HomeCropಗೋಧಿ ಬೆಳೆಗೆ ಭೂಮಿ ಸಿದ್ಧತೆ

ಗೋಧಿ ಬೆಳೆಗೆ ಭೂಮಿ ಸಿದ್ಧತೆ

ಭಾರತದ ಉತ್ತರ ಭಾಗಗಳಾದ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ ಮತ್ತು ಗುಜರಾತ್‌ಗಳಲ್ಲಿ ಗೋಧಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. 

2021 – 22 ರ ಸಾಲಿನಲ್ಲಿ ಭಾರತವು INR.15,840.31 ಕೋಟಿ ಮೌಲ್ಯದ 7,239,366.80 MT ಗೋಧಿಯನ್ನು ವಿವಿಧ ರಾಷ್ಟ್ರಗಳಿಗೆ ರಫ್ತು  ಮಾಡಿದೆ. ಗೋಧಿಯು ರಬಿ  ಬೆಳೆಯಾಗಿದ್ದು( ಮುಂಗಾರು ಬೆಳೆ )  ಇದನ್ನು ಮುಖ್ಯವಾಗಿ ಜೇಡಿಮಣ್ಣಿನ ಮಣ್ಣಿನಲ್ಲಿ ಬೆಳೆಯಲಾಗುತ್ತದೆ. ಗೋಧಿ ಒಣ ಬೆಳೆಯಾಗಿರುವುದರಿಂದ , ಮಣ್ಣಿನ ಕಣಗಳ ಮಧ್ಯೆ ಉತ್ತಮ ಗಾಳಿಯಾಡುವಿಕೆಯ ಅಗತ್ಯವಿರುತ್ತದೆ. 

ಕಷ್ಟದ ಮಟ್ಟ :

ಕಠಿಣ

ಬೀಜಗಳ ಆಯ್ಕೆ ಮತ್ತು ಬೀಜೋಪಚಾರ  

ಬಿತ್ತನೆ ಮಾಡಲು ಗೋಧಿಯ ಬೆಳೆಯಲ್ಲಿ  ಹಲವು ವಿಧದ ತಳಿಗಳಿವೆ.  ಸ್ಥಳೀಯ ತಳಿಗಳು,  ಹೈಬ್ರಿಡ್ ಮತ್ತು ಆಮದು ಮಾಡಿದ ತಳಿಗಳಿವೆ.  ಇವುಗಳಲ್ಲಿ ಅತಿ ಪ್ರಮುಖ ತಳಿಗಳು ಯಾವುವೆಂದರೆ DBW 222, DBW 252, DDW47, DBW 187, DBW 173, HD 2851, HD 2932, PBW 1 Zn, Unnat PBW 343, PDW 233, WHD 943, TL 2908. 

DBW 222 ತಳಿಯು ದೆಹಲಿ, ಪಂಜಾಬ್‌, ಹರಿಯಾಣ, ಉತ್ತರ ಪ್ರದೇಶ, ಉತ್ತರಾಖಂಡ,  ಹಿಮಾಚಲ ಪ್ರದೇಶ ಹಾಗು ರಾಜಸ್ಥಾನ್ ರಾಜ್ಯದ ಕೆಲವು ಭಾಗಗಳಿಗೆ ಅತ್ಯಂತ  ಸೂಕ್ತವಾಗಿದೆ.

DBW 222 ತಳಿಯು ತುಕ್ಕು ರೋಗಕ್ಕೆ ನಿರೋಧಕತೆಯನ್ನು ಹೊಂದಿದೆ . DBW 252 ತಳಿಯು ಬಿಹಾರ,  ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಜಾರ್ಖಂಡ್, ಒಡಿಶಾ, ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳ ಬಯಲು ಪ್ರದೇಶಗಳಿಗೆ ಹೆಚ್ಚು ಸೂಕ್ತವಾಗಿದೆ.

ಬೀಜಗಳನ್ನು ಮೊದಲೇ ನೆನೆಸುವುದು

ಗೋಧಿ ಬೀಜಗಳನ್ನು ಹೆಚ್ಚು ನೆನೆಸುವ ಅಗತ್ಯವಿರುವುದಿಲ್ಲ  .8-12 ಗಂಟೆಗಳ ಕಾಲ ನೆನೆಸಿದರೆ ಸಾಕಾಗುತ್ತದೆ . ಹೆಚ್ಚು ಕಾಲ ನೆನೆಸುವುದರಿಂದ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ ಮತ್ತು ಬೀಜಗಳು ಕೊಳೆಯುತ್ತವೆ ಹಾಗಾಗಿ ದೀರ್ಘಕಾಲದ ನೆನೆಸುವೆಕೆ ಗೋದಿ  ಕೃಷಿಗೆ ಸೂಕ್ತವಲ್ಲ.

ಬೀಜೋಪಚಾರ  

ಸ್ಥಳ, ಹವಾಮಾನ ಪರಿಸ್ಥಿತಿ, ಮಣ್ಣಿನ ಸ್ಥಿತಿ ಇತ್ಯಾದಿಗಳನ್ನು ಅವಲಂಬಿಸಿ ಹಲವು ವಿಧಗಳಲ್ಲಿ  ಗೋಧಿ ಬೀಜೋಪಚಾರವನ್ನು  ಮಾಡಲಾಗುತ್ತದೆ . 

ಸಾಮಾನ್ಯವಾಗಿ ಶಿಲಿಂಧ್ರನಾಶಕ ಹಾಗು ಕೀಟನಾಶಕವನ್ನು ಉಪಯೋಗಿಸಿ ಬೀಜೋಪಚಾರವನ್ನು ಮಾಡಲಾಗುತ್ತದೆ . ತೇವಯಿರುವ ಜಾಗದಲ್ಲಿ ಕಾಡಿಗೆ ರೋಗ, ಕೊಳೆತ  ಮತ್ತು ಅಂಗಮಾರಿಯಂತಹ  ಹಲವಾರು ರೋಗಗಳು ಬೀಜದ ಮೇಲೆ ಪರಿಣಾಮ ಬೀರುತ್ತದೆ 

ಟೆಬುಕೊನಜೋಲ್ 1 ಗ್ರಾಂ/ಕೆಜಿ ಬೀಜಗಳಿಗೆ ಅಥವಾ ಬೇವಿಸ್ಟಿನ್ 2.5 ಗ್ರಾಂ/ಕೆಜಿ ಅನ್ನು ಸಾಮಾನ್ಯ ಕಾಡಿಗೆ ರೋಗ ಮತ್ತು ತೆನೆಯಲ್ಲಿ ಕಾಳುಗಳ ಬದಲಿಗೆ ಕಾಡಿಗೆ ರೋಗಕ್ಕೆ ಬೀಜೋಪಚಾರವಾಗಿ ಉಪಯೋಗಿಸಲಾಗುತ್ತದೆ. ಡ್ರಮ್‌ನ ಬಳಕೆಯಿಂದ ಬೀಜೋಪಚಾರವನ್ನು ಮಾಡಲಾಗುತ್ತದೆ . ಹಾಗೆಯೇ ಗೋದಿಯ ಟ್ರೈಕೋಡರ್ಮಾ ವಿರಿಡೆ 4 ಗ್ರಾಂ / ಕೆಜಿ ಬೀಜಗಳೊಂದಿಗೆ ಬೀಜೋಪಚಾರವನ್ನು ಮಾಡುವುದರಿಂದ ತುಂಬಾ ಉಪಯುಕ್ತ . ಏಕೆಂದರೆ ಇದು ತುಕ್ಕು ರೋಗದ ತೀವ್ರತೆಯನ್ನು ಕಡಿಮೆ ಮಾಡುತ್ತದೆ .

ಗೋಧಿ  ಬೆಳೆಗೆ ಸಸಿಮಡಿ ತಯಾರಿಕೆ 

ಗೋಧಿ ಬೆಳೆಯ ಕೃಷಿಗೆ  ಭತ್ತದ ಕೃಷಿಗೆ ಬೇಕಾಗಿರುವ ಹಾಗೆ ನರ್ಸರಿಯ ಅಗತ್ಯವಿರುವುದಿಲ್ಲ. ನೇರ ಬಿತ್ತನೆಯನ್ನು ಹೆಚ್ಚಾಗಿ ಮಾಡಲಾಗುತ್ತದೆ.ಗೋಧಿಗಾಗಿ ಹೊಲವನ್ನು ತಯಾರಿಸಲಾಗುತ್ತದೆ ಮತ್ತು ಬೀಜಗಳನ್ನು ಸಾಮಾನ್ಯವಾಗಿ ಪ್ರಸಾರ (ಕೈಯಿಂದ ಎರೆಚುವುದು)ಮಾಡಲಾಗುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಸಾಲು ಬಿತ್ತನೆಯಲ್ಲಿ  ಅಸಾಂಪ್ರದಾಯಿಕ ಪದ್ಧತಿ ರೂಡಿಯಲ್ಲಿದೆ .

ಗೋಧಿ ಬೆಳೆಗೆ ಭೂಮಿ ಸಿದ್ಧತೆ 

ಭೂಮಿಯನ್ನು  ಚೆನ್ನಾಗಿ ಉಳುಮೆ  ಮಾಡಬೇಕು. ಎರಡು ಬಾರಿ ಕಬ್ಬಿಣದ ನೇಗಿಲಿನಿಂದ ಮತ್ತು ಮೂರು ಬಾರಿ ಸಾಗುವಳಿ ಯಂತ್ರದಿಂದ ಉಳುಮೆ ಮಾಡಬೇಕು. .ಕೊನೆಯ ಉಳುಮೆಯಲ್ಲಿ ಪ್ರತಿ  ಹೆಕ್ಟೇರಿಗೆ 12 ಟನ್ ಕೊಟ್ಟಿಗೆ  ಗೊಬ್ಬರ, 5 ಕೆಜಿ ಜೈವಿಕ ಗೊಬ್ಬರ,  5 ಕೆಜಿ ಟ್ರೈಕೋಡರ್ಮಾ ಮತ್ತು 5 ಕೆಜಿ ಸ್ಯೂಡೋಮೊನಾಸ್ ಮಿಶ್ರಣ ಮಾಡಿ ಭೂಮಿಗೆ ಸೇರಿಸಬೇಕು.

ಗೋಧಿ  ಬೆಳೆಗೆ ಮಣ್ಣಿನ ಅವಶ್ಯಕತೆಗಳು 

ಗೋಧಿ ಬೆಳೆಗೆ ಸೂಕ್ತವಾದ ಮಣ್ಣುಯೆಂದರೆ  ಹಗುರ ಜೇಡಿ/ಭಾರಿ ಕಡುಮಣ್ಣು . ಮಣ್ಣಿನಲ್ಲಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಅಗತ್ಯವಿರುತ್ತದೆ  .ಅತಿಯಾಗಿ ಸವಕಳಿ ಹೊಂದಿದ ಮಣ್ಣು ಗೋಧಿ ಬೆಳೆಗೆ ಸೂಕ್ತವಲ್ಲ 

ಮಣ್ಣಿನ pH

ಗೋಧಿ ಬೆಳೆಗೆ ತಟಸ್ಥ pH 6.0 – 7.0 ಮಣ್ಣಿನ ಅಗತ್ಯವಿರುತ್ತದೆ, ಹೆಚ್ಚಿನ ಮತ್ತು ಕಡಿಮೆ pH ಹೊಂದಿರುವ ಮಣ್ಣು ಗೋದಿ  ಬೆಳೆಯ  ಬೆಳವಣಿಗೆ ಮತ್ತು ಇಳುವರಿ ಮೇಲೆ ಪರಿಣಾಮ ಬೀರುತ್ತದೆ.

ಹಿನ್ನುಡಿ 

ಗೋಧಿಯು ದೇಶದಾದ್ಯಂತ ಬೆಳೆಯುವ ಮತ್ತು  ಸ್ಥಿರವಾದ  ಬೆಳೆಯಾಗಿದೆ. ಗೋಧಿ ಬೆಳೆಯು ಒಂದು  ಪ್ರಧಾನ ಬೆಳೆಯಾಗಿದ್ದು, ರೈತರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ.

spot_img

ಇನ್ನಷ್ಟು ಓದಿ

ಸಂಪರ್ಕದಲ್ಲಿರಿ

ನಮ್ಮಿಂದ ಇತ್ತೀಚಿನ ಮಾಹಿತಿಯನ್ನು ಸ್ವೀಕರಿಸಲು ನಮ್ಮೊಂದಿಗೆ ಚಂದಾದಾರರಾಗಿ.

ಸಂಬಂಧಿತ ಲೇಖನಗಳು