HomeCropಗುಲಾಬಿ ಬೆಳೆಗೆ ಭೂಮಿ ಸಿದ್ಧತೆ

ಗುಲಾಬಿ ಬೆಳೆಗೆ ಭೂಮಿ ಸಿದ್ಧತೆ

ಭಾರತವು ಅತಿದೊಡ್ಡ ಹೂಗಳ ಉತ್ಪಾದಕ ರಾಷ್ಟ್ರಗಳಲ್ಲಿ ಒಂದು.  2021-22ನೇ ಸಾಲಿನಲ್ಲಿ  ಭಾರತವು  23,597.17MT  ಅಷ್ಟು ವಿವಿಧ ಹೂಗಳ  ಉತ್ಪನ್ನಗಳನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ  ರಫ್ತು ಮಾಡಿದೆ. ಇದರ ಒಟ್ಟು ಮೌಲ್ಯ 771.41 ಕೋಟಿಗಳಷ್ಟು. ಅದೇ ವರ್ಷದಲ್ಲಿ, ಭಾರತವು  2.1 ಮಿಲಿಯನ್ ಟನ್ಗಳಷ್ಟು ಸಡಿಲ ಹೂವುಗಳನ್ನು ಮತ್ತು 0.8 ಮಿಲಿಯನ್ ಟನ್ಗಳಷ್ಟು ಕತ್ತರಿಸಿದ ಹೂವುಗಳನ್ನು ಉತ್ಪಾದಿಸಿದೆ. ಭಾರತದಲ್ಲಿಅತಿ ಹೆಚ್ಚಿನ ಗುಲಾಬಿಹೂ ಬೆಳೆಯುವ ರಾಜ್ಯಗಳೆಂದರೆ  ಕರ್ನಾಟಕ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಗುಜರಾತ್, ತಮಿಳುನಾಡು, ಮಧ್ಯಪ್ರದೇಶ, ಛತ್ತೀಸ್ಗಢ, ಒರಿಸ್ಸಾ, ಅಸ್ಸಾಂ ಮತ್ತು ತೆಲಂಗಾಣ. 

ಕಷ್ಟದ ಮಟ್ಟ :

(ಸುಲಭ/ ಮಧ್ಯಮ /ಕಠಿಣ)

ಗುಲಾಬಿ ಬೆಳೆ ಬೆಳೆಯಲು ವಿವಿಧ ರೀತಿಯ ತಳಿಗಳ ಆಯ್ಕೆಗಳಿವೆ. ಇವುಗಳಲ್ಲದೇ  ಹೂಗಳ ಬಣ್ಣ, ಆಕಾರ , ಬಿತ್ತನೆ ಅವಧಿಯ ಇತ್ಯಾದಿ ಆಧಾರದ  ಮೇಲೆ ಹಲವಾರು ತಳಿಗಳು ಲಭ್ಯವಿವೆ.

ಕೆಲವು ಜನಪ್ರಿಯ ತಳಿಗಳೆಂದರೆ  ಗ್ಲಾಡಿಯೇಟರ್, ಬೇಬಿ ಪಿಂಕ್, ಸೋಫಿಯಾ ಲಾರೆನ್ಸ್, YCD 1, YCD 2, YCD 3, ಎಡ್ವರ್ಡ್ ರೋಸ್, ಆಂಡ್ರಾ ರೆಡ್ ರೋಸ್ ಮತ್ತು ಬಟನ್. ಗುಲಾಬಿಯನ್ನು ಕತ್ತರಿಸಿದ ಹೂವಿಗೊಸ್ಕರ, ಅಲಂಕಾರಕ್ಕಾಗಿ, ಹಾಗು ವಿವಿಧ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗಾಗಿ ಬೆಳೆಸಲಾಗುತ್ತದೆ.

ಗುಲಾಬಿ  ಸಸ್ಯಾಭಿವೃದ್ದಿ ಮತ್ತು ಬೀಜೋಪಚಾರ

ಗುಲಾಬಿ ಗಿಡಗಳನ್ನು ಸಾಮಾನ್ಯವಾಗಿ ಕಣ್ಣು ಕಸಿ ಮಾಡುವುದರ ಮೂಲಕ ಬೆಳೆಸಲಾಗುತ್ತದೆ. ಇದು  ಕಾಂಡಗಳು, ರೆಂಬೆಗಳು  ಅಥವಾ ತಾಯಿ ಗಿಡದ  ಒಂದು ಕಾಂಡದ ತುಂಡು . 

ಈ ಕಾಂಡಗಳು   ಕನಿಷ್ಠ ಎರಡರಿಂದ ಮೂರು ಆರೋಗ್ಯಕರ ಮೊಗ್ಗುಗಳು ಅಥವಾ ಕಣ್ಣುಗಳು  ಹೊಂದಿರಬೇಕು. ಈ ಕಾಂಡಗಳನ್ನು 500 ppm IBA ಅಥವಾ IAA ನಲ್ಲಿ ಅದ್ದಿದ  ನಂತರವೇ  ಕಾಂಡಗಳನ್ನು (ಕ್ಲಿಪ್ಪಿಂಗ್ಸ್ ) ಅನ್ನು ನಾಟಿ ಮಾಡಬೇಕು .

ಗುಲಾಬಿ  ಗಿಡಗಳನ್ನು ನಾಟಿ ಮಾಡುವುದು  

ಗುಲಾಬಿ ಗಿಡಗಳನ್ನು  ಸಾಮಾನ್ಯವಾಗಿ ನರ್ಸರಿ ಚೀಲಗಳ ಮೂಲಕ  ಬೆಳೆಸಲಾಗುತ್ತದೆ ಹಾಗು ಚೀಲಗಳನ್ನು  ಪಾಟಿಂಗ್ ಮಿಶ್ರಣ , ಕೊಟ್ಟಿಗೆ ಗೊಬ್ಬರ  ಮತ್ತು 6:12:12 ಗ್ರಾಂ ನಷ್ಟು ಸಾರಜನಕ :ರಂಜಕ :ಪೊಟ್ಯಾಷ್ ದಿಂದ  ತುಂಬಿಸಲಾಗುತ್ತದೆ . ಕಾಂಡಗಳನ್ನು ಕತ್ತರಿಸಿದ ಒಂದು ತಿಂಗಳೊಳಗೆ  ಬೇರು ಬಿಡಲು ಪ್ರಾರಂಭಿಸುತ್ತದೆ ಮತ್ತು ಬೇರೂರಿರುವ ಕಾಂಡದ   ಭಾಗವನ್ನು ಮುಖ್ಯ ಭೂಮಿಗೆ ಸ್ಥಳಾಂತರಿಸಲಾಗುತ್ತದೆ.

ಗುಲಾಬಿ ಬೆಳೆಗೆ ಭೂಮಿ/ಮಡಿ  ತಯಾರಿಕೆ 

ಜಮೀನನ್ನು ಚೆನ್ನಾಗಿ ಉಳುಮೆ ಮಾಡಿ ಹದಗೊಳಿಸಿ. 2.0 x 1.0 ಮೀ ಅಂತರದ ಹಾಗೆ  45 cm x 45 cm x 45 cm  ಅಂತರದಲ್ಲಿ ನಾಟಿಗಿಂತ ಮುಂಚೆ ಗುಣಿ ತೆಗೆಯಬೇಕು ಮತ್ತು ನಾಟಿ ಮಾಡುವ ಮೊದಲು ಪ್ರತಿ ಗುಂಡಿಗೆ 10 ಕೆಜಿ ಕೊಟ್ಟಿಗೆ ಗೊಬ್ಬರದೊಂದಿಗೆ  ಅಜೋಸ್ಪಿರಿಲಮ್ ಮತ್ತು ಫಾಸ್ಫೋಬ್ಯಾಕ್ಟೀರಿಯಾವನ್ನು ಚೆನ್ನಾಗಿ ಬೆರೆಸಿ ತುಂಬಬೇಕು . 

ಗುಲಾಬಿ ಬೆಳೆಗೆ  ಮಣ್ಣಿನ  ಅವಶ್ಯಕತೆ

ಗುಲಾಬಿ ಬೆಳೆಗೆ ಆಳವಾದ, ಚೆನ್ನಾಗಿ ನೀರು ಬಸಿದು ಹೋಗುವ ಮತ್ತು ಫಲವತ್ತಾದ  ಮರಳು ಮಿಶ್ರಿತ ಜೇಡಿಮಣ್ಣು ಅತೀ ಸೂಕ್ತ .

ಹಿನ್ನುಡಿ

ಗುಲಾಬಿ ಬೆಳೆಯು ಒಂದು ಸೂಕ್ಷ್ಮ ಬೆಳೆಯಾಗಿದೆ. ಗುಲಾಬಿಗೆ   ಸಾಕಷ್ಟು ಪೋಷಕಾಂಶಗಳ ನಿರ್ವಹಣೆಯ ಅಗತ್ಯವಿರುತ್ತದೆ. ಗುಲಾಬಿಗಳನ್ನು ವಿವಿಧ ಬಣ್ಣ ,ಗಾತ್ರ ಹಾಗು  ವಿವಿಧ ಆಕಾರಗಳಲ್ಲಿ ಬೆಳೆಯಲಾಗುತ್ತದೆ .

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು