HomeCropಗೋಧಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಬೇಸಾಯ ಕ್ರಮಗಳು

ಗೋಧಿಯಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಲು ಬೇಸಾಯ ಕ್ರಮಗಳು

ಗೋಧಿ (ಟ್ರೀಟಿಕಮ್  ಎಸ್ಟಿವಮ್) ಪ್ರಪಂಚದ  ಎಲ್ಲೆಡೆ ಬಳಕೆಯಲ್ಲಿರುವ ಏಕದಳ ಧಾನ್ಯ. ಜೋಳ ಮತ್ತು ಅಕ್ಕಿ ಗಿಂತ ಹೆಚ್ಚು ಪ್ರೋಟೀನ್ ಮತ್ತು ಫೈಬರ್ ಅನ್ನು  ಹೊಂದಿರುವ ಧಾನ್ಯವಾಗಿದೆ, ಹಾಗೂ  ಸಸ್ಯ ಜನ್ಯ ಪ್ರೋಟೀನ್ ಒದಗಿಸುವ ಒಂದು ಮುಖ್ಯ ಬೆಳೆಯಾಗಿದೆ. ಇದರಲ್ಲಿ ಪ್ರೋಟೀನ್, ವಿಟಮಿನ್ ಮತ್ತು ಕಾರ್ಬೋಹೈಡ್ರೇಟ್ ಗಳು ಸಮೃದ್ಧವಾಗಿದೆ ಹಾಗೂ ಇದು  ಸಮತೋಲನ  ಆಹಾರವನ್ನು ನೀಡುತ್ತದೆ. ರಷ್ಯಾ, ಯುಎಸ್ಎ ಮತ್ತು ಚೀನಾದ ನಂತರ ಭಾರತವು ವಿಶ್ವದಲ್ಲಿ ನಾಲ್ಕನೇ ಅತಿದೊಡ್ಡ ಗೋಧಿ ಉತ್ಪಾದಕವಾಗಿದೆ. 

ಮಣ್ಣು

ಗೋಧಿ ಬೆಳೆಗೆ ಮರಳು ಮಿಶ್ರಿತ ಗೋಡು ಮಣ್ಣು ಮತ್ತು ಕಪ್ಪು ಮಣ್ಣು ಉತ್ತಮ. ಮಣ್ಣಿನ ರಸಸಾರತೆ 6.5 ರಿಂದ  7.0 ಇದ್ದಲ್ಲಿ ಉತ್ತಮ. 

ಹವಾಮಾನ 

ಗೋಧಿ ಮೂಲತಃ ಬೆಟ್ಟ ಪ್ರದೇಶಗಳ ಬೆಳೆಯಾದರೂ ಇದನ್ನು  ಶುಷ್ಕ ಹವಾಮಾನದಲ್ಲಿಯೂ ಬೆಳೆಯಲಾಗುತ್ತದೆ. ಗೋಧಿ ಬೆಳೆಗೆ ತಂಪನೆಯ ಮತ್ತು ಒಣ ವಾತಾವರಣ ಬೇಕು. ಮೊಳಕೆಯೊಡೆಯಲು 20 °C ಅಥವಾ  16-22 °C ಉಷ್ಣಾಂಶವಿದ್ದಲ್ಲಿ ಉತ್ತಮ.  

ಬೆಳಗಿನ ತಂಪು  ವಾತಾವರಣ ಮತ್ತು ಇಬ್ಬನಿ ಇದ್ದಲ್ಲಿ ಗೋಧಿ ಪೈರು ಹೆಚ್ಚಿನ ತೆಂಡೆಗಳನ್ನು ಒಡೆದು ಹೆಚ್ಚು ಕಾಳುಕಟ್ಟಲು ಸಹಕಾರಿಯಾಗುತ್ತದೆ.  ಬಿತ್ತನೆ ಕಾಲದಲ್ಲಿ ತುಂಬಾ ಬಿಸಿಲಿನ ಮತ್ತು ಆರ್ದ್ರ ವಾತಾವರಣವಿದ್ದಲ್ಲಿ ಕೀಟ ಮತ್ತು ರೋಗಗಳ ದಾಳಿ ಹೆಚ್ಚಿರುತ್ತದೆ. ಆದಾಗ್ಯೂ ಬೆಳೆ ಮಾಗುವ ಹಂತದಲ್ಲಿ ಕಡಿಮೆ ಆರ್ಧ್ರತೆ ಮತ್ತು ಬೆಚ್ಚನೆಯ ವಾತಾವರಣ ಇರಬೇಕು. 

ಭೂಮಿ ತಯಾರಿ

ಭೂಮಿಯನ್ನು ಚನ್ನಾಗಿ ಉಳುಮೆ ಮಾಡಿ ಹಿಂದಿನ ಬೆಳೆಯ ಉಳಿಕೆಗಳನ್ನು ಮತ್ತು ಕಳೆಗಳನ್ನು ಸಂಪೂರ್ಣವಾಗಿ  ತೆಗೆದುಹಾಕಿ.

ಗೋಧಿ ಬೆಳೆಯಾ ನಂತರ ಇತರೆ ಧಾನ್ಯ ಅಥವಾ ಬೇಳೆ ಕಾಳುಗಳ ಬೆಳೆ ಪರಿವರ್ತನೆಯನ್ನು  ಮಾಡಬೇಕು. 

ಉಳುಮೆಯ ಹಂತದಲ್ಲಿ ಯಾವುದೇ ಜೈವಿಕ ಗೊಬ್ಬರದಿಂದ ಪುಷ್ಟೀಕರಿಸಿದಂತಹ ಕೊಟ್ಟಿಗೆ ಗೊಬ್ಬರವನ್ನು ಪ್ರತೀ ಎಕರೆಗೆ  (ಬಿಳಿ ಇರುವೆಗಳ ಹಾವಳಿ ತಪ್ಪಿಸುತ್ತದೆ) ಹಾಕಬಹುದು,   ಚನ್ನಾಗಿ ಮಣ್ಣಿನಲ್ಲಿ ಬೆರೆಸಬೇಕು.  ಬಿತ್ತನೆಗಾಗಿ ಸಸಿ ಮಡಿಗಳನ್ನು ಸಮತಟ್ಟು ಮಾಡಿಕೊಳ್ಳಬೇಕು. 

ಪ್ರತಿ ಎಕರೆಗೆ ಅಗತ್ಯವಿರುವ ಬೀಜಗಳ  ಪ್ರಮಾಣ:

ಬೀಜಗಳ  ಪ್ರಮಾಣ ಮತ್ತು ಸಾಮಾನ್ಯವಾಗಿ ನೀಡುವ ಅಂತರ.

ಪ್ರತಿ ಎಕರೆಗೆ 45-60 ಕೆ.ಜಿ ಬೀಜಗಳು ಬೇಕಾಗುತ್ತದೆ.  

ಗಿಡದಿಂಡ ಗಿಡಕ್ಕೆ 10 ಸೆಂ.ಮೀ ಮತ್ತು ಸಾಲಿನಿಂದ ಸಾಲಿಗೆ 20-25 ಸೆಂ.ಮೀ ಅಂತರ ಕೊಟ್ಟಲ್ಲಿ ಇಷ್ಟು ಪ್ರಮಾಣದ ಬೀಜಗಳು ಅವಶ್ಯವಿರುತ್ತದೆ. 

ಬೀಜೋಪಚಾರ ಮತ್ತು ಬಿತ್ತನೆ

ಶಿಲೀಂದ್ರನಾಶಕ (ಸಿಸ್ಟಮಿಕ್ ಫಂಗಿಸೈಡ್) ದಿಂದ  ಬೀಜೋಪಚಾರ ಮಾಡಬಹುದು ಅಥವಾ ಕೀಟನಾಶಕ ಬ್ಯಾವಿಸ್ಟಿನ್  2 ಗ್ರಾಂ/ಕೆ.ಜಿ ಅಥವಾ ಮೆಟಾಲ್ಯಾಕ್ಸಿಲ್ 35% 1 ಗ್ರಾಂ/ಕೆ.ಜಿ, ಅಥವಾ ಟ್ರೈಕೋಡರ್ಮಾ ವಿರಿಡೆ 20-25 ಗ್ರಾಂ/ಕೆ.ಜಿ ಯೊಂದಿಗೆ ಬೀಜೋಪಚಾರ ಮಾಡುವುದರಿಂದ ಬೀಜ ಮತ್ತು ಮಣ್ಣಿನಿಂದ ಬರುವಂತಹ  ರೋಗಗಳನ್ನು ನಿಯಂತ್ರಿಸಬಹುದು.

  5-6 ಸೆಂ.ಮೀ ಆಳದಲ್ಲಿ ಹೊಲವನ್ನು ಉಳುಮೆ ಮಾಡಬೇಕು. ಬಿತ್ತನೆಗೂ ಮುನ್ನ ಭೂಮಿಗೆ ತಳ ಗೊಬ್ಬರದಂತೆ ರಸಾಯನಿಕಗಳನ್ನು ಕೊಡಬೇಕು.  

ಕಳೆ ನಿರ್ವಹಣೆ

ಕಳೆ ಹುಟ್ಟುವುದಕ್ಕೂ ಮುನ್ನ ಪ್ರೀ ಎಮೆರ್ಜೆಂಟ್  ಕಳೆನಾಶಕವಾಗಿ  ಪೆಂಡಿಮೆಥಲಿನ್ಅನ್ನು  (8- 8.5 ಮಿ.ಲೀ/ಲೀ ನೀರಿನಲ್ಲಿ ಬೆರೆಸಿ ಪ್ರತೀ ಎಕರೆಗೆ ಸಿಂಪಡಿಸಬೇಕು. ಇದು ಹುಲ್ಲಿನ ಜಾತಿ ಮತ್ತು ಅಗಲ ಎಲೆಗಳುಳ್ಳ ಕಳೆಗಳನ್ನೂ ನಿಯಂತ್ರಿಸುತ್ತದೆ.

ಸಸ್ಯ ಸಂರಕ್ಷಣೆ :

ಗೆದ್ದಲು 

ಲಕ್ಷಣಗಳು

 • ಗೆದ್ದಲಿನ ಆಕ್ರಮಣವು ಒಣ ಎಲೆಗಳಿಂದ ಪ್ರಾರಂಭವಾಗುತ್ತದೆ. 
 • ವಿಪರೀತ ಸಂದರ್ಭಗಳಲ್ಲಿ, ಗಿಡಗಳು ಗೆದ್ದಲುಗಳಿಂದ ಆಕ್ರಮಿಸಲ್ಪಡುತ್ತವೆ. 
 • ತೀವ್ರವಾಗಿ ಗೆದ್ದಲುಗಳಿಂದ  ಹಾನಿಗೊಳಗಾದ ಸಸ್ಯಗಳು ಸಂಪೂರ್ಣವಾಗಿ ನಾಶವಾಗಬಹುದು.

ನಿಯಂತ್ರಣ ಕ್ರಮಗಳು:

 • ಭೂಮಿಯನ್ನು ಸ್ವಚ್ಛವಾಗಿಡುವುದರಿಂದ  ಗೆದ್ದಲಿನ ದಾಳಿಯನ್ನು  ತಡೆಯಬಹುದು.  
 • ಭಾಗಶಃ ಕೊಳೆತ ಗೊಬ್ಬರವನ್ನು ಹಾಕುವಾಗ ಹೆಚ್ಚು ಗಮನವಹಿಸಬೇಕು, ಇದರಿಂದಲೂ ಗೆದ್ದಲುಗಳು ಬರಬಹುದು.  

ಗಿಡಹೇನುಗಳು

 • ಎಳೆಯ ಎಲೆಗಳು, ಕಾಂಡಗಳು, ಮೊಗ್ಗುಗಳು, ಹೂವುಗಳು, ಹಣ್ಣುಗಳ ಮೇಲೆ ಪರಿಣಾಮ ಬೀರುತ್ತವೆ
 • ಗಿಡಹೇನುಗಳಿಂದ ದಾಳಿಗೊಳಗಾದ ಸಸ್ಯಗಳು ತಿರುಚಿದ, ಸುರುಳಿಯಾಕಾರದ ಅಥವಾ ಊದಿಕೊಂಡ ಶಾಖೆಗಳಂತೆ, ಎಲೆಗಳ ಮತ್ತು ಕಾಂಡಗಳ ಮೇಲೆ ಕಾಣುತ್ತವೆ. 

ನಿಯಂತ್ರಣ ಕ್ರಮ:

 • ಜಮೀನನ್ನು ಕಳೆ ಮುಕ್ತವಾಗಿರಿಸಿ, ಇಲ್ಲವಾದರೆ  ಕಳೆಗಳು ಗಿಡಹೇನುಗಳಿಗೆ ಆಶ್ರಯ ನೀಡಬಹುದು.
 • ಸಸ್ಯಗಳು ಮತ್ತು ಸಸ್ಯ ಭಾಗಗಳ ಮೇಲೆ ಇರುವೆಗಳ ತಿರುಗಾಟವನ್ನು ನಿಯಮಿತವಾಗಿ ಪರಿಶೀಲಿಸಿ ಮತ್ತು ಇರುವೆಗಳ ಗೂಡನ್ನು ತೆಗೆದುಹಾಕಿ ಅಥವಾ ನಾಶಪಡಿಸಿ.
 • ಹೊಲಗಳಲ್ಲಿ ಕಟ್ಟುವ ಜಿಗುಟಾದ ಬಲೆಗಳು (೧೨/ಎಕರೆಗೆ)  ಗಿಡಹೇನುಗಳನ್ನು ಆಕರ್ಷಿಸುತ್ತವೆ. 

ಗೋಧಿ ಬೆಳೆಯಲ್ಲಿ ಕಂಡು ಬರುವ ರೋಗಗಳು:

ಗೋಧಿ ಕಾಡಿಗೆ ರೋಗ:

ರೋಗಲಕ್ಷಣಗಳು:

 • ಈ ರೋಗವು  ತೆನೆ ಬಿಡುವ ಮುಂಚೆ ಕಾಣಿಸಿಕೊಳ್ಳುತ್ತವೆ. 
 • ಆರಂಭದಲ್ಲಿ ತೆನೆಯು ಸಂಪೂರ್ಣವಾಗಿ, ತೆಳುವಾದ ಬೂದು ಪೊರೆಯಿಂದ ಮುಚ್ಚಲ್ಪಟ್ಟಿರುತ್ತದೆ.
 • ರೋಗದ ತೀವ್ರತೆ ಹೆಚ್ಚಾದಾಗ ತೆನೆಗಳಿಂದ  ಸತ್ತ ವಾಸನೆ ಬರುತ್ತದೆ.

ನಿಯಂತ್ರಣ ಕ್ರಮಗಳು:

 • ರೋಗ ಮುಕ್ತ ಬೀಜಗಳನ್ನು ಪಡೆಯಲು ಪ್ರಮಾಣೀಕೃತ ಮೂಲದಿಂದ ಬೀಜಗಳನ್ನು ಬಳಸಿ. 
 • ನಿರೋಧಕ ತಳಿಗಳನ್ನು  ಬೆಳೆಯಿರಿ.
 • ಶಿಲೀಂಧ್ರಗಳನ್ನು ಕೊಲ್ಲಲು ಆಳವಾದ ಉಳುಮೆಯನ್ನು  ಮಾಡಬೇಕು. 

ಕೊಯ್ಲು

ಎಲೆಗಳು ಮತ್ತು ಕಾಂಡಗಳು  ಹಳದಿ ಬಣ್ಣಕ್ಕೆ ತಿರುಗಿದಾಗ ಮತ್ತು  ಸಾಕಷ್ಟು ಒಣಗಿದಾಗ ಕೊಯ್ಲು ಮಾಡಬಹುದು.

 ನಷ್ಟವನ್ನು ತಪ್ಪಿಸಲು, ಸಸಿ ಒಣಗುವ  ಮೊದಲು ಕೊಯ್ಲು ಮಾಡಬೇಕು. ಅತ್ಯುತ್ತಮ ಗುಣಮಟ್ಟಕ್ಕಾಗಿ ಸರಿಯಾದ ಸಮಯಕ್ಕೆ  ಕೊಯ್ಲು ಮಾಡಬೇಕು,  ಕಾಳಿನ   ತೇವಾಂಶವು 25-30% ಕ್ಕೆ ತಲುಪಿದಾಗ ಕೊಯ್ಲು ಮಾಡಲು ಸರಿಯಾದ ಹಂತವಾಗಿದೆ. 

ಕೈಯಿಂದ ಮಾಡುವ  ಕೊಯ್ಲುಗಾಗಿ ಚೂಪಾದ ಕುಡಗೋಲುಗಳನ್ನು ಬಳಸಬೇಕು,  ಕಂಬೈನ್ ಹಾರ್ವೆಸ್ಟರ್ನಲ್ಲಿ  ಕೂಡ ಮಾಡಬಹುದು, ಇದು ಒಂದೇ ಬಾರಿಗೆ   ಗೋಧಿ ಬೆಳೆಯನ್ನು ಕೊಯ್ಲು ಮತ್ತು ಒಕ್ಕಣೆ ಮಾಡುತ್ತದೆ. 

 

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು