ 
ಸಾವಯವ ಕೊಟ್ಟಿಗೆ ಗೊಬ್ಬರ  6 ಟನ್
ಸಾರಜನಕ  ಯೂರಿಯಾ (ಅಥವಾ) 83 ಕೆ.ಜಿ
ಅಮೋನಿಯಂ ಸಲ್ಫೇಟ್ 178 ಕೆ.ಜಿ
ರಂಜಕ  ಸಿಂಗಲ್ ಸೂಪರ್ ಫಾಸ್ಫೇಟ್  (SSP) 89 ಕೆ.ಜಿ
ಡಬಲ್ ಸೂಪರ್ ಫಾಸ್ಫೇಟ್ (DSP) 44 ಕೆ.ಜಿ
ಪೊಟ್ಯಾಷಿಯಂ   ಮ್ಯೂರಿಯೇಟ್ ಆಫ್ ಪೊಟಾಷ್ (ಎಂಒಪಿ) (ಅಥವಾ) 37 ಕೆ.ಜಿ
ಸಲ್ಫೇಟ್ ಆಫ್ ಪೊಟ್ಯಾಷ್ (SOP) 45 ಕೆ.ಜಿ
ಸತು 

(ಸತುವಿನ ಕೊರತೆಯಿರುವ ಮಣ್ಣಿಗೆ)

ಆನಂದ್ ಆಗ್ರೋ ಇನ್‌ಸ್ಟಾ ಚೀಲ್ ಝಿಂಕ್ 12 % ಸೂಕ್ಷ್ಮ ಪೋಷಕಾಂಶ ಸಿಂಪಡಣೆಗಾಗಿ : 0.5 -1 ಗ್ರಾಂ / ಲೀಟರ್ ನೀರಿಗೆ 

ತಳಗೊಬ್ಬರವಾಗಿ :  10 ಕೆ.ಜಿ

ಬೋರಾನ್  ಆಲ್ಬೋರ್ ಬೋರಾನ್ 20% ಎಲೆಗಳ ಸಿಂಪಡಣೆ: 1 ಗ್ರಾಂ / ಲೀಟರ್ ನೀರಿಗೆ

 

  1. ಈರುಳ್ಳಿ ಗಡ್ಡೆಗಳಿಗೆ ಅಥವಾ ಬೀಜಗಳಿಗೆ,  ಬೀಜ ಸಂಸ್ಕರಣೆಯನ್ನು ಹೇಗೆ ಮಾಡಲಾಗುತ್ತದೆ?

ಗಡ್ಡೆ ಸಂಸ್ಕರಣೆ: ಈರುಳ್ಳಿ ಗಡ್ಡೆಗಳನ್ನು ಬಾವಿಸ್ಟಿನ್ (ಅಥವಾ) ಡಿಥೇನ್ M45 (ಮ್ಯಾಂಕೋಜೆಬ್ 75% WP) ನೊಂದಿಗೆ 2 – 2.5 ಗ್ರಾಂ / ಲೀಟರ್ ನೀರಿನಲ್ಲಿ 5 – 10 ನಿಮಿಷಗಳ ಕಾಲ ಬಿತ್ತನೆ ಮಾಡುವ ಮೊದಲು ಸಂಸ್ಕರಿಸಿ. ಇದು ಮಣ್ಣಿನಲ್ಲಿ ಹರಡುವ ರೋಗಕಾರಕಗಳಿಂದ ಗಡ್ಡೆಗಳಿಗೆ ಬರುವ  ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ.

ಬೀಜ ಸಂಸ್ಕರಣೆ: 3 ಗ್ರಾಂ ವಿಟಾವಾಕ್ಸ್ ಪುಡಿಯೊಂದಿಗೆ ಪ್ರತೀ ಒಂದು ಕೆಜಿ ಬೀಜಕ್ಕೆ  (ಕಾರ್ಬಾಕ್ಸಿನ್ 37.5% + ಥಿರಾಮ್ 37.5% ಡಿಎಸ್) ಸಂಸ್ಕರಿಸಲಾಗುತ್ತದೆ ಅಥವಾ 4 ಗ್ರಾಂ ಬಿಎಸಿಎಫ್ ಟ್ರೈಡೆಂಟ್ (ಟ್ರೈಕೋಡರ್ಮಾ ವಿರೈಡ್ 1.5% ಡಬ್ಲ್ಯೂಪಿ) ನೊಂದಿಗೆ ಪ್ರತೀ ಒಂದು ಕೆಜಿ ಬೀಜವನ್ನು ಉಪಚರಿಸಾಲು  ಅಥವಾ  ಸಂಸ್ಕರಿಸಲು ಶಿಫಾರಸು ಮಾಡಲಾಗಿದೆ. ಬೀಜಗಳ ತೇವವನ್ನು ನಿರ್ವಹಿಸುವುದರಿಂದ ಉತ್ತಮ  ಮತ್ತು ಆರೋಗ್ಯಕರ ಸಸಿಗಳನ್ನು ಪಡೆಯಬಹುದು.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು